ಕನ್ನಡ ಸುದ್ದಿ  /  ಜೀವನಶೈಲಿ  /  Optical Illusion: ಈ ಚಿತ್ರವನ್ನು ನೋಡಿದಾಕ್ಷಣ ನಿಮಗೆ ಕಂಡಿದ್ದೇನು? ನಿಮ್ಮ ಪ್ರೇಮಜೀವನವನ್ನು ನಿರ್ಧರಿಸುತ್ತೆ ಈ ಚಿತ್ರ

Optical Illusion: ಈ ಚಿತ್ರವನ್ನು ನೋಡಿದಾಕ್ಷಣ ನಿಮಗೆ ಕಂಡಿದ್ದೇನು? ನಿಮ್ಮ ಪ್ರೇಮಜೀವನವನ್ನು ನಿರ್ಧರಿಸುತ್ತೆ ಈ ಚಿತ್ರ

ಈ ಚಿತ್ರವನ್ನು ನೋಡಿದ ಕೂಡಲೇ ನಿಮಗೆ ಮೊದಲು ಏನು ಕಾಣಿಸಿತು..? ಮೊದಲು ನಿಮ್ಮ ಕಣ್ಣ ಮುಂದೆ ಯಾವ ಚಿತ್ರ ಕಾಣಿಸಿತೋ ಆ ಚಿತ್ರವು ನಿಮ್ಮ ಪ್ರೇಮ ಜೀವನ ಹೇಗಿದೆ ಎಂಬುದನ್ನು ತಿಳಿಸುತ್ತದೆ. ಈಗ ಹೇಳಿ ನಿಮ್ಮ ಕಣ್ಣಿಗೆ ಕಂಡ ಆ ಮೊದಲ ಚಿತ್ರ ಯಾವುದು?

ಈ ಚಿತ್ರವನ್ನು ನೋಡಿದಾಕ್ಷಣ ನಿಮಗೆ ಕಂಡಿದ್ದೇನು? ನಿಮ್ಮ ಪ್ರೇಮಜೀವನವನ್ನು ನಿರ್ಧರಿಸುತ್ತೆ ಈ ಚಿತ್ರ
ಈ ಚಿತ್ರವನ್ನು ನೋಡಿದಾಕ್ಷಣ ನಿಮಗೆ ಕಂಡಿದ್ದೇನು? ನಿಮ್ಮ ಪ್ರೇಮಜೀವನವನ್ನು ನಿರ್ಧರಿಸುತ್ತೆ ಈ ಚಿತ್ರ

ದೃಷ್ಟಿಭ್ರಮೆಯನ್ನುಂಟು ಮಾಡುವ ಚಿತ್ರಗಳು ನಮ್ಮ ಮೆದುಳಿಗೆ ಹಾಗೂ ಕಣ್ಣುಗಳಿಗೆ ಕೆಲಸವನ್ನು ಕೊಡುತ್ತವೆ ಎಂಬುದು ತಿಳಿದಿರುವ ವಿಚಾರ. ಆದರೆ ಕೆಲವೊಂದು ದೃಷ್ಠಿಭ್ರಮೆಯ ಚಿತ್ರಗಳು ನಮ್ಮ ವ್ಯಕ್ತಿತ್ವವನ್ನು ಅಷ್ಟೇ ಏಕೆ ನಾವು ಯಾರಲ್ಲೂ ಹೇಳಿಕೊಳ್ಳಲು ಇಚ್ಛಿಸದ ನಮ್ಮ ಕೆಲವೊಂದು ವೈಯಕ್ತಿಕ ಆಸೆಗಳ ಬಗ್ಗೆಯೂ ಹೇಳುತ್ತವೆ ಎಂದರೆ ನೀವು ನಂಬುತ್ತೀರಾ..? ಹೌದು..! ಅಂತಹದ್ದೇ ಒಂದು ಚಿತ್ರವನ್ನು ಇಲ್ಲಿ ಹಂಚಿಕೊಳ್ಳಲಾಗಿದ್ದು ಈ ಚಿತ್ರವು ನಿಮ್ಮ ಬಗ್ಗೆ ಯಾರಿಗೂ ಗೊತ್ತಿರದ ಒಂದು ವಿಚಾರವನ್ನು ತಿಳಿಸುತ್ತದೆ. ಹಾಗಾದರೆ ಅದು ಏನು..? ತಿಳಿದುಕೊಳ್ಳೋಣ :

ಟ್ರೆಂಡಿಂಗ್​ ಸುದ್ದಿ

ಇಲ್ಲಿ ನೀಡಲಾದ ಚಿತ್ರವು ದೃಷ್ಟಿಭ್ರಮೆ ಚಿತ್ರ ಎನ್ನುವುದು ನೋಡಿದ ಕೂಡಲೇ ತಿಳಿಯುತ್ತದೆ. ಈ ಚಿತ್ರದಲ್ಲಿ ನಿಮಗೆ ಕಾಣುವ ಮೊದಲ ವಸ್ತುವು ನೀವು ಅತ್ಯಂತ ಜಾಲಿ ಸಂಗಾತಿಯೋ ಅಥವಾ ಹೃದಯದಲ್ಲಿ ಯಾರೊಂದಿಗೂ ಹಂಚಿಕೊಳ್ಳಲು ಸಾಧ್ಯವಾಗದಂತಹ ನೋವೊಂದನ್ನು ಇಟ್ಟುಕೊಂಡು ತಿರುಗುತ್ತಿದ್ದೀರೋ ಎಂಬುದರ ಬಗ್ಗೆ ತಿಳಿಸುತ್ತದೆ. ಇದೊಂದು ರೀತಿಯಲ್ಲಿ ನಿಮ್ಮ ವ್ಯಕ್ತಿತ್ವದ ಪರೀಕ್ಷೆ ಎಂದು ಹೇಳಿದರೆ ಕೂಡ ತಪ್ಪಾಗುವುದಿಲ್ಲ. ಅಲ್ಲದೇ ನಿಮ್ಮ ಪ್ರೇಮ ಸಂಬಂಧದಲ್ಲಿ ನಿಮ್ಮ ಪಾತ್ರ ಹೇಗಿದೆ ಎಂಬುದನ್ನು ಕೂಡ ನೀವು ಈ ಚಿತ್ರದ ಮೂಲಕ ತಿಳಿದುಕೊಳ್ಳಬಹುದಾಗಿದೆ. ಹಾಗಾದರೆ ಈ ಚಿತ್ರದಲ್ಲಿ ನೀವು ಏನನ್ನು ನೋಡಬಹುದು ಎಂಬುದನ್ನು ಮೊದಲು ತಿಳಿದುಕೊಳ್ಳೋಣ :

ನೃತ್ಯ ಮಾಡುತ್ತಿರುವ ದಂಪತಿ

ಗಡ್ಡವನ್ನು ಹೊಂದಿರುವ ವ್ಯಕ್ತಿ

ಎರಡು ಮರಗಳು

ಈ ದೃಷ್ಟಿಭ್ರಮೆಯ ಚಿತ್ರದಲ್ಲಿ ನೀವು ಮೊದಲು ಗುರುತಿಸುವ ಚಿತ್ರವು ನಿಮ್ಮ ಪ್ರೇಮ ಜೀವನ ಹೇಗಿದೆ ಮತ್ತು ಆ ಸಂಬಂಧದಲ್ಲಿ ನಿಮ್ಮ ವರ್ತನೆ ಹೇಗಿದೆ ಎಂಬುದನ್ನು ತಿಳಿಸುತ್ತದೆ.

ನೀವು ಒಂದು ವೇಳೆ ಮೊದಲ ಬಾರಿಗೆ 2 ಮರಗಳನ್ನು ನೋಡಿದ್ದರೆ ನಿಮ್ಮ ಪ್ರೇಮ ಜೀವನ ಅಷ್ಟೊಂದು ಸುಖಕರವಾಗಿಲ್ಲ ಎಂದು ಅರ್ಥ. ದಂಪತಿಯ ನಡುವೆ ಸಾಕಷ್ಟು ಸವಾಲುಗಳಿವೆ. ಇಬ್ಬರ ನಡುವೆ ನಂಬಿಕೆಯಿಲ್ಲ ಎಂದೂ ಸಹ ಹೇಳಬಹುದು ಅಥವಾ ನೀವು ನಿಮ್ಮ ಸಂಗಾತಿಯ ಮಾತುಗಳನ್ನು ನಂಬಲು ಕೊಂಚ ಸಮಯ ತೆಗೆದುಕೊಳ್ಳುತ್ತೀರಿ ಎಂದರ್ಥವಿದೆ. ಹೀಗಾಗಿ ನಿಮ್ಮ ದಾಂಪತ್ಯ ಜೀವನವನ್ನು ಸುಧಾರಿಸುವ ಕಡೆಗೆ ನೀವು ಗಂಭೀರವಾಗಿ ಯೋಚಿಸುವುದು ಒಳ್ಳೆಯದು. ಸಂಗಾತಿಯೊಡನೆ ಹೆಚ್ಚು ಕಾಲ ಕಳೆಯಿರಿ. ಸಂಗಾತಿಯೊಂದಿಗೆ ಎಲ್ಲಾ ವಿಷಯಗಳನ್ನು ಮುಕ್ತವಾಗಿ ಚರ್ಚಿಸುವ ಅಭ್ಯಾಸ ರೂಢಿಸಿಕೊಳ್ಳಿ.

ನೃತ್ಯ ಮಾಡುತ್ತಿರುವ ಜೋಡಿ : ಒಂದು ವೇಳೆ ಈ ಚಿತ್ರವನ್ನು ನೀವು ಮೊದಲು ಗಮನಿಸಿದ್ದರೆ ನಿಮ್ಮ ಪ್ರೇಮ ಸಂಬಂಧವು ಆರೋಗ್ಯಕರವಾಗಿದೆ ಎಂದು ಹೇಳಬಹುದು. ಅಥವಾ ನಿಮಗೆ ಎಂಥಾ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಸರಿಯಾದ ಸ್ಪಷ್ಟತೆಯಿದೆ ಎಂದರ್ಥ. ನಿಮಗೆ ನಿಮ್ಮ ಸಂಗಾತಿಯೊಂದಿಗೆ ಸಮಯ ಕಳೆಯುವುದು ಹೆಚ್ಚು ಇಷ್ಟವೆನಿಸುತ್ತದೆ. ಅವರಿಗಿಂತ ನಿಮಗೆ ಈ ಜಗತ್ತಿನಲ್ಲಿ ಇನ್ಯಾವುದೂ ಮುಖ್ಯ ಎಂದು ಎನಿಸುವುದಿಲ್ಲ .

ಗಡ್ಡಧಾರಿ ಮನುಷ್ಯ : ನೀವು ಒಂದು ವೇಳೆ ಮೊದಲ ನೋಟದಲ್ಲಿ ಗಡ್ಡದಾರಿ ಮನುಷ್ಯನನ್ನು ಗಮನಿಸಿದ್ದರೆ ನೀವು ನಿಮ್ಮ ಪ್ರೇಮ ಜೀವನಕ್ಕೆ ಸಂಬಂಧಿಸಿದ ಯಾವುದೋ ಒಂದು ನೋವಿನಿಂದ ಹೊರಬರುವ ಪ್ರಯತ್ನದಲ್ಲಿದ್ದೀರಿ ಎಂದರ್ಥ. ಹಾಗೆಂದು ಬೇಸರ ಬೇಡ. ಈ ಸಮಯ ತಾತ್ಕಾಲಿಕ ಮಾತ್ರ. ಶೀಘ್ರದಲ್ಲಿಯೇ ನೀವು ಈ ಎಲ್ಲಾ ನೋವುಗಳಿಂದ ಹೊರ ಬರಲಿದ್ದೀರಿ. ನಿಮ್ಮ ಜೀವನದಲ್ಲಿಯೂ ಸಂತೋಷ ಮರಳಿ ಬರಲಿದೆ.

ವಿಭಾಗ