ಕನ್ನಡ ಸುದ್ದಿ  /  ಜೀವನಶೈಲಿ  /  Personality Test: ನಿಮ್ಮ ಕಾಲಿನ ಬೆರಳುಗಳ ಗಾತ್ರ ಹೇಗಿದೆ? ಪಾದದ ಆಕಾರ ತಿಳಿಸುತ್ತೆ ನಿಮ್ಮ ಗುಣ-ಸ್ವಭಾವ, ಪರೀಕ್ಷಿಸಿ

Personality Test: ನಿಮ್ಮ ಕಾಲಿನ ಬೆರಳುಗಳ ಗಾತ್ರ ಹೇಗಿದೆ? ಪಾದದ ಆಕಾರ ತಿಳಿಸುತ್ತೆ ನಿಮ್ಮ ಗುಣ-ಸ್ವಭಾವ, ಪರೀಕ್ಷಿಸಿ

Foot Shape Personality Test: ನಿಮ್ಮ ಕಾಲಿನ ಹೆಬ್ಬೆರಳು ಹೇಗಿದೆ, ಹೆಬ್ಬೆರಳಿಗಿಂತ ಎರಡನೇ ಬೆರಳು ಉದ್ದ ಇದ್ಯಾ, ಕಾಲಿನ ಮೂರು ಬೆರಳು ಸಮನಾಗಿದ್ಯಾ, ನಿಮ್ಮ ವ್ಯಕ್ತಿತ್ವ ಎಂಥದ್ದು ಎಂದು ತಿಳಿಸುತ್ತದೆ ನಿಮ್ಮ ಪಾದದ ಆಕಾರ.

ನಿಮ್ಮ ಕಾಲಿನ ಬೆರಳುಗಳ ಗಾತ್ರ ಹೇಗಿದೆ? ನಿಮ್ಮ ಗುಣ-ಸ್ವಭಾವ ತಿಳಿಯಿರಿ
ನಿಮ್ಮ ಕಾಲಿನ ಬೆರಳುಗಳ ಗಾತ್ರ ಹೇಗಿದೆ? ನಿಮ್ಮ ಗುಣ-ಸ್ವಭಾವ ತಿಳಿಯಿರಿ (PC: Jagaran Josh)

ದೇಹದ ಅಂಗಾಂಗಗಳು ಹೇಗಿರುತ್ತವೆ ಎಂಬುದರ ಮೇಲೆ ನಮ್ಮ ವ್ಯಕ್ತಿತ್ವ ನಿರ್ಧಾರ ಆಗುತ್ತದೆ ಎನ್ನುವುದು ಆಶ್ಚರ್ಯದ ಸಂಗತಿಯಾದ್ರು ಇದು ನಿಜ. ಕಣ್ಣು, ಮೂಗು, ಹುಬ್ಬು, ಕಿವಿ ಹೀಗೆ ಪ್ರತಿಯೊಂದು ನಮ್ಮ ವ್ಯಕ್ತಿತ್ವ, ಗುಣವನ್ನು ಪರಿಚಯ ಮಾಡುತ್ತವೆ. ಕೆಲವು ನಮಗೆ ಗೊತ್ತಿಲ್ಲದೇ ನಮ್ಮಲ್ಲಿ ರಹಸ್ಯವಾಗಿರುವ ವ್ಯಕ್ತಿತ್ವವನ್ನು ಹೊರ ಹಾಕುತ್ತವೆ. ಇಂದು ಪಾದ ಹಾಗೂ ಹೆಬ್ಬೆರಳುಗಳ ಆಕಾರ, ಗಾತ್ರದ ಮೇಲೆ ನಮ್ಮ ವ್ಯಕ್ತಿತ್ವ ಎಂಥದ್ದು ಎಂಬುದನ್ನು ತಿಳಿಯೋಣ. ಪಾದಗಳ ಆಕಾರವನ್ನು 4 ವಿಧಗಳಾಗಿ ವಿಂಗಡಿಸಲಾಗುತ್ತದೆ. ಈಜಿಪ್ಟಿನ ಪಾದದ ಆಕಾರ, ರೋಮನ್‌ ಪಾದದ ಆಕಾರ, ಗ್ರೀಕ್‌ ಪಾದದ ಆಕಾರ ಮತ್ತು ಚದರ ಅಡಿ ಆಕಾರ.

ಟ್ರೆಂಡಿಂಗ್​ ಸುದ್ದಿ

ಪಾದದ ಆಕಾರ ನಿಮ್ಮ ವ್ಯಕ್ತಿತ್ವದ ಬಗ್ಗೆ ಏನು ಹೇಳುತ್ತದೆ ನೋಡಿ

ಈಜಿಪ್ಟಿಯನ್‌ ಫೂಟ್‌ ಶೇಪ್‌

ನಿಮ್ಮ ಕಾಲಿನ ಹೆಬ್ಬೆರಳು ದೊಡ್ಡದಾಗಿದ್ದು, ಉಳಿದ 4 ಬೆರಳುಗಳು 45 ಡಿಗ್ರಿ ಕೋನದಲ್ಲಿ ಒರೆಯಾಗಿದ್ದರೆ ಇದನ್ನು ಈಜಿಪ್ಟಿಯನ್‌ ಫೂಟ್‌ ಶೇಪ್‌ ಎಂದು ಕರೆಯಲಾಗುತ್ತದೆ. ಈ ರೀತಿಯ ಪಾದದ ಆಕಾರ ಹೊಂದಿರುವವರು ರಾಜಮನೆತನದವರಂತೆ ಬದುಕಲು ಇಷ್ಟಪಡುತ್ತಾರೆ. ನೀವು ಕಾಳಜಿಯನ್ನು ಇಷ್ಟಪಡುತ್ತೀರಿ. ಎಲ್ಲರೂ ನಿಮ್ಮನ್ನು ಪ್ರೀತಿಸಬೇಕು ಎಂದು ಬಯಸುತ್ತೀರಿ. ನೀವು ಸ್ನೇಹಪರರಾಗಿದ್ದರೂ, ರಹಸ್ಯವಾಗಿರುತ್ತೀರಿ. ನಿಮ್ಮ ಜೀವನದ ಹಲವು ವಿಚಾರಗಳು ಗೌಪ್ಯವಾಗಿರುತ್ತದೆ. ನೀವು ಎಲ್ಲರೊಂದಿಗೂ ಎಲ್ಲಾ ವಿಚಾರಗಳನ್ನು ಹಂಚಿಕೊಳ್ಳುವವರಲ್ಲ. ಈ ರೀತಿಯ ಪಾದದ ಆಕಾರ ಹೊಂದಿರುವವರು ತಮ್ಮ ಆಲೋಚನೆಗಳನ್ನು ತಮ್ಮಲ್ಲೇ ಇರಿಸಿಕೊಳ್ಳುತ್ತಾರೆ. ಈಜಿಪ್ಟಿಯನ್‌ ಫೂಟ್‌ ಶೇಪ್‌ ಹೊಂದಿರುವವರು ಸಾಮಾನ್ಯವಾಗಿ ತಮ್ಮದೇ ಆದ ಕನಸಿನ ಲೋಕದಲ್ಲಿ ಕಳೆದುಹೋಗುತ್ತಾರೆ. ಅವರು ಮೀ ಟೈಮ್‌ ಅನ್ನು ಹೆಚ್ಚು ಇಷ್ಟಪಡುತ್ತಾರೆ. ಕನಸಿನ ಲೋಕದಲ್ಲಿ ವಿಹರಿಸುವ ಮನೋಭಾವ ಇವರದ್ದು.

ರೋಮನ್‌ ಫೂಟ್‌ ಶೇಪ್‌

ಕಾಲಿನ ಹೆಬ್ಬೆರಳು ಸೇರಿ ಮೊದಲ ಮೂರು ಬೆರಳುಗಳು ಸಮನಾಗಿದ್ದು, ಉಳಿದ ಎರಡು ಬೆರಳುಗಳು ಇಳಿಕೆಯ ಕ್ರಮದಲ್ಲಿದ್ದರೆ ಇದನ್ನು ರೋಮನ್‌ ಫೂಟ್‌ ಶೇಪ್‌ ಎಂದು ಕರೆಯುತ್ತಾರೆ. ಈ ರೀತಿಯ ಆಕಾರದ ಪಾದವುಳ್ಳವರು ಧೈರ್ಯಶಾಲಿಗಳು. ಇವರಲ್ಲಿ ಒಂದು ಹೊಸ ವರ್ಚಸ್ಸಿರುತ್ತದೆ. ಹೊಸ ಅನುಭವಗಳಿಗೆ ತೆರೆದುಕೊಳ್ಳುವುದು ಇವರಿಗೆ ಇಷ್ಟ. ಹೊಸ ಜನರನ್ನು ಭೇಟಿ ಮಾಡುವುದು, ಹೊಸ ಸಂಸ್ಕೃತಿಗಳನ್ನು ತಿಳಿದುಕೊಳ್ಳುವ ವಿಚಾರದಲ್ಲಿ ಆಸಕ್ತಿ ವಹಿಸುತ್ತಾರೆ. ತಮ್ಮ ಪ್ರೀತಿಪಾತ್ರರ ಜೊತೆ ಕಾಲ ಕಳೆಯುವುದು ಇವರಿಗೆ ಇಷ್ಟವಾಗುತ್ತದೆ. ನಿಷ್ಠಾವಂತ ಸಂಗಾತಿಯನ್ನು ಹೊಂದುವ ಇವರು ಅವರ ಸಂತೋಷಕ್ಕಾಗಿ ಏನು ಮಾಡಲು ಕೂಡ ಸಿದ್ಧರಿರುತ್ತಾರೆ. ರೋಮನ್‌ ಫೂಟ್‌ ಶೇಪ್‌ ಹೊಂದಿರುವವರು ಸಮತೋಲಿನ ಜೀವನ ನಡೆಸುತ್ತಾರೆ. ಆದರೂ ಇವರಲ್ಲಿ ಸೊಕ್ಕು, ಮೊಂಡುತನ ಹೆಚ್ಚಿರಬಹುದು.

ಗ್ರೀಕ್‌ ಫೂಟ್‌ ಶೇಪ್‌

ಕಾಲಿನ ಐದು ಬೆರಳುಗಳಲ್ಲಿ ಉಳಿದ ನಾಲ್ಕು ಬೆರಳಿಗಿಂತ 2ನೇ ಬೆರಳು ಮಾತ್ರ ಉದ್ದವಾಗಿದ್ರೆ ಇದನ್ನು ಗ್ರೀನ್‌ ಫೂಟ್‌ ಶೇಪ್‌ ಎಂದು ಕರೆಯುತ್ತಾರೆ. ಇದನ್ನು ಫ್ಲೇಮ್‌ ಫೂಟ್‌ ಅಥವಾ ಫೈರ್‌ ಫೂಟ್‌ ಎಂದು ಕೂಡ ಕರೆಯುತ್ತಾರೆ. ಈ ರೀತಿಯ ಪಾದದ ಆಕಾರವನ್ನು ಹೊಂದಿರುವವರು ಹೊಸ ಆಲೋಚನೆಗಳನ್ನು ತರುವ ಸೃಜನಶೀಲ ವ್ಯಕ್ತಿತ್ವದವರು. ನೀವು ಉತ್ಸಾಹಿಗಳು ಹಾಗೂ ಪ್ರೇರಣಾದಾಯಕರು. ನೀವು ಇತರರ ಕನಸುಗಳಿಗೆ ಬೆಂಬಲ ಸೂಚಿಸುತ್ತೀರಿ. ಕನಸು ಸಾಧಿಸಲು ಛಲವುಳ್ಳವರು. ಕ್ರಿಯಾಶೀಲ ಮನೋಭಾವದವರು. ಮೋಜಿನ ಚಟುವಟಿಕೆಗಳನ್ನು ಇಷ್ಟಪಡುತ್ತೀರಿ. ಆದರೂ ಇವರಲ್ಲಿ ಒತ್ತಡ ಭಾವನೆ ಇರುತ್ತದೆ. ನಿರ್ಧಾರಗಳನ್ನು ತೆಗೆದುಕೊಳ್ಳಲು ಇವರು ಪರದಾಡುತ್ತಾರೆ. ಅತಿಯಾದ ಶಕ್ತಿ, ಸಾಮರ್ಥ್ಯವೇ ಇವರ ಬಳಲಿಕೆಗೆ ಕಾರಣವಾಗಬಹುದು.

ಸ್ಕ್ವೇರ್‌ ಫೂಟ್‌ ಶೇಪ್‌

ಹೆಬ್ಬೆರಳು ಸೇರಿದಂತೆ ಕಾಲಿನ ಎಲ್ಲಾ ಬೆರಳುಗಳ ಎತ್ತರ ಸಾಮಾನ್ಯವಾಗಿ ಒಂದೇ ಆಗಿದ್ದರೆ, ನೀವು ಸ್ಕ್ವೇರ್‌ ಫೂಟ್‌ ಶೇಪ್‌ ಹೊಂದಿದ್ದೀರಿ ಎಂದರ್ಥ. ನೀವು ಪ್ರಾಯೋಗಿಕ, ವಿಶ್ವಾಸಾರ್ಹ, ಪ್ರಾಮಾಣಿಕ ಮತ್ತು ಸಮತೋಲಿತ ಮನೋಭಾವದವರು. ನೀವು ಸಮತೋಲಿತ ಜೀವನ ನಡೆಸುತ್ತೀರಿ. ಎಲ್ಲಾ ವಿವರಗಳನ್ನು ಎಚ್ಚರಿಕೆಯಿಂದ ಪರಿಶೀಲಿಸುತ್ತೀರಿ. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಅದರ ಸಾಧಕ-ಬಾಧಕಗಳನ್ನು ವಿಮರ್ಶಿಸುತ್ತೀರಿ. ನಿಮ್ಮ ನಿರ್ಧಾರಗಳಿಗೆ ಒಂದು ತೂಕವಿರುತ್ತದೆ. ನೀವು ಒಂದು ನಿರ್ಧಾರ ತೆಗೆದುಕೊಂಡರೆ ಅದನ್ನು ಪೂರ್ಣ ಮನಸ್ಸು, ಹೃದಯದಿಂದ ಒಪ್ಪಿಕೊಳ್ಳುತ್ತೀರಿ. ಇವರು ಕ್ಷಣಿಕ ಸುಖಕ್ಕೆ ಆಸೆ ಪಡುವವರಲ್ಲ.

ನೋಡಿದ್ರಲ್ಲ ಹೆಬ್ಬೆರಳು, ಕಾಲಿನ ಬೆರಳುಗಳ ಆಧಾರದ ಮೇಲೆ ಗುಣ, ವ್ಯಕ್ತಿತ್ವ ಎಂಥದ್ದು ಎಂದು. ಈಗಲೇ ನಿಮ್ಮ ಕಾಲಿನ ಬೆರಳು ಆಕಾರ ಗಮನಿಸಿ, ನಿಮ್ಮ ವ್ಯಕ್ತಿತ್ವ ಹೇಗೆ ತಿಳಿಯಿರಿ.

ವಿಭಾಗ