Brain Teaser: ನಿಮ್ಮ ಕಣ್ಣಿಗೊಂದು ಪರೀಕ್ಷೆ, 20 ಸೆಕೆಂಡ್‌ನಲ್ಲಿ ಹಸಿರು ಬಣ್ಣದ ವೃತ್ತದಲ್ಲಿ ಅಡಗಿರುವ ನಂಬರ್ ಯಾವುದು ಕಂಡುಹಿಡಿಯಿರಿ
ನಿಮ್ಮ ಕಣ್ಣು ಸಖತ್ ಶಾರ್ಪ್ ಅಂತ ನಿಮಗೆ ಅನ್ನಿಸ್ತಾ ಇದ್ಯಾ, ಹಾಗಾದರೆ ನಿಮಗೊಂದು ಚಾಲೆಂಜ್ ಇದೆ. ಈ ಬ್ರೈನ್ ಟೀಸರ್‌ನಲ್ಲಿ ಇರುವ ಹಸಿರು ಬಣ್ಣದ ವೃತ್ತದ ಒಳಗೆ ಬರೆದಿರುವ ನಂಬರ್ ಯಾವುದು ಎಂದು 20 ಸೆಕೆಂಡ್‌ನಲ್ಲಿ ನೀವು ಕಂಡುಹಿಡಿಯಬೇಕು, ಕಣ್ಣು ನೋವು ಬಂದರೆ ನಾವು ಜವಾಬ್ದಾರರಲ್ಲ.

ಬ್ರೈನ್ ಟೀಸರ್‌ಗಳಿಗೆ ಉತ್ತರ ಹುಡುಕುವುದು ನಿಮಗೂ ಫೇವರಿಟ್ ಹವ್ಯಾಸವಾಗಿದ್ರೆ ಇಲ್ಲೊಮ್ಮೆ ಗಮನಿಸಿ. ಇಂದಿನ ಬ್ರೈನ್ ಟೀಸರ್ ನಿಮ್ಮ ಗಮನಶಕ್ತಿಯನ್ನು ಪರೀಕ್ಷೆ ಮಾಡುತ್ತದೆ. ಇದು ನಿಮ್ಮ ಕಣ್ಣಿಗೂ ಸವಾಲು ಹಾಕುವುದು ಸುಳ್ಳಲ್ಲ. ಹಾಗಂತ ಇದೇನು ಪರಿಹರಿಸಲು ಸಾಧ್ಯವಾಗದೇ ಇರುವಂತಹ ಸವಾಲೇನಲ್ಲ. ಇದು ನಿಜಕ್ಕೂ ಸರಳವಾಗಿದ್ದು, ಟ್ರಿಕ್ಕಿ ಎನ್ನಿಸುವಂತಿದೆ.
ಇಂದಿನ ಬ್ರೈನ್ ಟೀಸರ್ ಚಿತ್ರದಲ್ಲಿ ಒಂದು ಹಸಿರು ಬಣ್ಣದ ವೃತ್ತವಿದೆ. ಇದರಲ್ಲಿ ಒಂದು ನಂಬರ್ ಅನ್ನು ಬರೆಯಲಾಗಿದೆ. ಆ ನಂಬರ್ ಯಾವುದು ಎಂಬುದನ್ನು ನೀವು ಕಂಡುಹಿಡಿಯಬೇಕು. ನಿಮ್ಮ ಕಣ್ಣಿನ ದೃಷ್ಟಿ ಸಾಮಾನ್ಯವಾಗಿದ್ದರೆ ಖಂಡಿತ ನಿಮಗೆ ಈ ನಂಬರ್ ಅನ್ನು ಕಂಡುಹಿಡಿಯಲು ಸಾಧ್ಯವಾಗುವುದಿಲ್ಲ. ಯಾಕೆಂದರೆ ಈ ಚಿತ್ರದಲ್ಲಿ ಮೇಲ್ನೋಟಕ್ಕೆ ಯಾವುದೇ ಸಂಖ್ಯೆಯೂ ಕಾಣಿಸುತ್ತಿಲ್ಲ.
Mind Tangle Hub ಎನ್ನುವ ಇನ್‌ಸ್ಟಾಗ್ರಾಂ ಪುಟದಲ್ಲಿ ಪೋಸ್ಟ್ ಮಾಡಲಾಗಿರುವ ಈ ಬ್ರೈನ್ ಟೀಸರ್ ನೆಟ್ಟಿಗರ ತಲೆಯಲ್ಲಿ ಹುಳ ಬಿಟ್ಟಿರೋದು ಸುಳ್ಳಲ್ಲ. ಈ ರಹಸ್ಯ ಸಂಖ್ಯೆಯನ್ನು ಹುಡುಕಲು 1000ಕ್ಕೂ ಹೆಚ್ಚು ಮಂದಿ ಪ್ರಯತ್ನ ಪಟ್ಟಿದ್ದಾರೆ. ಆದರೆ ಬಹುತೇಕ ಉತ್ತರ ಕಂಡುಹಿಡಿಯಲು ಸಾಧ್ಯವಾಗದೇ ಮೆದುಳಿನಲ್ಲಿ ಹುಳ ಬಿಟ್ಟಂತಾಗಿರುವುದು ಸುಳ್ಳಲ್ಲ. ಈ ಪೋಸ್ಟ್‌ಗೆ ಹಲವು ಕಾಮೆಂಟ್ಸ್‌ಗಳು ಬಂದಿವೆ. ಬಹುತೇಕರು ತಾವು ಕಂಡುಕೊಂಡ ಉತ್ತರವನ್ನು ಕಾಮೆಂಟ್ ಮಾಡುವ ಮೂಲಕ ಹಂಚಿಕೊಂಡಿದ್ದಾರೆ. ಈ ಕಾಮೆಂಟ್‌ಗಳನ್ನು ಗಮನಿಸಿದರೆ ಉತ್ತರ ಕಂಡು ಹಿಡಿದವರ ಸಂಖ್ಯೆ ಬಹಳ ಕಡಿಮೆಯೇ ಇದೆ.
ಕಾಮೆಂಟ್‌ಗಳು ಹೀಗಿವೆ
‘ನನಗೆ 2 ಸೆಕೆಂಡ್‌ನಲ್ಲಿ ಕಾಣಿಸಿತು, ಹಾಗಾದ್ರೆ ನಾನು ಜೀನಿಯಸ್ಸಾ‘ ಎಂದು ಇನ್‌ಸ್ಟಾಗ್ರಾಂ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ‘ನಾನು ಕಳೆದ 5 ನಿಮಿಷಗಳಿಂದ ನೋಡುತ್ತಲೇ ಇದ್ದೇನೆ, ಈಗಲೂ ನೋಡುತ್ತಿದ್ದೇನೆ. ಆದರೆ ಚಿತ್ರದಲ್ಲಿ ನನಗೇನೂ ಕಾಣಿಸುತ್ತಿಲ್ಲ‘ ಎಂದು ಇನ್ನೊಬ್ಬರು ವ್ಯಕ್ತಿ ಕಾಮೆಂಟ್ ಮಾಡಿದ್ದಾರೆ. ‘ನನ್ನ ಕಣ್ಣಿಗೆ ನಂಬರ್ ಇದೆ ಅನ್ನಿಸಿದರೂ ಅದನ್ನು ಒಪ್ಪಿಕೊಳ್ಳಲು ಮೆದುಳು‘ ತಯಾರಿಲ್ಲ ಎಂದು ಮೂರನೇ ವ್ಯಕ್ತಿ ಕಾಮೆಂಟ್ ಮಾಡುವ ಮೂಲಕ ತಿಳಿಸಿದ್ದಾರೆ.
ಇವರೆಲ್ಲರ ಕಾಮೆಂಟ್‌ಗಳನ್ನ ನೋಡಿದ್ರೆ ಅವರಿಗೆ ಉತ್ತರ ಕಂಡುಹಿಡಿಯಲು ಸಾಧ್ಯವಾಗಿಲ್ಲ ಎಂಬುದು ನಿಮಗೂ ತಿಳಿದಿರಬಹುದು. ಹಾಗಂತ ನಿಮ್ಮಿಂದ ಉತ್ತರ ಕಂಡುಹಿಡಿಯಲು ಸಾಧ್ಯವಾಗುತ್ತಿಲ್ಲ ಎಂದು ಅರ್ಥವಲ್ಲ. ನೀವು ಟ್ರೈ ಮಾಡಿ ನಿಮ್ಮ ಉತ್ತರವೇನು ತಿಳಿಸಿ.
ಈ ಬ್ರೈನ್ ಟೀಸರ್‌ಗಳನ್ನೂ ಓದಿ
Brain Teaser: ಯಾವ ಗ್ಲಾಸ್‌ನಲ್ಲಿ ಮೊದಲು ನೀರು ತುಂಬುತ್ತೆ? ಯೋಚಿಸಿ ಉತ್ತರ ಹೇಳಿ, ನಿಮ್ಮ ಸಮಯ ಈಗ ಶುರು
ಮೆದುಳಿಗೆ ಹುಳ ಬಿಡುವ ವಿಚಾರಗಳನ್ನು ಕೆದಕುವುದು ನಿಮಗೆ ಇಷ್ಟನಾ, ಹಾಗಾದ್ರೆ ಬ್ರೈನ್ ಟೀಸರ್‌ಗೆ ಉತ್ತರ ಹೇಳುವ ಪ್ರಯತ್ನ ಮಾಡಿ. ಇಲ್ಲೊಂದು ಬ್ರೈನ್ ಟೀಸರ್ ಚಿತ್ರವಿದೆ. ಇದರಲ್ಲಿ 7 ಲೋಟಗಳಿವೆ. ಈ ಲೋಟಗಳಲ್ಲಿ ಯಾವ ಲೋಟಕ್ಕೆ ಮೊದಲು ನೀರು ತುಂಬುತ್ತದೆ ಎಂಬುದನ್ನು ಹೇಳುವುದು ನಿಮಗಿರುವ ಸವಾಲು. 10 ಸೆಕೆಂಡ್ ಒಳಗೆ ಉತ್ತರ ಹೇಳಿ.
Brain Teaser: 888ರ ಸಾಲಿನಲ್ಲಿ ಒಂದೇ ಒಂದು ಕಡೆ 808 ಇದೆ, ಅದು ಎಲ್ಲಿದೆ ಎಂದು 10 ಸೆಕೆಂಡ್‌ನಲ್ಲಿ ಹುಡುಕಬೇಕು, ನಿಮಗಿದು ಚಾಲೆಂಜ್
ಮೇಲಿಂದ ಕೆಳಗೆ ಉದ್ದದಿಂದ ಅಡ್ಡಕ್ಕೆ 888 ಎಂದು ಬರೆಯಲಾಗಿರುವ ಈ ಚಿತ್ರದಲ್ಲಿ ಒಂದೇ ಒಂದು ಕಡೆ 808 ಸಂಖ್ಯೆ ಇದೆ. ಅದು ಎಲ್ಲಿದೆ ಎಂಬದನ್ನು ನೀವು 10 ಸೆಕೆಂಡ್ ಒಳಗೆ ಕಂಡುಹಿಡಿಯುವುದು ನಿಮಗಿರುವ ಸವಾಲು. ನಿಮ್ಮ ಕಣ್ಣು ನಿಜಕ್ಕೂ ಚುರುಕಾಗಿದೆ ಅಂದ್ರೆ 808 ಎಲ್ಲಿದೆ ಹೇಳಿ.
