Brain Teaser: ನಿಮ್ಮ ಕಣ್ಣು ಶಾರ್ಪ್‌ ಇದ್ರೆ ಚಿತ್ರದಲ್ಲಿರುವ 12 ತಪ್ಪುಗಳನ್ನು ಕಂಡುಹಿಡೀರಿ; ನಿಮಗಿರೋದು ಬರಿ 13 ಸೆಕೆಂಡ್‌ ಸಮಯ
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: ನಿಮ್ಮ ಕಣ್ಣು ಶಾರ್ಪ್‌ ಇದ್ರೆ ಚಿತ್ರದಲ್ಲಿರುವ 12 ತಪ್ಪುಗಳನ್ನು ಕಂಡುಹಿಡೀರಿ; ನಿಮಗಿರೋದು ಬರಿ 13 ಸೆಕೆಂಡ್‌ ಸಮಯ

Brain Teaser: ನಿಮ್ಮ ಕಣ್ಣು ಶಾರ್ಪ್‌ ಇದ್ರೆ ಚಿತ್ರದಲ್ಲಿರುವ 12 ತಪ್ಪುಗಳನ್ನು ಕಂಡುಹಿಡೀರಿ; ನಿಮಗಿರೋದು ಬರಿ 13 ಸೆಕೆಂಡ್‌ ಸಮಯ

ಇಲ್ಲಿರುವ ಬ್ರೈನ್‌ ಟೀಸರ್‌ ಚಿತ್ರದಲ್ಲಿ 12 ಮಿಸ್ಟೇಕ್‌ಗಳಿವೆ. ಮೇಲ್ನೋಟಕ್ಕೆ ಅವು ಕಾಣದೇ ಇದ್ರೂ ಸೂಕ್ಷ್ಮವಾಗಿ ಗಮನಿಸಿದಾಗ ಕಾಣಿಸುವುದು ಪಕ್ಕಾ. ನೀವು ಸ್ಮಾರ್ಟ್‌ ಆಗಿದ್ರೆ ಈ ತಪ್ಪುಗಳನ್ನು ಕಂಡುಹುಡುಕಿ.

ಚಿತ್ರದಲ್ಲಿನ ತಪ್ಪುಗಳನ್ನು ಕಂಡುಹಿಡಿಯಿರಿ
ಚಿತ್ರದಲ್ಲಿನ ತಪ್ಪುಗಳನ್ನು ಕಂಡುಹಿಡಿಯಿರಿ (Pinterest)

ಬ್ರೈನ್‌ ಟೀಸರ್‌ ಪ್ರೇಮಿಗಳು ನಿವಾಗಿದ್ರೆ ನಿಮಗಾಗಿ ನಾವು ಒಂದು ಹೊಸ ಚಾಲೆಂಜ್‌ ತಂದಿದ್ದೇವೆ. ಇಲ್ಲಿರುವ ಚಿತ್ರದಲ್ಲಿ ನಿಮಗೆ ತಪ್ಪುಗಳನ್ನು ಹುಡುಕೋದೇ ಸವಾಲು.

ಬ್ರೈನ್‌ ಟೀಸರ್‌ಗಳು ಮೆದುಳಿಗೆ ಹಾಗೂ ಕಣ್ಣುಗಳಿಗೆ ಚಾಲೆಂಜ್‌ ಮಾಡುವುದರಲ್ಲಿ ಎರಡು ಮಾತಿಲ್ಲ. ಇದು ಮೆದುಳನ್ನು ಚುರುಕಾಗಿಸುತ್ತವೆ. ಅಲ್ಲದೆ ಒಂದಿಷ್ಟು ಹೊತ್ತು ಮೋಜಿನಿಂದ ಸಮಯ ಕಳೆಯಲು ನೆರವಾಗುತ್ತವೆ. ಇವು ನಮ್ಮ ಮೆದುಳಿನ ಶಕ್ತಿ ಸಾಮರ್ಥ್ಯವನ್ನೂ ಹೆಚ್ಚಿಸುತ್ತವೆ.

ಇಂತಹ ಪಜಲ್‌ಗಳನ್ನು ನೀವು ಬಿಡಿಸುವುದು ಮಾತ್ರವಲ್ಲ ನಿಮ್ಮ ಸ್ನೇಹಿತರಿಗೂ ಕಳುಹಿಸಿ ಅವರಿಂದ ಉತ್ತರ ಕಂಡುಕೊಳ್ಳಬಹುದು.

ಈ ಬ್ರೈನ್‌ ಟೀಸರ್‌ನಲ್ಲಿ ಏನಿದೆ?

ಇಲ್ಲಿರುವ ಬ್ರೈನ್‌ ಟೀಸರ್‌ನಲ್ಲಿ ಒಂದು ಮನೆಯ ದೃಶ್ಯವಿದೆ. ಮನೆಯಲ್ಲಿ ಒಂದಿಷ್ಟು ಮಂದಿ ಡೈನಿಂಗ್‌ ಟೇಬಲ್‌ ಮೇಲೆ ಕುಳಿತು ಬ್ರೇಕ್‌ಫಾಸ್ಟ್‌ ಮಾಡುತ್ತಿದ್ದಾರೆ. ಮನೆಯ ಯಜಮಾನ ಸೋಪಾ ಮೇಲೆ ಕುಳಿತು ಪೇಪರ್‌ ಓದುತ್ತಿದ್ದಾನೆ, ಮಕ್ಕದಲ್ಲೇ ಕುಳಿತ ಮಗು ಬೊಂಬೆಯೊಂದಿಗೆ ಆಟವಾಡುತ್ತಿದೆ. ಅಷ್ಟೇ ಅಲ್ಲದೆ ಮನೆಯೊಳಗೆ ಗೂಡಿನಲ್ಲಿ ಗೂಬೆಯಂತೆ ಕಾಣುವ ಪಕ್ಷಿ ಕೂಡ ಇದೆ. ಈಗ ನಿಮಗಿರುವ ಚಾಲೆಂಜ್‌ ಅಂದ್ರೆ 13 ಸೆಕೆಂಡ್‌ನಲ್ಲಿ 12 ಮಿಸ್ಟೇಕ್‌ಗಳನ್ನು ಕಂಡುಹಿಡಿಯುವುದು. ನೀವು ನಿಜಕ್ಕೂ ಸ್ಮಾರ್ಟ್‌ ಇದ್ರೆ 13 ಸೆಕೆಂಡ್‌ನಲ್ಲಿ ಎಲ್ಲಾ 12 ವ್ಯತ್ಯಾಸಗಳನ್ನು ಕಂಡುಹಿಡೀತಿರಿ. ಸರಿ ಇನ್ನೇಕೆ ತಡ, ನಿಮ್ಮ ಸಮಯ ಈಗ ಶುರು...

13 ನಿಮಿಷ ಮುಗಿಯಿತು... ನಿಮಗೆ ಎಷ್ಟು ವ್ಯತ್ಯಾಸ ಕಾಣಿಸ್ತು? ಎಲ್ಲಾ ತಪ್ಪುಗಳನ್ನು ನಿಮ್ಮಿಂದ ಕಂಡುಹಿಡಿಯೋಕೆ ಆಗಿಲ್ವಾ? ಸರಿ ಹಾಗಿದ್ರೆ ನಾವು ನಿಮಗೆ ಸಹಾಯ ಮಾಡ್ತೀವಿ.

ಏನೆಲ್ಲಾ ಮಿಸ್ಟೇಕ್‌ಗಳಿವೆ ಎಂಬುದನ್ನು ನಾವು ಹೇಳ್ತೀವಿ ನೋಡಿ.

* ಡೈನಿಂಗ್‌ ಟೇಬಲ್‌ ಅಲ್ಲಿ ಕುಳಿತವರಲ್ಲಿ ಒಬ್ಬ ಚಿಕ್ಕ ಹುಡುಗಿ ಚಾಕುವಿನಿಂದ ಟೀಯನ್ನು ತಿರುವುತ್ತಿದ್ದಾಳೆ.

* ಟೇಬಲ್‌ ಮೇಲಿರುವ ಬ್ರೆಡ್‌ ತ್ರಿಜಾಕೃತಿಯಲ್ಲಿದೆ. ಆದರೆ ಅಲ್ಲಿರುವ ಹುಡುಗ ಕೈಯಲ್ಲಿರುವ ಬ್ರೆಡ್‌ ಚೌಕಾಕಾರವಾಗಿದೆ.

* ಟೀ ಪಾಟ್‌ಗೆ ಹಿಡಿಕೆಯಿಲ್ಲ.

* ಮಹಿಳೆ ಟೇಬಲ್‌ ಮೇಲೆ ಟೀ ಚೆಲ್ಲುತ್ತಿದ್ದಾಳೆ.

* ಮೇಣದಬತ್ತಿ ಇರುವ ಲ್ಯಾಂಪ್‌ ಅನ್ನು ಸಾಕೆಟ್‌ಗೆ ಪ್ಲಗ್‌ ಮಾಡಲಾಗಿದೆ.

* ಚಿಕ್ಕ ಹುಡುಗನ ಕನ್ನಡಕವು ಎರಡು ಭಿನ್ನ ಆಕಾರವನ್ನು ಹೊಂದಿದೆ.

* ಎಲೆಕ್ಟ್ರಿಕ್‌ ಹೀಟರ್‌ನಿಂದ ಹೊಗೆ ಬರುತ್ತಿದೆ.

* ಕನ್ನಡಿಯನ್ನು ಉಲ್ಟಾ ನೇತು ಹಾಕಲಾಗಿದೆ.

* ಅಲ್ಲಿ ಕುಳಿತಿರುವ ವ್ಯಕ್ತಿ ನ್ಯೂಸ್‌ ಪೇಪರ್‌ ಉಲ್ಟಾ ಹಿಡಿದು ಓದುತ್ತಿದ್ದಾನೆ.

* ಕಾಫಿ ಟೇಬಲ್‌ಗೆ ಇರುವುದು ಮೂರೇ ಕಾಲು. ಇನ್ನೊಂದು ಮಿಸ್‌ ಆಗಿದೆ.

* ಗೂಡಿನಲ್ಲಿ ಬೆಕ್ಕು ಸಿಕ್ಕಿ ಹಾಕಿಕೊಂಡಿದೆ.

ನೋಡಿ ಇಷ್ಟೆಲ್ಲಾ ತಪ್ಪುಗಳಿವೆ
ನೋಡಿ ಇಷ್ಟೆಲ್ಲಾ ತಪ್ಪುಗಳಿವೆ (Jagaran Josh )

ಈಗ ಗೊತ್ತಾಯ್ತು ಅಲ್ವಾ, ಈ ಚಿತ್ರದಲ್ಲಿ ಏನೆಲ್ಲಾ ಯಡವಟ್ಟುಗಳಿದೆ ಅಂತಾ. ಸರಿ ಇನ್ನೇಕೆ ತಡ ಈಗಲೇ ಈ ಚಿತ್ರವನ್ನು ನಿಮ್ಮ ಸ್ನೇಹಿತರಿಗೆ ಹಾಗೂ ಸಂಬಂಧಿಕರಿಗೆ ಕಳುಹಿಸಿ ಮಜಾ ಪಡೆಯಿರಿ.

ಇದನ್ನೂ ಓದಿ 

Brain Teaser: ನೀವು ಗಣಿತದಲ್ಲಿ ಪಂಟರೇ, ಹಾಗಾದ್ರೆ ನಿಮಗಾಗಿ ಇಲ್ಲಿದೆ ಒಂದು ಸವಾಲು; ಇದಕ್ಕೆ ಉತ್ತರ ಹೇಳಿದ್ರೆ ನೀವು ಗ್ರೇಟ್‌

ಬ್ರೈನ್‌ ಟೀಸರ್‌ ಚಾಲೆಂಜ್‌ ಸ್ವೀಕರಿಸೋದು ಅಂದ್ರೆ ಬಹಳಷ್ಟು ಜನರಿಗೆ ಅದೇನೋ ಥ್ರಿಲ್‌. ಇದಕ್ಕೆ ಉತ್ತರ ಕಂಡುಕೊಳ್ಳಲು ತಾವು ತಲೆ ಕೆಡಿಸಿಕೊಳ್ಳುವುದು ಮಾತ್ರವಲ್ಲ, ಮನೆಯಲ್ಲಿ ಇರುವ ಇತರರ ತಲೆಯನ್ನೂ ಕೆಡಿಸುತ್ತಾರೆ. ಇದು ಒಂಥರಾ ಮಜಾ ಕೊಡುವ ಕಾರಣಕ್ಕೆ ಎಲ್ಲರಿಗೂ ಇಷ್ಟವಾಗುತ್ತದೆ. ಇದನ್ನು ಬಿಡಿಸುವ ಸಲುವಾಗಿ ಮೆದುಳಿಗೆ ಸಾಕಷ್ಟು ಕೆಲಸ ನೀಡುತ್ತೇವೆ. ಸರಿ, ನಿಮಗೆ ಗಣಿತ ಅಂದ್ರೆ ಇಷ್ಟಾನಾ, ಗಣಿತ ಸವಾಲು ಬಿಡಿಸುವುದರಲ್ಲಿ ನೀವು ಪಂಟರಾದ್ರೆ ನಿಮಗಾಗಿ ಇಲ್ಲಿದೆ ಒಂದು ಬ್ರೈನ್‌ ಟೀಸರ್‌ ಸವಾಲು. ಇದು ಸರಳ ಗಣಿತ ಅನ್ನಿಸಬಹುದು. ಆದ್ರೆ ಉತ್ತರ ಹುಡುಕೋದು ಮಾತ್ರ ಖಂಡಿತ ಕಷ್ಟ ಆಗುತ್ತೆ. ಆದ್ರೆ ಸ್ವಲ್ಪ ಬುದ್ಧಿ ಉಪಯೋಗಿಸಿದ್ರೆ ಉತ್ತಮ ಹುಡುಕೋದು ಕಷ್ಟವೇನಲ್ಲ ಬಿಡಿ.

Whats_app_banner