ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: ಮಂಜುಗೆ ರಾಜು ಏನಾಗಬೇಕು? ನೀವೆಷ್ಟು ಬುದ್ಧಿವಂತರು ಅಂತ ಗೊತ್ತಾಗುತ್ತೆ, ಈ ಸಂಬಂಧ ಪತ್ತೆ ಮಾಡಿ

Brain Teaser: ಮಂಜುಗೆ ರಾಜು ಏನಾಗಬೇಕು? ನೀವೆಷ್ಟು ಬುದ್ಧಿವಂತರು ಅಂತ ಗೊತ್ತಾಗುತ್ತೆ, ಈ ಸಂಬಂಧ ಪತ್ತೆ ಮಾಡಿ

Brain Teaser: ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರೋ ಈ ಫೋಟೊ ನಿಮ್ಮ ತಲೆಗೆ ಒಂದಿಷ್ಟು ಕೆಲಸ ಕೊಡೋದು ಪಕ್ಕಾ. ಮೇಲ್ನೋಟಕ್ಕೆ ಸುಲಭ ಅನಿಸಿದ್ರು ಉತ್ತರ ಹೇಳೋದು ಕಷ್ಟವಾಗಬಹುದು. ಇದಕ್ಕೆ ಉತ್ತರ ಹೇಳಿ ನೋಡೋಣ.

ಮಂಜುಗೆ ರಾಜು ಏನಾಗಬೇಕು ಎಂಬ ಈ ಬ್ರೈನ್ ಟೀಸರ್ ಅನ್ನು ಬಿಡಿಸಿ
ಮಂಜುಗೆ ರಾಜು ಏನಾಗಬೇಕು ಎಂಬ ಈ ಬ್ರೈನ್ ಟೀಸರ್ ಅನ್ನು ಬಿಡಿಸಿ

ನೀವು ಗಣಿತ ಆಧಾರಿತ ಬ್ರೈನ್ ಟೀಸರ್‌ ಅನ್ನು ಪರಿಹರಿಸುವ ಪರಿಣಿತರು ನೀವಾಗಿದ್ದರೂ ನಿಮಗೊಂದು ಸವಾಲು ಎದುರಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಇಂಥ ಹತ್ತಾರು ಬ್ರೈನ್ ಟೀಸ್‌ಗಳಿಗೆ ಉತ್ತರ ನೀಡಿರುತ್ತೀರಿ. ಆದರೆ ಈ ಮೇಲಿನ ಫೋಟೊದಲ್ಲಿರುವ ಪ್ರಶ್ನೆಗೆ ಉತ್ತರಿಸುವ ಸವಾಲು ನಿಮ್ಮ ಮುಂದಿದೆ.

ಟ್ರೆಂಡಿಂಗ್​ ಸುದ್ದಿ

ನಮ್ಮ ಮನಸ್ಸನ್ನು ಸೃಜನಶೀಲ ರೀತಿಯಲ್ಲಿ ಬಳಸುವಂತೆ ಮಾಡುವ ಸಾಮರ್ಥ್ಯವನ್ನು ಬ್ರೈನ್ ಟೀಸರ್ ಗಳು ಹೊಂದಿವೆ. ಮತ್ತು ನೀವು ಕ್ಲಿಷ್ಟಕರ ಒಗಟುಗಳನ್ನು ಪರಿಹರಿಸಲು ತಮ್ಮ ಸಮಯವನ್ನು ಕಳೆಯುವುದನ್ನು ಆನಂದಿಸುವವರಾಗಿದ್ದರೆ, ನಿಮಗಾಗಿ ನಾವು ಈ ಫೋಟೊವನ್ನು ಹಂಚಿಕೊಂಡಿದ್ದೇವೆ.

ಈ ಒಗಟನ್ನು ಅತ್ಯಂತ ಜನಪ್ರಿಯ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ @lst4law ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಪ್ರಶ್ನೆ ಹೀಗಿದೆ: "ಮಂಜು ಕಡೆಗೆ ಬೆರಳು ತೋರಿಸಿದ ರಾಜು, "ಅವಳ ಏಕೈಕ ಸಹೋದರನ ಮಗ ನನ್ನ ಹೆಂಡತಿಯ ಸಹೋದರ ಎಂದು ಹೇಳುತ್ತಾನೆ. ಹಾಗಾದರೆ, ಸಂಬಂಧದಲ್ಲಿ ಮಂಜು ರಾಜುಗೆ ಏನಾಗಬೇಕು?

ಈ ಪೋಸ್ಟ್ ಅನ್ನು ಇಲ್ಲಿ ನೋಡಿ:

ಈ ಪೋಸ್ಟ್ ಅನ್ನು 2024ರ ಜನವರಿ 2 ರಂದು ಹಂಚಿಕೊಳ್ಳಲಾಗಿದೆ. ಶೇರ್‌ ಮಾಡಿದಾಗಿನಿಂದ ಈವರೆಗೆ ಸಾಕಷ್ಟು ಲೈಕ್‌ಗಳು ಮತ್ತು ಕಾಮೆಂಟ್ ಗಳನ್ನು ಪಡೆದುಕೊಂಡಿದೆ. ಅನೇಕ ಜನರು ತಮ್ಮ ಉತ್ತರಗಳನ್ನು ಹಂಚಿಕೊಳ್ಳಲು ಪೋಸ್ಟ್ ನ ಕಾಮೆಂಟ್ ವಿಭಾಗವನ್ನು ಬಳಸಿಕೊಂಡಿದ್ದಾರೆ.

ನೆಟ್ಟಿಗರು ಈ ಪೋಸ್ಟ್‌ಗೆ ಹೇಳಿರುವ ಕೆಲವೊಂದು ಉತ್ತರಗಳು ಇಲ್ಲಿವೆ

ಒಬ್ಬ ವ್ಯಕ್ತಿ, "ಅವನ ಮಾವನ ಸಹೋದರಿ ಎಂದು ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬ ನೆಟ್ಟಿಗರು "ಮಾವ / ಅತ್ತೆಯ ಸಹೋದರಿ." ಎಂದಿದ್ದಾರೆ. "ಆ ಹೆಂಗಸು ಅವನ ಮಾವನ ಸಹೋದರಿ" ಎಂದು ಮೂರನೇಯ ವ್ಯಕ್ತಿ ಹೇಳಿದ್ದಾರೆ.

ಸರಿಯಾದ ಉತ್ತರ ಯಾವುದು ಎಂದು ನೀವು ಭಾವಿಸುತ್ತೀರಿ?

ಈ ಹಿಂದೆ, ಇಂತಹದೇ ಮತ್ತೊಂದು ಮೆದುಳಿನ ಟೀಸರ್ ಅನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾಗಿತ್ತು. ಈ ಒಗಟಿನಲ್ಲಿ, ನೀವು ನಿಮ್ಮ ಗಣಿತ ಕೌಶಲ್ಯಗಳನ್ನು ಬಳಸಬೇಕು. "ಒಂದು ರೈಲು ಒಂದು ಗಂಟೆಯಲ್ಲಿ 72 ಕಿ.ಮೀ ಪ್ರಯಾಣಿಸುತ್ತದೆ. ಮೀ/ಸೆಕೆಂಡಿನಲ್ಲಿ ಅದರ ವೇಗವೆಷ್ಟು?" ಸಾಧ್ಯವಾದರೆ ಇದನ್ನೂ ಪರಿಹರಿಸಲು ಪ್ರಯತ್ನಿಸಿ. (This copy first appeared in Hindustan Times Kannada website. To read more like this please logon to kannada.hindustantime.com).

ವಿಭಾಗ