ಕನ್ನಡ ಸುದ್ದಿ  /  ಜೀವನಶೈಲಿ  /  Personality Test: ಚಿತ್ರದಲ್ಲಿ ನಿಮಗೆ ಮೊದಲು ಮಹಿಳೆಯ ಮುಖ ಕಾಣಿಸ್ತಾ, ಪುರುಷನದ್ದಾ? ನಿಮ್ಮ ಮನೋಭಾವ ಹೇಗೆ ತಿಳಿಸುತ್ತೆ ಈ ಚಿತ್ರ

Personality Test: ಚಿತ್ರದಲ್ಲಿ ನಿಮಗೆ ಮೊದಲು ಮಹಿಳೆಯ ಮುಖ ಕಾಣಿಸ್ತಾ, ಪುರುಷನದ್ದಾ? ನಿಮ್ಮ ಮನೋಭಾವ ಹೇಗೆ ತಿಳಿಸುತ್ತೆ ಈ ಚಿತ್ರ

ಇಂದಿನ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರ ನಿಮ್ಮ ಕಣ್ಣಿಗೆ ಮೋಸ ಮಾಡುವುದು ಪಕ್ಕಾ. ಇದರಲ್ಲಿ ಮೊದಲು ನಿಮಗೆ ಏನು ಕಾಣುತ್ತೆ ಎಂಬುದನ್ನು ನಿಖರವಾಗಿ ಹೇಳುವುದು ಕಷ್ಟವಾಗಬಹುದು. ಆದರೆ ಮೊದಲು ನಿಮಗೆ ಕಂಡಿದ್ದು ನಿಮ್ಮ ಮನೋಭಾವ ಹೇಗೆ ಎಂಬುದನ್ನು ತಿಳಿಸುತ್ತದೆ.

ಚಿತ್ರದಲ್ಲಿ ನಿಮಗೆ ಮೊದಲು ಮಹಿಳೆಯ ಮುಖ ಕಾಣಿಸ್ತಾ, ಪುರುಷನದ್ದಾ? ನಿಮ್ಮ ಮನೋಭಾವ ಹೇಗೆ ತಿಳಿಸುತ್ತೆ ಈ ಚಿತ್ರ
ಚಿತ್ರದಲ್ಲಿ ನಿಮಗೆ ಮೊದಲು ಮಹಿಳೆಯ ಮುಖ ಕಾಣಿಸ್ತಾ, ಪುರುಷನದ್ದಾ? ನಿಮ್ಮ ಮನೋಭಾವ ಹೇಗೆ ತಿಳಿಸುತ್ತೆ ಈ ಚಿತ್ರ

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ನಿಮ್ಮ ಮೆದುಳಿಗೆ ಭ್ರಮೆ ಆವರಿಸುವಂತೆ ಮಾಡುತ್ತವೆ. ಚಿತ್ರವನ್ನು ಕಂಡಾಕ್ಷಣ ಚಿತ್ರದಲ್ಲಿ ಇರುವುದು ಏನು ಎಂದು ನಿರ್ಧಾರ ಮಾಡುವುದು ನಮಗೆ ಕಷ್ಟವಾಗಬಹುದು. ಆದರೆ ಈ ಚಿತ್ರಗಳು ನಮ್ಮ ವ್ಯಕ್ತಿತ್ವ, ಗುಣ, ಸ್ವಭಾವ, ಮನೋಭಾವವನ್ನು ತಿಳಿಸುವುದು ಸುಳ್ಳಲ್ಲ.

ಟ್ರೆಂಡಿಂಗ್​ ಸುದ್ದಿ

ಇಲ್ಲೊಂದು ಚಿತ್ರವಿದೆ. ಈ ಚಿತ್ರ ನಿಮಗೆ ವಿಚಿತ್ರವಾಗಿ ಕಾಣಿಸಬಹುದು. ಇದರಲ್ಲಿ ಎರಡು ಮುಖಗಳು ಅಂಟಿಕೊಂಡಂತೆ ಇವೆ. ಒಂದು ಮಹಿಳೆಯ ಮುಖವಾದ್ರೆ ಇನ್ನೊಂದು ಪುರುಷನ ಮುಖ. ಈ ಎರಡೂ ಮುಖಗಳಲ್ಲಿ ಚಿತ್ರವನ್ನು ಕಂಡಾಕ್ಷಣ ನಿಮಗೆ ಕಾಣಿಸುವುದು ನಿಮ್ಮ ಮನೋಭಾವ ಹೇಗೆ ಎಂಬುದನ್ನು ತಿಳಿಸುತ್ತದೆ. ಇದು ನಿಮಗೆ ಮೋಜಿನ ಆಟ ಎನ್ನಿಸಬಹುದು. ಇದು ಫೇಕ್‌ ಅಂತಲೂ ಅನ್ನಿಸಬಹುದು. ಆದರೆ ಮನೋಶಾಸ್ತ್ರದಲ್ಲಿ ವ್ಯಕ್ತಿತ್ವ ತಿಳಿಯಲು ಇಂತಹ ಚಿತ್ರಗಳನ್ನು ಬಳಸುತ್ತಾರೆ ಎಂಬುದು ಸುಳ್ಳಲ್ಲ. ನಮ್ಮ ಮೆದುಳು ಚಿತ್ರವನ್ನು ಹೇಗೆ ಗ್ರಹಿಸುತ್ತದೆ ಎಂಬುದರ ಮೇಲೆ ನಮ್ಮ ವ್ಯಕ್ತಿತ್ವ ಇರುತ್ತದೆ.

ಸರಿ ಹಾಗಿದ್ರೆ, ಇವತ್ತಿನ ಆಪ್ಟಿಕಲ್‌ ಇಲ್ಯೂಷನ್‌ ಟೆಸ್ಟ್‌ ತೆಗೆದುಕೊಳ್ಳಲು ಸಿದ್ಧರಿದ್ದೀರಾ? ಈ ಚಿತ್ರವನ್ನು ಸರಿಯಾಗಿ ಗಮನಿಸಿ. ಇದರಲ್ಲಿ ನಿಮಗೆ ಮೊದಲು ಮಹಿಳೆಯ ಮುಖ ಕಾಣಿಸಿವುದೋ ಅಥವಾ ಮಹಿಳೆಯರ ಮುಖ ಕಾಣಿಸುವುದೋ ನೋಡಿ.

ಪುರುಷನ ಮುಖ ಮೊದಲು ಕಂಡರೆ

ನೀವು ಮೊದಲು ಮನುಷ್ಯನನ್ನು ನೋಡಿದರೆ ನೀವು ತರ್ಕದ ವ್ಯಕ್ತಿ. ಭಾವನೆಗಳನ್ನು ನಿಯಂತ್ರಿಸುವ ಕಲೆ ನಿಮ್ಮಲ್ಲಿರುತ್ತದೆ. ನೀವು ಬಲವಾದ ನಾಯಕತ್ವ ಕೌಶಲ್ಯಗಳನ್ನು ಹೊಂದಿದ್ದೀರಿ. ಅಸಾಧಾರಣ ಶಕ್ತಿಯ ಮಟ್ಟ ನಿಮ್ಮಲ್ಲಿರುತ್ತದೆ. ನಿಮ್ಮ ಕಣ್ಣಿಗೆ ನೇರವಾಗಿ ಕಂಡರೂ ಕೆಲವೊಮ್ಮೆ ಅಪಾಯದ ಅರಿವು ನಿಮಗಾಗುವುದಿಲ್ಲ. ಯಾವುದೇ ವಿಚಾರದ ಬಗ್ಗೆ ಯೋಚಿಸಿದೇ ಮುಂದೆ ಸಾಗುವವರು ನೀವಲ್ಲ. ಕೆಲವರು ನಿಮ್ಮನ್ನು ಸೋಂಬೇರಿಗಳು ಎಂದು ಪರಿಗಣಿಸಬಹುದು. ನಿಮ್ಮಲ್ಲಿ ಸಕಾರಾತ್ಮಕ ಭಾವ ಇರುವ ಕಾರಣ ಜನರು ನಿಮ್ಮ ಜೊತೆ ಬೆರೆಯಲು ಇಷ್ಟಪಡುತ್ತಾರೆ.

ಮಹಿಳೆಯ ಮುಖ ಮೊದಲು ಕಂಡರೆ

ನಿಮ್ಮ ಕಣ್ಣಿಗೆ ಮೊದಲು ಮಹಿಳೆಯ ಮುಖ ಕಾಣಿಸಿದರೆ ನೀವು ಭಾವಾನಾತ್ಮಕ ಜೀವಿಗಳು ಎಂದರ್ಥ. ಜೀವನದ ಬಗ್ಗೆ ನಿಮಗಿರುವ ಆಶಾವಾದಿ ಮನೋಭಾವಕ್ಕಾಗಿ ಜನರು ನಿಮ್ಮನ್ನು ಗೌರವಿಸುತ್ತಾರೆ. ಯಾವುದೇ ವಿಷಯದ ಬಗ್ಗೆ ನಿಮಗೆ ಬದ್ಧತೆ ಇರುತ್ತದೆ. ಹಿಡಿದ ಗುರಿ ಸಾಧಿಸುವವರೆಗೆ ನೀವು ಬಿಡುವವರಲ್ಲ. ಇತರರಲ್ಲಿ ನೀವು ಸೂಕ್ಷ್ಮ ಸೂಚನೆಗಳು ಮತ್ತು ಭಾವನೆಗಳನ್ನು ಗುರುತಿಸಬಹುದು. ನಿಮ್ಮ ಮಾತಿನಲ್ಲಿ ದಯೆ ಇರುತ್ತದೆ. ಸಾಮಾಧಾನದ ಮಾತು ನಿಮ್ಮದಾಗಿರುತ್ತದೆ. ಆರೋಗ್ಯದ ವಿಚಾರದಲ್ಲಿ ಸಾಕಷ್ಟು ಗಮನ ಹರಿಸುತ್ತೀರಿ. ಆರೋಗ್ಯಕರ ಜೀವನದಕ್ಕೆ ಬೇಕಾದ ಕ್ರಮಗಳನ್ನೂ ಅನುಸರಿಸುತ್ತೀರಿ.

ಇದನ್ನೂ ಓದಿ

Personality Test: ಕರಡಿನಾ ಚಾಕುನಾ, ಚಿತ್ರದಲ್ಲಿ ನಿಮಗೆ ಮೊದಲು ಕಾಣಿಸಿದ್ದೇನು? ನಿಮ್ಮ ಸ್ವಭಾವ ಹೇಗೆ ತಿಳಿಸುತ್ತೆ ಈ ಚಿತ್ರ

ನಮ್ಮ ಸ್ವಭಾವ ಹೇಗೆ ಎಂದು ನಿರ್ಧರಿಸುವುದು ನಮ್ಮ ನಡವಳಿಕೆ. ಆದರೆ ಕೆಲವೊಮ್ಮೆ ನಮಗೆ ಅರಿಯದ ಸ್ವಭಾವ ನಮ್ಮಲ್ಲಿರುತ್ತದೆ. ಅದನ್ನು ಆಪ್ಟಿಕಲ್‌ ಇಲ್ಯೂಷನ್‌ ಪರ್ಸನಾಲಿಟಿ ಟೆಸ್ಟ್‌ಗಳು ಬಹಿರಂಗ ಪಡಿಸುತ್ತವೆ. ಅಂತಹ ಒಂದು ಆಪ್ಟಿಕಲ್‌ ಇಲ್ಯೂಷನ್‌ ಚಿತ್ರ ಇಲ್ಲಿದೆ.

ವಿಭಾಗ