Personality Test: ನೀವು ಶಾಂತ ಸ್ವಭಾವದವರಾ, ನಿಮಗೆ ಬೇಗ ಸಿಟ್ಟು ಬರುತ್ತಾ; ಬೆರಳಿನ ಆಕಾರದಿಂದಲೇ ತಿಳಿಯಬಹುದು ವ್ಯಕ್ತಿತ್ವ
ಕನ್ನಡ ಸುದ್ದಿ  /  ಜೀವನಶೈಲಿ  /  Personality Test: ನೀವು ಶಾಂತ ಸ್ವಭಾವದವರಾ, ನಿಮಗೆ ಬೇಗ ಸಿಟ್ಟು ಬರುತ್ತಾ; ಬೆರಳಿನ ಆಕಾರದಿಂದಲೇ ತಿಳಿಯಬಹುದು ವ್ಯಕ್ತಿತ್ವ

Personality Test: ನೀವು ಶಾಂತ ಸ್ವಭಾವದವರಾ, ನಿಮಗೆ ಬೇಗ ಸಿಟ್ಟು ಬರುತ್ತಾ; ಬೆರಳಿನ ಆಕಾರದಿಂದಲೇ ತಿಳಿಯಬಹುದು ವ್ಯಕ್ತಿತ್ವ

ನಮ್ಮ ಬೆರಳುಗಳು ನಮ್ಮ ವ್ಯಕ್ತಿತ್ವ ತಿಳಿಸುತ್ತವೆ ಎಂದರೆ ನಂಬ್ತೀರಾ, ಖಂಡಿತ ನಂಬಲೇಬೇಕು. ಬೆರಳು ನೇರವಾಗಿದ್ಯಾ, ಬಾಗಿಕೊಂಡಂತಿದ್ಯಾ, ಮೊನಚಾಗಿದ್ಯಾ ಗಮನಿಸಿ. ಬೆರಳಿನ ಆಕಾರ, ಗಾತ್ರಕ್ಕೆ ಅನುಗುಣವಾಗಿ ನಮ್ಮ ವ್ಯಕ್ತಿತ್ವ ಇರುತ್ತದೆ. ಹಾಗಾದರೆ ನಿಮ್ಮ ಬೆರಳಿಗೆ ಅನುಗುಣವಾಗಿ ನಿಮ್ಮ ವ್ಯಕ್ತಿತ್ವ ಎಂಥದ್ದು ತಿಳಿಯಿರಿ.

ಪರ್ಸನಾಲಿಟಿ ಟೆಸ್ಟ್
ಪರ್ಸನಾಲಿಟಿ ಟೆಸ್ಟ್ (PC: Canva)

ಮನುಷ್ಯರಲ್ಲಿ ಒಬ್ಬೊಬ್ಬರು ಒಂದೊಂದು ರೀತಿಯ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ನಮ್ಮ ದೇಹದ ಅಂಗಾಂಶಗಳು, ನಮ್ಮ ಹೋಲಿಕೆ ಬೇರೆ ಬೇರೆ ರೀತಿ ಇರುವಂತೆ ವ್ಯಕ್ತಿತ್ವವೂ ಬೇರೆ ಬೇರೆ ರೀತಿ ಇರುತ್ತದೆ. ಆದರೆ ನಮ್ಮ ವ್ಯಕ್ತಿತ್ವವನ್ನು ನಮ್ಮ ದೇಹದ ಅಂಗಾಂಗಗಳಿಂದಲೇ ತಿಳಿಯಬಹುದು ಎಂಬುದು ಸುಳ್ಳಲ್ಲ.

ಮನುಷ್ಯನ ದೇಹದ ಪ್ರತಿ ಅಂಗಾಂಗವು ವ್ಯಕ್ತಿತ್ವದ ಸೂಚಕವಾಗಿರುತ್ತದೆ. ಇದಕ್ಕೆ ಬೆರಳು ಕೂಡ ಹೊರತಾಗಿಲ್ಲ. ಬೆರಳಿನ ಆಕಾರಕ್ಕೆ ಅನುಗುಣವಾಗಿ ಮನುಷ್ಯನ ವ್ಯಕ್ತಿತ್ವ ಇರುತ್ತದೆ. ಕೆಲವರ ಬೆರಳು ನೇರವಾಗಿರುತ್ತದೆ. ಕೆಲವರು ಬೆರಳು ಬಾಗಿಕೊಂಡಂತೆ ಇರುತ್ತದೆ. ಇನ್ನೂ ಕೆಲವರ ಬೆರಳು ಮೊನಚಾಗಿರುತ್ತದೆ. ನಿಮ್ಮ ಅವರವರ ಬೆರಳಿನ ಕಾರಣದ ಮೇಲೆ ವ್ಯಕ್ತಿತ್ವವೂ ನಿಂತಿರುತ್ತದೆ. ಈ ವ್ಯಕ್ತಿತ್ವ ಪರೀಕ್ಷೆ ಅಥವಾ ಪರ್ಸನಾಲಿಟಿ ಟೆಸ್ಟ್ ಎನ್ನುವುದು ನಿಮ್ಮನ್ನು ನೀವು ಅರ್ಥ ಮಾಡಿಕೊಳ್ಳಲು ಅಥವಾ ನಿಮ್ಮ ಬಗ್ಗೆ ನೀವು ತಿಳಿದುಕೊಳ್ಳಲು ಇರುವ ಅತ್ಯುತ್ತಮ ಮಾರ್ಗವಾಗಿದೆ. ಹಾಗಾದರೆ ಇಂದಿನ ಪರ್ಸನಾಲಿಟಿ ಟೆಸ್ಟ್‌ನಲ್ಲಿ ಬೆರಳುಗಳು ಹೇಗಿದ್ದರೆ, ವ್ಯಕ್ತಿತ್ವ ಹೇಗೆ ತಿಳಿಯೋಣ.

ನೇರ ಬೆರಳು

ನಿಮ್ಮ ಬೆರಳು ನೇರವಾಗಿದ್ದರೆ ನೀವು ಸುಳ್ಳು ಹೇಳಲು ಇಷ್ಟಪಡದ, ಸುಳ್ಳನ್ನು ಸಹಿಸದ ಅತ್ಯಂತ ಪ್ರಾಮಾಣಿಕ ವ್ಯಕ್ತಿ. ಸುಳ್ಳು, ದ್ರೋಹ ನಿಮಗೆ ಸಹ್ಯವಾಗುವುದಿಲ್ಲ. ನೀವೇ ನಂಬಲಾರ್ಹ ವ್ಯಕ್ತಿ ಮತ್ತು ನೀವು ಪೂರ್ಣ ಹೃದಯದಿಂದ ನಂಬಬಹುದಾದ ಯಾರನ್ನಾದರೂ ನೀವು ನಿರೀಕ್ಷಿಸುತ್ತೀರಿ. ನಿಮ್ಮ ಭಾವನೆಗಳನ್ನು ಮರೆಮಾಚುವಲ್ಲಿ ನೀವು ನಿಸ್ಸೀಮರು. ನೀವು ತುಂಬಾ ಒಳ್ಳೆಯವರು. ಆದರೆ ಒಳಗಿನಿಂದ ನೀವು ತುಂಬಾ ಭಾವುಕರಾಗಿದ್ದೀರಿ. ಭಾವನೆಗಳು ನಿಮ್ಮ ಬದುಕಿನಲ್ಲಿ ಚಂಡಮಾರುತ ಸೃಷ್ಟಿಸುತ್ತವೆ. ಪರಿಚಯಿಲ್ಲದವರ ಜೊತೆ ಸಲುಗೆ ಬೆಳೆಸುವುದು ನಿಮಗೆ ಇಷ್ಟವಾಗದೇ ಇರಬಹುದು. ನೀವು ದುರಹಂಕಾರಿ ಮತ್ತು ಸ್ವಾರ್ಥಿ ಎಂದು ಹಲವರು ಭಾವಿಸಬಹುದು. ನಿಮ್ಮ ಉತ್ತಮ ಗುಣವೆಂದರೆ ನೀವು ಯಾವುದನ್ನೂ ಪೂರ್ಣಗೊಳಿಸದೆ ಬಿಡುವುದಿಲ್ಲ. ನೀವು ಯಾವಾಗಲೂ ವಿಶಾಲ ಹೃದಯದ ಹೆಚ್ಚು ಕಾಳಜಿ ವಹಿಸುವ ವ್ಯಕ್ತಿಯ ಜೊತೆ ಬದುಕಲು ಇಷ್ಟಪಡುತ್ತೀರಿ.

ಮೊನಚಾದ ಬೆರಳಿನ ಆಕಾರ

ನೀವು ಮೊನಚಾರ ಬೆರಳನ್ನು ಹೊಂದಿದ್ದರೆ ನೀವು ಕನಸುಗಳನ್ನು ಬೆನ್ನಟ್ಟಿ ಹೋಗುವವರು. ನೀವು ಫ್ಯಾಂಟಸಿ ಮತ್ತು ಪ್ರೇಮ ಕಥೆಗಳ ಮೇಲೆ ನಂಬಿಕೆ ಇಟ್ಟುಕೊಂಡವರು. ನೀವು ತುಂಬಾ ನಿಷ್ಠಾವಂತ ಸ್ನೇಹಿತ/ಸ್ನೇಹಿತೆ ಮತ್ತು ಸಂಗಾತಿ. ನೀವು ಭಾವೋದ್ರಿಕ್ತರಾಗಿದ್ದೀರಿ ಮತ್ತು ನಿಮ್ಮ ಗುರಿಗಳು ಮತ್ತು ಕನಸುಗಳನ್ನು ಆಳವಾಗಿ ನಂಬುತ್ತೀರಿ. ಅವುಗಳನ್ನು ನನಸಾಗಿಸಲು ನೀವು ದೃಢಸಂಕಲ್ಪ ಮಾಡಿದ್ದೀರಿ ಮತ್ತು ಹಾಗೆ ಮಾಡುವ ಚಾತುರ್ಯ ಮತ್ತು ಕೌಶಲ್ಯವೂ ನಿಮ್ಮಲ್ಲಿದೆ. ಒಮ್ಮೆ ನೀವು ಗುರಿಯನ್ನು ಹೊಂದಿಸಿದರೆ, ನೀವು ಅತ್ಯಂತ ಕಠಿಣ ಪರಿಶ್ರಮಿ. ನೀವು ಸಾಮಾನ್ಯವಾಗಿ ಸಮಾಜದಲ್ಲಿ ನಾಯಕತ್ವ ಸ್ಥಾನಗಳನ್ನು ಅಥವಾ ಅಧಿಕಾರದ ಪಾತ್ರಗಳನ್ನು ಪಡೆಯುತ್ತೀರಿ. ಆದಾಗ್ಯೂ, ನಿಮ್ಮ ದಯೆ ಮತ್ತು ನಿಷ್ಠೆ, ಕೆಲವೊಮ್ಮೆ, ಜನರು ನಿಮ್ಮ ಲಾಭವನ್ನು ಪಡೆದಾಗ ನಿಮ್ಮನ್ನು ತೊಂದರೆಗೆ ಸಿಲುಕಿಸುತ್ತದೆ. ನೀವು ಸೂಕ್ಷ್ಮ ಮತ್ತು ಸಹಾನುಭೂತಿಯುಳ್ಳವರು.

ಓರೆಯಾಗಿರುವ ಉಗುರಿನ ಆಕಾರ

ನಿಮ್ಮ ಬೆರಳು ಓರೆಯಾಗಿದ್ದರೆ ನಿಮ್ಮ ವ್ಯಕ್ತಿತ್ವದ ಲಕ್ಷಣಗಳು ನೀವು ಸುಲಭವಾಗಿ ಮತ್ತು ಮುಕ್ತ ಮನಸ್ಸಿನವರು ಎಂದು ತಿಳಿಸುತ್ತದೆ. ಕೆಲವೊಮ್ಮೆ ನಿಮ್ಮ ಔದಾರ್ಯಕ್ಕೆ ಮಿತಿಯಿರುವುದಿಲ್ಲ. ನೀವು ಯಾವುದೇ ವ್ಯಕ್ತಿಯನ್ನು ಒಮ್ಮೆ ನಂಬಿದರೆ ಮುಗಿಯಿತು, ಅವರನ್ನೇ ನಂಬುತ್ತೀರಿ. ಅವರು ಮಾಡಿದ್ದೆಲ್ಲವೂ ನಿಮಗೆ ಸರಿ ಕಾಣುತ್ತದೆ. ನಿಮ್ಮದು ಗುಂಪಿನಲ್ಲಿ ಗೋವಿಂದ ಎನ್ನುವ ವ್ಯಕ್ತಿತ್ವವಲ್ಲ. ನಿಮ್ಮ ಮಾತಿನ ಶೈಲಿಯಿಂದಲೇ ನೀವು ಎಲ್ಲರ ನಡುವೆ ಎದ್ದು ಕಾಣುತ್ತೀರಿ. ನೀವು ಸಣ್ಣಪುಟ್ಟ ವಿಚಾರಗಳಿಗೆ ತಲೆ ಕೆಡಿಸಿಕೊಳ್ಳುವವರಲ್ಲ. ನಿಮ್ಮ ಸ್ವಾಭಿಮಾನಕ್ಕೆ ಧಕ್ಕೆ ತರುವ ವಿಷಯಗಳನ್ನು ನೀವು ಬಿಡುವುದಿಲ್ಲ. ನೀವು ಸಭ್ಯರು ಆದರೆ ನಿಮ್ಮ ಆಪ್ತ ವಲಯದಲ್ಲಿ ಕೆಲವರು ಮಾತ್ರ ಇದ್ದಾರೆ. ನಿಮ್ಮ ದೈನಂದಿನ ಜೀವನದ ಸಮತೋಲನವನ್ನು ಅಡ್ಡಿಪಡಿಸುವ ದಿನಚರಿಗಳು ಮತ್ತು ವಿಷಯಗಳನ್ನು ನೀವು ದ್ವೇಷಿಸುತ್ತೀರಿ.

(ಗಮನಿಸಿ: ಈ ಲೇಖನವು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ದೊರೆತ ಮಾಹಿತಿಯನ್ನು ಆಧರಿಸಿದ ಬರಹ. ಈ ಅಂಶಗಳನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ (ಎಚ್‌ಟಿ ಕನ್ನಡ) ಪುಷ್ಟೀಕರಿಸುವುದಿಲ್ಲ. ಈ ಕುರಿತ ಹೆಚ್ಚಿನ ಮಾಹಿತಿಗೆ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ.)

Whats_app_banner