Brain Teaser: ಪತ್ತೇದಾರಿಕೆ ಮಾಡೋದ್ರಲ್ಲಿ ನೀವು ಪಂಟರಾದ್ರೆ ಈ 5 ಜನರಲ್ಲಿ ಕೊಲೆಗಾರ ಯಾರು ಕಂಡುಹಿಡಿಯಿರಿ, ನಿಮಗಿರೋದು 30 ಸೆಕೆಂಡ್ ಸಮಯ
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: ಪತ್ತೇದಾರಿಕೆ ಮಾಡೋದ್ರಲ್ಲಿ ನೀವು ಪಂಟರಾದ್ರೆ ಈ 5 ಜನರಲ್ಲಿ ಕೊಲೆಗಾರ ಯಾರು ಕಂಡುಹಿಡಿಯಿರಿ, ನಿಮಗಿರೋದು 30 ಸೆಕೆಂಡ್ ಸಮಯ

Brain Teaser: ಪತ್ತೇದಾರಿಕೆ ಮಾಡೋದ್ರಲ್ಲಿ ನೀವು ಪಂಟರಾದ್ರೆ ಈ 5 ಜನರಲ್ಲಿ ಕೊಲೆಗಾರ ಯಾರು ಕಂಡುಹಿಡಿಯಿರಿ, ನಿಮಗಿರೋದು 30 ಸೆಕೆಂಡ್ ಸಮಯ

ಪತ್ತೇದಾರಿ ಕೆಲಸ ಮಾಡೋದ್ರಲ್ಲಿ ನೀವು ಎಕ್ಸ್‌ಪರ್ಟ್ ಅಂತಾದ್ರೆ ನಿಮಗಾಗಿ ಇಲ್ಲೊಂದು ಬ್ರೈನ್ ಟೀಸರ್ ಚಿತ್ರವಿದೆ. ಇದರಲ್ಲಿ ಒಂದು ಕೊಲೆ ನಡೆದಿರುವ ವಿವರ ಇದ್ದು, 5 ಜನರಲ್ಲಿ ಕೊಲೆಗಾರ ಯಾರು ಎಂದು ನೀವು ಕಂಡು ಹಿಡಿಯಬೇಕು. ಇದು ನಿಮಗಿರುವ ಸವಾಲು. ನಿಮ್ಮ ಸಮಯ ಈಗ ಶುರು.

ಬ್ರೈನ್ ಟೀಸರ್
ಬ್ರೈನ್ ಟೀಸರ್

ಇಂದಿನ ಬ್ರೈನ್ ಟೀಸರ್‌ಗೆ ಉತ್ತರ ಹೇಳಬೇಕು ಅಂದ್ರೆ ನಿಮ್ಮ ಮೆದುಳು ಸಖತ್ ಶಾರ್ಪ್ ಆಗಿರಬೇಕು, ಅಷ್ಟೇ ಅಲ್ಲ ನೀವು ಪತ್ತೇದಾರಿಕೆ ಮಾಡುವುದರಲ್ಲೂ ಎಕ್ಸ್‌ಪರ್ಟ್ ಆಗಿರಬೇಕು. ಯಾಕಂದ್ರೆ ಇಂದು ನೀವು ಕಂಡುಹಿಡಿಯಬೇಕಾಗಿರುವುದು ಕೊಲೆಗಾರ ಯಾರು ಎಂಬುದನ್ನು. ಇದೇನಪ್ಪಾ ಇದು ಕೊಲೆಗಾರರನ್ನು ಕಂಡುಹಿಡಿಯೋಕೆ ನಾವೆಲ್ಲಿ ಹೋಗೋದು ಅಂತ ಕೇಳ್ಬೇಡಿ. ಈ ಬ್ರೈನ್ ಟೀಸರ್‌ನಲ್ಲಿರುವ ಪ್ರಶ್ನೆ ಗಮನಿಸಿ. ಇದರಲ್ಲಿ ಕೊಲೆಗಾರ ಯಾರು ಎಂದು ಕಂಡುಹಿಡಿಯುವುದು ನಿಮಗಿರುವ ಸವಾಲು.

ಭಾನುವಾರದ ಹೊತ್ತು ಚಳಿ ಬೇರೆ, ಕೆಲವು ಕಡೆ ಮಳೆ ಕೂಡ ಬರ್ತಿದೆ. ಈ ಸಮಯದಲ್ಲಿ ಹೊರಗಡೆ ಹೋಗೋದು ಕಷ್ಟ. ಮನೆಯಲ್ಲೇ ಕೂತು ಬೇಸರ ಆಗಿದ್ರೆ ಬ್ರೈನ್ ಟೀಸರ್‌ಗೆ ಉತ್ತರ ಹುಡುಕುವ ಪ್ರಯತ್ನ ಮಾಡಿ. ಇದರಿಂದ ನಿಮ್ಮ ಮೆದುಳು ಚುರುಕಾಗುತ್ತದೆ. ಜೊತೆಗೆ ನಿಮ್ಮ ಬುದ್ಧಿವಂತಿಕೆ ಬಗ್ಗೆ ನೀವೇ ಹೆಮ್ಮೆ ಪಡುವಂತಾಗುತ್ತದೆ. ಯಾಕಂದ್ರೆ ಈ ಬ್ರೈನ್ ಟೀಸರ್‌ಗೆ ಉತ್ತರ ಕಂಡುಹಿಡಿಯುವುದು ಖಂಡಿತ ಸುಲಭವಲ್ಲ. ‘

ಬ್ರೈನ್ ಟೀಸರ್‌ನಲ್ಲಿ ಏನಿದೆ?

ಒಂದು ಆಫೀಸ್‌ನಲ್ಲಿ ವ್ಯಕ್ತಿಯೊಬ್ಬನ ಕೊಲೆ ನಡೆದಿರುತ್ತದೆ. ರಕ್ತಸಿಕ್ತ ಕ್ಯಾಲೆಂಡರ್ ಸುಳಿವು. ಈ ಕ್ಯಾಲೆಂಡರ್ ಮೇಲೆ ರಕ್ತದಲ್ಲಿ 6, 4, 9, 10, ಮತ್ತು 11 ಸಂಖ್ಯೆಗಳನ್ನು ಬರೆಯಲಾಗಿರುತ್ತದೆ. ಅದರಂತೆ ಎ, ಬಿ, ಸಿ, ಡಿ, ಇ ಈ 5 ಮಂದಿಯನ್ನು ಶಂಕಿಸಲಾಗುತ್ತಿದೆ. ಹಾಗಾದರೆ ಈ ಐವರಲ್ಲಿ ಕೊಲೆ ಮಾಡಿದವರು ಯಾರು ಎಂದು ನೀವು ಕಂಡುಹಿಡಿಯಬೇಕು.

ಬ್ರೈನ್ ಟೀಸರ್‌ನಲ್ಲಿರುವ ಪ್ರಶ್ನೆ ಹೀಗಿದೆ: ಆಫೀಸ್‌ನಲ್ಲಿ ವ್ಯಕ್ತಿಯೊಬ್ಬನ ಕೊಲೆ ಆಗಿರುತ್ತದೆ. ಜೆರ್ರಿ, ಜ್ಯೂಲಿ, ಜಾಸನ್‌, ನಿಕ್‌ ಹಾಗೂ ಸೋಪಿ ಈ 5 ಮಂದಿ ಶಂಕಿತರು. ಅಲ್ಲೇ ಇರುವ ಕ್ಯಾಲೆಂಡರ್‌ನಲ್ಲಿ ರಕ್ತದಲ್ಲಿ 6, 4, 9, 10 ಮತ್ತು 11 ನಂಬರ್‌ಗಳನ್ನು ಬರೆಯಲಾಗಿದೆ. ಹಾಗಾದರೆ ಕೊಲೆಗಾರ ಯಾರು?

ಇನ್‌ಸ್ಟಾಗ್ರಾಂನ ಥ್ರೆಡ್‌ನಲ್ಲಿ ಪೋಸ್ಟ್ ಮಾಡಲಾದ ಬ್ರೈನ್ ಟೀಸರ್‌ ಇದಾಗಿದೆ. ಈ ಬ್ರೈನ್ ಟೀಸರ್ ಅನ್ನು ಹಲವರು ವೀಕ್ಷಿಸಿದ್ದು, ಕೆಲವರು ಕಾಮೆಂಟ್ ಮಾಡುವ ಮೂಲಕ ತಾವು ಕಂಡುಕೊಂಡ ಉತ್ತರವನ್ನು ತಿಳಿಸಿದ್ದಾರೆ. ಇದಕ್ಕೆ ಉತ್ತರ ಜೇಸನ್ ಎಂದು ಹಲವರು ಹೇಳಿದ್ದಾರೆ. ನಮ್ಮ ಕ್ಯಾಲೆಂಡರ್‌ನಲ್ಲಿರುವ ತಿಂಗಳುಗಳೊಂದಿಗೆ ಸಂಖ್ಯೆಗಳು ಪರಸ್ಪರ ಸಂಬಂಧ ಹೊಂದಿರುವುದರಿಂದ ಉತ್ತರವು ಜೇಸನ್ ಆಗಿದೆ. ಜೂನ್, ಏಪ್ರಿಲ್, ಸೆಪ್ಟೆಂಬರ್, ಅಕ್ಟೋಬರ್, ನವೆಂಬರ್ ತಿಂಗಳನ್ನು ಈ ಸಂಖ್ಯೆ ಸೂಚಿಸುತ್ತದೆ ಎಂದು ಅವರು ಹೇಳಿದ್ದಾರೆ. ಹಾಗಾದರೆ ನಿಮಗೂ ಕೊಲೆಗಾರ ಜೇಸನ್ ಎಂದು ಅನ್ನಿಸುತ್ತಾ ಅಥವಾ ನಿಮ್ಮ ಉತ್ತರ ಬೇರೆ ಇದೆಯೇ ತಿಳಿಸಿ.

ಈ ಬ್ರೈನ್ ಟೀಸರ್ ಅನ್ನೂ ಓದಿ

Brain Teaser: ಪಾಂಡಗಳ ರಾಶಿಯ ನಡುವೆ ನಾಯಿಯೊಂದು ಅವಿತಿದೆ, ಅದು ಎಲ್ಲಿದೆ? 10 ಸೆಕೆಂಡ್ ಒಳಗೆ ಹುಡುಕಿ, ನಿಮ್ಮ ಕಣ್ಣಿಗೊಂದು ಸವಾಲ್‌

ಶನಿವಾರದ ಹೊತ್ತು ಖಾಲಿ ಕೂತು ಬೇಸರ ಆಗಿದ್ರೆ ಮೆದುಳು, ಕಣ್ಣಿಗೆ ಸ್ವಲ್ಪ ಕೆಲಸ ಕೊಡಿ. ಈ ಬ್ರೈನ್ ಟೀಸರ್‌ ಗಮನಿಸಿ. ಇದರಲ್ಲಿ ನಿಮಗೆ ಪಾಂಡಗಳ ರಾಶಿಯೇ ಕಾಣಿಸಬಹುದು. ಇದರ ನಡುವೆ ಅಡಗಿರುವ ನಾಯಿಯನ್ನು ನೀವು ಹುಡುಕಬೇಕು. ನಿಮಗಿರೋದು 10 ಸೆಕೆಂಡ್ ಸಮಯ ಮಾತ್ರ. ನಿಮ್ಮ ಸಮಯ ಈಗ ಶುರು.

Whats_app_banner