Personality Test: ಬಣ್ಣದಿಂದ ತಿಳಿಯಬಹುದು ನಿಮ್ಮ ವ್ಯಕ್ತಿತ್ವ, ಚಿತ್ರದಲ್ಲಿ ನಿಮಗೆ ಯಾವ ಬಣ್ಣ ಕಾಣಿಸಿತು ಹೇಳಿ
ಕನ್ನಡ ಸುದ್ದಿ  /  ಜೀವನಶೈಲಿ  /  Personality Test: ಬಣ್ಣದಿಂದ ತಿಳಿಯಬಹುದು ನಿಮ್ಮ ವ್ಯಕ್ತಿತ್ವ, ಚಿತ್ರದಲ್ಲಿ ನಿಮಗೆ ಯಾವ ಬಣ್ಣ ಕಾಣಿಸಿತು ಹೇಳಿ

Personality Test: ಬಣ್ಣದಿಂದ ತಿಳಿಯಬಹುದು ನಿಮ್ಮ ವ್ಯಕ್ತಿತ್ವ, ಚಿತ್ರದಲ್ಲಿ ನಿಮಗೆ ಯಾವ ಬಣ್ಣ ಕಾಣಿಸಿತು ಹೇಳಿ

ಇಲ್ಲೊಂದು ಆಪ್ಟಿಕಲ್ ಇಲ್ಯೂಷನ್ ಚಿತ್ರವಿದೆ. ಈ ಚಿತ್ರದಲ್ಲಿ ಒಂದು ವೃತ್ತವಿದ್ದು, ಇದನ್ನು ನೋಡಿದಾಗ ಕಣ್ಣಿಗೆ ಯಾವುದೋ ಒಂದು ಬಣ್ಣ ಕಾಣಿಸುತ್ತದೆ. ಆದರೆ ಇದರಲ್ಲಿ ಒಬ್ಬೊಬ್ಬರಿಗೆ ಒಂದೊಂದು ಬಣ್ಣ ಕಾಣುತ್ತದೆ. ನಿಮಗೆ ಕಂಡ ಬಣ್ಣ ನಿಮ್ಮ ವ್ಯಕ್ತಿತ್ವವನ್ನು ಸೂಚಿಸುತ್ತದೆ. ಹಾಗಾದರೆ ಯಾವ ಬಣ್ಣ ಕಂಡರೆ ಏನರ್ಥ ಎಂಬುದನ್ನು ತಿಳಿಯೋಣ.

ಪರ್ಸನಾಲಿಟಿ ಟೆಸ್ಟ್
ಪರ್ಸನಾಲಿಟಿ ಟೆಸ್ಟ್

ಪ್ರತಿಯೊಬ್ಬ ವ್ಯಕ್ತಿಯ ವ್ಯಕ್ತಿತ್ವವು ಭಿನ್ನವಾಗಿರುತ್ತದೆ. ಅದಕ್ಕೆ ತಕ್ಕಂತೆ ಅವನ ನೋಟವು ಇರುತ್ತದೆ. ಪ್ರತಿ ವ್ಯಕ್ತಿಯಲ್ಲೂ ವಿಶಿಷ್ಟವಾದ ಪ್ರತಿಭೆಯೂ ಇರುತ್ತದೆ. ವ್ಯಕ್ತಿಯ ವ್ಯಕ್ತಿತ್ವ ಅಥವಾ ಅವನ ಗುಣಲಕ್ಷಣ ತಿಳಿಯಲು ಕೆಲವೊಂದು ವಿಧಾನಗಳಿವೆ. ಅವುಗಳಲ್ಲಿ ಪರ್ಸನಾಲಿಟಿ ಟೆಸ್ಟ್ ಕೂಡ ಒಂದು.

ಇಂದಿನ ಆಪ್ಟಿಕಲ್ ಇಲ್ಯೂಷನ್ ಪರ್ಸನಾಲಿಟಿ ಟೆಸ್ಟ್‌ನಲ್ಲಿ ಬ್ಲ್ಯಾಕ್ ಅಂಡ್ ವೈಟ್ ವೃತ್ತವಿದೆ. ಈ ಚಿತ್ರವನ್ನು ಗಮನವಿಟ್ಟು ನೋಡಿದಾಗ ಮಧ್ಯದಲ್ಲಿ ಬಣ್ಣ ಕಾಣಿಸುತ್ತದೆ. ನಿಮಗೆ ಇದರಲ್ಲಿ ನೀಲಿ, ಕೆಂಪು, ಹಳದಿ ಬಣ್ಣಗಳು ಕಾಣಿಸಬಹುದು. ಹಾಗಾದರೆ ಯಾವ ಬಣ್ಣ ಕಾಣಿಸಿದರೆ ವ್ಯಕ್ತಿತ್ವ ಹೇಗೆ ನೋಡಿ.

ನೀಲಿ ಬಣ್ಣ 

ನೀವು ಚಿತ್ರದಲ್ಲಿ ನೀಲಿ ಬಣ್ಣವನ್ನು ಗುರುತಿಸಿದರೆ ನೀವು ಗ್ರಹಿಕೆಯ ಪ್ರತಿಭೆ. ನೀವು ಮೊಲದಂತೆ ನಿಧಾನವಾಗಿ ಸ್ಥಿರವಾದ ಓಟದಿಂದ ಗೆಲುವು ಸಾಧಿಸಬಹುದು ಎಂದುಕೊಳ್ಳುವವರು. ನಿಮ್ಮ ಮಾನಸಿಕ ಸ್ಪಷ್ಟತೆ ಮತ್ತು ಸಂಕೀರ್ಣ ನಿರ್ಧಾರಗಳನ್ನು ಪ್ರಕ್ರಿಯೆಗೊಳಿಸುವ ಸಾಮರ್ಥ್ಯವು ನಿಮ್ಮನ್ನು ನಾಯಕ ಸ್ಥಾನದಲ್ಲಿ ನಿಲ್ಲಿಸುತ್ತದೆ. ನೀವು ಪ್ರಮಾಣಿಕತೆ ಮತ್ತು ಸ್ವಷ್ಟ ಸಂವಹನಕ್ಕೆ ಹೆಸರುವಾಸಿಯಾದ ವ್ಯಕ್ತಿ.

ಕೆಂಪು ಬಣ್ಣ

ಚಿತ್ರದಲ್ಲಿ ನಿಮಗೆ ಕೆಂಪುಬಣ್ಣ ಕಂಡರೆ ನೀವು ಲಾಜಿಕಲ್ ಥಿಕಿಂಗ್ ಎಕ್ಸ್‌ಪರ್ಟ್‌. ಸಮಸ್ಯೆ ಪರಿಹರಿಸುವ ಗುಣ ನಿಮ್ಮಲ್ಲಿ ಹೆಚ್ಚಿರುತ್ತದೆ. ನಿಮ್ಮ ಮೆದುಳು 150 ರಿಂದ 180 Hz ಆವರ್ತನ ಶ್ರೇಣಿಯಲ್ಲಿ ಕಾರ್ಯನಿರ್ವಹಿಸುತ್ತದೆ. ನಿಮ್ಮ ತೀಕ್ಷ್ಣವಾದ ಅಂತಃಪ್ರಜ್ಞೆ ಮತ್ತು ಸರಾಸರಿಗಿಂತ ಹೆಚ್ಚಿನ ಬುದ್ಧಿವಂತಿಕೆಯನ್ನು ಎತ್ತಿ ತೋರಿಸುತ್ತದೆ. ನೈಸರ್ಗಿಕ ನಾಯಕರಾಗಿ, ಸವಾಲುಗಳನ್ನು ಸುಲಭವಾಗಿ ನಿಭಾಯಿಸುವ ನಿಮ್ಮ ಸಾಮರ್ಥ್ಯಕ್ಕಾಗಿ ಜನರು ನಿಮ್ಮ ಕಡೆಗೆ ಆಕರ್ಷಿತರಾಗುತ್ತಾರೆ.

ಹಸಿರು ಬಣ್ಣ

ಹಸಿರು ಬಣ್ಣವು ನೀವು ಸದಾ ಹೊಳೆಯುವ ಪ್ರತಿಭೆ ಎಂಬುದನ್ನು ಸೂಚಿಸುತ್ತದೆ. ನೀವು ಕುತೂಹಲಿಗಳು, ನಿಮ್ಮಲ್ಲಿ ಹೆಚ್ಚಿನ ಉತ್ಸಾಹ ಇರುತ್ತದೆ. ಹೊಸ ಅನುಭವಗಳಿಗೆ ತೆರೆದುಕೊಳ್ಳುವುದು ನಿಮಗೆ ಇಷ್ಟವಾಗುತ್ತದೆ. ನಿಮ್ಮ ಸಾಮರ್ಥ್ಯವು ನಿಮ್ಮ ಸ್ನೇಹಿತರಲ್ಲಿ ನಿಮ್ಮನ್ನು ಪ್ರೀತಿಯ ಸಲಹೆಗಾರರನ್ನಾಗಿ ಮಾಡುತ್ತದೆ.

ಹಳದಿ ಬಣ್ಣ

ಹಳದಿ ಬಣ್ಣ ಚಿತ್ರದಲ್ಲಿ ಕಂಡರೆ ನೀವು ಅಸಾಧಾರಣ ಸೃಜನಶೀಲರು. 120 ರಿಂದ 150 Hz ವರೆಗಿನ ಬ್ರೈನ್‌ವೇವ್ ಆವರ್ತನಗಳಲ್ಲಿ ಕಾರ್ಯನಿರ್ವಹಿಸುವ, ನೀವು ಮಾಸ್ಟರ್ ಚೆಸ್ ಆಟಗಾರನಂತೆಯೇ ತಾರ್ಕಿಕ ಮನಸ್ಥಿತಿಯೊಂದಿಗೆ ಸವಾಲುಗಳನ್ನು ಎದುರಿಸುತ್ತೀರಿ. ನೀವು ಕಲಾತ್ಮಕ ಹಾಗೂ ನವೀನ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಿರುತ್ತೀರಿ. ಹೊಸ ಅನುಭವಗಳಿಗಾಗಿ ನಿಮ್ಮ ಪ್ರೀತಿ ಮತ್ತು ವಿವರಗಳನ್ನು ಗುರುತಿಸುವ ಕೌಶಲ್ಯವು ಅನ್ವೇಷಣೆಯಲ್ಲಿ ನಿಮ್ಮನ್ನು ಎದ್ದುಕಾಣುವಂತೆ ಮಾಡುತ್ತದೆ.

(ಗಮನಿಸಿ: ಈ ಲೇಖನವು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ದೊರೆತ ಮಾಹಿತಿಯನ್ನು ಆಧರಿಸಿದ ಬರಹ. ಈ ಅಂಶಗಳನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ (ಎಚ್‌ಟಿ ಕನ್ನಡ) ಪುಷ್ಟೀಕರಿಸುವುದಿಲ್ಲ. ಈ ಕುರಿತ ಹೆಚ್ಚಿನ ಮಾಹಿತಿಗೆ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)

Whats_app_banner