Personality Test: ನೀವು ಒಂಟಿಯಾಗಿ ಇರೋಕೆ ಇಷ್ಟಪಡ್ತೀರಾ, ಗುಂಪಿನಲ್ಲಿ ಇರೋದು ಇಷ್ಟನಾ, ಚಿತ್ರದಲ್ಲಿ ಮೊದಲು ಕಂಡ ಪ್ರಾಣಿ ಯಾವುದು ಹೇಳಿ-viral news personality test which animal do you seen first in this optical illusion image social media viral rst ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Personality Test: ನೀವು ಒಂಟಿಯಾಗಿ ಇರೋಕೆ ಇಷ್ಟಪಡ್ತೀರಾ, ಗುಂಪಿನಲ್ಲಿ ಇರೋದು ಇಷ್ಟನಾ, ಚಿತ್ರದಲ್ಲಿ ಮೊದಲು ಕಂಡ ಪ್ರಾಣಿ ಯಾವುದು ಹೇಳಿ

Personality Test: ನೀವು ಒಂಟಿಯಾಗಿ ಇರೋಕೆ ಇಷ್ಟಪಡ್ತೀರಾ, ಗುಂಪಿನಲ್ಲಿ ಇರೋದು ಇಷ್ಟನಾ, ಚಿತ್ರದಲ್ಲಿ ಮೊದಲು ಕಂಡ ಪ್ರಾಣಿ ಯಾವುದು ಹೇಳಿ

ಈ ಜಗತ್ತಿನಲ್ಲಿ ಒಬ್ಬರೊಬ್ಬರು ಒಂದೊಂದು ರೀತಿ ಇರುತ್ತಾರೆ. ಕೆಲವರಿಗೆ ಸಾಮಾಜಿಕವಾಗಿ ಬೆರೆಯವುದು ಇಷ್ಟ, ಇನ್ನೂ ಕೆಲವರಿಗೆ ಜನರಿಂದ ದೂರವಿರುವುದು ಇಷ್ಟ. ಹಾಗಾದ್ರೆ ನಿಮ್ಮ ಗುಪ್ತ ಮನಸ್ಸು ಬಯಸುವುದು ಏನನ್ನು ಎಂದು ತಿಳಿಯಬೇಕಾ, ಹಾಗಾದ್ರೆ ಚಿತ್ರದಲ್ಲಿ ನಿಮ್ಮ ಕಣ್ಣಿಗೆ ಮೊದಲು ಯಾವ ಪ್ರಾಣಿ ಕಾಣಿಸ್ತು ಹೇಳಿ.

ಪರ್ಸನಾಲಿಟಿ ಟೆಸ್ಟ್
ಪರ್ಸನಾಲಿಟಿ ಟೆಸ್ಟ್

ಪರ್ಸನಾಲಿಟಿ ಟೆ‌ಸ್ಟ್ ಅಂದರೆ ವ್ಯಕ್ತಿತ್ವ ಪರೀಕ್ಷೆ. ನಮ್ಮ ಬಗ್ಗೆ ನಮಗೆ ತಿಳಿದಿರದ ವಿಚಾರಗಳನ್ನು ವ್ಯಕ್ತಿತ್ವ ಪರೀಕ್ಷೆಯ ಮೂಲಕ ಕಂಡುಕೊಳ್ಳಬಹುದು. ನಮ್ಮ ವ್ಯಕ್ತಿತ್ವ ಪರೀಕ್ಷೆ ಮಾಡಬೇಕು ಎಂದರೆ ಮನೋಶಾಸ್ತ್ರಜ್ಞರ ಬಳಿಗೆ ಹೋಗಬೇಕು ಎಂದೇನಿಲ್ಲ. ಆಪ್ಟಿಕಲ್ ಇಲ್ಯೂಷನ್ ಚಿತ್ರಗಳ ಮೂಲಕವೂ ನಮ್ಮನ್ನು ನಾವು ಕಂಡುಕೊಳ್ಳಬಹುದು.

ಇಂತಹ ಆಪ್ಟಿಕಲ್‌ ಚಿತ್ರಗಳನ್ನು ನಾವು ಆಗಾಗ್ಗೆ ನೋಡುತ್ತೇವೆ, ಅದು ನಮ್ಮ ಮನಸ್ಸನ್ನು ಗೊಂದಲಗೊಳಿಸುತ್ತದೆ. ಇದೇನಪ್ಪಾ ಹೀಗಿದೆ ಎಂದು ನಮ್ಮನ್ನು ನಾವೇ ಪ್ರಶ್ನೆ ಮಾಡಿಕೊಳ್ಳುವಂತೆ ಮಾಡುತ್ತವೆ. ಆದರೆ ಚಿತ್ರದಲ್ಲಿ ಮೊದಲು ಕಂಡಿದ್ದೇನು ಎಂಬುದು ನಮ್ಮ ವ್ಯಕ್ತಿತ್ವವನ್ನು ತಿಳಿಸುತ್ತದೆ.

ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಮಂದಿ ಆ‍ಪ್ಟಿಕಲ್ ಇಲ್ಯೂಷನ್ ಚಿತ್ರಗಳಿಗಾಗಿ ಹುಡುಕಾಟ ನಡೆಸುತ್ತಿರುತ್ತಾರೆ. ಇಲ್ಲೊಂದು ಚಿತ್ರವಿದೆ. ಇದರಲ್ಲಿ ಜೀಬ್ರಾ ಹಾಗೂ ಸಿಂಹದ ಆಕಾರವಿದೆ. ನಿಮ್ಮ ಕಣ್ಣು ಈ ಎರಡಲ್ಲಿ ಮೊದಲು ಯಾವುದನ್ನು ಗ್ರಹಿಸಿದೆ ಎಂಬುದನ್ನು ಕಂಡುಹಿಡಿಯುವುದು ನಿಮಗಿರುವ ಸವಾಲು.

ಚಿತ್ರದಲ್ಲಿ ಏನಿದೆ?

ನಿಮ್ಮ ಮುಂದಿರುವ ಚಿತ್ರದಲ್ಲಿ ಹಲವು ಸಾಲುಗಳನ್ನು ನೀವು ನೋಡುತ್ತಿರಬೇಕು. ಈ ಗೆರೆಗಳ ನಡುವೆ ಎರಡು ಪ್ರಾಣಿಗಳು ಅಡಗಿವೆ. ಈ ಚಿತ್ರದಲ್ಲಿ ಕೆಲವರು ಜೀಬ್ರಾವನ್ನು ಮೊದಲು ನೋಡುತ್ತಿದ್ದರೆ, ಕೆಲವರ ಗಮನ ಈ ಚಿತ್ರದಲ್ಲಿ ಇರುವ ಸಿಂಹದತ್ತ ನೆಟ್ಟಿದೆ. ಈ ಚಿತ್ರದಲ್ಲಿ ನೀವು ಮೊದಲು ಏನು ನೋಡಿದ್ದೀರಿ? ಈ ಚಿತ್ರದಲ್ಲಿ ಸಿಂಹವನ್ನು ನೋಡುವವರ ವ್ಯಕ್ತಿತ್ವವು ಜೀಬ್ರಾವನ್ನು ನೋಡುವವರ ವ್ಯಕ್ತಿತ್ವಕ್ಕಿಂತ ಹೇಗೆ ಮತ್ತು ಎಷ್ಟರ ಮಟ್ಟಿಗೆ ಭಿನ್ನವಾಗಿದೆ ಎಂಬುದನ್ನು ತಿಳಿಯೋಣ?

ಜೀಬ್ರಾ

ಈ ಚಿತ್ರದಲ್ಲಿ ಜೀಬ್ರಾವನ್ನು ಮೊದಲು ನೋಡಿದವರು ಹೆಚ್ಚು ಮಾತನಾಡಲು ಇಷ್ಟಪಡುತ್ತಾರೆ. ಇವರು ಯಾರನ್ನಾದರೂ ಮಾತನಾಡಿಸಿ ಪರಿಚಯ ಮಾಡಿಕೊಳ್ಳುವ ಗುಣ ಹೊಂದಿರುತ್ತಾರೆ. ಹೊಸ ಸ್ನೇಹಿತರನ್ನು ಮಾಡಿಕೊಳ್ಳುವುದನ್ನು ಇವರು ಆನಂದಿಸುತ್ತಾರೆ. ಇವರು ಯೋಜನೆಗಳ ಪ್ರಕಾರ ಜೀವನವನ್ನು ನಡೆಸಲು ಇಷ್ಟಪಡುವುದಿಲ್ಲ. ಪ್ರತಿದಿನ ಹೊಸದನ್ನು ಮಾಡಲು ಪ್ರಯತ್ನಿಸುತ್ತಲೇ ಇರುತ್ತಾರೆ. ಜೀಬ್ರಾ ಮೊದಲು ನೋಡಿದವರು ಜನರ ನಡುವೆ ಬದುಕಲು ಇಷ್ಟಪಡುತ್ತಾರೆ.

ಸಿಂಹ

ಚಿತ್ರದಲ್ಲಿ ಸಿಂಹವನ್ನು ಮೊದಲು ನೋಡಿದವರು ಜೀಬ್ರಾ ನೋಡಿದವರಿಗಿಂತ ಸಂಪೂರ್ಣ ಭಿನ್ನ. ಇವರು ಕಿಕ್ಕಿರಿದ ಸ್ಥಳಗಳಲ್ಲಿ ವಾಸಿಸಲು ಇಷ್ಟಪಡುವುದಿಲ್ಲ. ಈ ಜನರು ತಮ್ಮ ಕುಟುಂಬ ಮತ್ತು ಅವರ ಕೆಲವು ಸ್ನೇಹಿತರೊಂದಿಗೆ ವಾಸಿಸಲು ಇಷ್ಟಪಡುತ್ತಾರೆ. ಜನರೊಂದಿಗೆ ಬೆರೆಯುವುದು ಹೆಚ್ಚು ಮಾತನಾಡುವುದು ಇವರಿಗೆ ಇಷ್ಟವಾಗುವುದಿಲ್ಲ.