ಕನ್ನಡ ಸುದ್ದಿ  /  ಜೀವನಶೈಲಿ  /  Personality Test: ಕಪ್ಪು, ನೀಲಿ, ಕಂದು ಯಾವುದು ನಿಮ್ಮ ಕಣ್ಣಿನ ಬಣ್ಣ; ನೀವು ಎಂತಹ ವ್ಯಕ್ತಿತ್ವದವರು ಎಂದು ತಿಳಿಸುತ್ತೆ ಕಂಗಳ ಬಣ್ಣ

Personality Test: ಕಪ್ಪು, ನೀಲಿ, ಕಂದು ಯಾವುದು ನಿಮ್ಮ ಕಣ್ಣಿನ ಬಣ್ಣ; ನೀವು ಎಂತಹ ವ್ಯಕ್ತಿತ್ವದವರು ಎಂದು ತಿಳಿಸುತ್ತೆ ಕಂಗಳ ಬಣ್ಣ

ಮನುಷ್ಯನ ಕಣ್ಣಿನ ಬಣ್ಣಗಳಿಂದಲೇ ಅವನ ವ್ಯಕ್ತಿತ್ವ ತಿಳಿಯಬಹುದು ಎಂದರೆ ನಂಬ್ತೀರಾ, ಇದು ಖಂಡಿತ ನಿಜ. ನಿಮ್ಮ ಕಣ್ಣಿನ ಬಣ್ಣ ನೀಲಿ, ಕಪ್ಪು, ತಿಳಿ ಕಂದು ಹೀಗೆ ಯಾವ ಬಣ್ಣವಿದೆ ನೋಡಿ. ಅದರ ಮೇಲೆ ನಿಮ್ಮ ವ್ಯಕ್ತಿತ್ವ ನಿರ್ಧಾರವಾಗುತ್ತದೆ. ಹಾಗಾದರೆ ಯಾವ ಬಣ್ಣದ ಕಣ್ಣಿನವರ ವ್ಯಕ್ತಿತ್ವ ಹೇಗಿರುತ್ತದೆ ನೋಡಿ.

ನೀವು ಎಂತಹ ವ್ಯಕ್ತಿತ್ವದವರು ಎಂದು ತಿಳಿಸುತ್ತೆ ಕಂಗಳ ಬಣ್ಣ
ನೀವು ಎಂತಹ ವ್ಯಕ್ತಿತ್ವದವರು ಎಂದು ತಿಳಿಸುತ್ತೆ ಕಂಗಳ ಬಣ್ಣ (PC: Jagaran Josh )

ನಮ್ಮ ವ್ಯಕ್ತಿತ್ವ ಹೇಗೆ ಎಂಬುದನ್ನು ತಿಳಿದುಕೊಳ್ಳುವುದು ನಿಜಕ್ಕೂ ನಮಗೆ ಇಷ್ಟವಾಗುತ್ತದೆ. ಇದೊಂಥರ ಆಸಕ್ತಿಕರ ವಿಷಯವೂ ಹೌದು. ಮನುಷ್ಯನ ದೇಹದ ಅಂಗಾಂಗಗಳ ಮೂಲಕ ವ್ಯಕ್ತಿತ್ವವನ್ನು ಪರೀಕ್ಷೆ ಮಾಡಬಹುದು. ಹುಬ್ಬು, ಕೂದಲು, ಮೂಗು, ಕಣ್ಣು ಹೀಗೆ ಇವು ನಮ್ಮ ವ್ಯಕ್ತಿತ್ವವನ್ನು ತಿಳಿಸುತ್ತವೆ. ಇಂದಿನ ಪರ್ಸನಾಲಿಟಿ ಟೆಸ್ಟ್‌ನಲ್ಲಿ ಕಣ್ಣಿನ ಬಣ್ಣಗಳ ಮೂಲಕ ನಮ್ಮ ವ್ಯಕ್ತಿತ್ವ ಎಂಥದ್ದು ಎಂಬುದನ್ನು ತಿಳಿಯೋಣ.

ಟ್ರೆಂಡಿಂಗ್​ ಸುದ್ದಿ

ಕಣ್ಣಿನ ಗುಡ್ಡೆಯ ಬಣ್ಣ ಒಬ್ಬೊರದ್ದು ಒಂದು ರೀತಿ ಇರುತ್ತದೆ. ಕೆಲವರದ್ದು ಕಪ್ಪಾದರೆ, ಇನ್ನೂ ಕೆಲವರದ್ದು ನೀಲಿ, ಇನ್ನೂ ಕೆಲವರದ್ದು ತಿಳಿ ಕಂದು ಹೀಗೆ ನಿಮ್ಮ ಕಣ್ಣಿನ ಬಣ್ಣ ಯಾವುದು ನೋಡಿ, ಅದಕ್ಕೆ ತಕ್ಕಂತೆ ನಿಮ್ಮ ವ್ಯಕ್ತಿತ್ವ ಹೇಗಿದೆ ಗಮನಿಸಿ.

ಕಂದು ಬಣ್ಣದ ಕಣ್ಣು

ನಿಮ್ಮ ಕಣ್ಣು ಕಂದು ಬಣ್ಣದ್ದಾಗಿದ್ದರೆ ನೀವು ಸ್ವಾವಲಂಬಿ ವ್ಯಕ್ತಿತ್ವದವರು. ಎಲ್ಲರೊಂದಿಗೆ ಸ್ನೇಹಪರ ಸ್ವಭಾವ ಹೊಂದಿರುತ್ತೀರಿ. ನೀವು ಸದಾ ಉತ್ಸಾಹದಿಂದ ಇರುತ್ತೀರಿ. ನಿಮ್ಮೊಂದಿಗೆ ಮಾತನಾಡುವುದು ಸುಲಭ. ನೀವು ನಡೆಯುವಾಗ, ಮಾತನಾಡುವಾಗ ತುಂಬಾ ಆಕರ್ಷಕವಾಗಿ ಕಾಣುತ್ತೀರಿ. ನೀವು ಆತ್ಮವಿಶ್ವಾಸದ ಸಂವಹನ ಕೌಶಲವನ್ನು ಹೊಂದಿರುತ್ತೀರಿ. ಅಪಾರವಾದ ಮಾನಸಿಕ ಶಕ್ತಿ ಹೊಂದಿರುವ ನೀವು ದಯಾಮಯಿಗಳು. ನಿಮ್ಮ ಕೆಲಸವನ್ನು ನೀವು ಅಚ್ಚುಕಟ್ಟಾಗಿ ನಿಭಾಯಿಸುತ್ತೀರಿ. ನಿಮ್ಮಲ್ಲಿ ಒಂದು ರೀತಿ ಅತೀಂದ್ರಿಯ ಶಕ್ತಿ ಇದೆ.

ಕಣ್ಣಿನ ಬಣ್ಣ ಹಸಿರಾಗಿದ್ದರೆ

ನೀವು ಭಾವೋದ್ರಿಕ್ತ, ಶಾಂತ ಮನಸ್ಸಿನ ಸೃಜನಶೀಲ ವ್ಯಕ್ತಿ. ನೀವು ಆಹ್ಲಾದಕರ ನಡವಳಿಕೆಯನ್ನು ಹೊಂದಿರುತ್ತೀರಿ. ಎಂತಹ ಬಿಕ್ಕಟ್ಟು ಹಾಗೂ ಒತ್ತಡವಿದ್ದರೂ ನೀವು ಶಾಂತವಾಗಿರುತ್ತೀರಿ. ನಿಮ್ಮ ಸುತ್ತಲೂ ಒಂದು ನಿಗೂಢ ಪ್ರಪಂಚ ಸೃಷ್ಟಿಯಾಗುತ್ತದೆ. ನೀವು ಸ್ವಾತಂತ್ರ್ಯವನ್ನು ಬಯಸುವ ಮನೋಭಾವದವರು.

ನೀಲಿ ಕಣ್ಣು

ನೀವು ಸಾಮಾಜಿಕ ವಿಚಾರದಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿರುತ್ತೀರಿ. ನಿಮ್ಮಲ್ಲಿ ಉನ್ನತ ಮಟ್ಟದ ಬುದ್ಧಿವಂತಿಕೆ ಇರುತ್ತದೆ. ನೋವು ಸಹಿಸುವ ಗುಣ ನಿಮ್ಮಲ್ಲಿದೆ. ನೀಲಿ ಕಣ್ಣಿನವರು ಪ್ರಬಲವಾದ ವ್ಯಕ್ತಿತ್ವ ಹೊಂದಿದವರು. ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಿರುತ್ತದೆ. ನೀವು ಸದಾ ಎಚ್ಚರಿಕೆಯಿಂದ ಇರುವ ವ್ಯಕ್ತಿತ್ವದವರು.

ತಿಳಿಗಂದು, ಕೆಂಬಣ್ಣದ ಬಣ್ಣದ ಕಣ್ಣು

ಈ ರೀತಿಯ ಕಣ್ಣಿನ ಬಣ್ಣ ಹೊಂದಿದವರು ಕಾಲ್ಪನಿಕ ಮನಸ್ಸು ಹೊಂದಿರುತ್ತಾರೆ. ಸಾಹಸಮಯ ಹಾಗೂ ಹೊಸ ಹೊಸ ವಿಚಾರಗಳು ನಿಮಗೆ ಹೆಚ್ಚು ಇಷ್ಟವಾಗುತ್ತದೆ. ರಿಸ್ಕ್‌ ತೆಗೆದುಕೊಳ್ಳುವುದು ನಿಮಗೆ ಇಷ್ಟವಾಗುತ್ತದೆ. ಆಳವಾದ ಚಿಂತಕರಾಗಿರುವ ನೀವು ಶಕ್ತಿಶಾಲಿಯಾಗಿರುತ್ತೀರಿ. ನಿಮ್ಮ ಮಿತಿಗಳು, ಸಾಮರ್ಥ್ಯ ಹಾಗೂ ದೌರ್ಬಲ್ಯಗಳನ್ನು ತಿಳಿದುಕೊಳ್ಳುವ ಸ್ವಯಂ ಅರಿವು ನಿಮಗಿರುತ್ತದೆ. ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸುವ ಸಾಮರ್ಥ್ಯ ನಿಮಗಿದೆ.

ನಿಮ್ಮ ಕಣ್ಣಿನ ಬಣ್ಣ ಯಾವುದು ನೋಡಿ ನಿಮ್ಮ ವ್ಯಕ್ತಿತ್ವ ತಿಳಿಯಿರಿ, ಜೊತೆಗೆ ನಿಮ್ಮ ಆತ್ಮೀಯರ ಕಣ್ಣಿನ ಬಣ್ಣ ಹೇಗಿದೆ ನೋಡಿ. ಅವರ ವ್ಯಕ್ತಿತ್ವವನ್ನು ತಿಳಿಯಿರಿ.

ಇದನ್ನೂ ಓದಿ

ಹುಬ್ಬುಗಳು ನಿಮ್ಮ ವ್ಯಕ್ತಿತ್ವವನ್ನು ಬಿಂಬಿಸುತ್ತವೆ; ಕೂಡಿಕೊಂಡಿದ್ರೆ ಅದೃಷ್ಟವಂತೆ, ನಿಮ್ಮ ಹುಬ್ಬು ಯಾವ ರೀತಿ ಇದೆ ನೋಡಿಕೊಂಡಿದ್ದೀರಾ

ಮನುಷ್ಯರಲ್ಲಿನ ಮೊದಲ ಆಕರ್ಷಣೆಯೇ ಕಣ್ಣುಗಳು. ಆ ಕಣ್ಣುಗಳ ಮೇಲಿನ ಹುಬ್ಬುಗಳು (Eyebrow) ಎಲ್ಲರಿಗೂ ಒಂದೇ ರೀತಿಯಲ್ಲಿ ಇರುವುದಿಲ್ಲ. ಕೆಲವರಿಗೆ ಹುಬ್ಬುಗಳು ಕೂಡಿಕೊಂಡಿರುತ್ತವೆ. ಕೆಲವರಿಗೆ ದಪ್ಪಾ, ಇನ್ನೂ ಕೆಲವರಿಗೆ ನೇರವಾಗಿ ಇಲ್ಲವೇ ಬಾಗಿದ ರೀತಿಯಲ್ಲಿ ಇರುತ್ತವೆ. ಈ ಕಣ್ಣಿನ ಹುಬ್ಬುಗಳಿಂದಲೂ ನಿಮ್ಮ ವ್ಯಕ್ತಿತ್ವವನ್ನು ತಿಳಿಯಬಹುದು. ಇದು ನಿಮಗೆ ಅಚ್ಚರಿ ಏನಿಸಿದೂರ ಸತ್ಯ ಎನ್ನುತ್ತವೆ ಅಧ್ಯಯನಗಳು.

ವಿಭಾಗ