Optical Illusion: 8 ಸೆಕೆಂಡ್‌ನಲ್ಲಿ ಚಿತ್ರದಲ್ಲಿ ಅಡಗಿರುವ ಕಳ್ಳನನ್ನು ಹುಡುಕಿ; ನಿಮ್ಮ ಜಾಣ್ಮೆಗಿದು ಸವಾಲು
Viral Optical Illusion: ಚಿತ್ರದಲ್ಲಿ ಕಳ್ಳನೊಬ್ಬ ಅಡಗಿದ್ದಾನೆ. ಅವನನ್ನು ಪೊಲೀಸ್ ಹುಡುಕುತ್ತಿದ್ದಾನೆ. ಆದರೆ ಅವನು ಸಿಗುತ್ತಿಲ್ಲ. 8 ಸೆಕೆಂಡ್‌ನಲ್ಲಿ ಪೊಲೀಸರಿಗೆ ಕಳ್ಳನನ್ನು ಹುಡುಕಲು ನೀವು ಸಹಾಯ ಮಾಡಿ. ನಿಮ್ಮ ಸಮಯ ಈಗ ಶುರು…

ಆಪ್ಟಿಕಲ್ ಇಲ್ಯೂಷನ್‌ಗಳು ನಮ್ಮ ಕಣ್ಣು ಹಾಗೂ ಮೆದುಳಿಗೆ ಸವಾಲು ಹಾಕುವುದರಲ್ಲಿ ಎರಡು ಮಾತಿಲ್ಲ. ಈ ಚಿತ್ರಗಳು ನಮ್ಮ ಕಣ್ಣಿನ ವೀಕ್ಷಣಾ ಸಾಮಾರ್ಥ್ಯವನ್ನು ಪರೀಕ್ಷೆ ಮಾಡುವ ಜೊತೆಗೆ ಗ್ರಹಿಕೆಯ ಸಾಮರ್ಥ್ಯವನ್ನೂ ಅಳೆಯುತ್ತವೆ. ಕೆಲವು ಆಪ್ಟಿಕಲ್ ಇಲ್ಯೂಷನ್‌ಗಳು ನಮ್ಮ ವ್ಯಕ್ತಿತ್ವವನ್ನೂ ತಿಳಿಸುತ್ತವೆ.
ಇದಲ್ಲದೆ ಅರಿವಿನ ಸಾಮರ್ಥ್ಯವನ್ನು ಹೆಚ್ಚಿಸಲು ಮತ್ತು ಸೃಜನಾತ್ಮಕವಾಗಿ ಯೋಚಿಸಲು ಮೆದುಳನ್ನು ಉತ್ತೇಜಿಸುತ್ತದೆ. ಇದಕ್ಕೆ ಉತ್ತರ ಕಂಡು ಹಿಡಿಯುವ ನಡುವೆ ಮನಸ್ಸಿಗೂ ಖುಷಿ ಸಿಗುತ್ತದೆ.
ಇಲ್ಲೊಂದು ಇಂಥಹದ್ದೇ ಆಪ್ಟಿಕಲ್ ಇಲ್ಯೂಷನ್ ಚಿತ್ರವಿದೆ. ಇದರಲ್ಲಿ ಪೊಲೀಸ್ ಅಧಿಕಾರಿಯೊಬ್ಬ ಕಳ್ಳನನ್ನು ಹುಡುಕುತ್ತಿದ್ದಾನೆ. ಕೋಣೆಯೊಂದರ ಕಿಟಿಕಿ ಮೂಲಕ ಪೊಲೀಸ್ ಹೊರಗೆ ನೋಡುತ್ತಿದ್ದಾನೆ. ಕಿಟಕಿ ಹೊರಗಿನ ಮರದಲ್ಲಿ ಹಕ್ಕಿಯೊಂದು ಕುಳಿತಿದೆ. ಈ ಚಿತ್ರದಲ್ಲಿ ಅಡಗಿರುವ ಅಪರಾಧಿಯನ್ನು ಹುಡುಕುವುದು ನಿಮಗಿರುವ ಸವಾಲು. ಕೇವಲ 8 ಸೆಕೆಂಡುಗಳಲ್ಲಿ ಚಿತ್ರದಲ್ಲಿ ಅಡಗಿರುವ ಕಳ್ಳನನ್ನು ಕಂಡುಹಿಡಿಯಬೇಕು. ಸೂಕ್ಷ್ಮವಾಗಿ ಚಿತ್ರವನ್ನು ಗಮನಿಸಿ, ಈ ಕಳ್ಳ ನಿಮ್ಮ ಕಣ್ಣಿಗೆ ಬೀಳಬಹುದು.
ನಿಮ್ಮ ಸಮಯದ ಈಗ ಶುರು... ಸರಿಯಾಗಿ ಚಿತ್ರವನ್ನು ಗಮನಿಸಿ 8 ಸೆಕೆಂಡ್‌ಗಳಲ್ಲಿ ಕಳ್ಳನನ್ನು ಹುಡುಕಿ...
ಸಮಯ ಮುಗಿಯಿತು. ಪೊಲೀಸ್‌ಗೆ ಸಹಾಯ ಮಾಡಲು ಸಾಧ್ಯವಾಯ್ತೆ, ಕಳ್ಳ ನಿಮ್ಮ ಕಣ್ಣಿಗೆ ಬಿದ್ದನೇ? ಕಂಗ್ರಾಜ್ಯುಲೇಷನ್ಸ್, ನಿಮ್ಮ ಗ್ರಹಿಕಾ ಸಾಮರ್ಥ್ಯ ನಿಜಕ್ಕೂ ಅದ್ಭುತ.
8 ಸೆಕೆಂಡ್ ಕಳೆದರೂ ನಿಮಗೆ ಚಿತ್ರದಲ್ಲಿ ಕಳ್ಳನನ್ನು ಹುಡುಕಲು ಸಾಧ್ಯವಾಗಿಲ್ಲ ಎಂದರೆ ಬೇಸರ ಮಾಡಿಕೊಳ್ಳಬೇಡಿ. ಕಳ್ಳನನ್ನು ಹುಡುಕಲು ನಾವು ನಿಮಗೆ ಸಹಾಯ ಮಾಡುತ್ತೇವೆ.
ಕಳ್ಳ ಇಲ್ಲಿದ್ದಾನೆ ನೋಡಿ
ಈ ಚಿತ್ರವನ್ನು ತಲೆ ಕೆಳಗಾಗಿಸಿದರೆ ಮರಹಾಸಿನ ನೆಲದ ಮೇಲೆ ಪೊಲೀಸನ ಬಲಗಾಲಿನ ಬಳಿ ಕಳ್ಳ ಅಡಗಿದ್ದಾನೆ.
ಈ ಚಿತ್ರ ನಿಮ್ಮನ್ನು ಗೊಂದಲಕ್ಕೆ ದೂಡಿರಬಹುದು ಅಲ್ವಾ? ಈ ಆಪ್ಟಿಕಲ್ ಇಲ್ಯೂಷನ್‌ಗಳೇ ಹಾಗೆ, ನಿಮ್ಮನ್ನು ಗೊಂದಲಕ್ಕೆ ಸಿಲುಕಿಸಲೆಂದೇ ಇರುವುದು. ಆದರೆ ಉತ್ತರ ಕಂಡು ಹಿಡಿದ ಮೇಲೆ ಅಯ್ಯೋ ಇಷ್ಟೇನಾ ಅನ್ನಿಸದೇ ಇರದು.
ಇದನ್ನೂ ಓದಿ
Optical Illusion: ಚಿತ್ರದಲ್ಲಿ ಎಷ್ಟು ವೃತ್ತಗಳಿವೆ; ನಿಮ್ಮ ಕಣ್ಣುಗಳಿಗೆ ಇಲ್ಲಿದೆ ಪರೀಕ್ಷೆ, ಉತ್ತರ ಕಂಡು ಹುಡುಕಿ
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ನಮ್ಮ ಮೆದುಳು ಹಾಗೂ ಕಣ್ಣಿಗೆ ಸಾಕಷ್ಟು ಕೆಲಸ ನೀಡುತ್ತವೆ. ಇವುಗಳಿಗೆ ಉತ್ತರ ಕಂಡು ಹುಡುಕುವವರೆಗೂ ಮನಸ್ಸಿಗೆ ಸಮಾಧಾನ ದೊರಕುವುದಿಲ್ಲ. ಇಂತಹ ಹಲವು ಚಿತ್ರಗಳ ನಿಮ್ಮನ್ನೂ ಗೊಂದಲಕ್ಕೆ ನೂಕಬಹುದು. ಇಂತಹದ್ದೇ ಚಿತ್ರವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರೆಡ್ಡಿಟ್‌ನಲ್ಲಿ ಹಂಚಿಕೊಳ್ಳಲಾದ ಈ ಚಿತ್ರವು ನಿಮ್ಮ ಕಣ್ಣನ್ನೇ ಪರೀಕ್ಷೆ ಮಾಡುವುದು ಖಂಡಿತ. ಚಿತ್ರದಲ್ಲಿ ಒಂದಿಷ್ಟು ವೃತ್ತಗಳಿವೆ. ಮೇಲ್ನೋಟಕ್ಕೆ ಕಂಡರೆ ಇದರಲ್ಲೇನಿದೆ ಅನ್ನಿಸದೇ ಇರದು. ಆದರೆ ಚಾಲೆಂಜ್ ಇರುವುದು ಚಿತ್ರದಲ್ಲಿ ಎಷ್ಟು ವೃತ್ತಗಳಿವೆ ಎಂಬದನ್ನು ಕಂಡುಹಿಡಿಯುವುದು.

ವಿಭಾಗ