Personality Test: ಪ್ರೇಮ ಸಂಬಂಧದಲ್ಲಿ ನೀವು ಬಯಸುವುದೇನು? ನಿಮ್ಮ ಮನಸ್ಸಿನ ರಹಸ್ಯ ತಿಳಿಸುತ್ತೆ ಈ ಚಿತ್ರ
ಮನುಷ್ಯ ಎಂದ ಮೇಲೆ ನಿರೀಕ್ಷೆಗಳು ಸಹಜ. ಸಂಬಂಧಗಳಲ್ಲೂ ಮನುಷ್ಯನ ನಿರೀಕ್ಷೆ ಇದ್ದೇ ಇರುತ್ತದೆ. ಪ್ರೇಮ ಸಂಬಂಧದಲ್ಲಿ ನೀವು ಏನನ್ನು ನಿರೀಕ್ಷೆ ಮಾಡುತ್ತೀರಿ, ನಿಮ್ಮ ಮನಸ್ಸಿನ ರಹಸ್ಯ ಭಾವನೆಗಳನ್ನು ಬಯಲಾಗಿಸುತ್ತೆ ಈ ಚಿತ್ರ. ಹಾಗಾದರೆ ಮೊದಲು ಕಾಣಿಸಿದ್ದೇನು ಹೇಳಿ.
ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ನೋಡಿದ ತಕ್ಷಣ ನಮ್ಮನ್ನು ಸೆಳೆಯುತ್ತವೆ. ಇದು ಮೆದುಳನ್ನು ವಾಸ್ತವಕ್ಕಿಂತ ಭಿನ್ನವಾಗಿ ಯೋಚಿಸುವಂತೆ ಮಾಡುವ ದೃಶ್ಯಕಲೆ. ಈ ಒಂದೇ ಚಿತ್ರವನ್ನು ನೀವು ವಿವಿಧ ರೀತಿಯಲ್ಲಿ ಅರ್ಥೈಸಿಕೊಳ್ಳಬಹುದು. ಒಂದೇ ಚಿತ್ರದಲ್ಲಿ ಹತ್ತಾರು ಅಂಶ ಇದ್ದರೂ ನಮ್ಮ ಕಣ್ಣು ಇದರಲ್ಲಿ ಮೊದಲು ಒಂದನ್ನು ಮಾತ್ರ ಗ್ರಹಿಸುತ್ತದೆ. ಆ ಒಂದು ಅಂಶ ಯಾವುದು ಎಂಬುದರ ಮೇಲೆ ನಿಮ್ಮ ವ್ಯಕ್ತಿತ್ವ ನಿರ್ಧಾರವಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ಈ ಆಪ್ಟಿಕಲ್ ಇಲ್ಯೂಷನ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಹರಿದಾಡುತ್ತಿವೆ. ಇದರ ಮೂಲಕ ನಮ್ಮ ವ್ಯಕ್ತಿತ್ವ, ಗುಣ, ಸ್ವಭಾವದ ಹಲವು ಅಂಶಗಳನ್ನು ನಾವು ತಿಳಿದುಕೊಳ್ಳಬಹುದು. ಇಂದಿನ ಚಿತ್ರದಲ್ಲಿ ನಾವು ಸಂಬಂಧದಿಂದ ಏನನ್ನು ನಿರೀಕ್ಷೆ ಮಾಡಬಹುದು ಎಂಬುದನ್ನ ತಿಳಿದುಕೊಳ್ಳಬಹುದು.
ಇಂದಿನ ಚಿತ್ರದಲ್ಲಿ ಹೂಕುಂಡ, ಟೋಪಿ ಧರಿಸಿದ ಇಬ್ಬರು ವ್ಯಕ್ತಿಗಳು, ಮುಖ, ಮಗು, ಪುಸ್ತಕ ಹೀಗೆ ಹಲವು ಅಂಶಗಳಿವೆ. ಹಾಗಾದರೆ ಇದರಲ್ಲಿ ನಿಮಗೆ ಮೊದಲು ಕಂಡಿದ್ದೇನು ಈ ಮೂಲಕ ಪ್ರೇಮ ಸಂಬಂಧದಲ್ಲಿ ನಿಮ್ಮ ನಿರೀಕ್ಷೆ ಏನು ತಿಳಿಯಿರಿ.
ಮನುಷ್ಯನ ಮುಖ
ಚಿತ್ರದಲ್ಲಿ ನಿಮಗೆ ಮೊದಲು ಮನುಷ್ಯನ ಮುಖ ಕಾಣಿಸಿದರೆ ನೀವು ಭೇಟಿಯಾಗುವ ಪ್ರತಿಯೊಬ್ಬರಿಂದ ಗೌರವ ಮತ್ತು ಮೆಚ್ಚುಗೆಯನ್ನು ಪಡೆಯಲು ಇಷ್ಟಪಡುವ ವ್ಯಕ್ತಿ ನೀವು. ಸಂಬಂಧಗಳಲ್ಲಿ ನಿಮ್ಮ ಅಗತ್ಯವನ್ನು ಅವರು ಅರ್ಥಮಾಡಿಕೊಳ್ಳಬೇಕು ಎಂದು ಬಯಸುತ್ತೀರಿ. ನೀವು ಸಂಕೀರ್ಣ ವ್ಯಕ್ತಿ. ನಿಮ್ಮದೇ ನಡೆಯಬೇಕು ಎನ್ನುವ ಹಟ ನಿಮ್ಮದು. ಒಂದೇ ವ್ಯಕ್ತಿತ್ವವನ್ನು ಜೀವನದ್ದಕ್ಕೂ ಇರಿಸಿಕೊಳ್ಳಬೇಕು ಎನ್ನುವ ಹಟವನ್ನು ಜೀವನದಲ್ಲಿ ನೀವು ಹಲವನ್ನು ಕಳೆದುಕೊಳ್ಳುವಂತೆ ಮಾಡುತ್ತದೆ. ಮೊದಲು ಸಂಬಂಧವನ್ನು ರೂಪಿಸಿ, ನಂತರ ನಿಮ್ಮ ಜೊತೆ ಬೆರೆತ ಮೇಲೆ ನಿಮ್ಮ ಬಗ್ಗೆ ತಿಳಿದುಕೊಳ್ಳುವಂತೆ ಮಾಡಿ.
ಕೋಟ್ ಧರಿಸಿರುವ ವ್ಯಕ್ತಿ
ಚಿತ್ರದಲ್ಲಿ ನೀವು ಕೋಟ್ ಧರಿಸಿದ ವ್ಯಕ್ತಿಯನ್ನ ನೋಡಿದರೆ ನಿಮ್ಮ ಸಂಬಂಧಗಳಲ್ಲಿ, ನೀವು ಸಂಪೂರ್ಣ ಸ್ವೀಕಾರವನ್ನು ಬಯಸುತ್ತೀರಿ. ನೀವು ಆಂತರಿಕ ದುಃಖವನ್ನು ಹೊಂದಿರುವ ವ್ಯಕ್ತಿ. ನೀವು ಹಿಂದೆ ಡೇಟಿಂಗ್ ಮಾಡಿದ್ದೀರಿ, ಆದರೆ ನಿಮ್ಮ ಬಗ್ಗೆ ಹಿಂದಿನವರು ಯಾರೂ ಅರ್ಥ ಮಾಡಿಕೊಂಡಿಲ್ಲ. ಒಂದಕ್ಕಿಂತ ಹೆಚ್ಚು ಪ್ರೀತಿಯಾಗಿದ್ದರೂ ಯಾರೂ ಅರ್ಥ ಮಾಡಿಕೊಳ್ಳದ ಕಾರಣ ಎಲ್ಲರಿಂದ ದೂರ ಆಗಿದ್ದೀರಿ. ನಿಮ್ಮ ಸಂತೋಷವನ್ನಷ್ಟೇ ಅಲ್ಲ ದುಃಖದಲ್ಲೂ ಭಾಗಿಯಾಗುವ ವ್ಯಕ್ತಿಯನ್ನು ನೋಡಿ, ಆಗ ನಿಮ್ಮೊಂದಿಗೆ ಜೀವನ ಕಳೆಯಲು ಯೋಗ್ಯವಾದ ವ್ಯಕ್ತಿಯನ್ನು ನೀವು ಕಂಡುಕೊಳ್ಳುತ್ತೀರಿ.
ಮಗುವನ್ನು ನೋಡಿದರೆ
ಚಿತ್ರದಲ್ಲಿ ನೀವು ಮೊದಲು ಮಗುವನ್ನು ಕಂಡರೆ ನಿಮಗೆ ನಿಜವಾಗಿಯೂ ಬೇಕಾಗಿರುವುದು ಮಗುವಿನಂತೆ ನಿಮ್ಮನ್ನು ನೋಡಿಕೊಳ್ಳುವವರು. ದೈನಂದಿನ ಜೀವನದ ಹೊರೆಗಳನ್ನು ನಿಭಾಯಿಸಲು ಸಹಾಯ ಮಾಡುವ ವ್ಯಕ್ತಿಯನ್ನು ನೀವು ಆಳವಾಗಿ ಬಯಸುವ ವ್ಯಕ್ತಿ. ಸದಾ ನಿಮ್ಮ ಕಷ್ಟಕ್ಕೆ ಹೆಗಲು ಕೊಡುವ ಸಂಗಾತಿಯನ್ನು ನೀವು ಬಯಸುತ್ತೀರಿ.
ಮಾಂತ್ರಿಕ
ಚಿತ್ರದಲ್ಲಿ ನಿಮ್ಮ ಕಣ್ಣಿಗೆ ಮೊದಲು ಮಾಂತ್ರಿಕ ಕಾಣಿಸಿದರೆ ನಿಮ್ಮ ಸಂಬಂಧದಲ್ಲಿ ನೀವು ಆಧ್ಯಾತ್ಮಿಕ ಸಂಪರ್ಕವನ್ನು ಬಯಸುತ್ತೀರಿ. ನಿಮ್ಮ ಸ್ವಭಾವವನ್ನು ಮೆಚ್ಚಿಕೊಳ್ಳುವ ವ್ಯಕ್ತಿಯನ್ನು ನೀವು ಸಂಗಾತಿಯಾಗಿ ಪಡೆಯಲು ಬಯಸುತ್ತೀರಿ. ನೀವು ಯಾರನ್ನಾದರೂ ಪ್ರೀತಿಸಿದರೆ ಅವರು ನಿಮ್ಮನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವಾದ ಕಾರಣ ನಿಮ್ಮ ಆಯ್ಕೆಯ ಬಗ್ಗೆ ನೀವು ಜಾಗೃತೆ ವಹಿಸಬೇಕು.
ಇಬ್ಬರು ಅಟೆಂಡರ್‌ಗಳು
ನಿಮಗೆ ಇಬ್ಬರು ಸೇವಕರಂತೆ ನಿಂತಿರುವ ವ್ಯಕ್ತಿಗಳು ಕಂಡರೆ ನೀವು ಪ್ರೀತಿಯಲ್ಲಿ ಚಾಲೆಂಜ್ ಮಾಡುವವರು. ನಿಮಗೆ ಪ್ರೇಮ ಸಂಬಂಧದಲ್ಲಿ ನಿಜಕ್ಕೂ ಬದಲಾಗಿರುವುದು ಸವಾಲು. ನಿಮಗೆ ಸದಾ ಜೊತೆಗಿರುವ ಸಂಗಾತಿ ಬೇಕು. ಅವರು ಒಳ್ಳೆಯವರಾಗಿದ್ದು ನಿಮಗೆ ಬೆಂಬಲ ನೀಡುವವರಾಗಿರಬೇಕು. ಆದರೆ ಅದೇ ಸಮಯದಲ್ಲಿ ನಿಮಗೆ ಸವಾಲು ಹಾಕುವ ಮತ್ತು ನೀವು ತಪ್ಪು ತಿದ್ದಿ ಹೇಳುವ ವ್ಯಕ್ತಿಯನ್ನು ನೀವು ಸಂಗಾತಿಯಾಗಿ ನಿರೀಕ್ಷೆ ಮಾಡುತ್ತೀರಿ.
(ಗಮನಿಸಿ: ಇದು ಸಾಮಾನ್ಯ ಜ್ಞಾನವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)