Personality Test: ಕಣ್ಣು, ಕಣಿವೆ ಚಿತ್ರವನ್ನು ನೋಡಿದಾಕ್ಷಣ ಕಾಣಿಸಿದ್ದೇನು? ನೀವು ಯಾವುದಕ್ಕೆ ಹೆಚ್ಚು ಭಯ ಪಡುತ್ತೀರಿ ತಿಳಿಸುತ್ತೆ ಈ ಚಿತ್ರ
ಕನ್ನಡ ಸುದ್ದಿ  /  ಜೀವನಶೈಲಿ  /  Personality Test: ಕಣ್ಣು, ಕಣಿವೆ ಚಿತ್ರವನ್ನು ನೋಡಿದಾಕ್ಷಣ ಕಾಣಿಸಿದ್ದೇನು? ನೀವು ಯಾವುದಕ್ಕೆ ಹೆಚ್ಚು ಭಯ ಪಡುತ್ತೀರಿ ತಿಳಿಸುತ್ತೆ ಈ ಚಿತ್ರ

Personality Test: ಕಣ್ಣು, ಕಣಿವೆ ಚಿತ್ರವನ್ನು ನೋಡಿದಾಕ್ಷಣ ಕಾಣಿಸಿದ್ದೇನು? ನೀವು ಯಾವುದಕ್ಕೆ ಹೆಚ್ಚು ಭಯ ಪಡುತ್ತೀರಿ ತಿಳಿಸುತ್ತೆ ಈ ಚಿತ್ರ

ಆಪ್ಟಿಕಲ್‌ ಇಲ್ಯೂಷನ್‌ ಪರ್ಸನಾಲಿಟಿ ಟೆಸ್ಟ್‌ಗಳು ನಮ್ಮ ವ್ಯಕ್ತಿತ್ವವನ್ನು ನಮಗೆ ಪರಿಚಯ ಮಾಡಿಕೊಡುತ್ತವೆ. ಇಂದಿನ ಪರ್ಸನಾಲಿಟಿ ಟೆಸ್ಟ್‌ನಲ್ಲಿ ನೀವು ಯಾವುದಕ್ಕೆ ಹೆಚ್ಚು ಭಯ ಪಡುತ್ತೀರಿ, ನಿಮ್ಮ ವ್ಯಕ್ತಿತ್ವ, ಗುಣ-ಸ್ವಭಾವ ಹೇಗೆ ತಿಳಿಯಿರಿ.

ಕಣ್ಣು, ಕಣಿವೆ ಚಿತ್ರವನ್ನು ನೋಡಿದಾಕ್ಷಣ ಕಾಣಿಸಿದ್ದೇನು? ನೀವು ಯಾವುದಕ್ಕೆ ಹೆಚ್ಚು ಭಯ ಪಡುತ್ತೀರಿ ತಿಳಿಸುತ್ತೆ ಈ ಚಿತ್ರ
ಕಣ್ಣು, ಕಣಿವೆ ಚಿತ್ರವನ್ನು ನೋಡಿದಾಕ್ಷಣ ಕಾಣಿಸಿದ್ದೇನು? ನೀವು ಯಾವುದಕ್ಕೆ ಹೆಚ್ಚು ಭಯ ಪಡುತ್ತೀರಿ ತಿಳಿಸುತ್ತೆ ಈ ಚಿತ್ರ

ಇತ್ತೀಚಿನ ದಿನಗಳಲ್ಲಿ ಆಪ್ಟಿಕಲ್‌ ಇಲ್ಯೂಷನ್‌ ಮೂಲಕ ವ್ಯಕ್ತಿತ್ವ ಪರೀಕ್ಷೆ ಮಾಡುವುದು ಟ್ರೆಂಡ್‌ ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ನಮ್ಮ ಬಗ್ಗೆ ನಮಗೆ ಒಂದು ಸ್ಪಷ್ಟ ಚಿತ್ರಣ ಸಿಗುವಂತೆ ಮಾಡುತ್ತವೆ. ಮನೋಶಾಸ್ತ್ರದಲ್ಲೂ ಇದು ನಿಜ ಸಾಬೀತಾಗಿದೆ. ಈ ಚಿತ್ರಗಳು ನಿಮ್ಮಲ್ಲಿ ಭ್ರಮೆ ಹುಟ್ಟಿಸಿದರೂ ಚಿತ್ರವನ್ನು ಮೊದಲು ಕಂಡಾಕ್ಷಣ ನೀವೇನು ಕಾಣುತ್ತೀರೋ ಅದು ನಿಮ್ಮ ವ್ಯಕ್ತಿತ್ವ ಆಗಿರುತ್ತದೆ. ಪ್ರತಿ ಆಫ್ಟಿಕಲ್‌ ಇಲ್ಯೂಷನ್‌ ಚಿತ್ರದಲ್ಲೂ ಎರಡಕ್ಕಿಂತ ಹೆಚ್ಚು ಅಂಶಗಳಿರುತ್ತದೆ. ಅದು ಒಬ್ಬೊಬ್ಬರ ಕಣ್ಣಿಗೆ ಒಂದೊಂದು ರೀತಿ ಕಾಣುತ್ತದೆ. ನಿಮ್ಮ ಕಣ್ಣಿಗೆ ಕಂಡಿದ್ದು ನಿಮ್ಮ ವ್ಯಕ್ತಿತ್ವ ಆಗಿರುತ್ತದೆ. ಇಂದಿನ ಆಪ್ಟಿಕಲ್‌ ಇಲ್ಯೂಷನ್‌ನಲ್ಲಿ ಕಂದಕ ಅಥವಾ ಕಣಿವೆ ಹಾಗೂ ಕಣ್ಣು ಎರಡೂ ಕಾಣಿಸುತ್ತದೆ. ನೀವು ಚಿತ್ರವನ್ನು ಮೊದಲು ನೋಡಿದಾಕ್ಷಣ ನಿಮ್ಮ ಕಣ್ಣಿಗೆ ಏನು ಕಾಣುತ್ತದೆ ಅದು ನಿಮ್ಮ ವ್ಯಕ್ತಿತ್ವ ಆಗಿರುತ್ತದೆ.

ಈ ಆಫ್ಟಿಕಲ್‌ ಇಲ್ಯೂಷನ್‌ ಚಿತ್ರವನ್ನು ಮಿಯಾ ಯಿಲಿನ್‌ ಎನ್ನುವವರು ಟಿಕ್‌ಟಾಕ್‌ (ಭಾರತದಲ್ಲಿ ಬ್ಯಾನ್‌ ಆಗಿದೆ) ನಲ್ಲಿ ಹಂಚಿಕೊಂಡಿದ್ದಾರೆ. ಸರಿ ಆಪ್ಟಿಕಲ್‌ ಇಲ್ಯೂಷನ್‌ ಮೂಲಕ ನೀವು ಯಾವುದಕ್ಕೆ ಹೆಚ್ಚು ಭಯ ಪಡುತ್ತೀರಿ, ನಿಮ್ಮ ವ್ಯಕ್ತಿತ್ವ ಹೇಗೆ ತಿಳಿಯೋಣ.

ಕಂದಕ ಅಥವಾ ಕಣಿವೆ ಮೊದಲು ಕಂಡರೆ

ಚಿತ್ರದಲ್ಲಿ ನಿಮಗೆ ಕಂದಕ ಮೊದಲು ಕಾಣಿಸಿದರೆ ನೀವು ಯಾವುದೇ ಕೆಲಸವನ್ನು ಮಾಡುವ ಮೊದಲು ಅದರ ಬಗ್ಗೆ ದೀರ್ಘವಾಗಿ ಯೋಚಿಸುವ ಸೂಕ್ಷ್ಮವ್ಯಕ್ತಿ. ಹಾಸ್ಯ ಹಾಗೂ ಮನರಂಜನೆಯಂತಹ ನಿಮ್ಮ ಪ್ರತಿಭೆಯಿಂದ ಇತರರನ್ನು ಮೆಚ್ಚಿಸುವ ನೀವು ಆನಂದಿಸುತ್ತೀರಿ. ಆದರೆ ನೀವು ನಿಮಗೆ ಗಡಿ ಹೇರಿಕೊಳ್ಳಬೇಕು. ಅಗತ್ಯವಾಗಿದ್ದಾಗ ನಿಮ್ಮ ಪರವಾಗಿ ನೀವಿರಬೇಕು. ಮೊದಲು ಕಂದಕ ನಿಮ್ಮ ಕಣ್ಣಿಗೆ ಕಾಣಿಸಿದರೆ ನೀವು ಇತರರ ಅಭಿಪ್ರಾಯಗಳ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತೀರಿ. ಇದು ನಿಮ್ಮ ಸ್ವಾಭಿಮಾನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಕೆಲವೊಮ್ಮೆ ಇಂತಹ ಯೋಚನೆಗಳಿಂದಲೇ ನಿಮ್ಮ ಸಮಯ ಹಾಳಾಗುತ್ತದೆ.

ನೀವು ನಿಮ್ಮ ಮೇಲೆ ಅಧಿಕಾರ ಚಲಾಯಿಸದೇ ಬೆಂಬಲ ನೀಡುವ ಸ್ನೇಹವನ್ನು ಬೆಳೆಸುವುದು ಬಹಳ ಮುಖ್ಯ. ಸಾಮಾಜಿಕ ಜೀವನವನ್ನು ಮೀರಿದ ಹವ್ಯಾಸಗಳನ್ನು ಅನುಸರಿಸುವುದನ್ನು ಪರಿಗಣಿಸಿ.

ಕಣ್ಣು ಮೊದಲು ಕಂಡರೆ

ನಿಮ್ಮ ಕಣ್ಣಿಗೆ ಚಿತ್ರದಲ್ಲಿ ಕಣ್ಣೇ ಮೊದಲು ಕಂಡರೆ ನೀವು ಭವಿಷ್ಯದ ನಿರೀಕ್ಷೆಗಳ ಬಗ್ಗೆ ಆತಂಕ ಹೊಂದಿರುವ ವ್ಯಕ್ತಿ ಎಂಬುದನ್ನು ಅದು ಸೂಚಿಸುತ್ತದೆ. ನೀವು ಆರ್ಥಿಕವಾಗಿ ಯಾರ ಮೇಲೂ ಅವಲಂಬಿತವಾಗಿಲ್ಲ ಎಂದರೂ ನಿಮಗೆ ಭವಿಷ್ಯದ ಭಯ, ಭದ್ರತೆ ಸದಾ ಕಾಡುತ್ತಿರುತ್ತದೆ. ನಿಮ್ಮ ಶ್ರದ್ಧೆಯಿಂದ ನೀವು ಎಲ್ಲರ ಮೆಚ್ಚುಗೆ ಗಳಿಸುತ್ತೀರಿ. ಕೆಲಸ ಹಾಗೂ ಇತರ ವಿಚಾರಗಳಲ್ಲಿ ನಿಮ್ಮ ಅಚಲ ಪ್ರಯತ್ನಗಳಿಗಾಗಿ ಎಲ್ಲರೂ ಮೆಚ್ಚುತ್ತಾರೆ. ವಿಶ್ರಾಂತಿ ಪಡೆಯುವ ಮತ್ತು ನಿಮ್ಮ ದಿನಚರಿಯಿಂದ ದೂರ ಇರಬಹುದಾದ ಸ್ಥಳಕ್ಕೆ ಆಗಾಗ ಪ್ರಯಾಣ ಮಾಡುತ್ತಿರಿ. ನಿಮ್ಮ ಜೀವನದಲ್ಲಿ ಬದಲಾವಣೆ ಬೇಕು ಎಂದರೆ ನೀವು ಆರಾಮ ವಲಯದಿಂದ ಹೊರ ಬರಬೇಕು. 

 

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner