Personality Test: ಮಲಗುವ ಭಂಗಿಯಿಂದ ತಿಳಿಯಬಹುದು ವ್ಯಕ್ತಿತ್ವ; ನೀವು ಯಾವ ರೀತಿ ಮಲಗೋದು, ನಿಮ್ಮ ಸುಪ್ತ ಸ್ವಭಾವ ಹೇಗಿರುತ್ತೆ ನೋಡಿ
ಕನ್ನಡ ಸುದ್ದಿ  /  ಜೀವನಶೈಲಿ  /  Personality Test: ಮಲಗುವ ಭಂಗಿಯಿಂದ ತಿಳಿಯಬಹುದು ವ್ಯಕ್ತಿತ್ವ; ನೀವು ಯಾವ ರೀತಿ ಮಲಗೋದು, ನಿಮ್ಮ ಸುಪ್ತ ಸ್ವಭಾವ ಹೇಗಿರುತ್ತೆ ನೋಡಿ

Personality Test: ಮಲಗುವ ಭಂಗಿಯಿಂದ ತಿಳಿಯಬಹುದು ವ್ಯಕ್ತಿತ್ವ; ನೀವು ಯಾವ ರೀತಿ ಮಲಗೋದು, ನಿಮ್ಮ ಸುಪ್ತ ಸ್ವಭಾವ ಹೇಗಿರುತ್ತೆ ನೋಡಿ

ನಮ್ಮ ದೇಹದ ಅಂಗಾಂಗಗಳು ಹೇಗಿವೆ ಎಂಬುದರ ಮೇಲೆ ವ್ಯಕ್ತಿತ್ವ ನಿರ್ಧಾರವಾಗುತ್ತದೆ ಎಂಬುದನ್ನು ನೀವು ಕೇಳಿರಬಹುದು. ಅಂತೆಯೇ ನಾವು ನಡೆದಾಡುವ ರೀತಿ, ಕುಳಿತುಕೊಳ್ಳುವ ರೀತಿ, ಮಲಗುವ ರೀತಿಯಿಂದಲೂ ವ್ಯಕ್ತಿತ್ವ ಸ್ವಭಾವ ತಿಳಿಯಬಹುದು. ಇಂದಿನ ಪರ್ಸನಾಲಿಟಿ ಟೆಸ್ಟ್‌ನಲ್ಲಿ ನಾವು ಮಲಗುವ ರೀತಿಯ ಮೂಲಕ ನಮ್ಮ ವ್ಯಕ್ತಿತ್ವ ಹೇಗಿರುತ್ತದೆ ಎಂಬುದನ್ನು ತಿಳಿಯೋಣ.

ಪರ್ಸನಾಲಿಟಿ ಟೆಸ್ಟ್
ಪರ್ಸನಾಲಿಟಿ ಟೆಸ್ಟ್ (PC: Canva )

ಮನುಷ್ಯರು ಒಬ್ಬೊಬ್ಬರು ಒಂದೊಂದು ರೀತಿ ಮಲಗುತ್ತಾರೆ. ಕೆಲವು ಉದ್ದಕ್ಕೆ ನೇರವಾಗಿ ಮಲಗಿದರೆ, ಕೆಲವರು ಅಡ್ಡಕ್ಕೆ ಮಲಗುತ್ತಾರೆ. ಇನ್ನೂ ಕೆಲವರು ಹೊಟ್ಟೆ ಕೆಳಗೆ ಮಾಡಿ ಮಲಗುತ್ತಾರೆ. ಕೆಲವರಿಗೆ ಕಾಲು ಚಾಚಿ ಮಲಗುವ ಅಭ್ಯಾಸವಿದೆ. ಹೀಗೆ ಒಬ್ಬೊಬ್ಬರು ಮಲಗುವ ರೀತಿಯು ಅವರ ವ್ಯಕ್ತಿತ್ವವನ್ನು ಸೂಚಿಸುತ್ತದೆ.

ಯುರೋಪಿಯನ್ ಜರ್ನಲ್ ಆಫ್ ಪರ್ಸನಾಲಿಟಿಯಲ್ಲಿ ಪ್ರಕಟವಾದ ಇತ್ತೀಚಿನ ಅಧ್ಯಯನವು ಮಲಗುವ ಸ್ಥಾನಗಳು ಮತ್ತು ವ್ಯಕ್ತಿತ್ವದ ಗುಣಲಕ್ಷಣಗಳ ನಡುವಿನ ಸಂಪರ್ಕವನ್ನು ಪರಿಶೀಲಿಸಿದೆ. ಸ್ಲೀಪ್ ರೀಸರ್ಚರ್ ಸ್ಯಾಮ್ಯುಯೆಲ್ ಡಂಕೆಲ್ ಮಲಗುವ ಸ್ಥಾನಗಳು ಮತ್ತು ವ್ಯಕ್ತಿತ್ವದ ಗುಣಲಕ್ಷಣಗಳ ನಡುವಿನ ಸಂಬಂಧವನ್ನು ಅನ್ವೇಷಿಸಲು ವಿವಿಧ ಪರೀಕ್ಷೆಗಳನ್ನು ನಡೆಸಿದ್ದಾರೆ. ಈ ಅಧ್ಯಯನಗಳ ಪ್ರಕಾರ ಬೆನ್ನಿನ ಮೇಲೆ ನೇರವಾಗಿ ಮಲಗುವವರು ಹೆಚ್ಚು ಆತ್ಮವಿಶ್ವಾಸ ಹೊಂದಿರುವವರು, ಹೊಟ್ಟೆಯನ್ನು ಕೆಳಗೆ ಮಾಡಿ ಮಲಗುವವರು ಭಾವನಾತ್ಮಕ ಜೀವಿಗಳು ಹೀಗೆ ಒಂದೊಂದು ಭಂಗಿಗೂ ಒಂದೊಂದು ಅರ್ಥವನ್ನು ತಿಳಿಸಿದೆ. ಹಾಗಾದರೆ ಬೇರೆ ಬೇರೆ ರೀತಿ ಮಲಗುವವರ ವ್ಯಕ್ತಿತ್ವ ಹೇಗಿರುತ್ತೆ ನೋಡೋಣ.

ಭ್ರೂಣದಂತೆ ಮಲಗುವವರು

ಅಂದರೆ ಅಡ್ಡಕ್ಕೆ ಮಲಗಿ ಕಾಲನ್ನು ಮಡಿಚಿರುವಂತೆ ಮಲಗುವುದು. ಸುರಳಿಯಾಗಿ ಮಲಗುವುದು ಎಂದೂ ಇದನ್ನು ಕರೆಯುತ್ತಾರೆ. ಈ ರೀತಿ ಮಲಗುವವರು ಹೊರಗಿನಿಂದ ಜೋರಾಗಿರುತ್ತಾರೆ. ಆದರೆ ಅಂತಮುರ್ಖಿಯಾಗಿ ಇವರು ಸಂಗಾತಿ ಅಥವಾ ಆತ್ಮೀಯರ ರಕ್ಷಣೆ ತಮಗಿರಬೇಕು ಎಂದು ಬಯಸುತ್ತಾರೆ. ಈ ರೀತಿ ಮಲಗುವುದು ದುರ್ಬಲವಾಗಿರುವುದು ಹಾಗೂ ಜೀವನದ ಸಮಸ್ಯೆಗಳಿಂದ ಸಂಪರ್ಕ ಕಡಿತಗೊಳ್ಳುವುದನ್ನು ಸೂಚಿಸುತ್ತದೆ. ಇವರು ಕುಟುಂಬದವರು ಜೊತೆಗೆ ಇದ್ದಾಗ ಹೆಚ್ಚು ಸುರಕ್ಷತೆಯ ಭಾವವನ್ನು ಫೀಲ್ ಮಾಡುತ್ತಾರೆ.

ಒಂದು ಬದಿಯಲ್ಲಿ ಮಲಗುವುದು

ನೀವು ನಿಮ್ಮ ಎಡ ಭಾಗ ಅಥವಾ ಬಲ ಭಾಗದಲ್ಲಿ ಮಲಗುವ ಅಭ್ಯಾಸ ಹೊಂದಿದ್ದರೆ ನೀವು ಯಾರೊಂದಿಗೆ ಬೇಕಾದರೂ ಸುಲಭವಾಗಿ ಮಾತನಾಡಲು ಸಾಧ್ಯವಾಗುವ ವ್ಯಕ್ತಿ. ನೀವು ಜನರನ್ನು ತಕ್ಷಣಕ್ಕೆ ನಂಬುತ್ತೀರಿ. ಆದರೆ ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ ನೀವು ಸಮತೋಲನದಿಂದಿರುತ್ತೀರಿ. ನಿರ್ಧಾರ ತೆಗೆದುಕೊಳ್ಳುವ ಮುನ್ನ ಎಲ್ಲಾ ಅಂಶಗಳನ್ನು ಪರಿಗಣಿಸಿ ಅಂತಿಮ ನಿರ್ಧಾರಕ್ಕೆ ಬರುತ್ತೀರಿ.

ಪ್ರಿಫಾಲ್ ಮಲಗುವ ಭಂಗಿ

ಇದು ನೀವು ಆಕಾಶದಿಂದ ಬಿದ್ದಂತಹ ಭಂಗಿ. ಈ ನೀವು ಮಲಗುವ ಅಭ್ಯಾಸ ನಿಮಗಿದ್ದರೆ ನೀವು ಮೋಜನ್ನು ಇಷ್ಟಪಡುವ ವ್ಯಕ್ತಿ. ನಾವು ಸಾಮಾಜಿಕವಾಗಿ ಬೆರೆಯಲು ಇಷ್ಟಪಡುತ್ತೀರಿ, ಯಾವಾಗಲೂ ಸಾಹಸಮಯ ಕೆಲಸಗಳಲ್ಲಿ ತೊಡಗುವುದು ನಿಮಗೆ ಇಷ್ಟವಾಗುತ್ತದೆ. ನಿಮ್ಮ ನಿರೀಕ್ಷೆ, ಅಂದಾಜು ಎಲ್ಲವೂ ಮಹತ್ತರವಾಗಿರುತ್ತದೆ.

ಬೆನ್ನು ನೆಲಕ್ಕೆ ಆನಿಸಿ ಮಲಗುವುದು

ನೀವು ಬೆನ್ನ ಮೇಲೆ ನೇರವಾಗಿ ಮಲಗುವ ಅಭ್ಯಾಸ ಹೊಂದಿದ್ದರೆ ನೀವು ಸಾಕಷ್ಟು ಆತ್ಮವಿಶ್ವಾಸ ಹೊಂದಿದವರಾಗುತ್ತೀರಿ. ನೀವು ಜೀವನವನ್ನು ನೇರವಾಗಿ ನಿಭಾಯಿಸುತ್ತೀರಿ. ಜಗಳ, ಮನಸ್ತಾಪ ನಿಮಗೆ ಇಷ್ಟವಾಗದ ವಿಚಾರಗಳು. ಯಾವಾಗಲೂ ಶಾಂತವಾಗಿರುವ ನೀವು ಅಗತ್ಯವಿದ್ದಾಗ ಧ್ವನಿ ಎತ್ತುತ್ತೀರಿ. ನೀವು ಯಾವುದಕ್ಕೂ ಹಠಾತ್ ಪ್ರತಿಕ್ರಿಯೆ ನೀಡುವುದಿಲ್ಲ. ಯೋಚಿಸಿ ಉತ್ತರ ಹೇಳುತ್ತೀರಿ.

ಹೊಟ್ಟೆಯ ಮೇಲೆ ಮಲಗುವುದು

ಹೊಟ್ಟೆಯ ಮೇಲೆ ಮಲಗುವ ಅಭ್ಯಾಸ ನಿಮಗಿದ್ದರೆ ನೀವು ನೇರ ವ್ಯಕ್ತಿತ್ವದವರು ಎಂದು ತಿಳಿಯಬಹುದು. ಇದು ನಿಮ್ಮ ಮುಕ್ತ ಮನೋಭಾವವನ್ನು ಸೂಚಿಸುತ್ತದೆ. ನೀವು ಕಠಿಣ ಟೀಕೆಗಳನ್ನು ರಚನಾತ್ಮಕವಾಗಿ ನಿಭಾಯಿಸಬೇಕು. ನೀವು ನಿಮ್ಮ ಹೊಟ್ಟೆಯ ಮೇಲೆ ಮಲಗಿದರೆ, ನೀವು ವಿನೋದ, ತಮಾಷೆ ಮತ್ತು ಮುಕ್ತ ಮನಸ್ಸಿನ ವ್ಯಕ್ತಿ ಎಂದು ಸೂಚಿಸುತ್ತದೆ. ನೀವು ಎಲ್ಲವನ್ನೂ ನಿಭಾಯಿಸುವ ಪ್ರಯತ್ನ ಮಾಡುತ್ತೀರಿ. ನೀವು ಆಶಾವಾದಿ ದೃಷ್ಟಿಕೋನವನ್ನು ಕಾಪಾಡಿಕೊಳ್ಳುತ್ತೀರಿ. ಹಠಾತ್ ಪ್ರವೃತ್ತಿಗಳು, ಅಭದ್ರತೆಗಳು ಮತ್ತು ಆತ್ಮವಿಶ್ವಾಸದ ಕೊರತೆಯನ್ನು ಹೊಂದಿದ್ದೀರಿ, ಇದು ನಿಮ್ಮ ಪ್ರಗತಿಗೆ ಅಡ್ಡಿಯಾಗಬಹುದು. ಆದರೆ ಕೋಪದಂತಹ ನಕಾರಾತ್ಮಕ ಭಾವನೆಗಳನ್ನು ಮರೆಮಾಡಲು ಅವು ಗುರಾಣಿಯಾಗಿ ಕಾರ್ಯನಿರ್ವಹಿಸುತ್ತವೆ.

(ಗಮನಿಸಿ: ಈ ಲೇಖನವು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ದೊರೆತ ಮಾಹಿತಿಯನ್ನು ಆಧರಿಸಿದ ಬರಹ. ಈ ಅಂಶಗಳನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ (ಎಚ್‌ಟಿ ಕನ್ನಡ) ಪುಷ್ಟೀಕರಿಸುವುದಿಲ್ಲ. ಈ ಕುರಿತ ಹೆಚ್ಚಿನ ಮಾಹಿತಿಗೆ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)

Whats_app_banner