ಕನ್ನಡ ಸುದ್ದಿ  /  ಜೀವನಶೈಲಿ  /  Personality Test: ಯಾವ ಮುಖದಲ್ಲಿ ಸಂತೋಷ ಕಾಣಿಸುತ್ತಿದೆ? ನಿಮ್ಮ ವ್ಯಕ್ತಿತ್ವದ ಜೊತೆ ಮೆದುಳಿನ ಸಾಮರ್ಥ್ಯ ತಿಳಿಸುತ್ತೆ ಈ ಚಿತ್ರ

Personality Test: ಯಾವ ಮುಖದಲ್ಲಿ ಸಂತೋಷ ಕಾಣಿಸುತ್ತಿದೆ? ನಿಮ್ಮ ವ್ಯಕ್ತಿತ್ವದ ಜೊತೆ ಮೆದುಳಿನ ಸಾಮರ್ಥ್ಯ ತಿಳಿಸುತ್ತೆ ಈ ಚಿತ್ರ

ಇಲ್ಲಿರುವ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದಲ್ಲಿ ಎರಡು ಮುಖಗಳಿವೆ. ಎರಡು ಮುಖದಲ್ಲಿ ಯಾವ ಮುಖದಲ್ಲಿ ಸಂತೋಷ ಕಾಣುತ್ತಿದೆ ಎಂಬುದು ನಿಮ್ಮ ವ್ಯಕ್ತಿತ್ವವನ್ನು ತಿಳಿಸುತ್ತದೆ. ಜೊತೆಗೆ ನೀವು ಎಷ್ಟು ಕ್ರಿಯಾಶೀಲರು ಎಂಬುದನ್ನು ತಿಳಿಸುತ್ತದೆ. ಹಾಗಾದ್ರೆ ಈ ಎರಡು ಮುಖಗಳಲ್ಲಿ ಯಾವುದರಲ್ಲಿ ಸಂತೋಷ ಕಾಣಿಸುತ್ತಿದೆ.

ಯಾವ ಮುಖದಲ್ಲಿ ಸಂತೋಷ ಕಾಣಿಸುತ್ತಿದೆ? ನಿಮ್ಮ ವ್ಯಕ್ತಿತ್ವದ ಜೊತೆ ಮೆದುಳಿನ ಸಾಮರ್ಥ್ಯ ತಿಳಿಸುತ್ತೆ ಈ ಚಿತ್ರ
ಯಾವ ಮುಖದಲ್ಲಿ ಸಂತೋಷ ಕಾಣಿಸುತ್ತಿದೆ? ನಿಮ್ಮ ವ್ಯಕ್ತಿತ್ವದ ಜೊತೆ ಮೆದುಳಿನ ಸಾಮರ್ಥ್ಯ ತಿಳಿಸುತ್ತೆ ಈ ಚಿತ್ರ

ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ವಿಡಿಯೊವೊಂದರಲ್ಲಿನ ಚಿತ್ರವು ನಮ್ಮ ವ್ಯಕ್ತಿತ್ವದ ಬಗ್ಗೆ ನಿಖರವಾದ ಪರಿಚಯ ಮಾಡಿಕೊಡಲಿದೆ. ಆದರೆ ನಿಮಗೆ ಏನು ಕಾಣಿಸಿತು ಎಂಬುದನ್ನು ನೀವು ಪ್ರಾಮಾಣಿಕವಾಗಿ ಹೇಳಬೇಕು. ಇದೊಂದು ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವಾಗಿದೆ. ಈ ಚಿತ್ರಗಳು ಒಬ್ಬರಿಗಿಂತ ಒಬ್ಬರಿಗೆ ಭಿನ್ನವಾಗಿ ಕಾಣುವುದು ಸಹಜ. ಇವು ನಮ್ಮನ್ನು ಮೋಸಗೊಳಿಸುವ ಮೂಲಕ ನಮ್ಮ ಮನಸ್ಸಿನೊಂದಿಗೆ ಆಟವಾಡುತ್ತವೆ. ಈ ನಿರ್ದಿಷ್ಟ ಚಿತ್ರವು ವ್ಯಕ್ತಿಗಳ ವ್ಯಕ್ತಿತ್ವವನ್ನು ತಿಳಿಸುತ್ತದೆ.

ಟ್ರೆಂಡಿಂಗ್​ ಸುದ್ದಿ

ಇದು ಟಿಕ್‌ಟಾಕ್‌ (ಭಾರತದಲ್ಲಿ ಬ್ಯಾನ್‌ ಆಗಿದೆ) ನಲ್ಲಿ ಹಂಚಿಕೊಳ್ಳಲಾದ ವಿಡಿಯೊವಾಗಿದೆ. ಪ್ರತಿರೂಪದಂತಿರುವ ಎರಡು ಮುಖಗಳು ಈ ಚಿತ್ರದಲ್ಲಿದೆ. ಚಿತ್ರದಲ್ಲಿ ಎರಡೂ ಮುಖಗಳು ಒಂದು ಹುಬ್ಬು ಏರಿಸಿಕೊಂಡಿವೆ. ʼಇದು ನಿಜಕ್ಕೂ ಮೋಜು ನೀಡುವ ಪರ್ಸನಾಲಿಟಿ ಟೆಸ್ಟ್‌ʼ ಎಂದು ಟಿಕ್‌ಟಾಕ್‌ ಬಳಕೆದಾರರು ತಮ್ಮ ಪೋಸ್ಟ್‌ ಜೊತೆ ಬರೆದುಕೊಂಡಿದ್ದಾರೆ. ಇದರಲ್ಲಿ ಯಾವ ಮುಖದಲ್ಲಿ ಸಂತೋಷ ಕಾಣಿಸುತ್ತಿದೆ. ಎಡಚಿತ್ರ ಅಥವಾ ಬಲಚಿತ್ರ, ನಿಮ್ಮ ಉತ್ತರ ಪ್ರಮಾಣಿಕವಾಗಿರಬೇಕು ಎಂದು ಅವರು ಕೇಳಿದ್ದಾರೆ.

ಎಡಭಾಗದ ಮುಖ ಸಂತೋಷವಾಗಿದ್ದರೆ

ನಿಮಗೆ ಎಡಭಾಗದಲ್ಲಿರುವ ಮುಖದಲ್ಲಿ ಸಂತೋಷ ಕಾಣಿಸಿದರೆ, ನೀವು ತಾರ್ಕಿಕವಾಗಿ ಯೋಚಿಸುವವರು. ನೀವು ಜೀವನದಲ್ಲಿ ಬಹಳ ವ್ಯವಸ್ಥಿತ ಹಾಗೂ ಪ್ರಾಯೋಗಿಕ ವಿಧಾನವನ್ನು ಹೊಂದಿರುತ್ತೀರಿ. ನಿಮ್ಮ ಮೆದುಳು ನಿಮ್ಮ ಹೃದಯವನ್ನೂ ಮೀರಿಸುತ್ತದೆ. ಬದುಕನ್ನು ಪ್ರಾಕ್ಟಿಕಲ್‌ ಆಗಿ ತೆಗೆದುಕೊಳ್ಳುವವರು ನೀವು.

ಬಲಭಾಗದ ಮುಖ ಸಂತೋಷವಾಗಿ ಕಂಡರೆ...

ಚಿತ್ರದಲ್ಲಿ ನಿಮಗೆ ಬಲಭಾಗದ ಮುಖದಲ್ಲಿ ಸಂತೋಷ ಕಂಡರೆ ನೀವು ವಿಶ್ರಾಂತ ಮನೋಭಾವದವರು. ಇವರು ಅರ್ಥಗರ್ಭಿತ, ಗ್ರಹಿಕೆಯ ಮನೋಭಾವದವರು. ವಿಭಿನ್ನ ಸೃಜನಶೀಲ ರೀತಿಯಲ್ಲಿ ನಿಮ್ಮನ್ನು ವ್ಯಕ್ತಪಡಿಸಲು ನೀವು ಇಷ್ಟಪಡುತ್ತೀರಿ.

ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವು ನಿಮ್ಮ ಮೆದುಳಿನ ಸಾಮರ್ಥ್ಯವನ್ನೂ ತಿಳಿಸುತ್ತದೆ. ಇದು ಭಿನ್ನ ಆಲೋಚನೆಗಳನ್ನು ವ್ಯಕ್ತಪಡಿಸುತ್ತದೆ.

ಎಡ ಭಾಗದಲ್ಲಿ ಸಂತೋಷ ಕಾಣಿಸುವವರ ಮೆದುಳು ವಿಶ್ಲೇಷಣಾತ್ಮಕ ಮತ್ತು ವಸ್ತುನಿಷ್ಠ ಎಂದು ಹೇಳಬಹುದು. ಬಲಭಾಗದಲ್ಲಿ ಸಂತೋಷ ಕಾಣಿಸಿದರೆ ಅಂತಹವರ ಮೆದುಳು ಹೆಚ್ಚು ಚಿಂತನಶೀಲವಾಗಿರುತ್ತದೆ ಎಂದರ್ಥ.

ಸರಿ ಈಗ ನಿಮಗೆ ಯಾವ ಕಡೆ ಸಂತೋಷ ಕಾಣಿಸಿತು, ನೀವು ವ್ಯಕ್ತಿತ್ವ ಹಾಗೂ ಮೆದುಳಿನ ಸಾಮರ್ಥ್ಯ ಹೇಗೆ ಎಂಬುದನ್ನು ನೀವಷ್ಟೇ ಕಂಡುಕೊಳ್ಳುವುದಲ್ಲ, ಇದನ್ನು ನಿಮ್ಮ ಸ್ನೇಹಿತರು, ಆತ್ಮೀಯರಿಗೂ ಕಳುಹಿಸಿ ಅವರ ಸಾಮರ್ಥ್ಯ ತಿಳಿಯಿರಿ.

ಇದನ್ನೂ ಪರ್ಸನಾಲಿಟಿ ಟೆಸ್ಟ್‌ ಲೇಖನಗಳನ್ನೂ ಓದಿ

Personality Test: ಮರ, ಸಿಂಹದ ಮುಖ ಚಿತ್ರದಲ್ಲಿ ಮೊದಲು ಕಾಣಿಸಿದ್ದೇನು? ನಿಮ್ಮ ಸ್ವಭಾವ ಹೇಗೆ ಎಂದು ತಿಳಿಸುವ ಚಿತ್ರವಿದು

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ನಮ್ಮ ಕಣ್ಣಿಗೆ ಸವಾಲು ಹಾಕುವುದಷ್ಟೇ ಅಲ್ಲ ನಮ್ಮ ವ್ಯಕ್ತಿತ್ವ ಹೇಗೆ ಎಂಬುದನ್ನೂ ತಿಳಿಸುತ್ತವೆ. ಇಲ್ಲಿರುವ ಚಿತ್ರದಲ್ಲಿ ಸಿಂಹದ ಮುಖ ಹಾಗೂ ಮರ ಇದೆ. ಇದರಲ್ಲಿ ನಿಮ್ಮ ಕಣ್ಣಿಗೆ ಮೊದಲು ಏನು ಕಾಣುವುದೋ ಅದು ನಿಮ್ಮ ವ್ಯಕ್ತಿತ್ವ ಹೇಗೆ ಎಂಬುದನ್ನು ತಿಳಿಸುತ್ತದೆ.

Personality Test: ಕಾಫಿ ಕಪ್‌, ಗೂಬೆ ಎರಡರಲ್ಲಿ ಮೊದಲು ಕಾಣಿಸಿದ್ದೇನು, ನಿಮ್ಮ ವ್ಯಕ್ತಿತ್ವ ಹೇಗೆ ತಿಳಿಸುತ್ತೆ ಈ ಚಿತ್ರ

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ನಮ್ಮ ಕಣ್ಣನ್ನು ಪರೀಕ್ಷೆ ಮಾಡುವುದು ಮಾತ್ರವಲ್ಲ, ನಮ್ಮ ವ್ಯಕ್ತಿತ್ವ ಹೇಗೆ ಎಂಬುದನ್ನೂ ತಿಳಿಸುತ್ತವೆ. ಇಲ್ಲಿರುವ ಚಿತ್ರದಲ್ಲಿ ಕಾಫಿ ಕಪ್‌ ಹಾಗೂ ಗೂಬೆ ಇದೆ. ಚಿತ್ರ ಕಂಡಾಕ್ಷಣ ಮೊದಲು ನಿಮಗೆ ಕಾಣಿಸಿದ್ದೇನು ಎಂಬುದರ ಮೇಲೆ ನಿಮ್ಮ ವ್ಯಕ್ತಿತ್ವ ಅಡಗಿದೆ.

ವಿಭಾಗ