ಕನ್ನಡ ಸುದ್ದಿ  /  ಜೀವನಶೈಲಿ  /  Personality Test: ಮರ-ಸಿಂಹದ ಮುಖ, ಚಿತ್ರದಲ್ಲಿ ಮೊದಲು ಕಾಣಿಸಿದ್ದೇನು? ನಿಮ್ಮ ರಹಸ್ಯ ಗುಣದ ಬಗ್ಗೆ ತಿಳಿಸುತ್ತೆ ಈ ಚಿತ್ರ

Personality Test: ಮರ-ಸಿಂಹದ ಮುಖ, ಚಿತ್ರದಲ್ಲಿ ಮೊದಲು ಕಾಣಿಸಿದ್ದೇನು? ನಿಮ್ಮ ರಹಸ್ಯ ಗುಣದ ಬಗ್ಗೆ ತಿಳಿಸುತ್ತೆ ಈ ಚಿತ್ರ

ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವೊಂದು ಜನರು ಮೊದಲ ನೋಟದಲ್ಲೇ ನಿಮ್ಮ ಬಗ್ಗೆ ಏನು ತಿಳಿದುಕೊಳ್ಳುತ್ತಾರೆ ಎಂಬುದನ್ನು ಬಹಿರಂಗ ಪಡಿಸುತ್ತದೆ. ಹಾಗಾದರೆ ಚಿತ್ರದಲ್ಲಿ ಮೊದಲು ನಿಮಗೆ ಗಿಡ ಕಾಣಿಸ್ತಾ, ಸಿಂಹದ ಮುಖ ಕಾಣಿಸ್ತಾ ಹೇಳಿ.

ಮರ-ಸಿಂಹದ ಮುಖ, ಚಿತ್ರದಲ್ಲಿ ಮೊದಲು ಕಾಣಿಸಿದ್ದೇನು?
ಮರ-ಸಿಂಹದ ಮುಖ, ಚಿತ್ರದಲ್ಲಿ ಮೊದಲು ಕಾಣಿಸಿದ್ದೇನು? (PC: Bright Side)

ಅಂತರ್ಜಾಲದಲ್ಲಿ ಸಾಕಷ್ಟು ಆಪ್ಟಿಕಲ್‌ ಇಲ್ಯೂಷನ್‌ಗಳು ಕಣ್ಣಿಗೆ ಬೀಳುತ್ತವೆ. ಅವುಗಳನ್ನು ನೋಡಿದಾಗ ನಮ್ಮ ಕಣ್ಣಿಗೆ ಚಿತ್ರ ವಿಚಿತ್ರವಾಗಿ ಕಾಣಿಸಬಹುದು. ಇದೇನಪ್ಪಾ ಈ ಚಿತ್ರದಲ್ಲಿ ಮೊದಲು ಕಂಡಿದ್ದೇ ಬೇರೆ, ಈಗ ಇನ್ನೊಂದು ರೂಪ ಕಾಣುತ್ತಿದೆ ಅಲ್ಲಪ್ಪಾ ಎಂದು ನಿಮಗೆ ಅನ್ನಿಸಬಹುದು. ಆದರೆ ಈ ವಿಚಿತ್ರ ಚಿತ್ರಗಳು ನಿಮ್ಮ ವ್ಯಕ್ತಿತ್ವ, ಗುಣ ಸ್ವಭಾವ ತಿಳಿಸುವುದು ಸುಳ್ಳಲ್ಲ. ನಮ್ಮ ವ್ಯಕ್ತಿತ್ವದ ಬಗ್ಗೆ ನಮಗೆ ತಿಳಿದಿರದ ವಿಚಾರಗಳನ್ನು ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ನಮಗೆ ತಿಳಿಸುತ್ತವೆ.

ಟ್ರೆಂಡಿಂಗ್​ ಸುದ್ದಿ

ಇಂದಿನ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದಲ್ಲಿ ನಿಮಗೆ ಗಿಡ ಹಾಗೂ ಸಿಂಹ ಮುಖ ಇರುವ ಚಿತ್ರವಿದೆ. ಇದನ್ನು ಸರಿಯಾಗಿ ಗಮನಿಸಿ, ನಿಮ್ಮ ಕಣ್ಣಿಗೆ ಮೊದಲು ಯಾವುದು ಕಾಣಿಸುತ್ತದೆ ನೋಡಿ. ಈ ಚಿತ್ರವು ಜನರು ಮೊದಲು ನಿಮ್ಮನ್ನು ನೋಡಿದಾಗ ನಿಮ್ಮ ಬಗ್ಗೆ ಯಾವ ರೀತಿಯ ಅಭಿಪ್ರಾಯ ಹೊಂದುತ್ತಾರೆ ಎಂಬುದನ್ನು ತಿಳಿಸುವ ಚಿತ್ರವಿದು.

ಮೊದಲು ನಿಮಗೆ ಮರ ಕಾಣಿಸಿದರೆ

ಈ ಚಿತ್ರದಲ್ಲಿ ನೀವು ಮೊದಲು ಮರ ಕಂಡರೆ ನೀವು ಏಕಾಂತವನ್ನು ಬಯಸುವವರು. ನಿಮಗೆ ಇತರರ ಜೊತೆ ಬೆರೆಯಬೇಕು ಎನ್ನಿಸಿದರೂ ಮನೆಯಲ್ಲೇ ಇರುವುದು ನಿಮ್ಮ ಆದ್ಯತೆಯಾಗಿರುತ್ತದೆ. ಆದರೂ ಕೆಲವರು ಸಾಮಾಜಿಕವಾಗಿ ಬೆರೆಯಲು ಇಷ್ಟಪಡಬಹುದು.

ನೀವು ಸಂತೋಷವಾಗಿರಲು ಪ್ರಯತ್ನಿಸುವಾಗ ನಕಾರಾತ್ಮಕ ಭಾವನೆಗಳು ಅದಕ್ಕೆ ಅಡ್ಡಿಪಡಿಸಬಹುದು. ಹಾಗಾಗಿ ತ್ವರಿತವಾಗಿ ಮುಂದುವರಿಯಲಯ ನಿಮಗೆ ಕಷ್ಟವಾಗಬಹುದು.

ಚಿತ್ರದಲ್ಲಿ ಸಿಂಹದ ಮುಖ ಮೊದಲು ಕಾಣಿಸಿದ್ರೆ

ಸಾಮಾಜಿಕವಾಗಿ ಬೆರೆಯುವ ಸಂದರ್ಭಗಳಲ್ಲಿ ನಿಮಗೆ ಕಿರಿಕಿರಿಯ ಭಾವ ಎದುರಾಗಬಹುದು. ಮನುಷ್ಯರ ಸಣ್ಣತನದ ಮಾತುಗಳು ನಿಮಗೆ ಇಷ್ಟವಾಗುವುದಿಲ್ಲ. ಕೆಲವೊಮ್ಮೆ ಬೇರೆಯವರ ಮಾತುಗಳನ್ನು ನೀವು ತಪ್ಪಾಗಿ ತಿಳಿದುಕೊಳ್ಳಬಹುದು. ಸಿಂಹದ ಮುಖವನ್ನು ಮೊದಲು ಗುರುತಿಸುವವರು ಸಾಮಾನ್ಯವಾಗಿ ಸಾಮಾಜಿಕವಾಗಿ ದೂರವಿರುತ್ತಾರೆ. ಮೇಲ್ನೋಟಕ್ಕೆ ಜನರು ಇವರ ಬಗ್ಗೆ ತಿಳಿದುಕೊಳ್ಳುವ ರೀತಿಯೇ ಬೇರೆ. ಆದರೆ ಇವರ ಸಹಜ ವರ್ತನೆ ತಿಳಿಯಬೇಕು ಎಂದರೆ ಇಂತಹವರ ಜೊತೆಗೆ ಹೆಚ್ಚು ಬೆರೆಯಬೇಕು.

ಈ ಪರ್ಸನಾಲಿಟಿ ಟೆಸ್ಟ್‌ಗಳನ್ನೂ ಓದಿ

Personality Test: ಮಹಿಳೆಯ ಮುಖ, ಚಿರತೆ-ಕಾಗೆ, ಮೊದಲು ಕಾಣಿಸಿದ್ದೇನು? ನಿಮ್ಮ ರಹಸ್ಯ ಗುಣಗಳ ಬಗ್ಗೆ ತಿಳಿಸುವ ಚಿತ್ರವಿದು

ಇಲ್ಲಿರುವ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವು ನಿಮಗೆ ಅರಿಯದ ನಿಮ್ಮ ವ್ಯಕ್ತಿತ್ವ ಹಾಗೂ ಗುಣಗಳ ಬಗ್ಗೆ ಪರಿಚಯ ಮಾಡಿಸುತ್ತದೆ. ಚಿತ್ರದಲ್ಲಿ ನೀವು ಮೊದಲು ಏನನ್ನು ಗುರುತಿಸುತ್ತೀರಿ ಅದು ನಿಮ್ಮ ರಹಸ್ಯ ವ್ಯಕ್ತಿತ್ವ ಬಹಿರಂಗ ಮಾಡುತ್ತದೆ. ಹಾಗಾದರೆ ಇಂದಿನ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದಲ್ಲಿ ನಿಮ್ಮ ಕಣ್ಣಿಗೆ ಮೊದಲು ಏನು ಕಾಣಿಸಿತ್ತು, ನಿಮ್ಮ ರಹಸ್ಯ ಗುಣ ಯಾವುದು ನೋಡಿ.

Personality Test: ಹಾರುವ ಪಾರಿವಾಳ, ಮಹಿಳೆಯ ಮುಖ, ಚಿತ್ರದಲ್ಲಿ ಮೊದಲು ಕಂಡಿದ್ದೇನು? ಪ್ರೀತಿ ವಿಚಾರದಲ್ಲಿ ನಿಮ್ಮ ಸ್ವಭಾವ ಹೇಗೆ ತಿಳಿಯಿರಿ

ಇಂದಿನ ಆಪ್ಟಿಕಲ್‌ ಇಲ್ಯೂಷನ್‌ ಪರ್ಸನಾಲಿಟಿ ಟೆಸ್ಟ್‌ನಲ್ಲಿ ಕೆಳಗೆ ನೋಡುತ್ತಿರುವ ಮಹಿಳೆಯ ಮುಖ ಹಾಗೂ ಆಕಾಶದಲ್ಲಿ ಹಾರಾಡುತ್ತಿರುವ ಪಾರಿವಾಳಗಳ ಚಿತ್ರವಿದೆ. ನಿಮ್ಮ ಕಣ್ಣಿಗೆ ಮೊದಲು ಏನು ಕಾಣುವುದೋ ಅದರಂತೆ ನಿಮ್ಮ ಪ್ರೇಮಜೀವನ ಇರುತ್ತದೆ.

ವಿಭಾಗ