Personality Test: ಹರಿವ ನದಿ, ಮಹಿಳೆ, ಸೇತುವೆ ಮೊದಲು ಕಂಡಿದ್ದೇನು? ನಿಮ್ಮಲ್ಲಿರುವ ಕೆಟ್ಟಗುಣಗಳ ಬಗ್ಗೆ ತಿಳಿಸುವ ಚಿತ್ರವಿದು
ಕನ್ನಡ ಸುದ್ದಿ  /  ಜೀವನಶೈಲಿ  /  Personality Test: ಹರಿವ ನದಿ, ಮಹಿಳೆ, ಸೇತುವೆ ಮೊದಲು ಕಂಡಿದ್ದೇನು? ನಿಮ್ಮಲ್ಲಿರುವ ಕೆಟ್ಟಗುಣಗಳ ಬಗ್ಗೆ ತಿಳಿಸುವ ಚಿತ್ರವಿದು

Personality Test: ಹರಿವ ನದಿ, ಮಹಿಳೆ, ಸೇತುವೆ ಮೊದಲು ಕಂಡಿದ್ದೇನು? ನಿಮ್ಮಲ್ಲಿರುವ ಕೆಟ್ಟಗುಣಗಳ ಬಗ್ಗೆ ತಿಳಿಸುವ ಚಿತ್ರವಿದು

ಇಂದಿನ ಚಿತ್ರದಲ್ಲಿ ಮೂರು ಅಂಶಗಳಿವೆ. ಹರಿಯುವ ನದಿ, ಮಹಿಳೆ ಹಾಗೂ ಸೇತುವೆ. ಚಿತ್ರವನ್ನು ಕಂಡಾಕ್ಷಣ ನಿಮ್ಮ ಕಣ್ಣಿಗೆ ಈ ಮೂರರಲ್ಲಿ ಏನು ಕಾಣಿಸಿತು ಅದು ನಿಮ್ಮ ವ್ಯಕ್ತಿತ್ವವಾಗಿರುತ್ತದೆ. ಇದು ನಿಮ್ಮಲ್ಲಿರುವ ಕೆಟ್ಟ ಗುಣಗಳ ಬಗ್ಗೆ ತಿಳಿಸುವ ಚಿತ್ರವಾಗಿದೆ.

ಹರಿವ ನದಿ, ಮಹಿಳೆ, ಸೇತುವೆ ಮೊದಲು ಕಂಡಿದ್ದೇನು? ನಿಮ್ಮಲ್ಲಿರುವ ಕೆಟ್ಟಗುಣಗಳ ಬಗ್ಗೆ ತಿಳಿಸುವ ಚಿತ್ರವಿದು
ಹರಿವ ನದಿ, ಮಹಿಳೆ, ಸೇತುವೆ ಮೊದಲು ಕಂಡಿದ್ದೇನು? ನಿಮ್ಮಲ್ಲಿರುವ ಕೆಟ್ಟಗುಣಗಳ ಬಗ್ಗೆ ತಿಳಿಸುವ ಚಿತ್ರವಿದು

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುವ ಆಪ್ಟಿಕಲ್‌ ಇಲ್ಯೂಷನ್‌ಗಳನ್ನು ನೋಡಿದಾಗ ನಮ್ಮ ಕಣ್ಣು, ಮೆದುಳಿಗೆ ಆಶ್ವರ್ಯ ಎನ್ನಿಸುವುದು ಸುಳ್ಳಲ್ಲ. ಆಪ್ಟಿಕಲ್‌ ಇಲ್ಯೂಷನ್‌ಗಳು ನಮ್ಮ ವ್ಯಕ್ತಿತ್ವದ ಬಗ್ಗೆ ತಿಳಿಸುತ್ತವೆ ಎಂದರೆ ಹಲವರು ಎಂಬುವುದಿಲ್ಲ. ಆದರೆ ಆಫ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ಮೇಲ್ನೋಟಕ್ಕೆ ಒಬ್ಬೊಬ್ಬರ ಕಣ್ಣಿಗೆ ಒಂದೊಂದು ರೀತಿ ಕಾಣಿಸುವುದು ಸುಳ್ಳಲ್ಲ. ನಿಮಗೆ ಮೊದಲು ಏನು ಕಾಣಿಸುತ್ತದೆ ಅದು ನಿಮ್ಮ ವ್ಯಕ್ತಿತ್ವವನ್ನು ತಿಳಿಸುತ್ತದೆ. ಆಪ್ಟಿಕಲ್‌ ಇಲ್ಯೂಷನ್‌ ವ್ಯಕ್ತಿತ್ವ ಪರೀಕ್ಷೆಯು ನಿಜ ಎಂಬುದನ್ನು ಮನೋಶಾಸ್ತ್ರವು ಸಾಬೀತುಪಡಿಸಿದೆ.

ಇಂದಿನ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದಲ್ಲಿ ಮೂರು ಅಂಶಗಳಿವೆ. ಮಹಿಳೆ, ನದಿ, ಸೇತುವೆ ಈ ಮೂರು ಅಂಶಗಳಲ್ಲಿ ನಿಮ್ಮ ಕಣ್ಣಿಗೆ ಮೊದಲು ಕಂಡಿದ್ದೇನು ಎಂಬುದರ ಮೇಲೆ ನಿಮ್ಮ ವ್ಯಕ್ತಿತ್ವ ನಿರ್ಧಾರವಾಗುತ್ತದೆ. ಇದು ನಮ್ಮ ಬಗ್ಗೆ ನಮಗೆ ತಿಳಿದಿರದ ವಿಚಾರವನ್ನೂ ತಿಳಿಸುತ್ತದೆ. ಸರಿ ಹಾಗಾದ್ರೆ ಚಿತ್ರದಲ್ಲಿ ನಿಮ್ಮ ಕಣ್ಣಿಗೆ ಮೊದಲು ಕಂಡಿದ್ದೇನು, ನಿಮ್ಮ ವ್ಯಕ್ತಿತ್ವ ಹೇಗೆ ತಿಳಿಯಿರಿ.

ಮಹಿಳೆ

ಚಿತ್ರದಲ್ಲಿ ಮೊದಲು ನಿಮ್ಮ ಕಣ್ಣಿಗೆ ಮಹಿಳೆ ಕಂಡರೆ ನೀವು ಇತರರ ದೇಹವನ್ನು ನೋಡುವ ದೃಷ್ಟಿ ಸರಿ ಇರುವುದಿಲ್ಲ. ಆದರೆ ಇದು ನೀವು ಬೇಕಂತ ಮಾಡುವ ಕೆಲಸವೂ ಅಲ್ಲ. ಇತರರನ್ನು ನೋಟದಿಂದ ನಿರ್ಧಾರ ಮಾಡುತ್ತೀರಿ ಎಂದು ಅರ್ಥವಲ್ಲ. ಆದರೆ ಆಕಸ್ಮಿಕವಾಗಿ ನಡೆಯುವ ಪ್ರಕ್ರಿಯೆ. ಬೇರೆಯವರ ದೇಹದೊಂದಿಗೆ ನಿಮ್ಮ ದೇಹವನ್ನು ಹೋಲಿಸಿಕೊಂಡು ನೋಡುತ್ತೀರಿ. ಕೆಲವೊಮ್ಮೆ ಇದು ಇತರರ ಬಗ್ಗೆ ನಿಮ್ಮ ಮನಸ್ಸಲ್ಲಿ ವ್ಯಂಗ್ಯ ಮೂಡುವಂತೆ ಮಾಡಿದರೂ, ಕೆಲವೊಮ್ಮೆ ಸುಂದರವಾಗಿರುವವರನ್ನು ನೋಡಿ ನಿಮ್ಮ ಬಗ್ಗೆ ನಿಮ್ಮಲ್ಲಿ ಕೀಳರಿಮೆ ಮೂಡುವಂತೆ ಕೂಡ ಆಗಬಹುದು.

ನದಿ

ಚಿತ್ರದಲ್ಲಿ ನಿಮಗೆ ಮೊದಲು ನದಿ ಕಾಣಿಸಿದರೆ ನೀವು ಸಾಮಾಜಿಕ ಸ್ಥಾನಮಾನದ ಮೇಲೆ ಹೆಚ್ಚು ಗಮನ ಹರಿಸುತ್ತೀರಿ. ಇವರಿಗೆ ಯಾವಾಗಲೂ ಉನ್ನತವಾಗಿರಬೇಕು ಎಂಬ ಬಯಕೆ ಇರುತ್ತದೆ. ವೃತ್ತಿಜೀವನದಲ್ಲೂ ಉನ್ನತ ಸ್ಥಾನ ಬಯಸುವ ಇವರು ತಾವು ಇಷ್ಟಪಟ್ಟವರ ಜೊತೆ ಸಮಯ ಕಳೆಯುವುದು ಕಷ್ಟವಾಗಬಹುದು. ಅವರ ಸಾಮಾಜಿಕ ಸ್ಥಾನಮಾನವು ಬೇರೆಯವರನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎಂಬುದರ ಮೇಲೂ ಅವಲಂಬಿತವಾಗಿದೆ.

ಸೇತುವೆ

ನೀವು ಸೇತುವೆಯನ್ನು ಮೊದಲು ಗುರುತಿಸಿದರೆ ನಿಮ್ಮ ಕೆಟ್ಟ ಗುಣ ಎಂದರೆ ಸಹಾನೂಭೂತಿಯ ಕೊರತೆ. ಸಹಾನೂಭೂತಿ ಕೊರತೆಯಿಂದ ನೀವು ಬೇರೆಯವರ ಭಾವನೆಗಳನ್ನು ಅರ್ಥ ಮಾಡಿಕೊಂಡು ಅದಕ್ಕೆ ತಕ್ಕಂತೆ ಸ್ಪಂದಿಸಲು ನಿಮ್ಮಿಂದ ಸಾಧ್ಯವಾಗುವುದಿಲ್ಲ ಎಂದಲ್ಲ, ಆದರೆ ಬೇರೆಯವರು ನಿಮ್ಮನ್ನು ಹೇಗೆ ಗುರುತಿಸುತ್ತಾರೆ ಹಾಗೆ ನೀವು ಅವರನ್ನು ಅರ್ಥ ಮಾಡಿಕೊಳ್ಳುತ್ತೀರಿ. ಸಹಾನೂಭೂತಿಕೊರತೆಯಿಂದ ನೀವು ಮೇಲ್ನೋಟಕ್ಕೆ ಒಳ್ಳೆಯವರಂತೆ ಕಂಡರೂ ನಿಮ್ಮ ಮನಸ್ಸಿನಲ್ಲಿ ಇನ್ನೊಬ್ಬರಿಗೆ ಸಹಾಯ ಮಾಡುವ ಅಥವಾ ಕರುಣೆ, ಕನಿಕರ ತೋರುವ ಗುಣ ಇರುವುದಿಲ್ಲ.

ಈ ಪರ್ಸನಾಲಿಟಿ ಟೆಸ್ಟ್‌ಗಳನ್ನೂ ಓದಿ

Personality Test: ಚಿತ್ರದಲ್ಲಿನ 4 ಅಂಶಗಳಲ್ಲಿ ನಿಮಗೆ ಮೊದಲು ಕಂಡಿದ್ದೇನು, ಪ್ರೀತಿ ವಿಚಾರದಲ್ಲಿ ನಿಮ್ಮ ವರ್ತನೆ ಹೇಗಿರುತ್ತೆ ನೋಡಿ

ನಮ್ಮ ವ್ಯಕ್ತಿತ್ವದ ಬಗ್ಗೆ ನಾವೇ ತಿಳಿಯಬೇಕು ಅಂದ್ರೆ ಅದನ್ನು ಪರೀಕ್ಷೆ ಮಾಡೋಕೆ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ಬೆಸ್ಟ್‌. ಇತ್ತೀಚಿಗೆ ವೈರಲ್‌ ಆದ ಚಿತ್ರವೊಂದು ಪ್ರೀತಿ ವಿಚಾರದಲ್ಲಿ ನಿಮ್ಮ ಸ್ವಭಾವ ಹೇಗೆ ಎಂಬುದನ್ನು ತಿಳಿಸುತ್ತದೆ. ಈ ಒಂದು ಚಿತ್ರದಲ್ಲಿ 4 ಚಿತ್ರಗಳು ಅಡಗಿವೆ. ಅದರಲ್ಲಿ ನಿಮಗೆ ಮೊದಲು ಕಾಣಿಸಿದ್ದೇನು ನೋಡಿ.

Personality Test: ಮರ-ಸಿಂಹದ ಮುಖ, ಚಿತ್ರದಲ್ಲಿ ಮೊದಲು ಕಾಣಿಸಿದ್ದೇನು? ನಿಮ್ಮ ರಹಸ್ಯ ಗುಣದ ಬಗ್ಗೆ ತಿಳಿಸುತ್ತೆ ಈ ಚಿತ್ರ

ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವೊಂದು ಜನರು ಮೊದಲ ನೋಟದಲ್ಲೇ ನಿಮ್ಮ ಬಗ್ಗೆ ಏನು ತಿಳಿದುಕೊಳ್ಳುತ್ತಾರೆ ಎಂಬುದನ್ನು ಬಹಿರಂಗ ಪಡಿಸುತ್ತದೆ. ಹಾಗಾದರೆ ಚಿತ್ರದಲ್ಲಿ ಮೊದಲು ನಿಮಗೆ ಗಿಡ ಕಾಣಿಸ್ತಾ, ಸಿಂಹದ ಮುಖ ಕಾಣಿಸ್ತಾ ಹೇಳಿ.

Whats_app_banner