ಕನ್ನಡ ಸುದ್ದಿ  /  ಜೀವನಶೈಲಿ  /  Personality Test: ನಿಮ್ಮ ಸ್ವಭಾವ ಹೇಗೆ, ವ್ಯಕ್ತಿತ್ವ ಎಂಥದ್ದು ತಿಳಿಸುತ್ತೆ ಕೈ ಬೆರಳುಗಳ ಗಾತ್ರ, ಅಂಗೈನ ಆಕಾರ; ಪರೀಕ್ಷಿಸಿ

Personality Test: ನಿಮ್ಮ ಸ್ವಭಾವ ಹೇಗೆ, ವ್ಯಕ್ತಿತ್ವ ಎಂಥದ್ದು ತಿಳಿಸುತ್ತೆ ಕೈ ಬೆರಳುಗಳ ಗಾತ್ರ, ಅಂಗೈನ ಆಕಾರ; ಪರೀಕ್ಷಿಸಿ

ಸಾಮಾನ್ಯವಾಗಿ ಜನರ ನಡವಳಿಕೆಯ ಮೇಲೆ ಅವರ ವ್ಯಕ್ತಿತ್ವವನ್ನು ಅಳೆಯಲಾಗುತ್ತದೆ. ಆದರೆ ನಮ್ಮ ದೇಹದ ಅಂಗಾಂಗಗಳು ವ್ಯಕ್ತಿತ್ವವನ್ನು ತಿಳಿಸುತ್ತವೆ. ಇಂದಿನ ಪರ್ಸನಾಲಿಟಿ ಟೆಸ್ಟ್‌ನಲ್ಲಿ ನಿಮ್ಮ ಅಂಗೈ ಹಾಗೂ ಕೈ ಬೆರಳುಗಳ ಗಾತ್ರ-ಆಕಾರದ ಮೇಲೆ ನಿಮ್ಮ ವ್ಯಕ್ತಿತ್ವ, ಗುಣ ಸ್ವಭಾವ ಹೇಗೆ ತಿಳಿಯಿರಿ.

ನಿಮ್ಮ ಸ್ವಭಾವ ಹೇಗೆ, ವ್ಯಕ್ತಿತ್ವ ಎಂಥದ್ದು ತಿಳಿಸುತ್ತೆ ಕೈ ಬೆರಳುಗಳ ಗಾತ್ರ, ಅಂಗೈನ ಆಕಾರ; ಪರೀಕ್ಷಿಸಿ
ನಿಮ್ಮ ಸ್ವಭಾವ ಹೇಗೆ, ವ್ಯಕ್ತಿತ್ವ ಎಂಥದ್ದು ತಿಳಿಸುತ್ತೆ ಕೈ ಬೆರಳುಗಳ ಗಾತ್ರ, ಅಂಗೈನ ಆಕಾರ; ಪರೀಕ್ಷಿಸಿ (Times of India)

ನಮ್ಮ ವ್ಯಕ್ತಿತ್ವದ ಬಗ್ಗೆ ನಾವೇ ತಿಳಿದುಕೊಳ್ಳುವುದು ಒಂಥರಾ ಮಜಾ ನೀಡುತ್ತದೆ. ನಮಗೆ ಅರಿವಿಲ್ಲದ ನಮ್ಮಲ್ಲಿ ರಹಸ್ಯವಾಗಿ ಅಡಗಿರುವ ಗುಣ ಸ್ವಭಾವ ಹಾಗೂ ವ್ಯಕ್ತಿತ್ವವನ್ನು ನಮ್ಮ ದೇಹದ ಅಂಗಾಂಗಗಳು ಮಾಡಿಕೊಡುತ್ತವೆ. ಕಣ್ಣಿನ ಬಣ್ಣ, ಮೂಗಿನ ಆಕಾರ, ಕಿವಿಯ ಗಾತ್ರ, ಹುಬ್ಬಿನ ಆಕಾರ, ಕಾಲ್ಬೆರಳುಗಳ ಗಾತ್ರ ಹೀಗೆ ದೇಹದ ಪ್ರತಿ ಅಂಗವೂ ನಮ್ಮಲ್ಲಿನ ರಹಸ್ಯ ವ್ಯಕ್ತಿತ್ವವನ್ನು ಹೊರಹಾಕುತ್ತದೆ. ಇಂದಿನ ಪರ್ಸನಾಲಿಟಿ ಟೆಸ್ಟ್‌ನಲ್ಲಿ ಅಂಗೈ ಹಾಗೂ ಕೈ ಬೆರಳುಗಳ ಗಾತ್ರದ ಮೇಲೆ ನಿಮ್ಮ ವ್ಯಕ್ತಿತ್ವ ಹೇಗೆ ಎಂಬುದನ್ನು ತಿಳಿಯಿರಿ. ಹಸ್ತಸಾಮುದ್ರಿಕ ಶಾಸ್ತ್ರ ಕುರಿತ ಒಂದು ಒಳನೋಟ ಇಲ್ಲಿದೆ.

ಟ್ರೆಂಡಿಂಗ್​ ಸುದ್ದಿ

ಚಿಕ್ಕ ಬೆರಳುಗಳ ಚೌಕವಾಗಿರುವ ಅಂಗೈ

ನೀವು ಚಿಕ್ಕ ಬೆರಳಗಳನ್ನು ಹೊಂದಿರುವ ಚೌಕಾಕಾರದ ಅಂಗೈ ಹೊಂದಿದ್ದರೆ ನೀವು ಬಲವಾದ ಇಚ್ಛಾಶಕ್ತಿ ಮತ್ತು ದೃಢನಿಶ್ಚಯ ಹೊಂದಿರುವವರು. ನೀವು ಯಾವುದೇ ಕೆಲಸವನ್ನು ಮಾಡಬೇಕು ಎಂದು ಮನಸ್ಸಿನಲ್ಲಿ ಅಂದುಕೊಂಡರೆ ಅದನ್ನು ಸಾಧಿಸುವವರೆಗೂ ಬಿಡುವುದಿಲ್ಲ. ನಾಯಕತ್ವ ಗುಣ ನಿಮ್ಮಲ್ಲಿ ಸ್ವಾಭಾವಿಕವಾಗಿ ಬಂದಿರುತ್ತದೆ. ನೀವು ನಿಷ್ಠೆಗೆ ಹೆಸರುವಾಸಿ. ಮಾನಸಿಕ ಶ್ರಮಕ್ಕಿಂತ ದೈಹಿಕ ಶ್ರಮಕ್ಕೆ ನೀವು ಹೆಚ್ಚು ಒತ್ತು ನೀಡುತ್ತೀರಿ.

ಚೌಕಾಕಾರದ ಅಂಗೈಯೊಂದಿಗೆ ಉದ್ದ ಬೆರಳು

ನೀವು ಉದ್ದ ಬೆರಳುಗಳನ್ನು ಹೊಂದಿದ್ದರೆ ನಿಮ್ಮ ವ್ಯಕ್ತಿತ್ವ ಸಂಪೂರ್ಣವಾಗಿ ಭಿನ್ನವಾಗಿರುತ್ತದೆ. ಆರಾಮದಾಯಕ ಜೀವನ ನಡೆಸುವುದು ನಿಮಗೆ ಇಷ್ಟವಾಗುತ್ತದೆ. ಕಷ್ಟದ ಕೆಲಸಗಳಿಂದ ನೀವು ಜಾರಿಕೊಳ್ಳುತೀರಿ. ಸಮಯ ನಿರ್ವಹಣೆಯ ವಿಷಯದಲ್ಲಿ ನೀವು ಪಕ್ಕಾ ಇಲ್ಲದೇ ಇರಬಹುದು. ಕೆಲಸಕ್ಕೆ ಬಾರದು ವಿಷಯಗಳಿಗೆ ನೀವು ಹೆಚ್ಚು ಸಮಯ ಹಾಳು ಮಾಡುತ್ತೀರಿ. ನಿಮಗೆ ಹಣದ ಸಮಸ್ಯೆ ಕಾಡದೇ ಇದ್ದರೂ ಯೋಚಿಸದೇ ಹಣ ಖರ್ಚು ಮಾಡುವ ಪ್ರವೃತ್ತಿ ನಿಮ್ಮದಾಗಿರುತ್ತದೆ.

ಆಯತಾಕಾರದ ಅಂಗೈಯಲ್ಲಿ ಮಧ್ಯಮ ಉದ್ದದ ಬೆರಳುಗಳು

ಆಯತಾಕಾರದ ಅಂಗೈ ಮತ್ತು ಮಧ್ಯಮ-ಉದ್ದದ ಬೆರಳುಗಳನ್ನು ಹೊಂದಿರುವ ಜನರು ದೃಢವಾದ ಮತ್ತು ಮಹತ್ವಾಕಾಂಕ್ಷೆಯ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಇವರು ಸಾಮಾನ್ಯವಾಗಿ ವೈಯಕ್ತಿಕವಾಗಿ ಮತ್ತು ವೃತ್ತಿಪರವಾಗಿ ಯಶಸ್ವಿಯಾಗುತ್ತಾರೆ. ಈ ರೀತಿ ಅಂಗೈ, ಬೆರಳಿನ ಆಕಾರ ಹೊಂದಿರುವವರು ತಮ್ಮ ಆಲೋಚನೆಗಳು ಹಾಗೂ ಭಾವನೆಗಳನ್ನು ಸುಲಭವಾಗಿ ಇತರರೊಂದಿಗೆ ಹಂಚಿಕೊಳ್ಳುವವರಲ್ಲ. ತಮ್ಮ ಭಾವನೆಗಳನ್ನು ತಮ್ಮಲ್ಲಿಯೇ ಮುಚ್ಚಿಟ್ಟುಕೊಳ್ಳುತ್ತಾರೆ. ಇವರು ಸ್ವಯಂ ಭರವಸೆ ಉಳ್ಳವವರು. ಆಕರ್ಷಕ ಮನೋಭಾವ ಹಾಗೂ ಸ್ಪಷ್ಟ ಆಲೋಚನೆ ಇವರದ್ದಾಗುತ್ತದೆ.

ಚಪ್ಪಟೆ ಅಂಗೈನ ಉದ್ದವಾಗ ಬೆರಳುಗಳು

ಅಂಗೈಗಳು ಚಪ್ಪಟ್ಟೆಯಾಗಿದ್ದು, ಬೆರಳುಗಳು ಉದ್ದವಾಗಿದ್ದರೆ ನೀವು ಸೂಕ್ಷ್ಮ ಹಾಗೂ ಭಾವನಾತ್ಮಕ ಜೀವಿಗಳು ಎಂದರ್ಥ. ಹೃದಯದ ಮಾತನ್ನು ಹೆಚ್ಚು ಕೇಳಿಕೊಳ್ಳುತ್ತೀರಿ. ಭಾವನೆಗಳ ಜೊತೆ ಬದುಕುವ ಅಭ್ಯಾಸ ಉಳ್ಳವರು ನೀವು. ದಯಾಮನೋಭಾವದ ನೀವು ಇತರರ ಬಗ್ಗೆ ಯಾವುದೇ ಕೆಟ್ಟ ಇಚ್ಛೆಯನ್ನು ಹೊಂದಿರುವುದಿಲ್ಲ. ಸಹನಾಭೂತಿ ನಿಮ್ಮ ಪ್ಲಸ್‌ ಪಾಯಿಂಟ್‌. ಯಾವಾಗಲೂ ಅಗತ್ಯ ಇರುವವರಿಗೆ ಸಹಾಯಹಸ್ತ ನೀಡಲು ನೀವು ಸಿದ್ಧರಾಗಿರುತ್ತೀರಿ.

ಅಂಗೈ ಹಾಗೂ ಕೈ ಬೆರಳುಗಳು ಹೇಗಿದ್ದರೆ ವ್ಯಕ್ತಿತ್ವ ಹೇಗಿರುತ್ತದೆ ಎಂಬುದನ್ನು ನೀವು ನೋಡಿದ್ರಿ ಅಲ್ವಾ. ಈಗ ನಿಮ್ಮ ಅಂಗೈಯನ್ನು ಪರಿಶೀಲಿಸಿಕೊಂಡು ನಿಮ್ಮ ವ್ಯಕ್ತಿತ್ವ ಹೇಗೆ ತಿಳಿಯಿರಿ.

ವಿಭಾಗ