Brain Teaser: ನೀವು ಗಣಿತದಲ್ಲಿ ಪಂಟರೇ, ಹಾಗಾದ್ರೆ ನಿಮಗಾಗಿ ಇಲ್ಲಿದೆ ಒಂದು ಸವಾಲು; ಇದಕ್ಕೆ ಉತ್ತರ ಹೇಳಿದ್ರೆ ನೀವು ಗ್ರೇಟ್
ಇಲ್ಲಿರುವ ಬ್ರೈನ್ ಟೀಸರ್‌ನಲ್ಲಿ ಒಂದು ಗಣಿತದ ಸವಾಲಿದೆ. ಇದಕ್ಕೆ ಉತ್ತರ ಕಂಡುಹಿಡಿಯುವುದು ನಿಮಗಿರುವ ಸವಾಲು. ಹಾಗಾದ್ರೆ ಹಸುವಿನ ಈ ಬ್ರೈನ್ ಟೀಸರ್‌ಗೆ ನಿಮ್ಮ ಉತ್ತರವೇನು?
ಬ್ರೈನ್ ಟೀಸರ್ ಚಾಲೆಂಜ್ ಸ್ವೀಕರಿಸೋದು ಅಂದ್ರೆ ಬಹಳಷ್ಟು ಜನರಿಗೆ ಅದೇನೋ ಥ್ರಿಲ್. ಇದಕ್ಕೆ ಉತ್ತರ ಕಂಡುಕೊಳ್ಳಲು ತಾವು ತಲೆ ಕೆಡಿಸಿಕೊಳ್ಳುವುದು ಮಾತ್ರವಲ್ಲ, ಮನೆಯಲ್ಲಿ ಇರುವ ಇತರರ ತಲೆಯನ್ನೂ ಕೆಡಿಸುತ್ತಾರೆ. ಇದು ಒಂಥರಾ ಮಜಾ ಕೊಡುವ ಕಾರಣಕ್ಕೆ ಎಲ್ಲರಿಗೂ ಇಷ್ಟವಾಗುತ್ತದೆ. ಇದನ್ನು ಬಿಡಿಸುವ ಸಲುವಾಗಿ ಮೆದುಳಿಗೆ ಸಾಕಷ್ಟು ಕೆಲಸ ನೀಡುತ್ತೇವೆ. ಸರಿ, ನಿಮಗೆ ಗಣಿತ ಅಂದ್ರೆ ಇಷ್ಟಾನಾ, ಗಣಿತ ಸವಾಲು ಬಿಡಿಸುವುದರಲ್ಲಿ ನೀವು ಪಂಟರಾದ್ರೆ ನಿಮಗಾಗಿ ಇಲ್ಲಿದೆ ಒಂದು ಬ್ರೈನ್ ಟೀಸರ್ ಸವಾಲು. ಇದು ಸರಳ ಗಣಿತ ಅನ್ನಿಸಬಹುದು. ಆದ್ರೆ ಉತ್ತರ ಹುಡುಕೋದು ಮಾತ್ರ ಖಂಡಿತ ಕಷ್ಟ ಆಗುತ್ತೆ. ಆದ್ರೆ ಸ್ವಲ್ಪ ಬುದ್ಧಿ ಉಪಯೋಗಿಸಿದ್ರೆ ಉತ್ತಮ ಹುಡುಕೋದು ಕಷ್ಟವೇನಲ್ಲ ಬಿಡಿ.
ಇನ್ನಷ್ಟು ವೈರಲ್ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
ʼನೀವೆಷ್ಟು ಜಾಣರುʼ ಎಂದು ಶೀರ್ಷಿಕೆ ಬರೆದುಕೊಂಡು ಈ ಬ್ರೈನ್ ಟೀಸರ್ ಅನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ. ಈ ಬ್ರೈನ್ ಟೀಸರ್‌ನಲ್ಲಿ ʼನಾನು 800 ರೂ. ಕೊಟ್ಟು ಇಂದು ಹಸು ತಂದಿದ್ದೇನೆ. ಇದನ್ನು 1000 ರೂ. ಗೆ ಮಾರಾಟ ಮಾಡುತ್ತೇನೆ. ಪುನಃ 1,100 ರೂ ಕೊಟ್ಟು ಖರೀದಿ ಮಾಡುತ್ತೇನೆ. ಇದನ್ನು 1,300 ರೂ. ಗೆ ಮಾರಾಟ ಮಾಡುತ್ತೇನೆ. ಹಾಗಾದರೆ ನಾನು ಎಷ್ಟು ಲಾಭ ಗಳಿಸಿದಂತಾಯ್ತು? ಎಂದು ಪ್ರಶ್ನೆ ಕೇಳಲಾಗಿದೆ.
ಈ ಬ್ರೈನ್ ಟೀಸರ್ ಅನ್ನು ಡಿಸೆಂಬರ್ 25 ರಂದು ಹಂಚಿಕೊಳ್ಳಲಾಗಿತ್ತು. ಇಲ್ಲಿಯವರೆಗೆ ಸುಮಾರು 3.5 ಲಕ್ಷಕ್ಕೂ ಅಧಿಕ ಮಂದಿ ಇದನ್ನು ವೀಕ್ಷಿಸಿದ್ದಾರೆ. 500ಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ಕೆಲವರು ಕಾಮೆಂಟ್ ಮಾಡುವ ಮೂಲಕ ತಮ್ಮ ಉತ್ತರವನ್ನು ಹಂಚಿಕೊಂಡಿದ್ದಾರೆ.
ಹಾಗಾದರೆ ಈ ಬ್ರೈನ್ ಟೀಸರ್‌ಗೆ ನಿಮ್ಮ ಉತ್ತರವೇನು? ನಿಜವಾಗ್ಲೂ ಹಸುವಿನ ಒಡೆಯನಿಗೆ ಎಷ್ಟು ಲಾಭ ಸಿಕ್ಕಿತು ಎಂಬುದನ್ನು ಕಂಡುಹಿಡಿಯಲು ನಿಮ್ಮಿಂದ ಸಾಧ್ಯವೇ? ಈ ಬ್ರೈನ್ ಟೀಸರ್‌ಗೆ ಒಬ್ಬೊಬ್ಬರು ಒಂದೊಂದು ರೀತಿ ಉತ್ತರಿಸಿರುವುದನ್ನು ನೋಡಬಹುದಾಗಿದೆ.
ಇದನ್ನೂ ಓದಿ
Brain Teaser: ನಾನು ಬದುಕಿಲ್ಲ, ಆದ್ರೂ ಬೆಳಿತೀನಿ... ನಾನ್ಯಾರು?, ಈ ಒಗಟಿಗೆ ನಿಮ್ಮ ಉತ್ತರವೇನು? ಇಲ್ಲಿದೆ ನಿಮಗೊಂದು ಸವಾಲು
ನಮ್ಮ ಅರಿವಿನ ಸಾಮರ್ಥ್ಯವನ್ನು ಪರೀಕ್ಷೆ ಮಾಡುವ ಹಲವು ಬ್ರೈನ್ ಟೀಸರ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತವೆ. ಅವು ನಮ್ಮ ಮೆದುಳಿಗೆ ಕೆಲಸ ಕೊಡುವುದು ಮಾತ್ರ, ಮೋಜು ನೀಡುತ್ತವೆ. ಬಾಲ್ಯದಿಂದಲೂ ನಾವು ಒಗಟುಗಳನ್ನು ಬಿಡಿಸಿಕೊಂಡು ಬಂದವರು. ಒಗಟು ಬಿಡಿಸುವ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಗೆದ್ದವರು. ಆದರೂ ಒಗಟು ಬಿಡಿಸೋದು ಸುಲಭ ಏನೆಲ್ಲಾ ಬಿಡಿ.
ಈ ಲೇಖನವನ್ನು ಪೂರ್ತಿ ಓದಲು ಈ ಲಿಂಕ್ ಕ್ಲಿಕ್ ಮಾಡಿ
Brain teaser: ನೀವು ಬುದ್ಧಿವಂತರಾ, ಹಾಗಾದರೆ ಒಂದೇ ನಿಮಿಷದಲ್ಲಿ ಈ ಒಗಟಿಗೆ ಉತ್ತರ ನೀಡಲು ಸಾಧ್ಯವೇ? ನಿಮಗಾಗಿ ಈ ಚಾಲೆಂಜ್
ಆಸ್ಟ್ರೇಲಿಯನ್ ಬ್ಯೂಆರ್ ಆಫ್ ಸ್ಟ್ಯಾಟಿಸ್ಟಿಕ್ಸ್ ಮನುಷ್ಯರ ಬುದ್ಧಿ ಸಾಮರ್ಥ್ಯವನ್ನು ಪರೀಕ್ಷೆ ಮಾಡಲು ಸವಾಲೊಂದನ್ನು ನೀಡಿದೆ. ಈ ಪ್ರಶ್ನೆಯು ಒಂದು ಒಗಟಿನ ರೀತಿಯಿದೆ. ಇದಕ್ಕೆ ಉತ್ತರವನ್ನು ನೀವು ಒಂದು ನಿಮಿಷದ ಒಳಗಾಗಿ ನೀಡಬೇಕು.
ವಿಭಾಗ