Personality Test: ಹೇರ್‌ಸ್ಟೈಲ್‌ನಿಂದ ತಿಳಿಯಬಹುದು ವ್ಯಕ್ತಿತ್ವ; ಕೂದಲ ವಿನ್ಯಾಸಕ್ಕೆ ಅನುಗುಣವಾಗಿ ಸ್ವಭಾವ ಹೇಗಿರುತ್ತೆ ನೋಡಿ
ಕನ್ನಡ ಸುದ್ದಿ  /  ಜೀವನಶೈಲಿ  /  Personality Test: ಹೇರ್‌ಸ್ಟೈಲ್‌ನಿಂದ ತಿಳಿಯಬಹುದು ವ್ಯಕ್ತಿತ್ವ; ಕೂದಲ ವಿನ್ಯಾಸಕ್ಕೆ ಅನುಗುಣವಾಗಿ ಸ್ವಭಾವ ಹೇಗಿರುತ್ತೆ ನೋಡಿ

Personality Test: ಹೇರ್‌ಸ್ಟೈಲ್‌ನಿಂದ ತಿಳಿಯಬಹುದು ವ್ಯಕ್ತಿತ್ವ; ಕೂದಲ ವಿನ್ಯಾಸಕ್ಕೆ ಅನುಗುಣವಾಗಿ ಸ್ವಭಾವ ಹೇಗಿರುತ್ತೆ ನೋಡಿ

ನಮ್ಮ ಮುಖದ ಅಂದ ಹೆಚ್ಚುವಲ್ಲಿ ಕೂದಲಿನ ಪಾತ್ರವೂ ಮಹತ್ವದ್ದು. ನಮ್ಮನ್ನು ನೋಡಿದಾಗ ಜನರು ನಮ್ಮಲ್ಲಿ ಗುರುತಿಸುವ ಕೆಲವು ಪ್ರಮುಖ ಅಂಶಗಳಲ್ಲಿ ಕೂದಲು ಕೂಡ ಒಂದು. ಕೂದಲಿನ ಮೂಲಕ ನಮ್ಮ ವ್ಯಕ್ತಿತ್ವ ಹೇಗೆ ಎಂದು ತಿಳಿಯಬಹುದು ಅಂದ್ರೆ ನಂಬ್ತೀರಾ. ನಿಮ್ಮ ಕೂದಲಿನ ವಿನ್ಯಾಸದ ಪ್ರಕಾರ ನಿಮ್ಮ ಸ್ವಭಾವ ಎಂಥದ್ದು ಎಂಬುದನ್ನು ತಿಳಿಯಬಹುದು.

ಕೂದಲ ವಿನ್ಯಾಸದ ಮೂಲಕ ವ್ಯಕ್ತಿತ್ವ ತಿಳಿಯಿರಿ
ಕೂದಲ ವಿನ್ಯಾಸದ ಮೂಲಕ ವ್ಯಕ್ತಿತ್ವ ತಿಳಿಯಿರಿ (PC: Canva)

ವ್ಯಕ್ತಿತ್ವ ಪರೀಕ್ಷೆ ಅಥವಾ ಪರ್ಸನಾಲಿಟಿ ಟೆಸ್ಟ್ ಟ್ರೆಂಡ್ ಈಗ ಜೋರಾಗಿದೆ. ಚಿತ್ರಗಳಲ್ಲಿ ಮೊದಲು ಕಂಡಿದ್ದೇನು ಎಂಬುದನ್ನು ಗುರುತಿಸುವ ಮೂಲಕವೂ ನಾವು ಹೇಗೆ ಎಂಬುದನ್ನು ನಮಗೆ ನಾವೇ ತಿಳಿದುಕೊಳ್ಳಬಹುದು. ಇದರ ಜೊತೆ ನಮ್ಮ ದೇಹದ ಅಂಗಾಂಗಗಳು, ನಾವು ಬದುಕುವ ರೀತಿ ಕೂಡ ನಮ್ಮ ವ್ಯಕ್ತಿತ್ವವನ್ನು ಬಿಚ್ಚಿಡುತ್ತವೆ. ನಾವು ಬಟ್ಟೆ ಜೋಡಿಸುವ ರೀತಿ, ನಾವು ನಡೆದಾಡುವ ರೀತಿ, ನಮ್ಮ ಕಣ್ಣು, ಕಿವಿಯ ಆಕಾರ, ಮೂಗಿನ ಗಾತ್ರ ಈ ಎಲ್ಲದರ ಮೂಲಕವೂ ನಮ್ಮ ವ್ಯಕ್ತಿತ್ವ, ಸ್ವಭಾವ ಗುಣ ತಿಳಿಯಬಹುದು. ನಮ್ಮ ಬಗ್ಗೆ ನಮಗೆ ತಿಳಿದಿರದ ಹಲವು ಅಂಶಗಳನ್ನು ವ್ಯಕ್ತಿತ್ವ ಪರೀಕ್ಷೆಯ ಮೂಲಕ ತಿಳಿದುಕೊಳ್ಳಬಹುದು.

ಇಂದಿನ ಪರ್ಸನಾಲಿಟಿ ಟೆಸ್ಟ್ ‌ಕೂದಲಿನ ವಿನ್ಯಾಸಕ್ಕೆ ಸಂಬಂಧಿಸಿದ್ದು. ಒಬ್ಬೊಬ್ಬರು ಒಂದೊಂದು ರೀತಿ ಕೂದಲಿನ ವಿನ್ಯಾಸ ಮಾಡಲು ಇಷ್ಟಪಡುತ್ತಾರೆ. ಕೆಲವರಿಗೆ ಬಾಬ್‌ ಕಟ್ ಇಷ್ಟವಾದರೆ ಇನ್ನೂ ಕೆಲವರಿಗೆ ಉದ್ದ ಕೂದಲು ಇಷ್ಟವಾಗುತ್ತದೆ. ಕೆಲವರಿಗೆ ಬನ್‌ ಹೇರ್‌ಸ್ಟೈಲ್ ಇಷ್ಟವಾದರೆ ಇನ್ನೂ ಕೆಲವರಿಗೆ ಪೋನಿಟೇಲ್ ಹಾಕುವುದು ಇಷ್ಟವಾಗುತ್ತದೆ. ಈ ಕೇಶವಿನ್ಯಾಸದ ಪ್ರಕಾರ ನೀವು ಅಂತರ್ಮುಖಿ ವ್ಯಕ್ತಿತ್ವದವರಾ ಇಲ್ಲ ಬಹುರ್ಮುಖಿ ವ್ಯಕ್ತಿತ್ವದವರಾ ಎಂಬುದನ್ನು ಕಂಡುಕೊಳ್ಳೋಣ.

ನೆತ್ತಿಯ ಮಧ್ಯದಲ್ಲಿ ಬೈತಲೆ ತೆಗೆಯುವವರು

ಕೂದಲು ಮಧ್ಯದಲ್ಲಿ ವಿಭಾಗಿಸಿ ಬೈತಲೆ ತೆಗೆಯುವವರು ಶಾಂತವಾಗಿರುತ್ತಾರೆ ಹಾಗೂ ಅವರು ಎಲ್ಲರು ಜೊತೆ ಸುಲಭವಾಗಿ ಬೆರೆಯುವುದಿಲ್ಲ. ಇವರದ್ದು ಒಂದು ರೀತಿಯ ಬಹಿರ್ಮುಖಿ ವ್ಯಕ್ತಿತ್ವ. ನಮ್ಮ ಚೌಕಟ್ಟಿನ ಜನರ ಜೊತೆ ಮಾತ್ರ ಬೆರೆಯುವುದು ಅವರಿಗೆ ಇಷ್ಟವಾಗುತ್ತದೆ. ಅವರ ಪಾಡಿಗೆ ಅವರು ಇರುವುದು ಇಷ್ಟವಾಗುತ್ತದೆ. ಆದರೆ ಇವರು ಹೊಸ ಸ್ಥಳಗಳಿಗೆ ಬೇಗ ಹೊಂದಿಕೊಳ್ಳುತ್ತಾರೆ.

ಕೂದಲನ್ನು ಬಲಭಾಗಕ್ಕೆ ಬಾಚುವವರು

ಕೂದಲನ್ನು ಕೆಲವರು ಬಡಭಾಗಕ್ಕೆ ಬಾಚುತ್ತಾರೆ. ನೀವು ಹಾಗೆ ಮಾಡುವವರಾಗಿದ್ದರೆ ನಿಮ್ಮದು ಭಾವನಾತ್ಮಕ, ಸೃಜನಶೀಲ ಮತ್ತು ಹಠಾತ್ ಪ್ರವೃತ್ತಿ ಎಂದು ಗ್ರಹಿಸಬಹುದು. ಇವರು ಹೆಚ್ಚು ಭಾವನಾತ್ಮಕ ಹಾಗೂ ಸೂಕ್ಷ್ಮ ಮನಸ್ಥಿತಿಯವರು. ಸಹಾನುಭೂತಿ ಗುಣದ ಇವರನ್ನು ಎಲ್ಲರೂ ಇಷ್ಟಪಡುತ್ತಾರೆ. ಇವರು ಒಳ್ಳೆಯ ಜನರೊಂದಿಗೆ ಮಾತ್ರ ಬೆರೆಯಲು ಇಷ್ಟಪಡುತ್ತಾರೆ.

ಕೂದಲು ಎಡಕ್ಕೆ ಬಾಚುವವರು

ಕೂದಲನ್ನು ಬಲಭಾಗದಿಂದ ಎಡ ಭಾಗಕ್ಕೆ ಬಾಚುವವರು ಪುರುಷ ಸ್ವಭಾವಿಗಳು. ಇವರು ಮುಕ್ತ ಸ್ವಭಾವ ಹೊಂದಿರುತ್ತಾರೆ. ಎಲ್ಲದರಲ್ಲೂ ಮುಂಚೂಣಿಯಲ್ಲಿರುವ ಇವರಲ್ಲಿ ಆತ್ಮವಿಶ್ವಾಸ ಹೆಚ್ಚಿರುತ್ತದೆ. ಸ್ಮಾರ್ಟ್ ಮನೋಭಾವ ಇವರದ್ದಾಗಿರುತ್ತದೆ. ಯಾವುದೇ ವಿಚಾರವನ್ನು ಸುತ್ತಿ ಬಳಸಿ ಮಾತನಾಡುವುದಿಲ್ಲ. ನೇರವಾಗಿ ಅನ್ನಿಸಿದ್ದನ್ನು ಹೇಳಿ ಬಿಡುವ ವ್ಯಕ್ತಿತ್ವ ಇವರದ್ದು. ಇವರು ವಿಷಯಗಳನ್ನು ಭಾವನಾತ್ಮಕವಾಗಿ ತೆಗೆದುಕೊಳ್ಳುವ ಬದಲು ವಿಶ್ಲೇಷಣಾತ್ಮಕವಾಗಿ ತೆಗೆದುಕೊಳ್ಳುತ್ತಾರೆ.

ಎತ್ತರಕ್ಕೆ ಪೋನಿಟೇಲ್ ಹಾಕುವವರು

ಕೂದಲನ್ನು ಬಾಜಿ ನೆತ್ತಿಯ ಹಿಂದೆ ಮೇಲ್ಭಾಗದಲ್ಲಿ ಜುಟ್ಟು ಹಾಕುವವರು ತಾರ್ಕಿಕ ಮನೋಭಾವದವರು. ಇವರು ತಮ್ಮ ಮೇಲೆ ವಿಶ್ವಾಸ ಇರಿಸಿಕೊಂಡಿರುತ್ತಾರೆ. ಇವರು ತಮ್ಮ ಸುತ್ತಲೂ ನಮ್ಮ ಕಾಯುವವರನ್ನು ಹೊಂದಿರುತ್ತಾರೆ. ಇದು ಭಾವನಾತ್ಮಕ ಜೀವಿಗಳು ಆದರೆ ಸೂಕ್ಷ್ಮಮನಸ್ಸಿನವರಲ್ಲ. ಬೇರೆಯವರ ಅಗತ್ಯಗಳಿಗೆ ಹೆಚ್ಚು ಕಿವಿಯಾಗುವ ಇವರು ಅವರ ಅಗತ್ಯಕ್ಕಿಂತ ತಮ್ಮ ಅಗತ್ಯಗಳಿಗಿಂತ ಹೆಚ್ಚು ಪರಿಗಣಿಸುತ್ತಾರೆ.

ಜಡೆ ಹಾಕುವವರು

ನೀವು ಜಡೆ ಹಾಕುವವರಾದರೆ ನೀವು ತುಂಬಾ ಬುದ್ಧಿವಂತರು. ನೀವು ಬೇರೆಯವರನ್ನು ಮೆಚ್ಚಿಸುವ ಪ್ರಯತ್ನ ಮಾಡುವುದಿಲ್ಲ. ಇವರು ಯಾವಾಗಲೂ ಖುಷಿಯಿಂದ ಇರುತ್ತಾರೆ. ಸುತ್ತಲಿನ ಸಂದರ್ಭಗಳು ಮತ್ತು ವಸ್ತುಗಳ ಬಗ್ಗೆ ತುಂಬಾ ಶಾಂತ ಮತ್ತು ಸಂಯೋಜಿತ ಮನೋಭಾವವನ್ನು ಹೊಂದಿರುತ್ತಾರೆ.

ಕೂದಲು ನೇರವಾಗಿ ಹರಡಿಕೊಂಡಿರುವುದು

ನೀವು ಕೂದಲನ್ನು ನೇರವಾಗಿ ಹರಡಿಕೊಂಡಿರುವವರಾದರೆ ನಿಮ್ಮಲ್ಲಿ ಬಾಸಿಸಂ ಮೆಂಟಾಲಿಟಿ ಇರುತ್ತದೆ. ಇವರು ಯಾವಾಗಲೂ ಸಮಚಿತ್ತದಿಂದ ಇರಲು ಬಯಸುತ್ತಾರೆ. ಇವರು ತಮ್ಮ ನಡೆ ಹಾಗೂ ಕೆಲಸ ಮೂಲಕ ತಾವೇನು ಎಂದು ಸಾಬೀತು ಪಡಿಸಲು ಯೋಚಿಸುತ್ತಾರೆ. ಪ್ರಪಂಚವು ಕೂಡ ಹಾಗೆ ಇರಬೇಕು ಎಂದು ಇವರು ಬಯಸುತ್ತಾರೆ.

ಬಾಟಮ್ ಲೈನ್ ಹೇರ್‌ಸ್ಟೈಲ್

ನೀವು ಬಾಟಮ್ ಲೈನ್ ಹೇರ್‌ಸ್ಟೈಲ್ ಇಷ್ಟಪಡುವವರಾದರೆ ನಿಮ್ಮದು ಸ್ವಾಭಾವಿಕ ಮನೋಭಾವ ಎಂಬುದನ್ನು ಇದು ಸೂಚಿಸುತ್ತದೆ. ನಿಮ್ಮದು ನೇರ ವ್ಯಕ್ತಿತ್ವ. ಆದರೂ ನೀವು ಹಾಸ್ಯ ಮನೋಭಾವದವರು. ಎಲ್ಲರನ್ನೂ ಪ್ರೀತಿಸುವ ಸ್ವಭಾವ ನಿಮ್ಮದು. ನೀವು ನಡೆಯುವ, ಮಾತನಾಡುವ, ಚಲಿಸುವ, ಡ್ರೆಸ್ ಮಾಡಿಕೊಳ್ಳುವ ರೀತಿ ಎಲ್ಲವೂ ಭಿನ್ನವಾಗಿರುತ್ತದೆ.

ನೋಡಿದ್ರಲ್ಲ ಯಾವ ಹೇರ್‌ಸ್ಟೈಲ್ ಇದ್ದರೆ ಯಾವ ರೀತಿ ವ್ಯಕ್ತಿತ್ವ ಎಂದು. ನೀವು ಈಗ ನಿಮ್ಮ ಹೇರ್‌ಸ್ಟೈಲ್ ಹೇಗಿದೆ ಗಮನಿಸಿ ನಿಮ್ಮ ವ್ಯಕ್ತಿತ್ವ ಹೇಗೆ ತಿಳಿಯಿರಿ. ನಿಮ್ಮ ಆತ್ಮೀಯರ ವ್ಯಕ್ತಿತ್ವವನ್ನೂ ಈ ಮೂಲಕ ತಿಳಿಯಬಹುದು.

(ಗಮನಿಸಿ: ಇದು ಸಾಮಾನ್ಯ ಮಾಹಿತಿ ಹಾಗೂ ಅಂತರ್ಜಾಲದಿಂದ ಸಂಗ್ರಹಿಸಿದ ವಿವರಗಳನ್ನು ಆಧರಿಸಿದ ಬರಹ. ಈ ವಿಚಾರಗಳನ್ನು ಹಿಂದೂಸ್ತಾನ್ ಟೈನ್ಸ್ ಪುಷ್ಟೀಕರಿಸುವುದಿಲ್ಲ. ಈ ಕುರಿತ ನಿಖರ ಮಾಹಿತಿಗಾಗಿ ಸಂಬಂಧಿಸಿದ ಕ್ಷೇತ್ರದ ತಜ್ಞರನ್ನು ಸಂರ್ಪಕಿಸಿ)

Whats_app_banner