Optical Illusion: ಈ ಚಿತ್ರದಲ್ಲಿ ಬಾಲಿವುಡ್‌ ನಟರೊಬ್ಬರ ಮುಖ ಕಾಣಿಸುತ್ತದೆ, ಆ ನಟ ಯಾರು? 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ
ಕನ್ನಡ ಸುದ್ದಿ  /  ಜೀವನಶೈಲಿ  /  Optical Illusion: ಈ ಚಿತ್ರದಲ್ಲಿ ಬಾಲಿವುಡ್‌ ನಟರೊಬ್ಬರ ಮುಖ ಕಾಣಿಸುತ್ತದೆ, ಆ ನಟ ಯಾರು? 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ

Optical Illusion: ಈ ಚಿತ್ರದಲ್ಲಿ ಬಾಲಿವುಡ್‌ ನಟರೊಬ್ಬರ ಮುಖ ಕಾಣಿಸುತ್ತದೆ, ಆ ನಟ ಯಾರು? 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ

ಕಳೆದ ಮೂರ್ನ್ಕಾಲು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಫೋಟೊವೊಂದು ಭಾರಿ ವೈರಲ್‌ ಆಗುತ್ತಿದೆ. ಈ ಫೋಟೊದಲ್ಲಿ ನಿಮಗೆ ಬಾಲಿವುಡ್‌ ಸ್ಟಾರ್‌ ನಟರೊಬ್ಬರ ಮುಖ ಕಾಣಿಸುತ್ತದೆ. ಅವರು ಯಾರು ಎಂಬುದನ್ನು ನೀವು ಕಂಡುಹಿಡಿಯಬೇಕು. ನಿಮ್ಮ ಮೆದುಳು ನಿಜಕ್ಕೂ ಚುರುಕಾಗಿದ್ರೆ 10 ಸೆಕೆಂಡ್‌ನಲ್ಲಿ ಫೋಟೊದಲ್ಲಿರುವ ವ್ಯಕ್ತಿಯನ್ನು ಕಂಡುಹಿಡಿಯಿರಿ.

ಈ ಚಿತ್ರದಲ್ಲಿ ಬಾಲಿವುಡ್‌ ನಟರೊಬ್ಬರ ಮುಖ ಕಾಣಿಸುತ್ತದೆ, ಆ ನಟ ಯಾರು?
ಈ ಚಿತ್ರದಲ್ಲಿ ಬಾಲಿವುಡ್‌ ನಟರೊಬ್ಬರ ಮುಖ ಕಾಣಿಸುತ್ತದೆ, ಆ ನಟ ಯಾರು?

ನೀವು ಸಿನಿಪ್ರೇಮಿಯಾಗಿದ್ರೆ ನಿಮಗಾಗಿ ಇಲ್ಲೊಂದು ಸ್ಪೆಷಲ್‌ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗುತ್ತಿರುವ ಫೋಟೊ ಇದಾಗಿದೆ. ಈ ಚಿತ್ರದಲ್ಲಿ ಅಂಥದ್ದೇನಿದೆ ಎಂದು ನಿಮಗೆ ಅನ್ನಿಸಬಹುದು. ಮೇಲ್ನೋಟಕ್ಕೆ ಮೂವರು ಮಹಿಳೆಯರು ಕುಳಿತಂತೆ ಕಾಣಿಸಬಹುದು. ಆದರೆ ಇದರಲ್ಲಿ ಬಾಲಿವುಡ್‌ ಸ್ಟಾರ್‌ ನಟರೊಬ್ಬರ ಮುಖ ಕಾಣುತ್ತದೆ. ಆ ನಟ ಯಾರು ಎಂಬುದನ್ನು ಕಂಡುಹಿಡಿಯುವುದು ನಿಮಗಿರುವ ಸವಾಲು.

ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದಲ್ಲಿ ಏನಿದೆ?

ಹಳೆಯ ಮುರುಕಲು ಮನೆಯ ಮುಂದೆ ಮಹಿಳೆಯೊಬ್ಬರು ವಿವಿಧ ಬಗೆಯ ಚಾಟ್ಸ್‌ ಐಟಂಗಳನ್ನು ಇರಿಸಿಕೊಂಡು ಕೂತಿದ್ದಾರೆ. ಅವರ ಮುಂದೆ ಇಬ್ಬರು ಮಹಿಳೆಯರು ಮಂಡಿಯೂರಿ ಕುಳಿತು ಮಾತನಾಡುತ್ತಿರುವಂತೆ ಕಾಣುತ್ತದೆ. ಆದರೆ ಈ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿದ್ರೆ ನಿಮಗೆ ಬಾಲಿವುಡ್‌ನ ಸ್ಟಾರ್‌ ನಟರೊಬ್ಬರ ಮುಖ ಕಾಣಿಸುತ್ತದೆ. ನಿಮ್ಮ ಕಣ್ಣು, ಮೆದುಳು ನಿಜಕ್ಕೂ ಶಾರ್ಪ್‌ ಇದ್ರೆ ಚಿತ್ರದಲ್ಲಿ ಯಾವ ನಟನ ಮುಖ ಕಾಣುತ್ತಿದೆ ಎಂಬುದನ್ನು ಕಂಡುಹಿಡಿಯಿರಿ.

ನಿಮಗಿಲ್ಲಿದೆ ಕ್ಲೂ...

ಚಿತ್ರದಲ್ಲಿ ಇರುವ ನಟ ಯಾರು ಎಂಬುದು ನಿಮಗೆ ತಿಳಿಯಿತಾ? 10 ಸೆಕೆಂಡ್‌ ಕಳೆದರೂ ನಿಮ್ಮ ಕಣ್ಣಿಗೆ ನಟನ ಮುಖ ಗೋಚರವಾಗಿಲ್ಲ ಅಂದ್ರೆ ನಾವು ನಿಮಗಾಗಿ ಕ್ಲೂ ನೀಡುತ್ತೇವೆ. ಈ ನಟನನ್ನು ಭಾರತದ ರಿಯಲ್‌ ಹೀರೋ ಎಂದು ಕರೆಯುತ್ತಾರೆ. ಇವರು ದಕ್ಷಿಣ ಭಾರತದ ಸಿನಿರಂಗದಲ್ಲೂ ಮಿಂಚಿದವರು. ಕೊರೊನಾ ಸಮಯದಲ್ಲಿ ಇವರು ಸಂಕಷ್ಟದಲ್ಲಿ ಇದ್ದವರಿಗೆ ಸಾಕಷ್ಟು ಸಹಾಯ ಮಾಡಿದ್ದಾರೆ.

ಕ್ಲೂ ಏನು ಅಂತ ಗೊತ್ತಾಯ್ತು ಅಲ್ವಾ ಇದರಿಂದ ನಿಮಗೆ ಈ ಆಪ್ಟಿಕಲ್‌ ಇಲ್ಯೂಷನ್‌ನಲ್ಲಿ ಇರುವ ನಟ ಯಾರು ಎಂಬುದು ತಿಳಿಯಬಹುದು.

ಸ್ವತಃ ಈ ನಟ ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವನ್ನು ತಮ್ಮ ಇನ್‌ಸ್ಟಾಗ್ರಾಂ ಪುಟದಲ್ಲಿ ಹಂಚಿಕೊಂಡಿದ್ದಾರೆ. ಈಗಾಗಲೇ 4 ಲಕ್ಷಕ್ಕೂ ಅಧಿಕ ಮಂದಿ ಇವರ ಪೋಸ್ಟ್‌ ಅನ್ನು ವೀಕ್ಷಿಸಿದ್ದಾರೆ. ಹಲವರು ಚಿತ್ರದ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಹಲವು ಚಿತ್ರಗಳು ಆಗಾಗ ವೈರಲ್‌ ಆಗುತ್ತವೆ. ಇವು ನಮ್ಮ ಕಣ್ಣು, ಮೆದುಳಿಗೆ ಸವಾಲು ಹಾಕುವಂತಿರುವುದು ಸುಳ್ಳಲ್ಲ. 

ಇದನ್ನೂ ಓದಿ 

Optical Illusion: ಚಿತ್ರದಲ್ಲಿ ಒಟ್ಟು ಎಷ್ಟು 8 ಇದೆ, 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ; ನಿಮ್ಮ ಕಣ್ಣಿಗಿಲ್ಲಿದೆ ಸವಾಲು

ಆಪ್ಟಿಕಲ್‌ ಇಲ್ಯೂಷನ್‌ಗಳು ನಮ್ಮ ಕಣ್ಣಿಗೆ ಸವಾಲು ಹಾಕುವುದು ಮಾತ್ರವಲ್ಲ, ಸಮಸ್ಯೆ ಪರಿಹರಿಸುವ ಮಾರ್ಗಗಳನ್ನು ಕಲಿಸುತ್ತವೆ. ಮೆದುಳು ಹಾಗೂ ಕಣ್ಣಿಗೆ ಸಾಕಷ್ಟು ಕೆಲಸ ಕೊಡುವ ಮೂಲಕ ಚುರುಕು ಮಾಡುತ್ತವೆ. ಇಲ್ಲೊಂದು ಅಂಥದ್ದೇ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವಿದೆ. ಇದರಲ್ಲಿ ಎಷ್ಟು 8 ಸಂಖ್ಯೆ ಇದೆ ಎಂಬದನ್ನು ನೀವು ಕಂಡುಹಿಡಿಯಬೇಕು.

 

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ)

Whats_app_banner