Optical Illusion: ಬೆಕ್ಕುಗಳ ರಾಶಿಯಲ್ಲಿ ಮೊಲವೊಂದು ಅಡಗಿದೆ, ಬರೀ 9 ಸೆಕೆಂಡ್‌ನಲ್ಲಿ ಅದನ್ನು ಕಂಡುಹಿಡಿಯೋದು ನಿಮಗಿರುವ ಚಾಲೆಂಜ್
ಬೆಕ್ಕುಗಳ ರಾಶಿ ಇರುವ ಚಿತ್ರವೊಂದು ಇಲ್ಲಿದೆ. ಈ ಚಿತ್ರದಲ್ಲಿ ಬೆಕ್ಕುಗಳ ನಡುವೆ ಮೊಲವೊಂದು ಕೂಡ ಅಡಗಿದೆ. ಆ ಮೊಲ ಎಲ್ಲಿದೆ ಎಂಬುದು ಕಂಡುಹಿಡಿಯುವುದು ನಿಮಗಿರುವ ಸವಾಲು. ಶೇ 1ರಷ್ಟು ಮಂದಿಗೆ ಮಾತ್ರ ಇದಕ್ಕೆ ಉತ್ತರ ಕಂಡುಹಿಡಿಯಲು ಸಾಧ್ಯವಾಗಿದ್ದು.
ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ನಮ್ಮ ಐಕ್ಯೂ ಪರೀಕ್ಷೆ ಮಾಡುತ್ತವೆ. ಇವು ಕಣ್ಣು, ಮೆದುಳನ್ನು ಪರೀಕ್ಷೆಗೆ ಒಡ್ಡಿ ಸವಾಲಿಗೆ ಉತ್ತರ ಹುಡುಕುವಲ್ಲಿ ಸಹಕರಿಸುತ್ತವೆ. ಕೆಲವೊಮ್ಮೆ ನಮ್ಮ ಕಣ್ಣಿಗೆ ಕಾಣಿಸಿದ ಉತ್ತರವೂ ಸುಳ್ಳಾಗಬಹುದು. ಅಂತಹ ಭ್ರಮೆ ಹುಟ್ಟಿಸುವಲ್ಲೂ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಸೈ ಎನ್ನಿಸುತ್ತವೆ. ಆಪ್ಟಿಕಲ್ ಇಲ್ಯೂಷನ್ ಚಿತ್ರಗಳನ್ನು ದೈಹಿಕವಾಗಿ, ಶಾರೀರಿಕವಾಗಿ ಹಾಗೂ ಕಾಗ್ನೇಟಿವ್ ಇಲ್ಯೂಷನ್‌ಗಳ ಮೂಲಕ ನೋಡಬೇಕಾಗುತ್ತದೆ.
ಆಪ್ಟಿಕಲ್ ಇಲ್ಯೂಷನ್‌ಗಳು ಸಹ ಮನೋವಿಶ್ಲೇಷಣೆಯ ಕ್ಷೇತ್ರದ ಒಂದು ಭಾಗವಾಗಿದೆ ಎಂದು ಅಧ್ಯಯನಗಳು ಬಹಿರಂಗಪಡಿಸುತ್ತವೆ. ಇದು ನಾವು ವಿಷಯಗಳನ್ನು ಹೇಗೆ ಸಂಗ್ರಹಿಸುತ್ತೇವೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.
ಇಲ್ಲೊಂದು ಅಂತಹದ್ದೇ ಚಿತ್ರವಿದೆ. ಇದರಲ್ಲಿ ಹಳದಿ, ನೀಲಿ, ಬೂದು, ಕಾಫಿ ಹೀಗೆ ವಿವಿಧ ಬಣ್ಣದ ಬೆಕ್ಕುಗಳಿವೆ. ಈ ಬೆಕ್ಕುಗಳ ರಾಶಿಯ ನಡುವೆ ಮೊಲವೊಂದು ಅಡಗಿದೆ. ಹಾಗಾದರೆ ಆ ಮೊಲ ಎಲ್ಲಿದೆ?, ಇದನ್ನು ಕಂಡುಹಿಡಿಯಬೇಕು. ಇದು ನಿಜಕ್ಕೂ ಸವಾಲು ಎನ್ನಿಸುವ ಕೆಲಸ. ಆದರೆ ಚಿತ್ರದಲ್ಲಿ ಮೊಲ ಖಂಡಿತ ಇದೆ. ಆದರೆ ಇದು ಸುಲಭಕ್ಕೆ ಕಾಣುವುದಿಲ್ಲ. ಶೇ 1 ರಷ್ಟು ಮಂದಿ ಮಾತ್ರ ಇದಕ್ಕೆ ಉತ್ತರ ಹುಡುಕುವಲ್ಲಿ ಸಫಲರಾಗಿದ್ದಾರೆ.
ಮೊಲ ಎಲ್ಲಿದೆ ಎಂದು ದಿನವಿಡೀ ಹುಡುಕುತ್ತಾ ಕುಳಿತುಕೊಳ್ಳುವುದಲ್ಲ. ನಿಮಗೆ ಇರುವುದು ಕೇವಲ 9 ಸೆಕೆಂಡ್ ಸಮಯ. ಆ 9 ಸೆಕೆಂಡ್‌ನಲ್ಲೇ ನೀವು ಮೊಲವನ್ನು ಹುಡುಕಬೇಕು. ಸರಿ ಈಗ ನಿಮ್ಮ ಸಮಯ ಶುರು. ಮೊಲ ಹುಡುಕಲು ಶುರು ಮಾಡಿ. 9 ಸೆಕೆಂಡ್ ಆಯ್ತು, 10 ಸೆಕೆಂಡ್ ಆಯ್ತು, 20 ಸೆಕೆಂಡ್ ಆಯ್ತು ಇನ್ನೂ ಮೊಲ ಹುಡುಕೋಕೆ ಸಾಧ್ಯ ಆಗಿಲ್ವಾ? ಹಾಗಾದರೆ ನಾವೊಂದು ಕ್ಲೂ ಕೊಡ್ತೀವಿ ನೋಡಿ. ನೀವು ಬಲಭಾಗದಲ್ಲಿ ಕೆಳಗಿನಿಂದ ನೋಡಿದರೆ ಬೆಕ್ಕುಗಳ ಹಿಂದೆ ಮೊಲ ಅಡಗಿರುವುದು ಕಾಣುತ್ತದೆ. ನಿಮಗೆ ನಿಜಕ್ಕೂ ಸೂಕ್ಷ್ಮ ದೃಷ್ಟಿ ಇದ್ದರೆ ಮಾತ್ರ ನೀವು ಅಡಗಿರುವ ಬೆಕ್ಕನ್ನು ಹುಡುಕಲು ಸಾಧ್ಯ.
ಇನ್ನೂ ನಿಮಗೆ ಹುಡುಕೋಕೆ ಸಾಧ್ಯ ಆಗಿಲ್ಲ ಅಂದ್ರೆ ಇಲ್ಲಿ ಕೆಳಗಿರುವ ಚಿತ್ರ ನೋಡಿ. ಅಲ್ಲಿದೆ ನೋಡಿ ಮೊಲ.
ಅಧ್ಯಯನಗಳ ಪ್ರಕಾರ ಇಂತಹ ಬ್ರೈನ್ ಟೀಸರ್‌ಗಳು ನಮ್ಮ ಮೆದುಳಿಗೆ ಕೆಲಸ ಕೊಡುತ್ತವೆ. ಅಲ್ಲದೆ ಮೆದುಳನ್ನು ಚುರುಕಾಗಿಸಲು ಇದು ಸಹಕಾರಿ.
ಇದನ್ನೂ ಓದಿ: Optical Illusion: ಕಾಫಿನಾ ಬೆಕ್ಕಾ ಮೊದಲು ಕಾಣಿಸಿದ್ದೇನು? ನಿಮ್ಮ ವ್ಯಕ್ತಿತ್ವ ಪರಿಚಯಿಸಲಿದೆ ಈ ಚಿತ್ರ, ಟ್ರೈ ಮಾಡಿ
ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ನಮ್ಮ ಮನಸ್ಸಿಗೆ ಖುಷಿ ಕೊಡುವುದು ಮಾತ್ರವಲ್ಲ, ಇದು ನಮ್ಮ ವ್ಯಕ್ತಿತ್ವದ ಪರಿಚಯವನ್ನೂ ಮಾಡುತ್ತದೆ. ನಮ್ಮ ವ್ಯಕ್ತಿತ್ವದ ಬಗ್ಗೆ ತಿಳಿದುಕೊಳ್ಳುವುದು ಎಂದರೆ ನಮಗೆ ಖಂಡಿತ ಒಲವಿರುತ್ತದೆ. ನಾವು ಹೇಗೆ ಎಂಬುದನ್ನು ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ತಿಳಿಸುತ್ತವೆ ಎಂದರೆ ಯಾರಿಗೆ ತಾನೆ ಇಷ್ಟವಾಗುವುದಿಲ್ಲ ಹೇಳಿ. ಆ ಕಾರಣದಿಂದಲೂ ಇತ್ತೀಚಿನ ದಿನಗಳಲ್ಲಿ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳನ್ನು ಜನರು ಹೆಚ್ಚು ಇಷ್ಟಪಡುತ್ತಿದ್ದಾರೆ. ಚಿತ್ರವನ್ನು ನೋಡಿದಾಕ್ಷಣ ನಿಮ್ಮ ಕಣ್ಣಿಗೆ ಏನು ಕಾಣಿಸುತ್ತದೆ ಎಂಬುದು ನಿಮ್ಮ ವ್ಯಕ್ತಿತ್ವವನ್ನು ತಿಳಿಸುತ್ತದೆ.
ವಿಭಾಗ