ಕನ್ನಡ ಸುದ್ದಿ  /  ಜೀವನಶೈಲಿ  /  Personality Test: ಸ್ಯಾಕ್ಸೋಫೋನ್‌ ವಾದಕ, ಮಹಿಳೆಯ ಮುಖ; ಮೊದಲು ಕಂಡಿದ್ದೇನು, ನಿಮ್ಮ ಮನೋಭಾವ ಹೇಗೆ ತಿಳಿಸುತ್ತೆ ಈ ಚಿತ್ರ

Personality Test: ಸ್ಯಾಕ್ಸೋಫೋನ್‌ ವಾದಕ, ಮಹಿಳೆಯ ಮುಖ; ಮೊದಲು ಕಂಡಿದ್ದೇನು, ನಿಮ್ಮ ಮನೋಭಾವ ಹೇಗೆ ತಿಳಿಸುತ್ತೆ ಈ ಚಿತ್ರ

ಇಂದಿನ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರ ನಿಮ್ಮ ಕಣ್ಣಿಗೆ ಗೊಂದಲ ಮೂಡಿಸಬಹುದು. ಇದರಲ್ಲಿ ಸ್ಯಾಕ್ಸೋಫೋನ ವಾದಕ ಹಾಗೂ ಮಹಿಳೆಯ ಮುಖವಿದೆ. ಚಿತ್ರವನ್ನು ನೋಡಿದಾಕ್ಷಣ ನಿಮ್ಮ ಕಣ್ಣಿಗೆ ಏನು ಕಾಣಿಸಿತು ಅದು ನಿಮ್ಮ ವ್ಯಕ್ತಿತ್ವವನ್ನು ಬಹಿರಂಗ ಪಡಿಸುತ್ತದೆ.

ಸ್ಯಾಕ್ಸೋಫೋನ್‌ ವಾದಕ, ಮಹಿಳೆಯ ಮುಖ; ಮೊದಲು ಕಂಡಿದ್ದೇನು, ನಿಮ್ಮ ಮನೋಭಾವ ಹೇಗೆ ತಿಳಿಸುತ್ತೆ ಈ ಚಿತ್ರ
ಸ್ಯಾಕ್ಸೋಫೋನ್‌ ವಾದಕ, ಮಹಿಳೆಯ ಮುಖ; ಮೊದಲು ಕಂಡಿದ್ದೇನು, ನಿಮ್ಮ ಮನೋಭಾವ ಹೇಗೆ ತಿಳಿಸುತ್ತೆ ಈ ಚಿತ್ರ

ಆಪ್ಟಿಕಲ್‌ ಇಲ್ಯೂಷನ್‌ಗಳ ಮೂಲಕ ವ್ಯಕ್ತಿತ್ವ ಪರೀಕ್ಷೆ ಮಾಡುವುದು ನಿಮಗೆ ತಮಾಷೆ ಎನ್ನಿಸಬಹುದು. ಆದರೆ ಇದರಲ್ಲಿ ಖಂಡಿತ ನಿಜ ಇರುತ್ತದೆ ಎನ್ನುತ್ತದೆ ಮನಃಶಾಸ್ತ್ರ. ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ನಮ್ಮ ಕಣ್ಣಿಗೆ ಮೋಸ ಮಾಡುವಂತಿರುತ್ತವೆ. ಒಂದೇ ಚಿತ್ರದಲ್ಲಿ ಎರಡೆರಡು ಅಂಶಗಳಿದ್ದರೂ ಮೊದಲು ಏನು ಕಾಣಿಸಿತು ಎಂಬುದು ನಿಮ್ಮ ವ್ಯಕ್ತಿತ್ವವನ್ನು ತಿಳಿಸುತ್ತದೆ.

ಟ್ರೆಂಡಿಂಗ್​ ಸುದ್ದಿ

ಇಂದಿನ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದಲ್ಲಿ ಸ್ಯಾಕ್ಸೋಫೋನ್‌ ವಾದಕ ಹಾಗೂ ಮಹಿಳೆಯ ಮುಖವಿದೆ. ಇದರಲ್ಲಿ ನಿಮ್ಮ ಕಣ್ಣಿಗೆ ಮೊದಲು ಏನು ಕಾಣಿಸಿತು ಅದು ನಿಮ್ಮ ವ್ಯಕ್ತಿತ್ವವನ್ನು ಬಹಿರಂಗ ಮಾಡುತ್ತದೆ. ಇದು ನೀವು ಭಾವನಾತ್ಮಕ ಜೀವಿಗಳಾ, ಕ್ರಿಯಾಶೀಲ ಮನೋಭಾವದವರ, ತಾರ್ತಿಕ ಮನೋಭಾವದವರ ಎಂಬುದನ್ನು ವಿವರಿಸುತ್ತದೆ.

ಮೆದುಳಿನ ಎಡ ಭಾಗ ಸಕ್ರಿಯರಾಗಿರುವ ಜನರು ತಾರ್ಕಿಕ ಮತ್ತು ವಿಶ್ಲೇಷಣಾತ್ಮಕ ಚಿಂತನೆಯುಳ್ಳವರು ಎಂದು ಹೇಳಲಾಗುತ್ತದೆ. ಬಲ ಮೆದುಳು ಹೆಚ್ಚು ಸಕ್ರಿಯವಾಗಿದ್ದರೆ ಅಂತಹವರು ಭಾವನಾತ್ಮಕ ಮತ್ತು ಸೃಜನಶೀಲ ಚಿಂತನೆಯುಳ್ಳವರು ಎಂದು ಹೇಳಲಾಗಿದೆ.

ಸ್ಯಾಕ್ಸೋಫೋನ್‌ ನುಡಿಸುತ್ತಿರುವ ವ್ಯಕ್ತಿ

ನಿಮಗೆ ಮೊದಲು ಸ್ಯಾಕ್ಸೋಫೋನ್‌ ನುಡಿಸುವ ವ್ಯಕ್ತಿ ಕಂಡರೆ ನೀವು ಹೆಚ್ಚು ತಾರ್ಕಿಕ ಮತ್ತು ವಿಶ್ಲೇಷಣಾತ್ಮಕ ನೀವು ಹೆಚ್ಚು ತಾರ್ಕಿಕ ಮತ್ತು ವಿಶ್ಲೇಷಣಾತ್ಮಕ ವ್ಯಕ್ತಿತ್ವದವರು ಎಂದರ್ಥ. ನಿಮ್ಮ ಮೆದುಳಿನ ಎಡ ಅರ್ಧಗೋಳವು ಹೆಚ್ಚು ಸಕ್ರಿಯವಾಗಿದೆ ಎಂದರ್ಥ. ನೀವು ಗಣಿತ ಮತ್ತು ವಿಜ್ಞಾನದಲ್ಲಿ ಎಕ್ಸ್‌ಪರ್ಟ್‌ ಆಗಿರಬಹುದು. ಸೂಚನೆಗಳನ್ನು ಅನುಸರಿಸುವುದು, ಸಮಸ್ಯೆಗಳನ್ನು ಪರಿಹರಿಸುವಲ್ಲಿ ನೀವು ನಿಪುಣರು. ನೀವು ತುಂಬಾ ವಿವರ-ಆಧಾರಿತ, ಪ್ರಾಯೋಗಿಕ ಮತ್ತು ವಾಸ್ತವಕ್ಕೆ ಹೆಚ್ಚು ಗಮನ ನೀಡುವವರಾಗಿರುತ್ತಾರೆ. ತ್ಯ ಮತ್ತು ಪುರಾವೆಗಳ ಆಧಾರದ ಮೇಲೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ. ಸಂಘಟಿತ ಮನೋಭಾವ ದಕ್ಷ ಸ್ವಭಾವ ನಿಮ್ಮದಾಗಿರುತ್ತದೆ. ನೀವು ಉತ್ತಮ ಸಂವಹನಕಾರರೂ ಆಗಿರುತ್ತಾರೆ. ನಿಮ್ಮ ಆಲೋಚನೆಗಳನ್ನು ನೀವು ಸ್ವಷ್ಟವಾಗಿ ವ್ಯಕ್ತಪಡಿಸುತ್ತೀರಿ.

ಮಹಿಳೆಯ ಮುಖ

ಚಿತ್ರದಲ್ಲಿ ನಿಮಗೆ ಮೊದಲು ಮಹಿಳೆಯ ಮುಖ ಕಂಡರೆ ನೀವು ಹೆಚ್ಚು ಭಾವನಾತ್ಮಕ ಜೀವಿ ಎಂದು ಅರ್ಥ. ಇದು ನಿಮ್ಮ ಬಲ ಮೆದುಳಿನ ಅರ್ಧ ಗೋಳ ಸಕ್ರಿಯವಾಗಿದೆ ಎಂಬುದನ್ನು ಸೂಚಿಸುತ್ತದೆ. ನೀವು ಕಾಲ್ಪನಿಕ ಮತ್ತು ಅರ್ಥಗರ್ಭಿತರಾಗಿರಬಹುದು. ಅಭಿವ್ಯಕ್ತಿಶೀಲ ಮನೋಭಾವ ನಿಮ್ಮದು. ಸಂಗೀತ, ಕಲೆಯಲ್ಲಿ ನಿಮಗೆ ಹೆಚ್ಚು ಆಸಕ್ತಿ ಇರಬಹುದು. ಹೊಸ ಹೊಸ ಆಲೋಚನೆಗಳು ನಿಮಗೆ ಮನದಲ್ಲಿ ಮೂಡಬಹುದು. ನೀವು ಇತರರನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತೀರಿ.

ಈ ಪರ್ಸನಾಲಿಟಿ ಟೆಸ್ಟ್‌ಗಳನ್ನೂ ಓದಿ

Personality Test: ಮರ-ಸಿಂಹದ ಮುಖ, ಚಿತ್ರದಲ್ಲಿ ಮೊದಲು ಕಾಣಿಸಿದ್ದೇನು? ನಿಮ್ಮ ರಹಸ್ಯ ಗುಣದ ಬಗ್ಗೆ ತಿಳಿಸುತ್ತೆ ಈ ಚಿತ್ರ

ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವೊಂದು ಜನರು ಮೊದಲ ನೋಟದಲ್ಲೇ ನಿಮ್ಮ ಬಗ್ಗೆ ಏನು ತಿಳಿದುಕೊಳ್ಳುತ್ತಾರೆ ಎಂಬುದನ್ನು ಬಹಿರಂಗ ಪಡಿಸುತ್ತದೆ. ಹಾಗಾದರೆ ಚಿತ್ರದಲ್ಲಿ ಮೊದಲು ನಿಮಗೆ ಗಿಡ ಕಾಣಿಸ್ತಾ, ಸಿಂಹದ ಮುಖ ಕಾಣಿಸ್ತಾ ಹೇಳಿ.

Personality Test: ಮಹಿಳೆಯ ಮುಖ, ಚಿರತೆ-ಕಾಗೆ, ಮೊದಲು ಕಾಣಿಸಿದ್ದೇನು? ನಿಮ್ಮ ರಹಸ್ಯ ಗುಣಗಳ ಬಗ್ಗೆ ತಿಳಿಸುವ ಚಿತ್ರವಿದು

ಇಲ್ಲಿರುವ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವು ನಿಮಗೆ ಅರಿಯದ ನಿಮ್ಮ ವ್ಯಕ್ತಿತ್ವ ಹಾಗೂ ಗುಣಗಳ ಬಗ್ಗೆ ಪರಿಚಯ ಮಾಡಿಸುತ್ತದೆ. ಚಿತ್ರದಲ್ಲಿ ನೀವು ಮೊದಲು ಏನನ್ನು ಗುರುತಿಸುತ್ತೀರಿ ಅದು ನಿಮ್ಮ ರಹಸ್ಯ ವ್ಯಕ್ತಿತ್ವ ಬಹಿರಂಗ ಮಾಡುತ್ತದೆ. ಹಾಗಾದರೆ ಇಂದಿನ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದಲ್ಲಿ ನಿಮ್ಮ ಕಣ್ಣಿಗೆ ಮೊದಲು ಏನು ಕಾಣಿಸಿತ್ತು, ನಿಮ್ಮ ರಹಸ್ಯ ಗುಣ ಯಾವುದು ನೋಡಿ.

ವಿಭಾಗ