Personality Test: ನೀವು ಯಾವುದಕ್ಕೆ ಹೆಚ್ಚು ಭಯ ಪಡ್ತೀರಾ ತಿಳಿಬೇಕಾ? ಮೊಲ-ಹದ್ದು ಎರಡರಲ್ಲಿ ಮೊದಲು ಕಂಡಿದ್ದೇನು ಹೇಳಿ-viral news personality test optical illusion is scary as it is incredibly accurate at discovering your greatest fear rst ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Personality Test: ನೀವು ಯಾವುದಕ್ಕೆ ಹೆಚ್ಚು ಭಯ ಪಡ್ತೀರಾ ತಿಳಿಬೇಕಾ? ಮೊಲ-ಹದ್ದು ಎರಡರಲ್ಲಿ ಮೊದಲು ಕಂಡಿದ್ದೇನು ಹೇಳಿ

Personality Test: ನೀವು ಯಾವುದಕ್ಕೆ ಹೆಚ್ಚು ಭಯ ಪಡ್ತೀರಾ ತಿಳಿಬೇಕಾ? ಮೊಲ-ಹದ್ದು ಎರಡರಲ್ಲಿ ಮೊದಲು ಕಂಡಿದ್ದೇನು ಹೇಳಿ

ಭಯ ಯಾರಿಗಿಲ್ಲ ಹೇಳಿ, ಆದರೂ ಕೆಲವೊಮ್ಮೆ ನಾವು ಯಾವುದಕ್ಕೂ ಭಯಪಡದಂತೆ ಇರುತ್ತೇವೆ. ಆದರೆ ನಮ್ಮೊಳಗಿನ ಆತ್ಮವು ಯಾವುದಾದರೂ ಒಂದು ವಿಚಾರಕ್ಕೆ ಖಂಡಿತ ಭಯ ಪಡುತ್ತದೆ. ಹಾಗಾದರೆ ನೀವು ಯಾವುದಕ್ಕೆ ಹೆಚ್ಚು ಭಯ ಪಡುತ್ತೀರಿ ತಿಳಿಯಬೇಕಾ? ಚಿತ್ರದಲ್ಲಿ ಮೊದಲು ಕಾಣಿಸಿದ್ದೇನು ಹೇಳಿ.

ನೀವು ಯಾವುದಕ್ಕೆ ಹೆಚ್ಚು ಭಯ ಪಡ್ತೀರಾ ತಿಳಿಬೇಕಾ? ಮೊಲ-ಹದ್ದು ಎರಡರಲ್ಲಿ ಮೊದಲು ಕಂಡಿದ್ದೇನು ಹೇಳಿ
ನೀವು ಯಾವುದಕ್ಕೆ ಹೆಚ್ಚು ಭಯ ಪಡ್ತೀರಾ ತಿಳಿಬೇಕಾ? ಮೊಲ-ಹದ್ದು ಎರಡರಲ್ಲಿ ಮೊದಲು ಕಂಡಿದ್ದೇನು ಹೇಳಿ

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ನಮಗೆ ಭ್ರಮೆ ಹುಟ್ಟಿಸುತ್ತವೆ, ಒಮ್ಮೆ ಇರುವಂತೆ ಕಾಣುವ ಚಿತ್ರದಲ್ಲಿ ಇನ್ನೊಮ್ಮೆ ಹಿಂದೆ ಕಂಡಿದ್ದು ಇರುವುದಿಲ್ಲ. ಒಮ್ಮೊಮ್ಮೆ ಮೊದಲು ಕಂಡಿದ್ದು ಇನ್ನೊಮ್ಮೆ ಕಾಣಿಸದೇ ಇರಬಹುದು. ಹೀಗೆ ಒಟ್ಟಾರೆ ನಮ್ಮ ಮೆದುಳಿಗೆ ಗೊಂದಲ ಹುಟ್ಟಿಸುವ ಕೆಲಸ ಮಾಡುತ್ತವೆ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು.

ಇಂದಿನ ಆಪ್ಟಿಕಲ್‌ ಇಲ್ಯೂಷನ್‌ ಪರ್ಸನಾಲಿಟಿ ಟೆಸ್ಟ್‌ ಭಯಕ್ಕೆ ಸಂಬಂಧಿಸಿದ್ದು. ಇದು ನೀವು ಯಾವುದಕ್ಕೆ ಹೆಚ್ಚು ಭಯ ಪಡುತ್ತೀರಿ ಎಂಬುದನ್ನು ತಿಳಿಸುತ್ತದೆ. ನಾನು ಯಾವುದಕ್ಕೂ ಭಯ ಪಡುವುದಿಲ್ಲ ಎನ್ನುವವರಲ್ಲೂ ಕೂಡ ರಹಸ್ಯ ಭಯ ಇರುತ್ತದೆ. ಅಂದರೆ ಅಂತಹವರ ಗುಪ್ತ ಮನಸ್ಸಿನಲ್ಲೂ ಒಂದು ಭಯ ಕಾಡುತ್ತಿರುತ್ತದೆ. ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದ ಮೂಲಕ ಆ ಭಯ ಯಾವುದು ಎಂಬುದನ್ನು ಕಂಡುಹಿಡಿಯಬಹುದು.

ಮಿಯಾ ಯೆಲಿನ್‌ ಎನ್ನುವ ಇಲ್ಯೂಸ್ಟ್ರೇಟ್‌ ಆರ್ಟಿಸ್ಟ್‌ ಹಂಚಿಕೊಂಡಿರುವ ಈ ಚಿತ್ರದಲ್ಲಿ ಗಿಡುಗ ಹಾಗೂ ಮೊಲ ಎರಡೂ ಪ್ರಾಣಿಗಳಿವೆ. ಈ ಎರಡಲ್ಲಿ ನಿಮ್ಮ ಕಣ್ಣಿಗೆ ಮೊದಲು ಕಾಣಿಸಿದ್ದು ಏನು ಹೇಳಿ.

ಮೊಲ

ಚಿತ್ರದಲ್ಲಿ ನೀವು ಮೊದಲು ಮೊಲ ಕಂಡರೆ ಆರಾಮ ವಲಯದಿಂದ ಹೊರ ಬರುವುದೇ ನಿಮಗೆ ದೊಡ್ಡ ಭಯವಾಗಿ ಕಾಡಬಹುದು, ನೀವು ನಿಮ್ಮ ಕಂಫರ್ಟ್‌ ಝೋನ್‌ ಬಿಟ್ಟು ಆಚೆ ಬರಲು ಹೆಣಗಾಡುತ್ತೀರಿ. ಜೀವನದಲ್ಲಿ ವಿಭಿನ್ನವಾದುದನ್ನು ಮಾಡುವುದು ನಿಮಗೆ ಇಷ್ಟವಾಗುತ್ತದೆ. ಆದರೆ ಅವಕಾಶಗಳು ಹಾಗೂ ಸಮಯ ವ್ಯರ್ಥವಾದರೆ ನೀವು ಆ ಬಗ್ಗೆ ಹೆಚ್ಚು ಚಿಂತಿಸುತ್ತೀರಿ. ಕೆಲವೊಮ್ಮೆ ಬಂದದ್ದು ಬರಲಿ ನೋಡುವ ಎನ್ನುವ ಮನೋಭಾವವೇ ನಿಮ್ಮ ಬದುಕಿಗೆ ತಡೆಯಾಗಬಹುದು. ಹೊಸ ಅನುಭವಕ್ಕೆ ತೆರೆದುಕೊಳ್ಳುವ ಮೂಲಕ ನೀವು ಹೊಸತನ್ನು ಸಾಧಿಸಬಹುದು. ಪ್ರತಿದಿನ ಒಂದೇ ರೀತಿ ಇರಬೇಕು ಎಂದು ನೀವು ಬಯಸುತ್ತೀರಿ. ಈ ವಿಚಾರದಲ್ಲಿ ಕೊಂಚ ಬದಲಾವಣೆಯಾದ್ರೂ ನಿಮ್ಮಿಂದ ಸಹಿಸಲು ಆಗುವುದಿಲ್ಲ. ಆದಾಗ್ಯೂ, ನೀವು ಹೊಸ ಅನುಭವಗಳು ಮತ್ತು ಸಾಹಸಗಳ ಬಯಕೆಯನ್ನು ಹೊಂದಿದ್ದೀರಿ ಅದು ನಿಮ್ಮೊಳಗೆ ಸಂಘರ್ಷದ ಕ್ರಿಯಾತ್ಮಕತೆಗೆ ಕಾರಣವಾಗಬಹುದು.

ಹದ್ದು

ನೀವು ಮನುಷ್ಯರನ್ನು ನಂಬುವ ವಿಚಾರದಲ್ಲಿ ಭಯ ಹೊಂದಿರುತ್ತೀರಿ. ಆರಂಭದಲ್ಲಿ ನೀವು ಯಾರನ್ನೂ ಸುಲಭವಾಗಿ ನಂಬುವವರಲ್ಲ. ಪ್ರೀತಿ ಪ್ರೇಮ ರೊಮ್ಯಾಂಟಿಕ್‌ ಜೀವನದಲ್ಲಿ ಹತಾಶ ಅನುಭವಗಳನ್ನು ಹೊಂದಿರುತ್ತೀರಿ, ಆ ಕಾರಣಕ್ಕೆ ನಿಮ್ಮ ಮನಸ್ಸು ದುರ್ಬಲವಾಗಿರುತ್ತದೆ. ಹಾಗಾಗಿ ನೀವು ಸುಲಭವಾಗಿ ಯಾರನ್ನೂ ನಂಬುವವರಲ್ಲ. ಯಾವುದೇ ಅಪಾಯವನ್ನು ಎದುರಿಸಲು ಸಿದ್ಧವಿದ್ದು, ಯಾರನ್ನಾದರೂ ನಂಬಲು ಸಾಧ್ಯವಾದರೆ ಅಂತಹ ವ್ಯಕ್ತಿಯೊಂದಿಗೆ ನೀವು ಬಯಸಿದ ಜೀವನ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಸಂಬಂಧಗಳ ವಿಷಯದಲ್ಲಿ ನೀವು ಜಾಗರೂಕರಾಗಿರುತ್ತೀರಿ, ಇತರರೊಂದಿಗೆ ಆಳವಾದ ಸಂಪರ್ಕಗಳನ್ನು ನಿರ್ಮಿಸಲು ಸಮಯವನ್ನು ತೆಗೆದುಕೊಳ್ಳುತ್ತೀರಿ. ಆದರೆ ಒಮ್ಮೆ ಯಾರಾದರೂ ನಿಮ್ಮ ವಿಶ್ವಾಸವನ್ನು ಗಳಿಸಿದರೆ, ನೀವು ತೀವ್ರವಾಗಿ ನಿಷ್ಠರಾಗಿರುತ್ತೀರಿ ಮತ್ತು ಅವರನ್ನು ಬೆಂಬಲಿಸಲು ಮತ್ತು ರಕ್ಷಿಸಲು ಹೆಚ್ಚಿನ ಪ್ರಯತ್ನಗಳನ್ನು ಮಾಡುತ್ತೀರಿ.