ಕನ್ನಡ ಸುದ್ದಿ  /  ಜೀವನಶೈಲಿ  /  Personality Test: ತಲೆಬುರುಡೆ, ಆಟವಾಡುವ ಹುಡುಗೀರು, ಇದ್ರಲ್ಲಿ ಮೊದಲು ಕಾಣಿಸಿದ್ದೇನು; ನಿಮ್ಮ ಬಗ್ಗೆ ಹಲವು ವಿಚಾರ ತಿಳಿಸುತ್ತೆ ಈ ಚಿತ್ರ

Personality Test: ತಲೆಬುರುಡೆ, ಆಟವಾಡುವ ಹುಡುಗೀರು, ಇದ್ರಲ್ಲಿ ಮೊದಲು ಕಾಣಿಸಿದ್ದೇನು; ನಿಮ್ಮ ಬಗ್ಗೆ ಹಲವು ವಿಚಾರ ತಿಳಿಸುತ್ತೆ ಈ ಚಿತ್ರ

ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರ ನೋಡಿದಾಕ್ಷಣ ನಿಮಗೆ ಗಾಬರಿ ಆಗಬಹುದು ಅಥವಾ ಖುಷಿನೂ ಆಗಬಹುದು. ಯಾಕಂದ್ರೆ ಇದರಲ್ಲಿ 2 ಅಂಶಗಳಿವೆ. ನಿಮ್ಮ ಕಣ್ಣಿಗೆ ಮೊದಲು ಏನು ಕಾಣಿಸಿತು ಹೇಳಿ ಅದು ನಿಮ್ಮ ಬಗ್ಗೆ ಸಾಕಷ್ಟು ವಿಚಾರಗಳನ್ನು ತಿಳಿಸುತ್ತದೆ.

ತಲೆಬುರುಡೆ, ಆಟವಾಡುವ ಹುಡುಗೀರು, ಇದ್ರಲ್ಲಿ ಮೊದಲು ಕಾಣಿಸಿದ್ದೇನು; ನಿಮ್ಮ ವ್ಯಕ್ತಿತ್ವ ತಿಳಿಯಿರಿ
ತಲೆಬುರುಡೆ, ಆಟವಾಡುವ ಹುಡುಗೀರು, ಇದ್ರಲ್ಲಿ ಮೊದಲು ಕಾಣಿಸಿದ್ದೇನು; ನಿಮ್ಮ ವ್ಯಕ್ತಿತ್ವ ತಿಳಿಯಿರಿ

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುವ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ನಮಗೆ ತಲೆ ಕೆರೆದುಕೊಳ್ಳುವಂತೆ ಮಾಡುವುದು ಸುಳ್ಳಲ್ಲ. ಒಂದೇ ಚಿತ್ರದಲ್ಲಿ ಎರಡಕ್ಕಿಂತ ಹೆಚ್ಚು ಅಂಶಗಳಿದ್ದು ಕಣ್ಣಿಗೂ ಮನಸ್ಸಿಗೂ ಗೊಂದಲ ಮೂಡಿಸುತ್ತವೆ. ಹೀಗೆ ನಮ್ಮನ್ನು ಕನ್‌ಪ್ಯೂಸ್‌ ಮಾಡುವ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ನಮ್ಮ ವ್ಯಕ್ತಿತ್ವವನ್ನು ಪರೀಕ್ಷೆ ಮಾಡುವುದು ಸುಳ್ಳಲ್ಲ. ನಮ್ಮ ವ್ಯಕ್ತಿತ್ವದ ನಮಗೆ ತಿಳಿದಿರದ ಅಂಶಗಳನ್ನು ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ಬಹಿರಂಗ ಪಡಿಸುತ್ತವೆ. ಆದರೆ ಚಿತ್ರದಲ್ಲಿ ಮೊದಲು ನಿಮ್ಮ ಕಣ್ಣಿಗೆ ಕಂಡಿದ್ದೇನು ಎಂಬುದನ್ನು ನೀವು ಸತ್ಯ ಹೇಳಬೇಕು.

ಇಲ್ಲೊಂದು ಬ್ಲ್ಯಾಕ್‌ ಅಂಡ್‌ ವೈಟ್‌ ಚಿತ್ರವಿದೆ. ಇದರಲ್ಲಿ ನಿಮಗೆ ತಲೆಬರುಡೆ ಹಾಗೂ ಆಡುತ್ತಿರುವ ಇಬ್ಬರು ಹುಡುಗಿಯರು ಕಾಣಿಸಬಹುದು. ಆದರೆ ನಿಮ್ಮ ಕಣ್ಣಿಗೆ ಮೊದಲ ಕಂಡಿದ್ದು ನಿಮ್ಮ ವ್ಯಕ್ತಿತ್ವ ಆಗಿರುತ್ತದೆ. ಆ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವನ್ನು ಚಾರ್ಲ್ಸ್ ಮೆರಿಯಟ್ ಎನ್ನುವವರು ಟಿಕ್‌ಟಾಕ್‌ (ಭಾರತದಲ್ಲಿ ಬ್ಯಾನ್‌ ಆಗಿದೆ) ವಿಡಿಯೊದಲ್ಲಿ ಹಂಚಿಕೊಂಡಿದ್ದರು. ಟಿಕ್‌ಟಾಕ್‌ ವಿಡಿಯೊದಲ್ಲಿ ಈ ಚಿತ್ರವನ್ನು ನೋಡಿ ವ್ಯಕ್ತಿತ್ವ ಪರೀಕ್ಷೆ ಮಾಡಿಕೊಂಡ ಹಲವರು ಇದನ್ನು ಒಪ್ಪಿದ್ದಾರೆ. ಹಲವರು ಈ ಆಪ್ಟಿಕಲ್‌ ಇಲ್ಯೂಷನ್‌ ಪರ್ಸನಾಲಿಟಿ ಟೆಸ್ಟ್‌ ನಿಜ ಎಂದು ಒಪ್ಪಿಕೊಂಡಿದ್ದಾರೆ.

ತಲೆಬುರಡೆ

ಚಿತ್ರದಲ್ಲಿ ನಿಮಗೆ ತಲೆಬುರುಡೆ ಕಂಡರೆ ನೀವು ನಂಬಲಾರ್ಹ, ಪ್ರಾಮಾಣಿಕ ವ್ಯಕ್ತಿ ಎಂದರ್ಥ. ನಿಮ್ಮ ಪ್ರಾಮಾಣಿಕತೆಯಿಂದಲೇ ನೀವು ಜನರನ್ನು ಸಂಪಾದಿಸುತ್ತೀರಿ. ಸ್ನೇಹಿತರು ಸದಾ ನಿಮ್ಮ ನಂಬಿ ಯಾವ ವಿಚಾರವನ್ನೂ ಕೂಡ ಹೇಳಿಕೊಳ್ಳಬಹುದು. ಆದರೆ ಕೆಲವೊಮ್ಮೆ ನೀವು ಹೇಳುವ ವಿಚಾರಗಳು ನಿಮ್ಮ ಸ್ನೇಹಿತರಿಗೆ ಇಷ್ಟವಾಗದೇ ಹೋಗಬಹುದು.

ಟ್ರೆಂಡಿಂಗ್​ ಸುದ್ದಿ

ಆಡುತ್ತಿರುವ ಹುಡುಗಿಯರು

ಇಸ್ಪಿಟ್‌ ಎಲೆಯಲ್ಲಿ ಆಡುತ್ತಿರುವ ಹುಡುಗಿಯರು ನಿಮ್ಮ ಕಣ್ಣಿಗೆ ಮೊದಲು ಕಂಡರೆ ನೀವು ಸ್ಪರ್ಧಾತ್ಮಕ ಮನೋಭಾವದವರು ಎಂದರ್ಥ. ಸದಾ ಖುಷಿಯಿಂದ ಬದುಕು ಸಾಗಿಸುವ ನೀವು ಆಶಾವಾದಿಗಳು. ಸ್ಪರ್ಧಾತ್ಮಕ ಮನೋಭಾವವು ನಿಮಗೆ ಎಲ್ಲದರಲ್ಲೂ ಗೆಲ್ಲಬೇಕು ಎಂಬ ಸ್ಫೂರ್ತಿ ನೀಡಲು ನೆರವಾಗುತ್ತದೆ.

ಈ ಪರ್ಸನಾಲಿಟಿ ಟೆಸ್ಟ್‌ಗಳನ್ನೂ ಓದಿ

Personality Test: ಈ 4 ಸೂರ್ಯಾಸ್ತದ ಚಿತ್ರಗಳಲ್ಲಿ ಯಾವುದು ಹೆಚ್ಚು ಇಷ್ಟವಾಯ್ತು? ವ್ಯಕ್ತಿತ್ವ ತಿಳಿಸುವ ಚಿತ್ರವಿದು

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ಇತ್ತೀಚಿಗೆ ಹೆಚ್ಚು ವೈರಲ್‌ ಆಗುತ್ತಿವೆ. ಇವುಗಳ ಆಧಾರದ ಮೇಲೆ ನಮ್ಮ ವ್ಯಕ್ತಿತ್ವವನ್ನು ತಿಳಿದುಕೊಳ್ಳಬಹುದು. ನಮ್ಮ ಬಗ್ಗೆ ನಿಮಗೆ ತಿಳಿದಿರುವ ವಿಚಾರಗಳನ್ನೂ ಇವು ತಿಳಿಸುತ್ತವೆ. ಇಲ್ಲಿ ನೀಡಿರುವ ನಾಲ್ಕು ಸೂರ್ಯಾಸ್ತದ ಫೋಟೊಗಳಲ್ಲಿ ನಿಮಗೆ ಯಾವುದು ಇಷ್ಟ ಹೇಳಿ.

Personality Test: ಹುಬ್ಬು ದಪ್ಪವಾಗಿದ್ಯಾ, ನೇರವಾಗಿದ್ಯಾ? ಹುಬ್ಬಿನ ಆಕಾರದಿಂದ ನಿಮ್ಮ ವ್ಯಕ್ತಿತ್ವ, ಅದೃಷ್ಟ ಹೇಗಿದೆ ತಿಳಿಯಿರಿ

ನಮ್ಮ ದೇಹದ ಅಂಗಾಂಗಗಳು ನಮ್ಮ ಕ್ರಿಯೆಗಳಿಗೆ ನೆರವಾಗುವುದು ಮಾತ್ರವಲ್ಲ, ವ್ಯಕ್ತಿತ್ವವನ್ನು ತಿಳಿಸುತ್ತವೆ. ಕಣ್ಣು, ಕಿವಿ, ಕಾಲು, ಕೈ ಹೀಗೆ ಪ್ರತಿ ಅಂಗವು ನಮ್ಮಲ್ಲಿ ಅಡಗಿರುವ ರಹಸ್ಯ ವ್ಯಕ್ತಿತ್ವ ಹಾಗೂ ಸ್ವಭಾವವನ್ನು ಹೊರ ತರುತ್ತವೆ. ಇಂದಿನ ಪಸರ್ನಾಲಿಟಿ ಟೆಸ್ಟ್‌ನಲ್ಲಿ ಹುಬ್ಬಿನ ಆಕಾರ ಹೇಗಿದ್ದರೆ ಅದೃಷ್ಟ, ಹೇಗಿದರೆ ದುರಾದೃಷ್ಟ ಎಂಬುದನ್ನು ತಿಳಿಯೋಣ.

 

ವಿಭಾಗ