ಕನ್ನಡ ಸುದ್ದಿ  /  ಜೀವನಶೈಲಿ  /  Personality Test: ಪೆಂಗ್ವಿನ್‌, ಮನುಷ್ಯನ ಮುಖ ಚಿತ್ರದಲ್ಲಿ ನಿಮಗೆ ಮೊದಲು ಕಂಡಿದ್ದೇನು; ವ್ಯಕ್ತಿತ್ವ ಪರಿಚಯಿಸುತ್ತೆ ಈ ಚಿತ್ರ

Personality Test: ಪೆಂಗ್ವಿನ್‌, ಮನುಷ್ಯನ ಮುಖ ಚಿತ್ರದಲ್ಲಿ ನಿಮಗೆ ಮೊದಲು ಕಂಡಿದ್ದೇನು; ವ್ಯಕ್ತಿತ್ವ ಪರಿಚಯಿಸುತ್ತೆ ಈ ಚಿತ್ರ

ಇಲ್ಲಿರುವ ಚಿತ್ರದಲ್ಲಿ ಎರಡು ಅಂಶಗಳಿವೆ. ಚಿತ್ರವನ್ನು ಕಂಡಾಕ್ಷಣ ನಿಮಗೆ ಮೊದಲು ಏನು ಕಾಣಿಸುತ್ತದೆ ಅದು ನಿಮ್ಮ ವ್ಯಕ್ತಿತ್ವವನ್ನು ಸೂಚಿಸುತ್ತದೆ. ಸರಿ ಹಾಗಾದ್ರೆ ಪೆಂಗ್ವಿನ್‌, ಮನುಷ್ಯನ ಮುಖ ಚಿತ್ರದಲ್ಲಿ ನಿಮಗೆ ಮೊದಲು ಕಾಣಿಸಿದ್ದೇನು?

ಪೆಂಗ್ವಿನ್‌, ಮನುಷ್ಯನ ಮುಖ ಚಿತ್ರದಲ್ಲಿ ನಿಮಗೆ ಮೊದಲು ಕಂಡಿದ್ದೇನು; ನಿಮ್ಮ ವ್ಯಕ್ತಿತ್ವ ಪರಿಚಯಿಸುತ್ತೆ ಈ ಚಿತ್ರ
ಪೆಂಗ್ವಿನ್‌, ಮನುಷ್ಯನ ಮುಖ ಚಿತ್ರದಲ್ಲಿ ನಿಮಗೆ ಮೊದಲು ಕಂಡಿದ್ದೇನು; ನಿಮ್ಮ ವ್ಯಕ್ತಿತ್ವ ಪರಿಚಯಿಸುತ್ತೆ ಈ ಚಿತ್ರ (PC: Social Media)

ಕಣ್ಣು, ಮನಸ್ಸಿಗೆ ಭ್ರಮೆ ಹುಟ್ಟುವಂತೆ ಮಾಡುವ ಆಪ್ಟಿಕಲ್‌ ಇಲ್ಯೂಷನ್‌ಗಳು ನಮ್ಮ ವ್ಯಕ್ತಿತ್ವ ಪರಿಚಯವನ್ನೂ ಮಾಡುತ್ತವೆ. ಇತ್ತೀಚಿನ ದಿನಗಳಲ್ಲಿ ನೀವು ಹಲವು ಆಪ್ಟಿಕಲ್‌ ಇಲ್ಯೂಷನ್‌ ಲೇಖನಗಳನ್ನು ಓದಿರಬಹುದು ಹಾಗೂ ನಿಮ್ಮ ರಹಸ್ಯ ಸ್ವಭಾವ, ವ್ಯಕ್ತಿತ್ವದ ಬಗ್ಗೆ ತಿಳಿದುಕೊಂಡಿರಬಹುದು. ಇಲ್ಲೊಂದು ಹೊಸ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವಿದೆ. ಇದರಲ್ಲಿ ಪೆಂಗ್ವಿನ್‌ ಹಾಗೂ ಮನುಷ್ಯನ ಮುಖ ಕಾಣುತ್ತದೆ. ಈ ಚಿತ್ರದಲ್ಲಿ ನಿಮ್ಮ ಕಣ್ಣಿಗೆ ಮೊದಲು ಏನು ಕಾಣುತ್ತದೆ ಅದು ನಿಮ್ಮ ವ್ಯಕ್ತಿತ್ವ ಹೇಗೆ ಎಂಬುದನ್ನು ತಿಳಿಸುತ್ತದೆ. ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವು ನೀವು ತೀಕ್ಷ್ಣ ವ್ಯಕ್ತಿತ್ವದವರೋ ಇಲ್ಲ ಮೋಸಗಾರರೋ ಎಂಬುದನ್ನು ತಿಳಿಸುತ್ತದೆ.

ಟ್ರೆಂಡಿಂಗ್​ ಸುದ್ದಿ

ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವನ್ನು ನೀವು ಪರೀಕ್ಷಿಸಿ ನಂತರ ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರಿಗೂ ಕಳುಹಿಸಿ. ಅವರ ವ್ಯಕ್ತಿತ್ವ, ಸ್ವಭಾವ ಹೇಗೆ ತಿಳಿಯಿರಿ.

ಪೆಂಗ್ವಿನ್‌ ಮೊದಲು ಕಂಡರೆ

ಚಿತ್ರವನ್ನು ಕಂಡಾಕ್ಷಣ ನಿಮಗೆ ಪೆಂಗ್ವಿನ್‌ ಕಾಣಿಸಿದರೆ ನೀವು ತೀಕ್ಷ್ಣವಾದ ಅಂತಃಪ್ರಜ್ಞೆ ಮತ್ತು ಉನ್ನತ ಭಾವನಾತ್ಮಕ ಬುದ್ಧಿವಂತಿಕೆಯನ್ನು ಹೊಂದಿರುವಿರಿ ಎಂದು ಸೂಚಿಸುತ್ತದೆ. ನಿಮ್ಮ ಜೀವನದ ಅನುಭವಗಳು ನಿಮ್ಮಲ್ಲಿ ಬುದ್ಧಿವಂತಿಕೆಯನ್ನು ಬೆಳೆಸಿವೆ ಮತ್ತು ತಾಳ್ಮೆಯು ಸಕಾರಾತ್ಮಕ ಫಲಿತಾಂಶಗಳಿಗೆ ಕಾರಣವಾಗುತ್ತದೆ ಎಂಬ ನಂಬಿಕೆಗೆ ನೀವು ದೃಢವಾಗಿ ಅಂಟಿಕೊಳ್ಳುತ್ತೀರಿ. ಇತರರನ್ನು ನಂಬುವ ನಿಮ್ಮ ಎಚ್ಚರಿಕೆಯ ಸ್ವಭಾವವು ನಿಮ್ಮ ವಿವೇಚನಾಶೀಲ ಮತ್ತು ಕಡಿಮೆ ಮೋಸದ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತದೆ.

ಮನುಷ್ಯ ಮೊದಲು ಕಾಣಿಸಿದರೆ...

ನಿಮಗೆ ಮನುಷ್ಯನ ಮುಖ ಮೊದಲು ಕಾಣಿಸಿದರೆ ನೀವು ಮೋಸ ಮಾಡುವ ಪ್ರವೃತ್ತಿಯವರು. ನಕಾರಾತ್ಮಕ ಅಂಶಗಳು ನಿಮ್ಮಲ್ಲಿ ಹೆಚ್ಚಿರುತ್ತದೆ. ಕುತಂತ್ರಿ ಮನೋಭಾವದ ಕಾರಣ ನಿಮ್ಮಲ್ಲಿರುವ ಒಳ್ಳೆಯ ಅಂಶಗಳು ಬೆಳಕಿಗೆ ಬರುವುದಿಲ್ಲ.

ಆಪ್ಟಿಕಲ್‌ ಇಲ್ಯೂಷನ್‌ಗಳು ನಿಮ್ಮ ಗಮನಶಕ್ತಿಯನ್ನೂ ಪರೀಕ್ಷೆ ಮಾಡುವುದು ಸುಳ್ಳಲ್ಲ. ಎಷ್ಟು ಕಡಿಮೆ ಸಮಯದಲ್ಲಿ ಎಷ್ಟು ಶಾರ್ಪ್‌ ಆಗಿ ಗ್ರಹಿಸುತ್ತೀರಿ ಎಂಬುದನ್ನು ಇದು ತಿಳಿಸುತ್ತದೆ. ನಿಮ್ಮ ಬುದ್ಧಿಮತ್ತೆಯನ್ನು ಪರೀಕ್ಷಿಸುವ ಮೋಜಿನ ಮಾರ್ಗಗಳು ಇದಾಗಿದೆ. ಜೊತೆಗೆ ಇಂತಹ ಆಪ್ಟಿಕಲ್‌ ಇಲ್ಯೂಷನ್‌, ಬ್ರೈನ್‌ ಟೀಸರ್‌ಗಳು ನಮ್ಮ ಐಕ್ಯೂ ಪರೀಕ್ಷೆಯನ್ನು ಮಾಡುತ್ತವೆ.

ಇದನ್ನೂ ಓದಿ

Personality Test: ಮಹಿಳೆಯ ಮುಖ, ಅರಳಿರುವ ಹೂ ಎರಡರಲ್ಲಿ ನಿಮಗೆ ಮೊದಲು ಕಂಡಿದ್ದೇನು? ನಿಮ್ಮ ರಹಸ್ಯ ವ್ಯಕ್ತಿತ್ವ ತಿಳಿಸುತ್ತೆ ಚಿತ್ರ

ಇಲ್ಲಿರುವ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವು ನಿಮ್ಮ ಕಣ್ಣಿಗೆ ಮೋಸ ಮಾಡುವ ಜೊತೆಗೆ ನಿಮ್ಮ ರಹಸ್ಯ ವ್ಯಕ್ತಿತ್ವವನ್ನು ತಿಳಿಸುತ್ತದೆ. ವ್ಯಕ್ತಿಗಳ ಒಳನೋಟ ತಿಳಿಸುವ ಚಿತ್ರ ಇದಾಗಿದೆ. ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವು ನೀವು ಅತಿಯಾಗಿ ಯೋಚಿಸುವವರಾಗಿದ್ದೀರಾ ಅಥವಾ ಸರಳವಾಗಿ ವರ್ತಿಸುತ್ತೀರಾ ಎಂಬುದನ್ನು ಈ ಚಿತ್ರ ತಿಳಿಸುತ್ತದೆ.

Personality Test: ಮನುಷ್ಯನ ಮುಖ, ಬಂಡೆ ಚಿತ್ರದಲ್ಲಿ ಮೊದಲು ಕಾಣಿಸಿದ್ದೇನು, ನಿಮ್ಮ ಗುಪ್ತ ಸ್ವಭಾವ ತಿಳಿಸುತ್ತೆ ಈ ಚಿತ್ರ

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ನಮ್ಮ ಬದುಕು ಹಾಗೂ ವ್ಯಕ್ತಿತ್ವದ ಬಗ್ಗೆ ನಮಗೆ ತಿಳಿದಿರದ ರಹಸ್ಯವನ್ನು ತಿಳಿಸುತ್ತವೆ. ಚಿತ್ರದಲ್ಲಿ ಮೊದಲು ಕಾಣಿಸಿದ ಅಂಶವು ನಿಮ್ಮ ವ್ಯಕ್ತಿತ್ವ, ಜೀವನದಲ್ಲಿ ನೀವು ಏನನ್ನು ಬಯಸುತ್ತೀರಿ ಎಂಬುದನ್ನು ತಿಳಿಸುತ್ತದೆ. ಹಾಗಾದ್ರೆ ಈ ಚಿತ್ರ ನೋಡಿ ನಿಮ್ಮ ವ್ಯಕ್ತಿತ್ವ ತಿಳಿಯಿರಿ.

 

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ವಿಭಾಗ