ಕನ್ನಡ ಸುದ್ದಿ  /  ಜೀವನಶೈಲಿ  /  Personality Test: ನೀವು ಸಂತೋಷವಾಗಿದ್ದೀರಾ, ದುಃಖದಲ್ಲಿದ್ದೀರಾ, ಮನಸ್ಸನ್ನು ಓದುವ ಚಿತ್ರವಿದು; ನಿಮ್ಮ ಕಣ್ಣಿಗೆ ಮೊದಲು ಕಂಡಿದ್ದೇನು ಹೇಳಿ

Personality Test: ನೀವು ಸಂತೋಷವಾಗಿದ್ದೀರಾ, ದುಃಖದಲ್ಲಿದ್ದೀರಾ, ಮನಸ್ಸನ್ನು ಓದುವ ಚಿತ್ರವಿದು; ನಿಮ್ಮ ಕಣ್ಣಿಗೆ ಮೊದಲು ಕಂಡಿದ್ದೇನು ಹೇಳಿ

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ನಮ್ಮ ವ್ಯಕ್ತಿತ್ವ ಹೇಗೆ ಎಂದು ತಿಳಿಸುವುದು ಮಾತ್ರವಲ್ಲ, ನಮ್ಮ ಮನಸ್ಸನ್ನು ಓದುತ್ತವೆ. ಇಂದಿನ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದಲ್ಲಿ ಮೊದಲು ನಿಮ್ಮ ಕಣ್ಣಿಗೆ ಏನು ಕಾಣಿಸುತ್ತದೆ ಅದು ನೀವು ಸಂತೋಷವಾಗಿದ್ದೀರಾ, ದುಃಖದಲ್ಲಿದ್ದೀರಾ ಎಂಬುದನ್ನು ತಿಳಿಸುತ್ತದೆ.

ನೀವು ಸಂತೋಷವಾಗಿದ್ದೀರಾ, ದುಃಖದಲ್ಲಿದ್ದೀರಾ, ಮನಸ್ಸನ್ನು ಓದುವ ಚಿತ್ರವಿದು
ನೀವು ಸಂತೋಷವಾಗಿದ್ದೀರಾ, ದುಃಖದಲ್ಲಿದ್ದೀರಾ, ಮನಸ್ಸನ್ನು ಓದುವ ಚಿತ್ರವಿದು

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ನಮ್ಮ ಕಣ್ಣಿಗೆ ವಿಸ್ಮಯ ಎನ್ನಿಸುತ್ತವೆ. ಒಂದು ಬಾರಿ ಕಂಡಾಗ ಕಾಣಿಸಿದ್ದು, ಇನ್ನೊಮ್ಮೆ ಸರಿಯಾಗಿ ಕಾಣಿಸಿದಾಗ ಎರಡು ಅಂಶಗಳು ಗೋಚರವಾಗುತ್ತವೆ. ಇದೊಂಥರಾ ಫನ್ನಿ ಗೇಮಿಂಗ್‌ ಚಿತ್ರವೂ ಹೌದು. ಆ ಕಾರಣಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಇದು ಹೆಚ್ಚು ವೈರಲ್‌ ಆಗುತ್ತದೆ. ನಿಮ್ಮ ವ್ಯಕ್ತಿತ್ವದ ವಿವಿಧ ಅಂಶಗಳನ್ನು ಬಹಿರಂಗಪಡಿಸುವ ಇಂತಹ ಮನಸ್ಸಿಗೆ ಮುದ ನೀಡುವ ಮತ್ತು ಆಸಕ್ತಿದಾಯಕ ಆಪ್ಟಿಕಲ್ ಇಲ್ಯೂಷನ್ ಪರೀಕ್ಷೆಗಳಿಂದ ಇಂಟರ್ನೆಟ್ ತುಂಬಿದೆ. ಈ ಚಿತ್ರಗಳು ನಿಮ್ಮ ಮೆದುಳಿಗೆ ಉತ್ತಮ ವ್ಯಾಯಾಮ ಮಾತ್ರವಲ್ಲ, ನಾವು ಚಿತ್ರವನ್ನು ಹೇಗೆ ಅರ್ಥೈಸುತ್ತೇವೆ ಎಂಬುದರ ಆಧಾರದ ಮೇಲೆ ನಮ್ಮ ವ್ಯಕ್ತಿತ್ವದ ಒಳನೋಟಗಳನ್ನು ಸಹ ನೀಡುತ್ತವೆ. ಈ ಆಪ್ಟಿಕಲ್‌ ಇಲ್ಯೂಷನ್‌ಗೆ ಉತ್ತರ ಹೇಳುವ ಮೂಲಕ ನಮ್ಮ ಐಕ್ಯೂ ಅನ್ನು ಸುಧಾರಿಸಬಹುದು ಮತ್ತು ಮೆದುಳು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಪರೀಕ್ಷಿಸಬಹುದು. ಇಂದಿನ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದಿಂದ ನಾವು ಸಂತೋಷವಾಗಿದ್ದೇವೆಯೇ ಅಥವಾ ದುಃಖದಲ್ಲಿದ್ದೀರಾ ಎಂಬುದನ್ನು ತಿಳಿಯಬಹುದು. ಈ ಚಿತ್ರದಲ್ಲಿ ಸೇಬುಹಣ್ಣು, ಎರಡು ಮುಖ ಇದೆ. ಇದರಲ್ಲಿ ಮೊದಲು ನಿಮ್ಮ ಕಣ್ಣಿಗೆ ಕಂಡಿದ್ದೇನು ಹೇಳಿ.

ಸೇಬುಹಣ್ಣು ಮೊದಲು ಕಂಡರೆ

ಚಿತ್ರದಲ್ಲಿ ನೀವು ಸೇಬುಹಣ್ಣನ್ನು ಮೊದಲು ಕಂಡರೆ ನಿಮಗೆ ಒಳ್ಳೆಯ ಸುದ್ದಿ ಸಿಗಲಿದೆ ಎಂದು ಅರ್ಥ. ಇದರರ್ಥ ನೀವು ಯಾವಾಗಲೂ ಸಂತೋಷವಾಗಿರಲು ಇಷ್ಟಪಡುತ್ತೀರಿ ಮತ್ತು ಜೀವನದಲ್ಲಿ ತೃಪ್ತರಾಗಿದ್ದೀರಿ ಎಂದರ್ಥ. ನೀವು ಎಲ್ಲಾ ವಿಷಯಗಳನ್ನು ಹಾಗೆಯೇ ಸ್ವೀಕರಿಸುತ್ತೀರಿ.

ಟ್ರೆಂಡಿಂಗ್​ ಸುದ್ದಿ

ಜೀವನದಲ್ಲಿ ನಿಮ್ಮೊಂದಿಗೆ ಏನಿದೆ ಅದರೊಂದಿಗೆ ನೀವು ಸಂತೋಷವಾಗಿರುತ್ತೀರಿ. ಇರುವುದರಲ್ಲೇ ತೃಪ್ತಿ ಪಡುವ ಮನೋಭಾವ ನಿಮ್ಮದು. ನೀವು ಯಾವಾಗಲೂ ನಿಮ್ಮ ಆಪ್ತರನ್ನು ಅವಲಂಬಿಸಿರುತ್ತೀರಿ. ನಿಮ್ಮ ಯಾವುದೇ ಕಷ್ಟ, ಸುಖದಲ್ಲೂ ನಿಮ್ಮ ಆತ್ಮೀಯರು ನಿಮ್ಮನ್ನು ಬೆಂಬಲಿಸುತ್ತಾರೆ. ಯಾವಾಗಲೂ ನಿಮ್ಮ ಮನಸ್ಥಿತಿ ಉತ್ತಮವಾಗಿರುತ್ತದೆ. ನೀವು ಇತರರಿಗೆ ಸಂತೋಷ ಹಂಚುತ್ತೀರಿ.

ಎರಡು ಮುಖ ನಿಮಗೆ ಕಾಣಿಸಿದರೆ

ಎರಡು ಪರಸ್ಪರ ಎದುರಾಗಿರುವ ಮುಖಗಳು ನಿಮ್ಮ ಕಣ್ಣಿಗೆ ಕಂಡರೆ ನೀವು ಜೀವನದಲ್ಲಿ ಸಂಬಂಧಗಳಿಗೆ ಆದ್ಯತೆ ನೀಡುತ್ತೀರಿ. ಆದರೂ ನೀವು ಕೆಲವೊಮ್ಮೆ ಅನಿಶ್ಚಿತ ಕ್ಷಣಗಳನ್ನು ಎದುರಿಸಬಹುದು. ಸಂಬಂಧಗಳೇ ನಿಮ್ಮ ಜೀವನದಲ್ಲಿ ಪ್ರಮುಖ ಆದ್ಯತೆಯಾಗಿರುತ್ತದೆ. ಆದರೆ ಆ ಸಂಬಂಧಗಳಿಂದಲೇ ನಿಮಗೆ ನೋವು ಉಂಟಾಗಬಹುದು. ಕೆಲವೊಮ್ಮೆ ನೀವು ಎಲ್ಲವನ್ನೂ ಮನಸ್ಸಿನಲ್ಲೇ ಇಟ್ಟುಕೊಂಡು ಕೊರಗುತ್ತೀರಿ, ಇದರಿಂದ ನಿಮಗೆ ಇನ್ನಷ್ಟು ನೋವಾಗುತ್ತದೆ. ಸಂಬಂಧಗಳಲ್ಲಿನ ಅನಿಶ್ಚಿತತೆಯು ನಿಮಗೆ ವಿಪರೀತ ನೋವು ನೀಡಬಹುದು. ಅದಕ್ಕಾಗಿ ನೀವು ಮಾಡಬೇಕಿರುವುದು ಚರ್ಚೆ ಮಾಡುವುದು. ನಿಮ್ಮ ಹೃದಯದಲ್ಲಿ ಎಲ್ಲವನ್ನೂ ಹಿಡಿದಿಟ್ಟುಕೊಳ್ಳಬಾರದು, ಅನ್ನಿಸಿದ್ದನ್ನು ಹೇಳಬೇಕು, ಮನಸ್ಸಿನ ಮಾತುಗಳನ್ನು ಬೇರೆಯವರ ಎದುರು ವ್ಯಕ್ತಪಡಿಸಬೇಕು. ಇದರಿಂದ ನಿಮ್ಮ ದುಃಖ ನಿವಾರಣೆಯಾಗುತ್ತದೆ.