ಕನ್ನಡ ಸುದ್ದಿ  /  Lifestyle  /  Viral News Viral Photo Brain Teaser Only Those With Eagle Eyes Can Find Four Mice And Five Mushroom Rst

Brain Teaser: ಹದ್ದಿನಕಣ್ಣು ನಿಮ್ಮದಾಗಿದ್ರೆ ಚಿತ್ರದಲ್ಲಿ 4 ಇಲಿ, 5 ಅಣಬೆಗಳನ್ನು ಹುಡುಕಿ; ಈ ಚಿತ್ರ ನಿಮಗೆ ಸವಾಲು ಎನ್ನಿಸುವುದು ಖಂಡಿತ

ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಲಾದ ಈ ಚಿತ್ರದಲ್ಲಿ ಒಂದಿಷ್ಟು ಎಲೆಗಳ ರಾಶಿ ಇದೆ. ಮೇಲ್ನೋಟಕ್ಕೆ ಎಲೆ ಬಿಟ್ಟರೆ ಬೇರೇನೂ ಕಾಣಿಸದ ಈ ಚಿತ್ರದಲ್ಲಿ ಇಲಿಗಳು ಹಾಗೂ ಅಣಬೆ ಕೂಡ ಇದೆ. ಅದರಲ್ಲಿ ನಾಲ್ಕು ಇಲಿ ಹಾಗೂ 5 ಅಣಬೆಯನ್ನು ಹುಡುಕುವುದು ನಿಮಗಿರುವ ಸವಾಲು.

ಈ ಚಿತ್ರದಲ್ಲಿ 4 ಇಲಿ, 5 ಅಣಬೆಗಳನ್ನು ಹುಡುಕಿ
ಈ ಚಿತ್ರದಲ್ಲಿ 4 ಇಲಿ, 5 ಅಣಬೆಗಳನ್ನು ಹುಡುಕಿ

ಜರ್ಮನಿಯ ಡ್ರೆಸ್ಡೆನ್‌ ಮೂಲದ ಡಿಜಿಟಲ್‌ ಕಲಾವಿದ ಗರ್ಗೆಲಿ ಡುಡಾಸ್‌, ಆಗಾಗ ಬ್ರೈನ್‌ ಟೀಸರ್‌ ಚಿತ್ರಗಳನ್ನು ರಚಿಸುತ್ತಾರೆ. ಮಾತ್ರವಲ್ಲ ಅದನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳುವ ಮೂಲಕ ಜನರ ತಲೆಗೆ ಹುಳ ಬಿಡುತ್ತಾರೆ. ಇವರ ಬ್ರೈನ್‌ ಟೀಸರ್‌ಗಾಗಿ ಕಾಯುವ ಅಭಿಮಾನಿಗಳೂ ಇದ್ದಾರೆ. ಅವರು ಇತ್ತೀಚಿಗೆ ಭಿನ್ನವಾದ ಬ್ರೈನ್‌ ಟೀಸರ್‌ವೊಂದನ್ನು ರಚಿಸಿದ್ದು, ಈ ಚಿತ್ರವು ಕ್ಷಣಕಾಲ ನೀವು ತೆರೆ ಮೇಲೆ ಕಣ್ಣು ಹಾಯಿಸುವಂತೆ ಮಾಡುವುದು ಸುಳ್ಳಲ್ಲ. ಎಲೆಗಳ ರಾಶಿ ಇರುವ ಚಿತ್ರದಲ್ಲಿ ಇಲಿಗಳು, ಅಣಬೆಗಳನ್ನು ಹುದುಗಿಸಿ ಇಟ್ಟಿದ್ದಾರೆ. ಅವುಗಳನ್ನು ಕಂಡುಹಿಡಿಯುವುದು ನೋಡುಗರಿಗಿರುವ ಸವಾಲು. ಇದೇನು ಮಹಾ ಅನ್ನಿಸಿದರೂ ಈ ಚಿತ್ರಕ್ಕೆ ಉತ್ತರ ಕಂಡುಕೊಳ್ಳುವುದು ನಿಜ ಸುಲಭ ಏನಲ್ಲ.

ಟ್ರೆಂಡಿಂಗ್​ ಸುದ್ದಿ

ಈ ಬ್ರೈನ್‌ ಟೀಸರ್‌ನಲ್ಲಿ ಬಣ್ಣ ಬಣ್ಣ ಒಣಗಿದ ಎಲೆಗಳನ್ನು ನೋಡಬಹುದಾಗಿದೆ. ಇವುಗಳಲ್ಲಿ ಅಣಬೆ, ಇಲಿ ಹುಡುಕುವುದು ನಿಜಕ್ಕೂ ಸರಳ ಏನಲ್ಲ. ಸರಿ ಹಾಗಾದ್ರೆ ನೀವು ಈ ಸವಾಲು ಸ್ವೀಕರಿಸಲು ಸಿದ್ಧರಿದ್ದರೆ, ಎಷ್ಟು ಬೇಗ ಗುರುತಿಸಬಹುದು ನೋಡಿ.

6 ದಿನಗಳ ಹಿಂದೆ ಈ ಬ್ರೈನ್‌ ಟೀಸರ್‌ ಅನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಲಾಗಿದೆ. ಈಗಾಗಲೇ ಈ ಚಿತ್ರ ನೆಟ್ಟಿಗರ ಗಮನ ಸೆಳೆದಿದೆ. 350 ಜನ ಚಿತ್ರಕ್ಕೆ ತಮ್ಮ ಪ್ರತಿಕ್ರಿಯೆ ನೀಡಿದ್ದರೆ, 150 ಮಂದಿ ರಿಶೇರ್‌ ಮಾಡಿದ್ದಾರೆ. ಹಲವರು ಕಾಮೆಂಟ್‌ ಮಾಡುವ ಮೂಲಕ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ʼ4 ಇಲಿಗಳನ್ನು ಸುಲಭವಾಗಿ ಗುರುತಿಸಬಹುದು. ಆದರೆ ಮಶ್ರೂಮ್‌ಗಳನ್ನು ಹುಡುಕುವುದು ಕಷ್ಟವಾಗುತ್ತದೆ. ನನಗೆ 2 ಮಶ್ರೂಮ್‌ ಕಾಣಿಸಿತುʼ ಎಂದು ಫೇಸ್‌ಬುಕ್‌ ಬಳಕೆದಾರರೊಬ್ಬರು ಕಾಮೆಂಟ್‌ ಮಾಡಿದ್ದಾರೆ. ʼನಾಲ್ಕು ಇಲಿಗಳು ಸುಲಭವಾಗಿ ಕಾಣಿಸುತ್ತವೆ. ಆದರೆ ಮಶ್ರೂಮ್‌ ಕಂಡುಹಿಡಿಯುವುದು ನಿಜಕ್ಕೂ ಕಷ್ಟ. ಅಂತೂ ಇಂತೂ 5 ಮಶ್ರೂಮ್‌ಗಳನ್ನು ಹುಡುಕಿದೆ. ಇದು ನಿಜಕ್ಕೂ ಸುಲಭವಲ್ಲ. ಇದಕ್ಕೆ ಮೆದುಳು ಸರಿಯಾಗಿ ಕೆಲಸ ಮಾಡಬೇಕುʼ ಎಂದು ಇನ್ನೊಬ್ಬರು ಕಾಮೆಂಟ್‌ ಮಾಡಿದ್ದಾರೆ. ʼನನಗೆ ಇಲಿಗಳು ಸಿಕ್ಕವು. ಆದರೆ ಕೊನೆಯ ಮಶ್ರೂಮ್‌ ಕಂಡುಹಿಡಿಯಲು ಸಾಧ್ಯವಾಗಿಲ್ಲ, ಇದು ನಿಜಕ್ಕೂ ಚಾಲೆಂಜ್‌. ʼಇದು ನಿಜಕ್ಕೂ ತುಂಬಾ ಕಷ್ಟವಾಗಿದೆ. ಇಲಿಗಳು ಸುಲಭಕ್ಕೆ ಸಿಕ್ಕು ಬಿಡುತ್ತವೆ. ಆದರೆ 5 ಮಶ್ರೂಮ್‌ಗಳನ್ನು ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಇದು ನಿಜಕ್ಕೂ ಸೂಪರ್‌ ಆಗಿದೆʼ ಎಂದು ಇನ್ನೊಬ್ಬರು ಕಾಮೆಂಟ್‌ ಮಾಡಿದ್ದಾರೆ. ʼವಾವ್‌ ಇದು ನಿಜಕ್ಕೂ ಕಷ್ಟ. ಕೊನೆಗೂ ನಾನು ಕಂಡುಹಿಡಿದೆʼ ಎಂದು ಇನ್ನೊಬ್ಬ ಫೇಸ್‌ಬುಕ್‌ ಬಳಕೆದಾರರು ಕಾಮೆಂಟ್‌ ಮಾಡಿದ್ದಾರೆ.

ಇದನ್ನೂ ಓದಿ

Brain Teaser: ಚಿತ್ರದಲ್ಲಿ ಯಾವ ಸಂಖ್ಯೆ ಮಿಸ್‌ ಆಗಿದೆ ಕಂಡುಹುಡುಕಿ, 6 ಖಂಡಿತ ಅಲ್ಲ, ಹಾಗಾದ್ರೆ ಮತ್ಯಾವ್ದು?

ಸಾಮಾಜಿಕ ಜಾಲತಾಣಗಳಲ್ಲಿ ಸ್ಕ್ರೋಲ್‌ ಮಾಡುವ ಕಣ್ಣಿಗೆ ಬೀಳುವ ಬ್ರೈನ್‌ ಟೀಸರ್‌ಗಳು ಮೆದುಳಿಗೆ ಹುಳ ಬಿಡುವಂತೆ ಮಾಡುವುದು ಸುಳ್ಳಲ್ಲ. ಈ ಬ್ರೈನ್‌ ಟೀಸರ್‌ಗಳಿಗೆ ಉತ್ತಮ ಸಿಗುವವರೆಗೂ ನಾವು ಪರದಾಡುತ್ತೇವೆ. ಇಲ್ಲೊಂದು ಅಂಥದ್ದೇ ಒಂದಿಷ್ಟು ಸಂಖ್ಯೆಗಳಿರುವ ಬ್ರೈನ್‌ ಟೀಸರ್‌ ಇದೆ. ಇದರಲ್ಲಿ 1ರಿಂದ 5ರವರೆಗೆ ಸಂಖ್ಯೆಗಳಿವೆ. ಆದರೆ ಒಂದು ಸಂಖ್ಯೆ ಮಿಸ್‌ ಆಗಿದೆ. ಆ ಮಿಸ್‌ ಆದ ಸಂಖ್ಯೆ ಯಾವುದು ಎಂಬುದನ್ನು ನೀವು ಹಿಡಿಯಬೇಕು, ಹಾ, ಒಂದು ವಿಷಯ ನೆನಪಿರಲಿ ಮಿಸ್‌ ಆದ ಸಂಖ್ಯೆ 6 ಖಂಡಿತ ಅಲ್ಲ.

ವಿಭಾಗ