Personality Test: ಹಣೆ ಹೇಗಿದ್ದರೆ ಅದೃಷ್ಟ, ಹಣೆಯ ಮೇಲೆ ಗೆರೆ ಇದ್ದರೆ ಏನರ್ಥ? ಹಣೆಯ ಆಕಾರ ತಿಳಿಸುತ್ತೆ ವ್ಯಕ್ತಿತ್ವ, ಪರೀಕ್ಷಿಸಿ ನೋಡಿ-viral news optical illusion personality test understand the shape of your forehead related to your traits social media ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Personality Test: ಹಣೆ ಹೇಗಿದ್ದರೆ ಅದೃಷ್ಟ, ಹಣೆಯ ಮೇಲೆ ಗೆರೆ ಇದ್ದರೆ ಏನರ್ಥ? ಹಣೆಯ ಆಕಾರ ತಿಳಿಸುತ್ತೆ ವ್ಯಕ್ತಿತ್ವ, ಪರೀಕ್ಷಿಸಿ ನೋಡಿ

Personality Test: ಹಣೆ ಹೇಗಿದ್ದರೆ ಅದೃಷ್ಟ, ಹಣೆಯ ಮೇಲೆ ಗೆರೆ ಇದ್ದರೆ ಏನರ್ಥ? ಹಣೆಯ ಆಕಾರ ತಿಳಿಸುತ್ತೆ ವ್ಯಕ್ತಿತ್ವ, ಪರೀಕ್ಷಿಸಿ ನೋಡಿ

ನಮ್ಮ ವ್ಯಕ್ತಿತ್ವ ಹೇಗೆ ಎಂದು ನಾವು ತಿಳಿದುಕೊಳ್ಳಲು ಬಯಸಿದರೆ, ಪರ್ಸನಾಲಿಟಿ ಟೆಸ್ಟ್‌ಗಳಿಗೆ ನಮ್ಮನ್ನು ಒಡ್ಡಿಕೊಳ್ಳಬೇಕು. ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ಮಾತ್ರವಲ್ಲ ನಮ್ಮ ದೇಹದ ಆಕಾರವು ನಮ್ಮ ವ್ಯಕ್ತಿತ್ವ ಹೇಗೆ ಎಂದು ತಿಳಿಸುತ್ತದೆ. ಇಂದಿನ ಪರ್ಸನಾಲಿಟಿ ಟೆಸ್ಟ್‌ನಲ್ಲಿ ನಿಮ್ಮ ಹಣೆಯ ಆಕಾರದ ಮೇಲೆ ನಿಮ್ಮ ವ್ಯಕ್ತಿತ್ವ ಹೇಗೆ ತಿಳಿಯಿರಿ.

ಹಣೆ ಹೇಗಿದ್ದರೆ ಅದೃಷ್ಟ, ಹಣೆಯ ಮೇಲೆ ಗೆರೆ ಇದ್ದರೆ ಏನರ್ಥ? ಹಣೆಯ ಆಕಾರ ತಿಳಿಸುತ್ತೆ ವ್ಯಕ್ತಿತ್ವ, ಪರೀಕ್ಷಿಸಿ ನೋಡಿ
ಹಣೆ ಹೇಗಿದ್ದರೆ ಅದೃಷ್ಟ, ಹಣೆಯ ಮೇಲೆ ಗೆರೆ ಇದ್ದರೆ ಏನರ್ಥ? ಹಣೆಯ ಆಕಾರ ತಿಳಿಸುತ್ತೆ ವ್ಯಕ್ತಿತ್ವ, ಪರೀಕ್ಷಿಸಿ ನೋಡಿ (PC: Times of India )

ನಮ್ಮ ಮುಖ ಹಾಗೂ ದೇಹದ ಇತರ ಭಾಗಗಳು ನಮ್ಮ ವ್ಯಕ್ತಿತ್ವದ ಕುರಿತ ಹಲವು ವಿಚಾರಗಳನ್ನು ತಿಳಿಸುತ್ತವೆ. ಬಾಯಿ, ಮೂಗು, ತುಟಿ ಸೇರಿದಂತೆ ದೇಹದ ಇತರ ಭಾಗಗಳು ನಮ್ಮ ವ್ಯಕ್ತಿತ್ವದ ಬಗ್ಗೆ ನಮಗೆ ತಿಳಿಯಲು ನೆರವಾಗುತ್ತವೆ. ಇದು ತಂತ್ರ, ಪುರಾಣಗಳಲ್ಲ. ಮೂಢನಂಬಿಕೆಯೂ ಅಲ್ಲ. ಆದರೆ 3000 ವರ್ಷಗಳಷ್ಟು ಹಳೆಯ ಅಭ್ಯಾಸ ಇದಾಗಿದೆ. ಇದು ನಮ್ಮ ವ್ಯಕ್ತಿತ್ವ ಹಾಗೂ ಗುಣಲಕ್ಷಣಗಳ ಬಗೆಗಿನ ಸಾಕಷ್ಟು ವಿಚಾರಗಳನ್ನು ಬಹಿರಂಗ ಪಡಿಸುತ್ತದೆ. ಹಾಗಾದರೆ ಇಂದಿನ ಪರ್ಸನಾಲಿಟಿ ಟೆಸ್ಟ್‌ನಲ್ಲಿ ನಿಮ್ಮ ಹಣೆಯ ಆಕಾರ ಹೇಗಿದೆ ಹಾಗೂ ಅದರ ಆಧಾರದ ಮೇಲೆ ನಮ್ಮ ವ್ಯಕ್ತಿತ್ವ ಎಂಥದ್ದು ತಿಳಿಯೋಣ.

ಕಿರಿದಾದ ಹಣೆ

ನಿಮ್ಮ ಹಣೆ ಕಿರಿದಾಗಿದ್ದರೆ ನೀವು ನಿಮ್ಮದೇ ಲೋಕದಲ್ಲಿ ಬದುಕಲು ಬಯಸುವವರು. ಅನನ್ಯ ಹಾಗೂ ಅಪರೂಪದ ವ್ಯಕ್ತಿತ್ವ ನಿಮ್ಮದು. ನೀವು ಹೃದಯ ಮಾತನ್ನು ಕೇಳುವಂತಹವರು. ನಿಮ್ಮ ಆಲೋಚನೆಗಳನ್ನು ನಿಮ್ಮ ಆತ್ಮೀಯರೊಂದಿಗೆ ಹಂಚಿಕೊಳ್ಳದೇ ನಿಮ್ಮ ಭಾವನೆಗಳನ್ನು ಸಾಗಿಸುತ್ತೀರಿ. ನಿಮಗೆ ಯಾವುದೇ ವಿಚಾರದಿಂದ ಬೇಸರ ಉಂಟಾದರೂ ಕೆಲವೇ ಕ್ಷಣಗಳಲ್ಲಿ ಮತ್ತೆ ಉತ್ಸಾಹ ಹೆಚ್ಚಿಸಿಕೊಳ್ಳುತ್ತೀರಿ. ಇವರು ಸ್ವಾಭಾವಿಕವಾಗಿ ಪ್ರೀತಿಸುವ ಮನೋಭಾವದವರು. ಕಿರಿದಾರ ಹಣೆಯುಳ್ಳವರು ವಿನಮ್ರ ಹಾಗೂ ವಿಶ್ವಾಸಾರ್ಹ ವ್ಯಕ್ತಿಗಳಾಗಿರುತ್ತಾರೆ.

ಎಂ ಆಕಾರದ ಹಣೆ

ನೀವು ಎಂ ಆಕಾರದ ಹಣೆ ಹೊಂದಿದ್ದರೆ ನೀವು ಆಧುನಿಕ ಮನೋಭಾವ ಹೊಂದಿರುವ ವ್ಯಕ್ತಿ ಎಂದರ್ಥ. ಭಾವನಾತ್ಮಕ ಜೀವಿಗಳು ಹೌದು. ಉತ್ತಮ ಮತ್ತು ಸರಳವಾದ ಡ್ರೆಸ್ಸಿಂಗ್ ಸೆನ್ಸ್ ಅನ್ನು ಹೊಂದಿರುವ ನಿಮ್ಮನ್ನ ನಿಮ್ಮ ಸುತ್ತಮುತ್ತಲಿನ ಜನರು ಮೆಚ್ಚುತ್ತಾರೆ. ಈ ರೀತಿ ಹಣೆ ಇರುವವರು ಯಾರನ್ನೂ ಹೆಚ್ಚಾಗಿ ದ್ವೇಷಿಸುವುದಿಲ್ಲ. ಇವರಿಗೆ ಶತ್ರುಗಳ ಸಂಖ್ಯೆ ಕಡಿಮೆ ಇರುತ್ತದೆ. ಇವರು ಕುಟುಂಬದವರು ಹಾಗೂ ಪ್ರೀತಿಪಾತ್ರರಿಗಾಗಿ ಬದುಕುತ್ತಾರೆ.

ಬಾಗಿದ ಹಣೆ

ಬಾಗಿದ ಹಣೆ ಹೊಂದಿರುವವರು ಸ್ನೇಹಪರ ಜೀವಿಗಳು. ಇವರು ಸುಲಭವಾಗಿ ಎಲ್ಲರೊಂದಿಗೆ ಬೆರೆಯುತ್ತಾರೆ. ತಮ್ಮ ಸುತ್ತಲಿನ ವಾತಾವರಣವನ್ನು ಖುಷಿಯಾಗಿ ಇರಿಸಿಕೊಳ್ಳಬೇಕು ಎನ್ನುವ ಮನಸ್ಸು ಇವರದ್ದು. ಇವರು ಆಶಾವಾದಿಗಳಾಗಿರುತ್ತಾರೆ. ಗುರಿ ಸಾಧಿಸಲು ಜನರನ್ನು ಪ್ರೋತ್ಸಾಹಿಸುವ ಗುಣ ಇವರಲ್ಲಿರುತ್ತದೆ. ಇವರು ಏನೇ ಮಾಡಿದ್ರು ಆಕರ್ಷಕವಾಗಿರುತ್ತದೆ. ಯಾವುದೇ ಪರಿಸ್ಥಿತಿಯನ್ನು ಶಾಂತಗೊಳಿಸಲು ಕಲೆ ಇವರಲ್ಲಿರುತ್ತದೆ.

ಅಗಲವಾದ ಹಣೆ

ನೀವು ವಿಶಾಲವಾದ ಅಥವಾ ಅಗಲವಾದ ಹಣೆಯನ್ನು ಹೊಂದಿದ್ದರೆ ಸಂಘಟಿತ ಮನೋಭಾವ ನಿಮ್ಮದಾಗಿರುತ್ತದೆ. ನೀವು ಅರ್ಥಗರ್ಭಿತ ವ್ಯಕ್ತಿತ್ವದವರು. ನೀವು ದಯೆ ಮತ್ತು ಉತ್ತಮ ಸಾಮಾಜಿಕ ಜೀವನದೊಂದಿಗೆ ಹೊಸ ಮಾರ್ಗಗಳನ್ನು ವೀಕ್ಷಿಸಲು ಮತ್ತು ಅನ್ವೇಷಿಸಲು ಇಷ್ಟಪಡುತ್ತೀರಿ. ನಿಮಗೆ ಅತಿಯಾದ ಕೋಪವಿದ್ದು ಕೆಲವೊಮ್ಮೆ ಕೋಪದ ಗುಣವೇ ನಿಮ್ಮನ್ನು ಅಪಾಯಕ್ಕೆ ತಳ್ಳಬಹುದು.

ಹಣೆಯ ಆಕಾರ ಹೇಗಿದ್ದರೆ ಅದೃಷ್ಟಶಾಲಿಗಳು

ನಯವಾದ ಮತ್ತು ಅಗಲವಾದ ಹಣೆಯು ಸಾಮಾನ್ಯವಾಗಿ ಅದೃಷ್ಟವನ್ನು ಸೂಚಿಸುತ್ತದೆ. ಇಂತಹವರು ಸ್ವರ್ಗದಿಂದ ಬಂದವರು ಎಂದು ಹೇಳಲಾಗುತ್ತದೆ. ಈ ರೀತಿಯ ಹಣೆಯು ಸಮೃದ್ಧಿಯ ಸೂಚಕವಾಗಿದೆ. ಯೋತಿಷ್ಯದ ಪ್ರಕಾರ ಶಕ್ತಿ, ಸಂಪತ್ತು ಮತ್ತು ದೊಡ್ಡ ಅದೃಷ್ಟವನ್ನು ಸೂಚಿಸುತ್ತದೆ. ಆದರೆ, ಹಣೆಯಲ್ಲಿ ಕಲೆಗಳು, ಕಲೆಗಳು ಅಥವಾ ಯಾವುದೇ ಮಚ್ಚೆಗಳು ಇರಬಾರದು.

ಅತ್ಯಂತ ಆಕರ್ಷಕ ಹಣೆ ಯಾವುದು?

ಯಾವುದೇ ಕಲೆಗಳು ಮತ್ತು ದೊಡ್ಡ ಮೇಲ್ಮೈ ಇಲ್ಲದೆ ಶುದ್ಧ ಮತ್ತು ನಯವಾದ ಚರ್ಮ ಹೊಂದಿರುವ ಹಣೆಯು ಆಕರ್ಷಕವಾಗಿರುತ್ತದೆ.

ಸಣ್ಣ ಹಣೆ ಇದ್ದರೆ ಅದೃಷ್ಟವೇ?

ಸಣ್ಣ ಹಣೆ ಇರುವವರು ತಮ್ಮದೇ ಪ್ರಪಂಚವನ್ನು ಇಷ್ಟಪಡುವವರು ಮತ್ತು ಅದೃಷ್ಟವಂತರ ಸಾಲಿಗೆ ಸೇರುತ್ತಾರೆ.

ಹಣೆಯ ಮೇಲೆ ಸುಕ್ಕಿದ್ದರೆ ಏನರ್ಥ?

ಹಣೆಯ ಸುಕ್ಕುಗಳು ದುರದೃಷ್ಟಕರ ಮತ್ತು ಅನಾರೋಗ್ಯಕರ ಚರ್ಮ ಮತ್ತು ಜೀವನಶೈಲಿಯ ಸಂಕೇತಗಳಾಗಿವೆ. ಸರಿಯಾದ ಆರೈಕೆ ಮತ್ತು ಮಸಾಜ್ ಮೂಲಕ, ನೀವು ಅವುಗಳನ್ನು ಸಮಯಕ್ಕೆ ಹೋಗುವಂತೆ ಮಾಡಬಹುದು.

ಎರಡು ಲಂಬ ರೇಖೆಗಳಿದ್ದರೆ ಏನು?

ನಿಮ್ಮ ಹಣೆಯ ಮೇಲೆ ಎರಡು ಲಂಬ ರೇಖೆಗಳಿದ್ದರೆ, ನೀವು ಬುದ್ಧಿವಂತ, ಚಿಂತನಶೀಲ ಮತ್ತು ವಿಶ್ಲೇಷಣಾತ್ಮಕ ವ್ಯಕ್ತಿತ್ವವನ್ನು ಹೊಂದಿರುತ್ತೀರಿ.