Personality Test: ಹೆಬ್ಬೆರಳು ಅಗಲವಾಗಿದ್ಯಾ, ಗಿಡ್ಡವಾಗಿದ್ಯಾ? ಹೆಬ್ಬೆರಳಿನ ಆಕಾರದ ಮೇಲೆ ನಿಮ್ಮ ವ್ಯಕ್ತಿತ್ವ ಹೇಗೆ ತಿಳಿಯಿರಿ
ಕನ್ನಡ ಸುದ್ದಿ  /  ಜೀವನಶೈಲಿ  /  Personality Test: ಹೆಬ್ಬೆರಳು ಅಗಲವಾಗಿದ್ಯಾ, ಗಿಡ್ಡವಾಗಿದ್ಯಾ? ಹೆಬ್ಬೆರಳಿನ ಆಕಾರದ ಮೇಲೆ ನಿಮ್ಮ ವ್ಯಕ್ತಿತ್ವ ಹೇಗೆ ತಿಳಿಯಿರಿ

Personality Test: ಹೆಬ್ಬೆರಳು ಅಗಲವಾಗಿದ್ಯಾ, ಗಿಡ್ಡವಾಗಿದ್ಯಾ? ಹೆಬ್ಬೆರಳಿನ ಆಕಾರದ ಮೇಲೆ ನಿಮ್ಮ ವ್ಯಕ್ತಿತ್ವ ಹೇಗೆ ತಿಳಿಯಿರಿ

ನಮ್ಮ ದೇಹದ ಅಂಗಾಗಗಳು ನಮ್ಮ ವ್ಯಕ್ತಿತ್ವವನ್ನು ತಿಳಿಸುವಂತೆ ಹೆಬ್ಬೆರಳು ಕೂಡ ವ್ಯಕ್ತಿತ್ವ ಪರಿಚಯ ಮಾಡುತ್ತವೆ. ಹೆಬ್ಬೆರಳಿನ ಆಕಾರಗಳಿಂದ ನಮ್ಮ ವ್ಯಕ್ತಿತ್ವ ಹೇಗೆ ಎಂಬುದನ್ನು ತಿಳಿಯಬಹುದು. ಹಾಗಾದರೆ ನಿಮ್ಮ ಹೆಬ್ಬೆರಳಿನ ಆಕಾರ ಹೇಗಿದೆ, ನಿಮ್ಮ ವ್ಯಕ್ತಿತ್ವ ಎಂಥದ್ದು ತಿಳಿದುಕೊಳ್ಳಿ.

ಹೆಬ್ಬೆರಳಿನ ಆಕಾರದ ಮೇಲೆ ನಿಮ್ಮ ವ್ಯಕ್ತಿತ್ವ ಹೇಗೆ ತಿಳಿಯಿರಿ
ಹೆಬ್ಬೆರಳಿನ ಆಕಾರದ ಮೇಲೆ ನಿಮ್ಮ ವ್ಯಕ್ತಿತ್ವ ಹೇಗೆ ತಿಳಿಯಿರಿ

ಮನುಷ್ಯ ದೇಹದ ಅಂಗಾಂಗಗಳು ಒಬ್ಬೊಬ್ಬರದ್ದು ಒಂದೊಂದು ರೀತಿ ಇರುತ್ತದೆ. ಅಂಗಾಂಗಗಳಲ್ಲಿ ವ್ಯತ್ಯಾಸ ಇರುವುದು ಸಹಜ. ಈ ಅಂಗಗಳು ನಮ್ಮ ವ್ಯಕ್ತಿತ್ವ ಎಂಥದ್ದು ಎಂಬುದನ್ನು ತಿಳಿಸುತ್ತವೆ. ಹುಬ್ಬಿನ ಆಕಾರ, ಕಣ್ಣಿನ ಬಣ್ಣ, ಕೂದಲಿನ ಆಕಾರ ಹೀಗೆ ಪರ್ಸನಾಲಿಟಿ ಟೆಸ್ಟ್‌ನಲ್ಲಿ ಪ್ರತಿಯೊಂದು ಗಣನೆಗೆ ಬರುತ್ತದೆ. ನೀವು ಎಂದಾದರೂ ನಿಮ್ಮ ಹೆಬ್ಬೆರಳು ಹೇಗಿದೆ ಎಂದು ನೋಡಿಕೊಂಡಿದ್ದೀರಾ, ಈ ಹೆಬ್ಬೆರಳು ಕೂಡ ನಿಮ್ಮ ವ್ಯಕ್ತಿತ್ವವನ್ನು ಸೂಚಿಸುತ್ತದೆ. ಇಂದಿನ ಪರ್ಸನಾಲಿಟಿ ಟೆಸ್ಟ್‌ನಲ್ಲಿ ಹೆಬ್ಬೆರಳಿನ ಆಕಾರದ ಮೇಲೆ ವ್ಯಕ್ತಿತ್ವ ಗುರುತಿಸುವುದು ಹೇಗೆ ನೋಡಿ.

ಹೆಬ್ಬೆರಳು ನೇರವಾಗಿದ್ದರೆ

ನೇರವಾದ ಹೆಬ್ಬೆರಳು ಎಂದರೆ ಯಾವುದೇ ಕಡೆ ಬಾಗದೇ ಕಮಾನಿನ ರೀತಿ ಕಾಣದೇ ನೇರವಾಗಿರುವುದು. ನೇರ ಹೆಬ್ಬೆರಳುಗಳನ್ನು ಹೊಂದಿರುವ ಜನರು ವಿಶ್ವಾಸಾರ್ಹರು, ಪ್ರಾಮಾಣಿಕರು ಎಂದು ಪರಿಗಣಿಸಲಾಗುತ್ತದೆ. ಇವರು ಸಮಸ್ಯೆಗಳನ್ನು ತಾರ್ತಿಕವಾಗಿ ಪರಿಹರಿಸುತ್ತಾರೆ. ಯಾವುದೇ ಸಮಸ್ಯೆಯಾಗಲಿ ಅದನ್ನು ಕ್ರಮಬದ್ಧವಾಗಿ ಪರಿಹರಿಸುವ ಯೋಚನೆ ಮಾಡುತ್ತಾರೆ.

ವಕ್ರ ಹೆಬ್ಬೆರಳು

ವಕ್ರ ಹೆಬ್ಬೆರಳು ಎಂದರೆ ಹೆಬ್ಬೆರಳನ್ನು ನೇರವಾಗಿ ಹಿಡಿದಾಗ ಕೊಂಚ ಬಾಗಿದಂತಿರುತ್ತದೆ ಅಥವಾ ವಕ್ರವಾಗಿರುತ್ತದೆ. ಈ ರೀತಿ ಆಕಾರದ ಹೆಬ್ಬೆರಳು ಹೊಂದಿರುವವರು ಸೃಜನಶೀಲರು. ನಮ್ಯ ಗುಣ ಹೊಂದಿರುವ ಜನರು ಇವರು. ವಕ್ರವಾದ ಹೆಬ್ಬೆರಳುಗಳನ್ನು ಹೊಂದಿರುವ ವ್ಯಕ್ತಿಗಳು ಹೆಚ್ಚು ಮುಕ್ತ ಮನಸ್ಸಿನವರು. ಅಸಾಂಪ್ರದಾಯಿಕ ಪರಿಹಾರಗಳನ್ನು ಅನ್ವೇಷಿಸಲು ಸಿದ್ಧರಿರುತ್ತಾರೆ. ಇವರಲ್ಲಿ ತಮಾಷೆ ಹಾಗೂ ಚೇಷ್ಟೆಯ ಗುಣ ಹೆಚ್ಚಿರುತ್ತದೆ.

ಅಗಲವಾದ ಹೆಬ್ಬೆರಳು

ಅಗಲವಾದ ಹೆಬ್ಬೆರಳು ವಿಶಾಲವಾಗಿರುತ್ತದೆ. ಇದು ಶಕ್ತಿ ಹಾಗೂ ಸ್ಥಿತಿಸ್ಥಾಪಕತ್ವವನ್ನು ಸೂಚಿಸುತ್ತದೆ. ಅಗಲವಾದ ಹೆಬ್ಬೆರಳುಗಳನ್ನು ಹೊಂದಿರುವವರು ಬಲವಾದ ಇಚ್ಛಾಶಕ್ತಿಯುಳ್ಳವರು, ಮಹತ್ವಾಕಾಂಕ್ಷೆಯುಳ್ಳವರು ಎಂದು ಪರಿಗಣಿಸಬಹುದು. ಇವರು ನಾಯಕತ್ವದ ಗುಣವುಳ್ಳವರು. ಇವರ ನಿರ್ಧಾರಗಳ ಮೇಲೆ ವಿಶ್ವಾಸ ಇಡಬಹುದು.

ಕಿರಿದಾದ ಹೆಬ್ಬೆರಳು

ಹೆಬ್ಬೆರಳು ಕಿರಿದಾಗಿದ್ದರೆ ಅಂತಹವರು ಸೂಕ್ಷ್ಮಜೀವಿ. ಕಿರಿದಾದ ಹೆಬ್ಬೆರಳು ಹೊಂದಿರುವ ಜನರಿಗೆ ಸಹಾನುಭೂತಿ ಮತ್ತು ತಿಳುವಳಿಕೆಯ ಅಗತ್ಯವಿರುತ್ತದೆ. ಇವರು ಸೌಮ್ಯ ವರ್ತನೆಯನ್ನು ಹೊಂದಿರುತ್ತಾರೆ.

ಹೆಬ್ಬೆರಳಿನ ಗಾತ್ರ ಸಣ್ಣದಾಗಿರುವುದು

ಇವರು ಪ್ರಯೋಗಶೀಲರು. ಪ್ರಸ್ತುತ ಕ್ಷಣದ ಮೇಲೆ ಗಮನ ಹರಿಸುವ ಸ್ವಭಾವದವರು. ಇವರು ಸರಳತೆಯನ್ನು ಇಷ್ಟಪಡುತ್ತಾರೆ, ಗೌರವಿಸುತ್ತಾರೆ. ಸಾಮಾನ್ಯ ಜೀವನದ ಬಗ್ಗೆ ದೃಷ್ಟಿಕೋನ ಹೊಂದಿರುವ ಜನರು ಇವರಾಗಿರುತ್ತಾರೆ.

ಉದ್ದ ಹೆಬ್ಬೆರಳು

ಉದ್ದನೆಯ ಹೆಬ್ಬೆರಳು ಮಹತ್ವಾಕಾಂಕ್ಷೆ ಮತ್ತು ನಿರ್ಣಯವನ್ನು ಸೂಚಿಸುತ್ತದೆ. ಇವರು ಗುರಿ ಆಧಾರಿತವಾಗಿರುತ್ತಾರೆ. ಮಹತ್ವಾಕಾಂಕ್ಷೆಯ ಗುರಿ ಸಾಧಿಸುವ ಗುಣ ಇವರಲ್ಲಿರುತ್ತದೆ. ಅಂದುಕೊಂಡಿದ್ದನ್ನು ಸಾಧಿಸದೇ ಬಿಡುವವರಲ್ಲ.

ನೋಡಿದ್ರಲ್ಲ ಹೆಬ್ಬೆರಳಿನ ಆಕಾರ, ಗಾತ್ರಕ್ಕೆ ಸಂಬಂಧಿಸಿ ವ್ಯಕ್ತಿಗಳ ವ್ಯಕ್ತಿತ್ವ ಹೇಗಿರುತ್ತದೆ ಎಂಬುದನ್ನು. ನಿಮ್ಮ ಹೆಬ್ಬೆರಳಿನ ಆಕಾರ ಗುರುತಿಸಿ, ನಿಮ್ಮ ವ್ಯಕ್ತಿತ್ವ ಎಂಥದ್ದು ತಿಳಿಯಿರಿ. ನಿಮ್ಮ ಆತ್ಮೀಯರ ಹೆಬ್ಬೆರಳು ನೋಡಿ ಅವರ ವ್ಯಕ್ತಿತ್ವವನ್ನೂ ತಿಳಿಯಿರಿ.

Whats_app_banner