Personality Test: ನಿಮ್ಮ ವ್ಯಕ್ತಿತ್ವವನ್ನು ಪರಿಚಯಿಸುತ್ತೆ ಅಂಗೈನ ಆಕಾರ, ನಿಮ್ಮ ಕೈ ಹೇಗಿದೆ ಗಮನಿಸಿ-viral news personality test optical illusion the shape of your hand reveals great insights about you know more rst ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Personality Test: ನಿಮ್ಮ ವ್ಯಕ್ತಿತ್ವವನ್ನು ಪರಿಚಯಿಸುತ್ತೆ ಅಂಗೈನ ಆಕಾರ, ನಿಮ್ಮ ಕೈ ಹೇಗಿದೆ ಗಮನಿಸಿ

Personality Test: ನಿಮ್ಮ ವ್ಯಕ್ತಿತ್ವವನ್ನು ಪರಿಚಯಿಸುತ್ತೆ ಅಂಗೈನ ಆಕಾರ, ನಿಮ್ಮ ಕೈ ಹೇಗಿದೆ ಗಮನಿಸಿ

ನಮ್ಮ ಅಂಗೈನ ಆಕಾರದ ಮೂಲಕವೇ ನಮ್ಮ ವ್ಯಕ್ತಿತ್ವ ಹೇಗೆ ಎಂದು ತಿಳಿಯಬಹುದು. ಅಂಗೈ, ಬೆರಳುಗಳ ಗಾತ್ರವು ನಮ್ಮ ಬಗ್ಗೆ ನಮಗೆ ಪರಿಚಯ ಮಾಡಿಕೊಡುತ್ತದೆ. ಇಂದಿನ ಪರ್ಸನಾಲಿಟಿ ಟೆಸ್ಟ್‌ನಲ್ಲಿ ಅಂಗೈ ಉದ್ದವಾಗಿದ್ದರೆ ಹೇಗೆ, ಗಿಡ್ಡವಾಗಿದ್ದರೆ ಹೇಗೆ ಎಂಬುದನ್ನು ತಿಳಿಯೋಣ.

ನಿಮ್ಮ ವ್ಯಕ್ತಿತ್ವವನ್ನು ಪರಿಚಯಿಸುತ್ತೆ ಅಂಗೈನ ಆಕಾರ, ನಿಮ್ಮ ಕೈ ಹೇಗಿದೆ ಗಮನಿಸಿ
ನಿಮ್ಮ ವ್ಯಕ್ತಿತ್ವವನ್ನು ಪರಿಚಯಿಸುತ್ತೆ ಅಂಗೈನ ಆಕಾರ, ನಿಮ್ಮ ಕೈ ಹೇಗಿದೆ ಗಮನಿಸಿ (PC: Jagaran Josh)

ನಮ್ಮ ಬಗ್ಗೆ ನಾವು ತಿಳಿದುಕೊಳ್ಳುವುದು ಒಂಥರಾ ಖುಷಿ ನೀಡುತ್ತದೆ. ನಮಗೆ ಅರಿವಿಲ್ಲದ ನಮ್ಮ ವ್ಯಕ್ತಿತ್ವದ ಬಗ್ಗೆ ತಿಳಿಯಬೇಕು ಅಂದ್ರೆ ನಾವು ಪರ್ಸನಾಲಿಟಿ ಟೆಸ್ಟ್‌ಗೆ ಒಳಗಾಗಬೇಕು. ನಮ್ಮ ದೇಹದ ಅಂಗಾಂಗಳು ನಮ್ಮ ವ್ಯಕ್ತಿತ್ವ ಹೇಗೆ ಎಂಬುದನ್ನು ತಿಳಿಸುತ್ತದೆ ಎಂದು ಸಂಶೋಧಕರು ಹೇಳುತ್ತಾರೆ. ಹಣೆ, ಕಿವಿ, ಕಣ್ಣು, ಕಾಲು ಹೀಗೆ ಪ್ರತಿ ಅಂಗಾಂಶವೂ ನಮ್ಮೊಳಗಿನ ರಹಸ್ಯ ವ್ಯಕ್ತಿತ್ವವನ್ನು ಬಿಚ್ಚಿಡುತ್ತವೆ. ಇಂದಿನ ಪರ್ಸನಾಲಿಟಿ ಟೆಸ್ಟ್‌ನಲ್ಲಿ ನಿಮ್ಮದು ಚಿಕ್ಕ ಅಂಗೈ ಅಥವಾ ದೊಡ್ಡ ಅಂಗೈ ಎಂಬುದನ್ನು ಗಮನಿಸಿ. ಅದರ ಆಧಾರದ ಮೇಲೆ ನಿಮ್ಮ ವ್ಯಕ್ತಿತ್ವ ಹೇಗಿರುತ್ತದೆ ಎಂಬುದನ್ನು ತಿಳಿಯಿರಿ.

ನಮ್ಮ ಕೈಗಳ ಆಕಾರವನ್ನು ಹೊರತುಪಡಿಸಿ, ನಮ್ಮ ಬೆರಳುಗಳ ಆಕಾರ, ಮುಖದ ಆಕಾರ, ಕಿವಿ, ಮೂಗು, ತುಟಿಗಳ ಆಕಾರ ನಮ್ಮ ಬಗ್ಗೆ ಸಾಕಷ್ಟು ವಿಚಾರಗಳನ್ನು ಬಹಿರಂಗ ಪಡಿಸುತ್ತವೆ. ನಿಮ್ಮ ಕೂದಲಿನ ಉದ್ದ, ನಿಮ್ಮ ಕೂದಲಿನ ಬಣ್ಣ ಮತ್ತು ನಿಮ್ಮ ಕಣ್ಣುಗಳು ನಿಮ್ಮ ವ್ಯಕ್ತಿತ್ವದ ಬಗ್ಗೆ ಕೆಲವು ಒಳನೋಟಗಳನ್ನು ನೀಡುತ್ತವೆ.

ಸಣ್ಣ ಅಂಗೈ, ಸಣ್ಣ ಬೆರಳು

ಸಣ್ಣ ಅಂಗೈ ಹಾಗೂ ಚಿಕ್ಕ ಬೆರಳುಗಳನ್ನು ಹೊಂದಿದ್ದರೆ ನೀವು ಜೀವನದ ಬಗ್ಗೆ ವಿಭಿನ್ನ ದೃಷ್ಟಿಕೋನವನ್ನು ಹೊಂದಿರುತ್ತೀರಿ ಎಂದರ್ಥ. ನೀವು ಆತ್ಮಸಾಕ್ಷಿಗೆ ಸರಿಯಾಗಿ ಇರುತ್ತೀರಿ, ಪ್ರಮಾಣಿಕ ಗುಣದವರು. ನೀವು ಡೌನ್‌ ಟು ಅರ್ಥ ಸ್ವಭಾದವರು, ಸಂಪ್ರದಾಯವನ್ನು ಫಾಲೋ ಮಾಡೋದು ನಿಮಗಿಷ್ಟ. ನೀವು ತುಂಬಾ ಹಠಮಾರಿ. ನಿಮ್ಮ ಕುಟುಂಬದ ವಿಚಾರದಲ್ಲಿ ವಿಶ್ವಾಸಾರ್ಹರಾಗಿರುತ್ತಾರೆ. ನೀವು ಕುಟುಂಬದನ್ನು ಪ್ರೀತಿಸುತ್ತೀರಿ. ಉತ್ತಮ ಹಾಸ್ಯಪ್ರಜ್ಞೆ ಹೊಂದಿರುತ್ತೀರಿ.

ಅಗಲವಾದ ಅಂಗೈ, ದೊಡ್ಡ ಬೆರಳು

ನೀವು ಉದ್ದವಾದ ಬೆರಳುಗಳು ಮತ್ತು ಉದ್ದವಾದ ಅಂಗೈಯನ್ನು ಹೊಂದಿದ್ದರೆ ನೀವು ಭಾವನಾತ್ಮಕ ಜೀವಿಗಳು, ಸೂಕ್ಷ್ಮ ಮನಸ್ಸಿನವರು. ಕಾಲ್ಪನಿಕ ಸ್ವಭಾವ ನಿಮ್ಮದಾಗಿರುತ್ತದೆ. ನೀವು ಕನಸುಗಾರರು. ಕನಸಗಳೊಂದಿಗೆ ಬದುಕುವುದು ನಿಮಗೆ ಇಷ್ಟವಾಗುತ್ತದೆ. ಆದರೆ ನಿಮ್ಮೊಳಗೆ ಹುದುಗುತ್ತಿರುವ ಭಾವನಾತ್ಮಕ ಪ್ರಕ್ಷುಬ್ಧತೆಯ ಬಿರುಗಾಳಿಯೊಂದಿಗೆ ಶಾಂತ ವರ್ತನೆಯನ್ನು ಹೊಂದಿರುತ್ತೀರಿ. ನೀವು ಹೆಚ್ಚು ಮೂಡಿ, ಕೆಲವೊಮ್ಮೆ ಯಾರಿಗೂ ಅರಿಯದ ರಹಸ್ಯ ವ್ಯಕ್ತಿ ನೀವಾಗುತ್ತೀರಿ. ತರ್ಕಬದ್ಧ ಭಾವನಾತ್ಮಕ, ರೊಮ್ಯಾಂಟಿಕ್‌ ಸ್ವಭಾವದವರು. ನಿಮ್ಮ ಮನೋಭಾವ ದುರ್ಬಲವಾಗಿರುತ್ತದೆ.

ಈ ಪರ್ಸನಾಲಿಟಿ ಟೆಸ್ಟ್‌ ಲೇಖನಗಳನ್ನೂ ಓದಿ 

Personality Test: ಹಣೆ ಹೇಗಿದ್ದರೆ ಅದೃಷ್ಟ, ಹಣೆಯ ಮೇಲೆ ಗೆರೆ ಇದ್ದರೆ ಏನರ್ಥ? ಹಣೆಯ ಆಕಾರ ತಿಳಿಸುತ್ತೆ ವ್ಯಕ್ತಿತ್ವ, ಪರೀಕ್ಷಿಸಿ ನೋಡಿ

ನಮ್ಮ ವ್ಯಕ್ತಿತ್ವ ಹೇಗೆ ಎಂದು ನಾವು ತಿಳಿದುಕೊಳ್ಳಲು ಬಯಸಿದರೆ, ಪರ್ಸನಾಲಿಟಿ ಟೆಸ್ಟ್‌ಗಳಿಗೆ ನಮ್ಮನ್ನು ಒಡ್ಡಿಕೊಳ್ಳಬೇಕು. ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ಮಾತ್ರವಲ್ಲ ನಮ್ಮ ದೇಹದ ಆಕಾರವು ನಮ್ಮ ವ್ಯಕ್ತಿತ್ವ ಹೇಗೆ ಎಂದು ತಿಳಿಸುತ್ತದೆ. ಇಂದಿನ ಪರ್ಸನಾಲಿಟಿ ಟೆಸ್ಟ್‌ನಲ್ಲಿ ನಿಮ್ಮ ಹಣೆಯ ಆಕಾರದ ಮೇಲೆ ನಿಮ್ಮ ವ್ಯಕ್ತಿತ್ವ ಹೇಗೆ ತಿಳಿಯಿರಿ.

Personality Test: ಕಿವಿಗಳ ಆಕಾರದಿಂದ ತಿಳಿಯಬಹುದು ನಮ್ಮ ರಹಸ್ಯ ವ್ಯಕ್ತಿತ್ವ, ನಿಮ್ಮ ಕಿವಿಯ ಆಕಾರ ಹೇಗಿದೆ ಪರೀಕ್ಷಿಸಿ

Personality Test Based on Ear Shape: ನಮ್ಮ ದೇಹದ ಹಲವು ಅಂಗಾಂಗಗಳಂತೆ ಕಿವಿಗಳ ಆಕಾರವು ನಮ್ಮ ವ್ಯಕ್ತಿತ್ವಕ್ಕೆ ಸಂಬಂಧಿಸಿದ ಹಲವರು ವಿಚಾರಗಳನ್ನು ಬಹಿರಂಗ ಪಡಿಸುತ್ತದೆ. ಇಂದಿನ ಪರ್ಸನಾಲಿಟಿ ಟೆಸ್ಟ್‌ನಲ್ಲಿ ನಿಮ್ಮ ಕಿವಿಗಳ ಆಕಾರ ಹೇಗಿದೆ, ಅದರ ಮೇಲೆ ನಿಮ್ಮ ವ್ಯಕ್ತಿತ್ವ ಎಂಥದ್ದು ತಿಳಿಯಿರಿ.