Brain Teaser: ಚಿತ್ರದಲ್ಲಿರುವ ಪ್ರಾಣಿಯ ಮುಖಗಳಲ್ಲಿ ಒಂದೇ ಒಂದು ಮಾತ್ರ ಭಿನ್ನವಾಗಿದೆ, ಅದು ಯಾವುದು? 4 ಸೆಕೆಂಡ್‌ನಲ್ಲಿ ಕಂಡುಹಿಡಿಯಿರಿ
12 ಯೂನಿಕಾರ್ನ್‌ಗಳಿರುವ ಚಿತ್ರವೊಂದು ಇಲ್ಲಿದೆ, ಈ ಎಲ್ಲವೂ ನೋಡಲು ಒಂದೇ ರೀತಿ ಇವೆ. ಆದರೂ ಇದರಲ್ಲಿ ಒಂದೇ ಒಂದು ಮಾತ್ರ ಭಿನ್ನವಾಗಿದೆ. ಆ ಭಿನ್ನವಾಗಿರುವ ಮುಖ ಯಾವುದು ಎಂದು ನೀವು ಕಂಡು ಹಿಡಿಯಬೇಕು. ನಿಮಗಿರುವುದು ಕೇವಲ 4 ಸೆಕೆಂಡ್ ಸಮಯ. ನಿಮ್ಮ ಕಣ್ಣಿಗೊಂದು ಪರೀಕ್ಷೆ ಇದು.

ನಿಮ್ಮ ಕಣ್ಣು ಎಷ್ಟು ಸೂಕ್ಷ್ಮವಾಗಿದೆ ಎಂದು ತಿಳಿಯಲು ಬಯಸಿದರೆ ನಿಮಗಾಗಿ ಇಲ್ಲೊಂದು ಚಾಲೆಂಜ್ ಇದೆ. ಈ ಚಾಲೆಂಜ್ ಪ್ರಕಾರ ಚಿತ್ರದಲ್ಲಿ ಇರುವ ವ್ಯತ್ಯಾಸವನ್ನು ನೀವು ಕಂಡುಹಿಡಿಯಬೇಕು, ಅದು ಕೇವಲ 4 ಸೆಕೆಂಡ್ ಒಳಗೆ. ಇಂದಿನ ಚಿತ್ರದಲ್ಲಿರುವ ಯೂನಿಕಾರ್ನ್‌ಗಳಲ್ಲಿ ಯಾವುದು ಭಿನ್ನವಾಗಿದೆ ಎಂದು ನೀವು ಹೇಳಬೇಕು. ಇದು ನಿಮಗಿರುವ ಸವಾಲು.
ಈ ಚಿತ್ರದಲ್ಲಿ ಒಟ್ಟು 12 ಯೂನಿಕಾರ್ನ್‌ಗಳಿವೆ. ಈ ಎಲ್ಲವೂ ನೋಡಲು ಒಂದೇ ರೀತಿ ಇವೆ. ಕೊಂಚವು ವ್ಯತ್ಯಾಸ ಕಾಣದ ಈ ಚಿತ್ರದಲ್ಲಿ ಒಂದೇ ಒಂದು ಯೂನಿಕಾರ್ನ್ ಮಾತ್ರ ಭಿನ್ನವಾಗಿದೆ. ಅದು ಯಾವುದು ಎಂದು ಕಂಡುಹಿಡಿಯುವುದು ಇಂದಿನ ಬ್ರೈನ್ ಟೀಸರ್‌ನ ಸವಾಲು. ಕೇವಲ 4 ಸೆಕೆಂಡ್‌ನಲ್ಲಿ ಭಿನ್ನವಾಗಿರುವ ಯೂನಿಕಾರ್ನ್ ಅನ್ನು ಕಂಡುಹಿಡಿಯಬೇಕು.
ಈ ಬ್ರೈನ್ ಟೀಸರ್‌ನಲ್ಲಿ ಮೇಲ್ನೋಟಕ್ಕೆ ನೋಡಲು ಎಲ್ಲವೂ ಒಂದೇ ರೀತಿ ಕಾಣುತ್ತವೆ. ಆದರೆ ಸೂಕ್ಷ್ಮವಾಗಿ ಗಮನಿಸಿದಾಗ ಇದರಲ್ಲಿ ಇರುವ ವ್ಯತ್ಯಾಸ ಗೋಚರವಾಗಬಹುದು. ಹಾಗಾದರೆ ಈ ವ್ಯತ್ಯಾಸ ಯಾವುದು ಎಂದು ನೀವು ಕಂಡುಹಿಡಿಯಬೇಕು. ಮೇಲ್ನೋಟಕ್ಕೆ ಗಮನಿಸಿ ವ್ಯತ್ಯಾಸ ಇಲ್ಲ ಎಂದುಕೊಳ್ಳಬೇಡಿ. ಸೂಕ್ಷ್ಮವಾಗಿ ಗಮನಿಸಿದರೆ ಖಂಡಿತ ವ್ಯತ್ಯಾಸ ಗೋಚರವಾಗುತ್ತದೆ.
4 ಸೆಕೆಂಡ್ ಕಳೆದ ನಂತರವೂ ಭಿನ್ನವಾಗಿರುವ ಯೂನಿಕಾರ್ನ್ ಯಾವುದು ಎಂದು ಗುರುತಿಸಲು ನಿಮಗೆ ಸಾಧ್ಯವಾಗಿಲ್ಲವಾ, ಚಿಂತೆ ಮಾಡ್ಬೇಡಿ. ಭಿನ್ನವಾಗಿರುವ ಯೂನಿಕಾರ್ನ್ ಗುರುತಿಸಲು ನಾವು ನಿಮಗೆ ಸಹಾಯ ಮಾಡುತ್ತೇವೆ. 10ನೇ ಯೂನಿಕಾರ್ನ್ ನೋಡಿ. ಇದರ ಬಾಯಿಯ ಬಳಿ ಗೆರೆಯಿಲ್ಲ. ಉಳಿದ ಎಲ್ಲಾ ಯೂನಿಕಾರ್ನ್‌ಗಳ ಬಾಯಿಯ ಬಳಿ ಗೆರೆ ಇರುವುದು ಗಮನಿಸಿ. ಇದುವೇ ಭಿನ್ನವಾಗಿರುವ ಯೂನಿಕಾರ್ನ್ ಆಗಿದೆ.
ನೋಡಿದ್ರಲ್ಲ 4 ಸೆಕೆಂಡ್ ಒಳಗೆ ಇಂತಹ ವ್ಯತ್ಯಾಸಗಳನ್ನು ಗುರುತಿಸುವುದನ್ನು ಸುಲಭವಲ್ಲ ನಿಜ, ಆದರೆ ಇಂತಹ ಬ್ರೈನ್‌ಟೀಸರ್‌ಗಳಿಗೆ ಉತ್ತರ ಹುಡುಕುವ ಪ್ರಯತ್ನ ಮಾಡುವುದರಿಂದ ಕಣ್ಣು, ಮೆದುಳು ಚುರುಕಾಗುತ್ತದೆ. ಇದರಿಂದ ಸಮಸ್ಯೆ ಪರಿಹರಿಸುವ ಗುಣವು ನಮ್ಮಲ್ಲಿ ಬೆಳೆಯುತ್ತದೆ. ಇದರಿಂದ ಏಕಾಗ್ರತೆ ವೃದ್ಧಿಯಾಗಿ ಬುದ್ಧಿ ಚುರುಕಾಗುತ್ತದೆ.
ಈ ಬ್ರೈನ್ ಟೀಸರ್‌ಗಳನ್ನೂ ಓದಿ
Brain Teaser: ಬುದ್ಧಿವಂತರಿಗಾಗಿ ಈ ಪ್ರಶ್ನೆ, ಚಿತ್ರದಲ್ಲಿ ಖಾಲಿ ಇರುವ ಜಾಗವನ್ನು ನೀವು ತುಂಬಿಸಬೇಕು, ನಿಮಗಿರೋದು 15 ಸೆಕೆಂಡ್ ಸಮಯ
ಮೆದುಳಿಗೆ ಕೆಲಸ ಕೊಡಬೇಕು ಎಂದು ನಿಮಗೆ ಅನ್ನಿಸ್ತಾ ಇದ್ಯಾ, ಹಾಗಾದರೆ ನಿಮಗಾಗಿ ಇಲ್ಲೊಂದು ಬ್ರೈನ್ ಟೀಸರ್ ಚಿತ್ರವಿದೆ. ಬಣ್ಣದ ಚೌಕವಿರುವ ಈ ಚಿತ್ರದಲ್ಲಿ ಒಂದು ಕಡೆ ಖಾಲಿ ಬಿಡಲಾಗಿದೆ, ಅಲ್ಲಿ ಯಾವ ಪ್ಯಾರ್ಟನ್ ಬರುತ್ತೆ ಎಂಬುದನ್ನು ನೀವು ಕಂಡುಹಿಡಿಯಬೇಕು. ನಿಮಗಿರುವ 15 ಸೆಕೆಂಡ್ ಸಮಯ, ಟ್ರೈ ಮಾಡಿ.
Brain Teaser: ನಿಮ್ಮ ಕಣ್ಣು ತುಂಬಾ ಸೂಕ್ಷ್ಮ ಇದ್ಯಾ, ನಿಮಗಾಗಿ ಇಲ್ಲಿದೆ ಒಂದು ಚಾಲೆಂಜ್; ಚಿತ್ರದಲ್ಲಿರುವ ನಂಬರ್ ಎಷ್ಟು ಹೇಳಿ
ನಿಮ್ಮ ಕಣ್ಣು ತುಂಬಾನೇ ಶಾರ್ಪ್ ಇದೆ ಎಂದು ನಿಮಗೆ ಅನ್ನಿಸ್ತಾ ಇದ್ಯಾ, ಹಾಗಾದ್ರೆ ನಿಮಗಾಗಿ ಇಲ್ಲೊಂದು ಚಾಲೆಂಜ್ ಇದೆ. ಎಕ್ಸ್‌ನಲ್ಲಿ ವೈರಲ್ ಆಗಿರುವ ಈ ಬ್ರೈನ್ ಟೀಸರ್‌ಗೆ ಉತ್ತರ ಹೇಳಲು ಟ್ರೈ ಮಾಡಿ. ಚಿತ್ರದಲ್ಲಿ ನಂಬರ್ ಯಾವುದು ಎಂದು ಕಂಡುಹಿಡಿಯುವುದು ನಿಮಗಿರುವ ಸವಾಲು. ನಿಮಗಿರೋದು ಕೇವಲ 15 ಸೆಕೆಂಡ್ ಸಮಯ.