ಕನ್ನಡ ಸುದ್ದಿ  /  ಜೀವನಶೈಲಿ  /  Personality Test: ಮರ, ಸಿಂಹದ ಮುಖ ಚಿತ್ರದಲ್ಲಿ ಮೊದಲು ಕಾಣಿಸಿದ್ದೇನು? ನಿಮ್ಮ ಸ್ವಭಾವ ಹೇಗೆ ಎಂದು ತಿಳಿಸುವ ಚಿತ್ರವಿದು

Personality Test: ಮರ, ಸಿಂಹದ ಮುಖ ಚಿತ್ರದಲ್ಲಿ ಮೊದಲು ಕಾಣಿಸಿದ್ದೇನು? ನಿಮ್ಮ ಸ್ವಭಾವ ಹೇಗೆ ಎಂದು ತಿಳಿಸುವ ಚಿತ್ರವಿದು

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ನಮ್ಮ ಕಣ್ಣಿಗೆ ಸವಾಲು ಹಾಕುವುದಷ್ಟೇ ಅಲ್ಲ ನಮ್ಮ ವ್ಯಕ್ತಿತ್ವ ಹೇಗೆ ಎಂಬುದನ್ನೂ ತಿಳಿಸುತ್ತವೆ. ಇಲ್ಲಿರುವ ಚಿತ್ರದಲ್ಲಿ ಸಿಂಹದ ಮುಖ ಹಾಗೂ ಮರ ಇದೆ. ಇದರಲ್ಲಿ ನಿಮ್ಮ ಕಣ್ಣಿಗೆ ಮೊದಲು ಏನು ಕಾಣುವುದೋ ಅದು ನಿಮ್ಮ ವ್ಯಕ್ತಿತ್ವ ಹೇಗೆ ಎಂಬುದನ್ನು ತಿಳಿಸುತ್ತದೆ.

ಮರ, ಸಿಂಹದ ಮುಖ ಈ ಚಿತ್ರದಲ್ಲಿ ಮೊದಲು ಕಂಡಿದ್ದೇನು?
ಮರ, ಸಿಂಹದ ಮುಖ ಈ ಚಿತ್ರದಲ್ಲಿ ಮೊದಲು ಕಂಡಿದ್ದೇನು? (PC: TikTok)

ಆಪ್ಟಿಕಲ್‌ ಇಲ್ಯೂಷನ್‌ ಪರ್ಸನಾಲಿಟಿ ಟೆಸ್ಟ್‌ಗಳು ವ್ಯಕ್ತಿಯ ಸ್ವ-ವಿಮರ್ಶಾತ್ಮಕ ಪ್ರವೃತ್ತಿಗಳ ಮೇಲೆ ಕೇಂದ್ರೀಕರಿಸುತ್ತದೆ. ಇದರಲ್ಲಿ ಎರಡು ಚಿತ್ರಗಳಿದ್ದು ಮೊದಲು ನಿಮ್ಮ ಕಣ್ಣಿಗೆ ಯಾವುದು ಕಾಣುತ್ತದೋ ಅದು ನಿಮ್ಮ ವ್ಯಕ್ತಿತ್ವವನ್ನು ತಿಳಿಸುತ್ತದೆ. ಈ ಚಿತ್ರಗಳು ನಮ್ಮ ಕಣ್ಣು, ಮನಸ್ಸಿಗೆ ಮೋಸ ಮಾಡುವಂತಿರುವುದು ಸುಳ್ಳಲ್ಲ. ಆದರೂ ಇದರಲ್ಲಿ ನಮ್ಮ ವ್ಯಕ್ತಿತ್ವವೂ ಅಡಗಿದೆ. ಇಂತಹ ಹಲವು ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತವೆ. ಇಲ್ಲೊಂದು ಅಂಥದ್ದೇ ಚಿತ್ರವಿದೆ. ಇದರಲ್ಲಿ ಸಿಂಹದ ಮುಖ ಹಾಗೂ ಮರವಿದೆ.

ಟ್ರೆಂಡಿಂಗ್​ ಸುದ್ದಿ

ಇದು ಸಂಬಂಧಗಳಿಗೆ ಸಂಬಂಧಿಸಿದ ಪರ್ಸನಾಲಿಟಿ ಟೆಸ್ಟ್‌ ಹೊಂದಿದೆ. ನೀವು ಸಂಬಂಧದಲ್ಲಿ ಯಾವ ರೀತಿಯ ಮನೋಭಾವದವರು ಎಂಬುದನ್ನು ಇದು ವ್ಯಕ್ತಪಡಿಸುತ್ತದೆ. ನೀವು ಪ್ರೀತಿಯಲ್ಲಿ ವಿಶ್ವಾಸ ಹೊಂದಿರುವ ವ್ಯಕ್ತಿಯ ಅಥವಾ ಪ್ರೇಮ ಸಂಬಂಧದಲ್ಲಿ ನಿಮಗೆ ಅಪನಂಬಿಕೆ ಇದ್ಯಾ ಎಂಬುದನ್ನು ಈ ಚಿತ್ರ ಬಹಿರಂಗ ಪಡಿಸುತ್ತದೆ. ಮಿಯಾ ಟಿಲಿನ್‌ ಎನ್ನುವವರು ಈ ಆಕರ್ಷಕ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವನ್ನು ರಚಿಸಿದ್ದಾರೆ. ಈ ಎರಡೂ ಚಿತ್ರಕ್ಕೂ ಬೇರೆ ಬೇರೆ ಅರ್ಥವಿದ್ದು ನಿಮಗೆ ಮೊದಲು ಯಾವುದು ಕಾಣುವುದೋ ಅದು ನಿಮ್ಮ ವ್ಯಕ್ತಿತ್ವವಾಗಿರುತ್ತದೆ.

ನಿಮಗೆ ಮರ ಮೊದಲು ಕಂಡರೆ

ಮರವನ್ನು ಮೊದಲು ಕಂಡರೆ ನೀವು ಜನರನ್ನು ತಕ್ಷಣಕ್ಕೆ ನಂಬುವವರಲ್ಲ. ಯಾರನ್ನೂ ಆರಂಭದಲ್ಲಿ ಸುಲಭವಾಗಿ ನಂಬುವವರು ನೀವಲ್ಲ. ನೀವು ಎಲ್ಲರೊಂದಿಗೂ ಸುಲಭವಾಗಿ ಬೆರೆಯುವುದಿಲ್ಲ. ಆದರೆ ಒಮ್ಮೆ ಯಾರನ್ನಾದರೂ ನಂಬಿ ಸ್ನೇಹ ಮಾಡಿದರೆ ಅವರೊಂದಿಗೆ ನಿಷ್ಠೆಯಿಂದ ಇರುತ್ತೀರಿ. ನೀವು ಖಾಸಗಿ ಜೀವನವನ್ನು ಹೆಚ್ಚು ಇಷ್ಟಪಡುತ್ತೀರಿ. ನೀವು ಮೊದಲ ಭೇಟಿಯಲ್ಲೇ ಜನರಿಗೆ ನಿಗೂಢವಾಗಿ ಕಾಣಿಸುವ ಕಾರಣ ನಿಮ್ಮ ಬಗ್ಗೆ ಸಹಜವಾಗಿಯೇ ಆಸಕ್ತಿ ಹೊಂದಿರುತ್ತದೆ. ಪ್ರೀತಿಯನ್ನು ಎಂದಿಗೂ ನೀವಾಗಿಯೇ ವ್ಯಕ್ತಪಡಿಸುವವರಲ್ಲ.

ಸಿಂಹದ ಮುಖ ಮೊದಲು ಕಂಡರೆ

ನಿಮಗೆ ಚಿತ್ರದಲ್ಲಿ ಸಿಂಹದ ಮುಖ ಮೊದಲು ಕಂಡರೆ ನೀವು ಸಾಮಾಜಿಕ ವ್ಯಕ್ತಿತ್ವದವರು. ನೀವು ಎಲ್ಲರನ್ನೂ ಪ್ರೀತಿಸುತ್ತೀರಿ. ನೀವು ಆಕರ್ಷಕ ಮತ್ತು ಆತ್ಮವಿಶ್ವಾಸದ ವ್ಯಕ್ತಿತ್ವವನ್ನು ಹೊಂದಿರುವುದರಿಂದ ಸುಲಭವಾಗಿ ಸ್ನೇಹಿತರನ್ನು ಮಾಡಿಕೊಳ್ಳಬಹುದು. ನಾಟಕೀಯ ಬದುಕು ನಿಮಗೆ ಇಷ್ಟವಾಗುವುದಿಲ್ಲ. ಜಗಳ, ಮನಸ್ತಾಪಗಳನ್ನು ಭಾಗಿಯಾವುದನ್ನು ನೀವು ದ್ವೇಷಿಸುತ್ತೀರಿ. ಆ ಕಾರಣಕ್ಕೆ ನೀವು ನಂಬರ್‌ ಒನ್‌ ವ್ಯಕ್ತಿಯಾಗಿರುತ್ತೀರಿ. ನೀವು ಎಷ್ಟು ವಿಶ್ವಾಸಾರ್ಹರು ಎಂಬ ಕಾರಣಕ್ಕೆ ಜನರು ನಿಮ್ಮನ್ನು ಮೆಚ್ಚುತ್ತಾರೆ. ಅತ್ಯಂತ ಸಹಾನುಭೂತಿಯ ವರ್ತನೆ ನಿಮ್ಮದಾಗಿದ್ದು, ಇತರರಿಗೆ ಸಹಾಯ ಮಾಡುವ ಮನಸ್ಸು ನಿಮಗಿರುತ್ತದೆ.

ಈ ಆಪ್ಟಿಕಲ್‌ ಇಲ್ಯೂಷನ್‌ಗಳು ಕಣ್ಣಿಗೆ ಗೊಂದಲ ಹುಟ್ಟಿಸುವುದು ಮಾತ್ರವಲ್ಲ, ನಿಮ್ಮ ವ್ಯಕ್ತಿತ್ವ ಹೇಗೆ ಎಂಬುದನ್ನೂ ತಿಳಿಸುತ್ತವೆ. ಈ ಚಿತ್ರದ ಮೂಲಕ ನಿಮ್ಮ ವ್ಯಕ್ತಿತ್ವ ಹೇಗೆ ಎಂಬುದು ತಿಳಿದುಕೊಂಡ್ರಿ ಅಲ್ವಾ?

ಈ ಪರ್ಸನಾಲಿಟಿ ಟೆಸ್ಟ್‌ಗಳನ್ನೂ ಓದಿ

Personality Test: ಕಾಫಿ ಕಪ್‌, ಗೂಬೆ ಎರಡರಲ್ಲಿ ಮೊದಲು ಕಾಣಿಸಿದ್ದೇನು, ನಿಮ್ಮ ವ್ಯಕ್ತಿತ್ವ ಹೇಗೆ ತಿಳಿಸುತ್ತೆ ಈ ಚಿತ್ರ

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ನಮ್ಮ ಕಣ್ಣನ್ನು ಪರೀಕ್ಷೆ ಮಾಡುವುದು ಮಾತ್ರವಲ್ಲ, ನಮ್ಮ ವ್ಯಕ್ತಿತ್ವ ಹೇಗೆ ಎಂಬುದನ್ನೂ ತಿಳಿಸುತ್ತವೆ. ಇಲ್ಲಿರುವ ಚಿತ್ರದಲ್ಲಿ ಕಾಫಿ ಕಪ್‌ ಹಾಗೂ ಗೂಬೆ ಇದೆ. ಚಿತ್ರ ಕಂಡಾಕ್ಷಣ ಮೊದಲು ನಿಮಗೆ ಕಾಣಿಸಿದ್ದೇನು ಎಂಬುದರ ಮೇಲೆ ನಿಮ್ಮ ವ್ಯಕ್ತಿತ್ವ ಅಡಗಿದೆ.

ವಿಭಾಗ