Viral News: ದೆಹಲಿಯಲ್ಲಿ ಬೈಕ್‌ ಓಡಿಸುತ್ತಾ ಎದುರು ಬದುರು ಕುಳಿತು ರೊಮ್ಯಾನ್ಸ್‌ ಮಾಡಿದ ಜೋಡಿ; ಪೊಲೀಸರ ಪ್ರತಿಕ್ರಿಯೆ ಹೀಗಿತ್ತು ನೋಡಿ
ಕನ್ನಡ ಸುದ್ದಿ  /  ಜೀವನಶೈಲಿ  /  Viral News: ದೆಹಲಿಯಲ್ಲಿ ಬೈಕ್‌ ಓಡಿಸುತ್ತಾ ಎದುರು ಬದುರು ಕುಳಿತು ರೊಮ್ಯಾನ್ಸ್‌ ಮಾಡಿದ ಜೋಡಿ; ಪೊಲೀಸರ ಪ್ರತಿಕ್ರಿಯೆ ಹೀಗಿತ್ತು ನೋಡಿ

Viral News: ದೆಹಲಿಯಲ್ಲಿ ಬೈಕ್‌ ಓಡಿಸುತ್ತಾ ಎದುರು ಬದುರು ಕುಳಿತು ರೊಮ್ಯಾನ್ಸ್‌ ಮಾಡಿದ ಜೋಡಿ; ಪೊಲೀಸರ ಪ್ರತಿಕ್ರಿಯೆ ಹೀಗಿತ್ತು ನೋಡಿ

Delhi: ಇತ್ತೀಚೆಗೆ ಬೈಕ್‌ ಸ್ಟಂಟ್‌ ಮಾಡುವ ಚಟ ಯುವಜನರಲ್ಲಿ ಹೆಚ್ಚುತ್ತಿದೆ. ಪ್ರೇಮಿಗಳಿಬ್ಬರು ಬೈಕ್‌ನಲ್ಲಿ ಎದುರು ಬದುರು ಕುಳಿತು ಬೈಕ್‌ ಓಡಿಸುತ್ತಾ ರೊಮ್ಯಾನ್ಸ್‌ ಮಾಡಿದ ವಿಡಿಯೊ ಒಂದು ಈಗ ಸಾಕಷ್ಟು ವೈರಲ್‌ ಆಗುತ್ತಿದೆ. ದೆಹಲಿಯಲ್ಲಿ ನಡೆದ ಈ ಘಟನೆಗೆ ಅಲ್ಲಿನ ಸಾರ್ವಜನಿಕರು ಮಾತ್ರವಲ್ಲದೇ ಪೊಲೀಸರು ಪ್ರತಿಕ್ರಿಯಿಸಿದ್ದಾರೆ. ಅವರ ಪ್ರತಿಕ್ರಿಯೆ ಹೀಗಿದೆ ನೋಡಿ.

ಬೈಕ್‌ ಓಡಿಸುತ್ತಾ ರೊಮ್ಯಾನ್ಸ್‌ ಮಾಡಿದ ಜೋಡಿ
ಬೈಕ್‌ ಓಡಿಸುತ್ತಾ ರೊಮ್ಯಾನ್ಸ್‌ ಮಾಡಿದ ಜೋಡಿ (NDTV)

ಸಾರ್ವಜನಿಕ ರಸ್ತೆಗಳಲ್ಲಿ ಸ್ಟಂಟ್‌ ಮಾಡುವುದು ಸಾರ್ವಜನಿಕರಿಗೆ ಮಾತ್ರವಲ್ಲ, ಚಾಲಕರಿಗೂ ಅಪಾಯ ತಪ್ಪಿದ್ದಲ್ಲ. ಇತ್ತೀಚೆಗೆ ಯುವಕರಲ್ಲಿ ಬೈಕ್‌ ಮೇಲೆ ಸ್ಟಂಟ್‌ ಮಾಡುವ ಹುಚ್ಚು ಜೋರಾಗಿದೆ. ಬರೀ ಯುವಕರು ಮಾತ್ರವಲ್ಲ, ಯುವತಿಯರು ಯುವಕರ ಜೊತೆ ಬೈಕ್‌ ಸ್ಟಂಟ್‌ನಲ್ಲಿ ಕೈ ಜೋಡಿಸುತ್ತಿದ್ದಾರೆ.

ಪ್ರೇಮಿಗಳು ಸಾರ್ವನಿಜಕ ಸ್ಥಳಗಳಲ್ಲಿ ಬೈಕ್‌ ಸ್ಟಂಟ್‌ ಮಾಡುತ್ತಾ ಪ್ರೇಮ ಸಲ್ಲಾಪದಲ್ಲಿ ತೊಡಗುವಂತಹ ವಿಡಿಯೊಗಳನ್ನು ನಾವು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ನೋಡುತ್ತಿರುತ್ತೇವೆ. ದೆಹಲಿಯಲ್ಲಿ ವರದಿಯಾದ ಇಂತಹ ಘಟನೆಯೊಂದರಲ್ಲಿ ಜೋಡಿಗಳಿಬ್ಬರು ಬೈಕ್‌ ಮೇಲೆ ಎದುರು ಬದುರು ಕುಳಿತು ರೊಮ್ಯಾನ್ಸ್‌ ಮಾಡುತ್ತಿರುವುದನ್ನು ಕಾಣಬಹುದಾಗಿದೆ.

ಜುಲೈ 16 ರಂದು ದೆಹಲಿಯ ಮಂಗೋಲ್ಪುರಿ ಹೊರ ವರ್ತುಲ ರಸ್ತೆಯ ಮೇಲ್ಸೇತುವೆಯಲ್ಲಿ ಈ ಘಟನೆ ನಡೆದಿದೆ ಎಂದು ಟ್ವಿಟರ್‌ ಬಳಕೆದಾರರೊಬ್ಬರು ವಿಡಿಯೊ ಹಂಚಿಕೊಂಡಿದ್ದಾರೆ. ಈ ವಿಡಿಯೊದಲ್ಲಿ ಪ್ರಿಯಕರ ಬೈಕ್‌ ಓಡಿಸುತ್ತಿದ್ದು, ಪೆಟ್ರೋಲ್‌ ಟ್ಯಾಂಕ್‌ ಮೇಲೆ ಕುಳಿತಿರುವ ಯುವತಿಯು ಪ್ರಿಯಕರನಿಗೆ ಎದುರು ಬದುರಾಗಿ ಕುಳಿತಿರುವುದನ್ನು ಕಾಣಬಹುದಾಗಿದೆ.

ಈ ವಿಡಿಯೊ ಕ್ಲಿಕ್‌ ಸಾಮಾಜಿಕ ಮಾಧ್ಯಮಗಳಲ್ಲಿ ಈಗ ವೈರಲ್‌ ಆಗಿದ್ದು, ಅವರ ಈ ಜೋಡಿಯ ಬೇಜವಾಬ್ದಾರಿ ಹಾಗೂ ಅಶ್ಲೀಲ ನಡವಳಿಕೆಯನ್ನು ಹಲವು ಟೀಕಿಸಿದ್ದಾರೆ.

ಈ ವಿಡಿಯೊ ಕ್ಲಿಪ್‌ಗೆ ಪ್ರತಿಕ್ರಿಯಿಸಿದ ದೆಹಲಿ ಟ್ರಾಫಿಕ್‌ ಪೊಲೀಸರು ʼಧನ್ಯವಾದಗಳು, ಇಂತಹ ಟ್ರಾಫಿಕ್‌ ಉಲ್ಲಂಘನೆಯನ್ನು ದೆಹಲಿ ಟ್ರಾಫಿಕ್‌ ಪೊಲೀಸ್‌ ಸೆಂಟಿನೆಲ್‌ ಆಪ್‌ನಲ್ಲಿ ವರದಿ ಮಾಡಲು ವಿನಂತಿಸುತ್ತೇವೆʼ ಎಂದು ಬರೆದುಕೊಂಡಿದ್ದಾರೆ.

ಕೆಲವು ಟ್ವಿಟರ್‌ ಬಳಕೆದಾರರು ಬೈಕ್‌ ಚಾಲಕನಿಗೆ ಎದುರು ಬದುರಾಗಿ ಕುಳಿತ ಹುಡುಗಿ ಹೆಲ್ಮೆಟ್‌ ಧರಿಸದೇ ಇರುವುದನ್ನು ಗುರುತಿಸಿದ್ದಾರೆ. ಇದಕ್ಕೆ ಕೆಲವರು ಆ ಹುಡುಗಿಯನ್ನು ಅರೆಸ್ಟ್‌ ಮಾಡಿ ಎಂದೂ ಹೇಳಿದ್ದಾರೆ.

ʼಸರ್‌, ಈ ರೀತಿ ಕ್ರಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳುವ ಅಗತ್ಯವಿದೆ ಮತ್ತು ದಯವಿಟ್ಟು ಇಂತಹ ಘಟನೆಗಳನ್ನು ತಡೆಯಿರಿʼ ಎಂದು ವ್ಯಕ್ತಿಯೊಬ್ಬರು ಮನವಿ ಮಾಡಿದ್ದಾರೆ. ʼಇವರಿಗೆ ದಂಡ ಹಾಕುವ ಜೊತೆಗೆ ಜೈಲು ಶಿಕ್ಷೆಯೂ ಆಗಬೇಕು. ಇಂತಹವರು ಅಶ್ಲೀಲತೆಯು ವಾತಾವರಣವು ಸಮಾಜವನ್ನು ಹಾಳು ಮಾಡಲಿದೆʼ ಎಂದು ದೂರಿದ್ದಾರೆ.

ಕಳೆದ ತಿಂಗಳು ಗಾಜಿಯಾಬಾದ್‌ನ ಇಂದಿರಾಪುರಂ ಪ್ರದೇಶದ ಬಳಿ ಎನ್‌ಎಚ್‌9 ನಲ್ಲಿ ಜೋಡಿಗಳಿಬ್ಬರು ಹೀಗೆ ದಂಪತಿಗಳಿಬ್ಬರು ಹೆಲ್ಮೆಟ್‌ ಧರಿಸಿದೇ ಅಪ್ಪಿ ಕುಳಿತು ಗಾಡಿ ಓಡಿಸಿದ ವಿಡಿಯೊ ವೈರಲ್‌ ಆಗಿತ್ತು.

ಇದನ್ನೂ ಓದಿ

Burmese Python: ಜಗತ್ತಿನ ಅತಿ ಉದ್ದನೆ ಹೆಬ್ಬಾವು ಇದು: ಫ್ಲೋರಿಡಾದಲ್ಲಿ ಹಿಡಿದ ಬರ್ಮೀಸ್ ಹೆಬ್ಬಾವು, ಅಬ್ಬಬ್ಬಾ ಎಷ್ಟು ಉದ್ದ ಇದು

Worlds Biggest Burmese Python: ಬರ್ಮೀಸ್ ಹೆಬ್ಬಾವುಗಳು ಭೂಮಿ ಮೇಲಿನ ಅತಿದೊಡ್ಡ ಹಾವುಗಳಲ್ಲಿ ಒಂದಾಗಿದೆ. ಅವು ಆಕ್ರಮಣಕಾರಿ ಜಾತಿಯದ್ದಾಗಿದೆ. ಈ ಹಿಂದಿನ ದಾಖಲೆಯ ಪ್ರಕಾರ, 2020ನೇ ಇಸವಿಯಲ್ಲಿ ಎವರ್‌ಗ್ಲೇಡ್ಸ್‌ನಲ್ಲಿ ಹಿಡಿದ ಹೆಬ್ಬಾವು 18 ಅಡಿ 9 ಇಂಚುಗಳ ಉದ್ದ, 104 ಪೌಂಡ್‌ಗಳಷ್ಟು ತೂಕವಿತ್ತು.

Whats_app_banner