Viral: ಫ್ಲೈಟ್ ಹತ್ತಿ ನೋಡಿದ್ರೆ ಸೀಟ್ ಮೇಲಿನ ಕುಷನ್ ನಾಪತ್ತೆ; ವಿಮಾನದಲ್ಲೂ ಹೀಗೆಲ್ಲಾ ಆಗುತ್ತಾ ಅಂದ್ರು ನೆಟ್ಟಿಗರು; ಏನಿದು ಕಥೆ?
ಸಾವಿರಾರು ರೂಪಾಯಿ ಕೊಟ್ಟು ಫ್ಲೈಟ್ ಟಿಕೆಟ್ ತಗೊಂಡು ವಿಮಾನ ಹತ್ತಿ ನೋಡಿದ್ರೆ ಸೀಟ್ ಮೇಲಿನ ಕುಷನ್ ಪತ್ತೆ ಇಲ್ಲ, ಇದಾಗಿದ್ದು ಹೊರದೇಶದಲ್ಲೇನಲ್ಲ, ಬೆಂಗಳೂರು-ಭೋಪಾಲ್ ನಡುವೆ ಸಂಚರಿಸುವ ವಿಮಾನದ ಕಥೆಯಿದು. ಏನಿದು ವ್ಯಥೆ ನೋಡಿ.

ವಿಮಾನ ಪ್ರಯಾಣ ಅಂದ್ರೆ ಎಲ್ರಿಗೂ ಒಂಥರಾ ಥ್ರಿಲ್ ಇರೋದು ಸಹಜ. ಎಷ್ಟೇ ಬಾರಿ ವಿಮಾನ ಪ್ರಯಾಣ ಮಾಡಿದ್ರು ಆ ಥ್ರಿಲ್ ಕಡಿಮೆ ಆಗೊಲ್ಲ ಅಂತಾನೇ ಹೇಳಬಹುದು. ಆದರೆ ಇಲ್ಲೊಂದು ವಿಮಾನದ ಥ್ರಿಲ್ಲಿಂಗ್ ಕಥೆ ಕೇಳಿದ್ರೆ ನೀವು ಬಿದ್ದು ಬಿದ್ದು ನಗ್ತಿರೋ, ಅಳ್ತಿರೋ ನೀವೇ ಡಿಸೈಡ್ ಮಾಡಿ. ಇದು ಬೆಂಗಳೂರು-ಭೋಪಾಲ್ ನಡುವೆ ಸಂಚಾರ ಮಾಡುವ ಇಂಡಿಗೋ ವಿಮಾನದ ಕಥೆ. ಈ ವಿಮಾನದ ಪ್ರಯಾಣಿಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ವಿಮಾನದ ಅನಾಹುತ ಫೋಟೊವೊಂದನ್ನು ಹಂಚಿಕೊಂಡಿದ್ದಾರೆ. ಅದೇನಪ್ಪಾ ಅಂಥದ್ದು ಅಂತೀರಾ, ಅವರು ಬುಕ್ ಮಾಡಿರುವ ಸೀಟ್‌ನಲ್ಲಿ ಕುಷನ್ ಇರ್ಲೆ ಇಲ್ಲ. ಇದನ್ನು ಫೋಟೊ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
IndiGo6E ಅನ್ನು ತಮ್ಮ ಪೋಸ್ಟ್‌ನಲ್ಲಿ ಟ್ಯಾಗ್ ಮಾಡಿರುವ ಆಕೆ ಅದ್ಭುತ, ನಾನು ಸೇಫ್ ಆಗಿ ಬೆಂಗಳೂರಿನಿಂದ ಭೋಪಾಲ್ ತಲುಪುತ್ತೇನೆ ಎಂದು ಅಂದುಕೊಳ್ಳುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಆದರೆ ಇವರ ಈ ಪೋಸ್ಟ್‌ಗೆ ಉತ್ತರಿಸಿರುವ ಇಂಡಿಗೊ ಏರ್‌ಲೈನ್ಸ್ ಸ್ವಚ್ಛ ಮಾಡುವ ವೇಳೆ ಕುಷನ್‌ಗಳನ್ನು ತೆಗೆದು ಇರಿಸಿಲಾಗಿತ್ತು ಎಂದು ಪ್ರತಿಕ್ರಿಯೆ ನೀಡಿದೆ.
ಫ್ಲೈಟ್ ಡಿಪಾರ್ಚರ್‌ಗೂ ಮೊದಲು ಸ್ವಚ್ಛ ಮಾಡುವ ಉದ್ದೇಶದಿಂದ ಕುಷನ್‌ಗಳನ್ನು ತೆಗೆದು ಇರಿಸಲಾಗಿದೆ ಎಂದು ಇಂಡಿಗೊ ಸ್ವಷ್ಟ ಪಡಿಸಿದೆ. ಅಲ್ಲದೇ ಈ ಇಂಡಿಗೋ ಕ್ಯಾಬಿನ್ ಸಿಬ್ಬಂದಿ ಆ ಹೊತ್ತಿನಲ್ಲಿ ಕುಷನ್ ಇಲ್ಲದೇ ಇರುವ ಬಗ್ಗೆ ಸ್ವಷ್ಪ ಮಾಹಿತಿ ನೀಡಿದ್ದರು ಎಂದು ಬರೆದುಕೊಂಡಿದೆ.
ಸ್ಪಷ್ಟನೆ ನೀಡಿದ ಇಂಡಿಗೋ ಏರ್‌ಲೈನ್ಸ್
ಆಕೆಯ ಪೋಸ್ಟ್‌ಗೆ ಉತ್ತರ ನೀಡಿರುವ ಇಂಡಿಗೊ ʼನಮ್ಮೊಂದಿಗೆ ಮಾತನಾಡಿದಕ್ಕೆ ಧನ್ಯವಾದಗಳು. ಸ್ವಚ್ಛ ಮಾಡುವ ಮುನ್ನ ಸೀಟ್ ಕುಶನ್‌ಗಳನ್ನು ತೆಗೆದು ಇರಿಸಲಾಗಿತ್ತು. ನಮ್ಮ ಕ್ಯಾಬಿನ್ ಸಿಬ್ಬಂದಿ ಆ ಆಸನಗಳನ್ನು ನಿಗದಿ ಪಡಿಸಿದ ಗ್ರಾಹಕರಿಗೆ ತಕ್ಷಣವೇ ಮಾಹಿತಿ ನೀಡಿದ್ದರು. ನಾವು ಆಗಾಗ ಸ್ವಚ್ಛ ಮಾಡುವ ಕಾರಣ ಕುಶನ್ ತೆಗೆದು ಇರಿಸಲಾಗಿತ್ತುʼ ಎಂದಿದ್ದಾರೆ.
ʼನಾವು ನಮ್ಮ ಗ್ರಾಹಕರಿಗೆ ಅತ್ಯುತ್ತಮ ದರ್ಜೆಯ ಸರ್ವಿಸ್ ನೀಡುತ್ತೇವೆ. ಹೈಜಿನ್ ಕಾಪಾಡಿಕೊಳ್ಳುವುದರಲ್ಲಿ ನಾವು ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಬರೆದುಕೊಂಡಿದ್ದಾರೆ.
ಈ ಪೋಸ್ಟ್ ಸಾಕಷ್ಟು ವೈರಲ್ ಆಗಿದೆ. ನೂರಾರು ಮಂದಿ ಈ ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದಾರೆ.
(This copy first appeared in Hindustan Times Kannada website. To read more like this please logon to kannada.hindustantimes.com)
