ಕನ್ನಡ ಸುದ್ದಿ  /  ಜೀವನಶೈಲಿ  /  Personality Test: ಕುರಿಗಳ ಹಿಂಡು, ನರಿ ಈ ಎರಡರಲ್ಲಿ ನಿಮ್ಮ ಕಣ್ಣಿಗೆ ಮೊದಲು ಕಂಡಿದ್ದೇನು? ನಿಮ್ಮ ರಹಸ್ಯ ಗುಣ ತಿಳಿಸುವ ಚಿತ್ರವಿದು

Personality Test: ಕುರಿಗಳ ಹಿಂಡು, ನರಿ ಈ ಎರಡರಲ್ಲಿ ನಿಮ್ಮ ಕಣ್ಣಿಗೆ ಮೊದಲು ಕಂಡಿದ್ದೇನು? ನಿಮ್ಮ ರಹಸ್ಯ ಗುಣ ತಿಳಿಸುವ ಚಿತ್ರವಿದು

ಆಪ್ಟಿಕಲ್‌ ಇಲ್ಯೂಷನ್‌ ಪರ್ಸನಾಲಿಟಿ ಟೆಸ್ಟ್‌ನಲ್ಲಿ ಯಾವಾಗಲೂ ನಮ್ಮ ಕಣ್ಣಿಗೆ ಮೊದಲು ಏನು ಕಾಣಿಸುತ್ತದೆ ಅದು ನಮ್ಮ ವ್ಯಕ್ತಿತ್ವವನ್ನು ಸೂಚಿಸುತ್ತದೆ. ಆದರೆ ನೀವು ಮೊದಲು ಏನು ಕಾಣಿಸಿತು ಎಂಬುದನ್ನು ಹೇಳುವಲ್ಲಿ ನಿಷ್ಠಾವಂತರಾಗಿರಬೇಕು. ಸರಿ ಹಾಗಿದ್ರೆ ಇಂದಿನ ಆಪ್ಟಿಕಲ್‌ ಇಲ್ಯೂಷನ್‌ನಲ್ಲಿ ಮೊದಲು ನಿಮಗೆ ಕಾಣಿಸಿದ್ದು, ನಿಮ್ಮ ವ್ಯಕ್ತಿತ್ವ ಹೇಗೆ ತಿಳಿಯಿರಿ.

ಕುರಿಗಳ ಹಿಂಡು, ನರಿ ಈ ಎರಡರಲ್ಲಿ ನಿಮ್ಮ ಕಣ್ಣಿಗೆ ಮೊದಲು ಕಂಡಿದ್ದೇನು? ನಿಮ್ಮ ರಹಸ್ಯ ಗುಣ ತಿಳಿಸುವ ಚಿತ್ರವಿದು
ಕುರಿಗಳ ಹಿಂಡು, ನರಿ ಈ ಎರಡರಲ್ಲಿ ನಿಮ್ಮ ಕಣ್ಣಿಗೆ ಮೊದಲು ಕಂಡಿದ್ದೇನು? ನಿಮ್ಮ ರಹಸ್ಯ ಗುಣ ತಿಳಿಸುವ ಚಿತ್ರವಿದು (PC: Times Now)

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ಕೇವಲ ಟೈಮ್‌ ಪಾಸ್‌ಗೆ ಮಾತ್ರವಲ್ಲ, ನಮ್ಮ ವ್ಯಕ್ತಿತ್ವ ಪರೀಕ್ಷೆಗೂ ನೆರವಾಗುತ್ತವೆ. ಇವು ನಮ್ಮ ಕಣ್ಣು, ಮೆದುಳಿನ ಗ್ರಹಿಕೆಗೆ ಸವಾಲು ಹಾಕುವಂತಿರುವುದು ಸುಳ್ಳಲ್ಲ. ಚಿತ್ರದಲ್ಲಿ ನಾವು ಮೊದಲು ಏನು ನೋಡುತ್ತೇವೆ‌ ಎಂಬುದರ ಆಧಾರದ ಮೇಲೆ ನಮ್ಮ ವ್ಯಕ್ತಿತ್ವದ ಬಗ್ಗೆ ಆಳವಾದ ವಿಚಾರಗಳನ್ನು ಬಹಿರಂಗ ಪಡಿಸುತ್ತದೆ. ಕಣ್ಣಿಗೆ ಭ್ರಮೆ ಹುಟ್ಟಿಸುವ ಈ ಚಿತ್ರಗಳು ನಮ್ಮ ಆಂತರಿಕ ದೃಷ್ಟಿಕೋನಗಳ ಒಳನೋಟವನ್ನು ಒದಗಿಸುತ್ತವೆ. ನಾವು ನಿರ್ಲಕ್ಷಿಸುವ, ನಮಗೆ ತಿಳಿದಿಲ್ಲದ ನಮ್ಮ ಬಗ್ಗೆ ಆಳವಾದ ವಿಷಯಗಳನ್ನು ಬಹಿರಂಗಪಡಿಸುತ್ತವೆ. ಇಂದಿನ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವನ್ನು ರಚಿಸಿದ್ದಾರೆ ಇಟಲಿಯ ಬೊಲೊಗ್ನಾದಿಂದ ಬಂದ ಕಲಾವಿದ ಡೇವಿಡ್ ಬೊನಾಜಿ.

ಟ್ರೆಂಡಿಂಗ್​ ಸುದ್ದಿ

ವ್ಯಕ್ತಿತ್ವ ಪರೀಕ್ಷೆಗಳನ್ನು ನಾವು ಎದುರಿಸಿದ ಮೇಲೆ ನಮ್ಮಲ್ಲಿರುವ ಒಳ್ಳೆಯ ಗುಣಗಳು ಮಾತ್ರವಲ್ಲ, ನಮ್ಮ ಕೆಟ್ಟ ಗುಣಗಳ ಬಗ್ಗೆಯೂ ಅರಿವಾಗುತ್ತದೆ. ಈ ಚಿತ್ರದಲ್ಲಿ ಎರಡು ಅಂಶಗಳಿವೆ. ಒಂದು ದೊಡ್ಡ ಕುರಿಯ ಹಿಂಡು, ಇನ್ನೊಂದು ಕುರಿಗಳನ್ನು ಹಿಡಿಯಲು ಸಿದ್ಧವಾಗಿ ನಿಂತಿರುವ ನರಿ... ಈ ಎರಡರಲ್ಲಿ ನಿಮ್ಮ ಕಣ್ಣಿಗೆ ಮೊದಲು ಏನು ಕಾಣಿಸಿತು ಅದು ನಿಮ್ಮ ವ್ಯಕ್ತಿತ್ವವಾಗಿರುತ್ತದೆ. ಆದರೆ ಮೊದಲು ನಿಮಗೆ ಏನು ಕಾಣಿಸಿತು ಎಂಬುದನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಿ.

ನೀವು ಮೊದಲು ಕುರಿಗಳ ಹಿಂಡನ್ನು ಕಂಡರೆ...

ನಿಮ್ಮ ಕಣ್ಣಿಗೆ ಮೊದಲು ಕುರಿಗಳ ಹಿಂಡು ಕಂಡರೆ ನೀವು ಒಮ್ಮೆ ತೆಗೆದುಕೊಂಡ ನಿರ್ಧಾರವನ್ನು ಬದಲಿಸಲು ಕಷ್ಟಪಡುತ್ತೀರಿ. ಸಣ್ಣ ಪುಟ್ಟ ವಿಚಾರಕ್ಕೂ ನೀವು ಗೊಂದಲಕ್ಕೆ ಒಳಗಾಗುತ್ತೀರಿ. ಮನಸ್ಸು ಸದಾ ಗೊಂದಲದಿಂದ ಕೂಡಿರುತ್ತದೆ. ನಿಮ್ಮ ಆರಾಮ ವಲಯದಿಂದ ಹೊರ ಬಂದು ಬದುಕುವುದು ನಿಮಗೆ ಕಷ್ಟವಾಗುತ್ತದೆ. ನಿಮ್ಮ ಬದುಕಿನಲ್ಲಿ ಬೇರೆ ವ್ಯಕ್ತಿಗಳು ಹೊಂದಿಕೊಳ್ಳಲು ತುಂಬಾ ಕಷ್ಟಪಡುತ್ತಾರೆ. ಕೆಲವರು ನಿಮ್ಮನ್ನು ಅಂತರ್ಮುಖಿ ಎಂದುಕೊಳ್ಳಬಹುದು. ಆದರೆ ಆದರೆ ನೀವು ವೈಯಕ್ತಿಕ ಜೀವನವನ್ನು ಹೊಂದಿರುವ ಸಾಮಾಜಿಕ ವ್ಯಕ್ತಿಯಾಗಿದ್ದು ಅದು ನಿಮಗೆ ಸ್ಥಬ್ದ ಮತ್ತು ಸುರಕ್ಷಿತವಾಗಿರಬೇಕು.

ನರಿ ನಿಮ್ಮ ಕಣ್ಣಿಗೆ ಮೊದಲು ಕಂಡರೆ

ನಿಮ್ಮ ಕಣ್ಣಿಗೆ ಮೊದಲು ನರಿ ಕಂಡರೆ ನೀವು ಬದಲಾವಣೆ ಬಯಸುವ ವ್ಯಕ್ತಿತ್ವದವರು. ಕೆಲವೊಮ್ಮೆ ಮುಂದೆ ಹೋಗಲು ಒಂದೇ ಅವಕಾಶ ನಿಮಗೆ ಲಭಿಸಬಹುದು. ಆ ಅವಕಾಶವನ್ನೇ ಬಳಸಿಕೊಂಡು ನೀವು ಮುಂದೆ ಸಾಗಬೇಕಾಗುತ್ತದೆ. ಭಾವನಾತ್ಮಕವಾಗಿ ಅಥವಾ ದೈಹಿಕವಾಗಿ ಒಂದು ಸ್ಥಳದಲ್ಲಿ ಸಿಲುಕಿಕೊಳ್ಳುವುದು ನಿಮಗೆ ತುಂಬಾ ಸವಾಲಿನ ಸಂಗತಿಯಾಗಿದೆ ಏಕೆಂದರೆ ಅದು ನಿಮ್ಮನ್ನು ಭಾರಗೊಳಿಸುತ್ತದೆ, ವ್ಯಕ್ತಿ, ವಸ್ತು ಯಾವುದನ್ನೇ ಆಗಲಿ ಪದೇ ಪದೇ ಬದಲಿಸುವುದು ನಿಮಗೆ ಇಷ್ಟದ ಸಂಗತಿಯಾಗಿರುತ್ತದೆ. ಅದಕ್ಕಾಗಿಯೇ ನೀವು ಅವಕಾಶಗಳನ್ನು ಪಡೆದುಕೊಳ್ಳಲು ಮತ್ತು ನಿಮ್ಮ ಜೀವನವನ್ನು ಸಾಗಿಸಲು ಒಲವು ತೋರುತ್ತೀರಿ. ಆದರೆ ಇರುವ ಅವಕಾಶವನ್ನೇ ಬಳಸಿಕೊಂಡು ಮುಂದೆ ಹೋಗುವ ಸಾಮರ್ಥ್ಯ ನಿಮ್ಮದಾಗಿರುತ್ತದೆ. ಅದನ್ನು ಗುರುತಿಸಿ ನೀವು ಮುಂದೆ ಹೋಗಬೇಕು.

ವಿಭಾಗ