ಕನ್ನಡ ಸುದ್ದಿ  /  Lifestyle  /  Viral News Viral Photo Can You Find The Missing Number No It Is Not 6 Social Media Viral In Kannada Rst

Brain Teaser: ಚಿತ್ರದಲ್ಲಿ ಯಾವ ಸಂಖ್ಯೆ ಮಿಸ್‌ ಆಗಿದೆ ಕಂಡುಹುಡುಕಿ, 6 ಖಂಡಿತ ಅಲ್ಲ, ಹಾಗಾದ್ರೆ ಮತ್ಯಾವ್ದು?

ಎಕ್ಸ್‌ನಲ್ಲಿ ಮೆದುಳಿಗೆ ಹುಳ ಬಿಡುವ ಬ್ರೈನ್‌ ಟೀಸರ್‌ವೊಂದನ್ನು ಶೇರ್‌ ಮಾಡಿಕೊಳ್ಳಲಾಗಿದೆ. ಇಲ್ಲೊಂದಿಷ್ಟು ಸಂಖ್ಯೆಗಳಿವೆ, ಅದರಲ್ಲಿ ಒಂದು ಸಂಖ್ಯೆ ಮಿಸ್‌ ಆಗಿದೆ. ಅದು ಯಾವುದು ಎಂದು ಹೇಳಬೇಕು? ಹಾಗಂತ ಇದಕ್ಕೆ ಉತ್ತರ ಖಂಡಿತ 6 ಅಲ್ಲ. ಹಾಗಾದ್ರೆ ಯಾವ ಸಂಖ್ಯೆ ಮಿಸ್‌ ಆಗಿದೆ ಹೇಳಿ?

ಚಿತ್ರದಲ್ಲಿ ಮಿಸ್‌ ಆಗಿರುವ ಸಂಖ್ಯೆ ಯಾವುದು?
ಚಿತ್ರದಲ್ಲಿ ಮಿಸ್‌ ಆಗಿರುವ ಸಂಖ್ಯೆ ಯಾವುದು?

ಸಾಮಾಜಿಕ ಜಾಲತಾಣಗಳಲ್ಲಿ ಸ್ಕ್ರೋಲ್‌ ಮಾಡುವ ಕಣ್ಣಿಗೆ ಬೀಳುವ ಬ್ರೈನ್‌ ಟೀಸರ್‌ಗಳು ಮೆದುಳಿಗೆ ಹುಳ ಬಿಡುವಂತೆ ಮಾಡುವುದು ಸುಳ್ಳಲ್ಲ. ಈ ಬ್ರೈನ್‌ ಟೀಸರ್‌ಗಳಿಗೆ ಉತ್ತಮ ಸಿಗುವವರೆಗೂ ನಾವು ಪರದಾಡುತ್ತೇವೆ. ಇಲ್ಲೊಂದು ಅಂಥದ್ದೇ ಒಂದಿಷ್ಟು ಸಂಖ್ಯೆಗಳಿರುವ ಬ್ರೈನ್‌ ಟೀಸರ್‌ ಇದೆ. ಇದರಲ್ಲಿ 1ರಿಂದ 5ರವರೆಗೆ ಸಂಖ್ಯೆಗಳಿವೆ. ಆದರೆ ಒಂದು ಸಂಖ್ಯೆ ಮಿಸ್‌ ಆಗಿದೆ. ಆ ಮಿಸ್‌ ಆದ ಸಂಖ್ಯೆ ಯಾವುದು ಎಂಬುದನ್ನು ನೀವು ಹಿಡಿಯಬೇಕು, ಹಾ, ಒಂದು ವಿಷಯ ನೆನಪಿರಲಿ ಮಿಸ್‌ ಆದ ಸಂಖ್ಯೆ 6 ಖಂಡಿತ ಅಲ್ಲ.

ʼಮತ್ತೊಂದು ಬ್ರೈನ್‌ ಟೀಸರ್‌, ನೋಡೋಣ ಯಾರು ಬುದ್ಧಿವಂತರುʼ ಎಂದು ಶೀರ್ಷಿಕೆ ಬರೆದುಕೊಳ್ಳುವ ಮೂಲಕ ಎಕ್ಸ್‌ನಲ್ಲಿ ಈ ಬ್ರೈನ್‌ ಟೀಸರ್‌ ಅನ್ನು ಹಂಚಿಕೊಳ್ಳಲಾಗಿದೆ. ʼಬ್ರೈನ್‌ ಟೀಸರ್‌ನಲ್ಲಿ ʼಮಿಸ್‌ ಆಗಿರುವುದು ಯಾವುದು ಎಂದು ಬರೆದುಕೊಳ್ಳಲಾಗಿದೆ. ಇದರಲ್ಲಿ 1,2,3,4 ಹಾಗೂ 5 ಅಂಕೆಗಳನ್ನು ಮೇಲೆ ಕೆಳಗೆ ಬರೆಯಲಾಗಿದೆ. ನಿಮಗಿರುವ ಸವಾಲು 5 ರ ಕೆಳಗೆ ಯಾವ ಸಂಖ್ಯೆ ಬರಬೇಕು ಎನ್ನುವುದು. ಥಟ್ಟಂತ ನಿಮಗೆ ಹೊಳೆಯೋದು 6 ಅನ್ನೋದು ನಮಗೆ ಗೊತ್ತು, ಆದ್ರೆ ಇದರಲ್ಲಿ ಮಿಸ್‌ ಆಗಿರೋದು 6 ಖಂಡಿತ ಅಲ್ಲ, ಹಾಗಾದ್ರೆ ಮಿಸ್‌ ಆಗಿರುವ ನಂಬರ್‌ ಯಾವುದು?

ಅಕ್ಟೋಬರ್‌ 30 ರಂದು ಈ ಬ್ರೈನ್‌ ಟೀಸರ್‌ ಚಿತ್ರವನ್ನು ಹಂಚಿಕೊಳ್ಳಲಾಗಿತ್ತು. ಈಗಾಗಲೇ 40ಕ್ಕೂ ಹೆಚ್ಚು ಮಂದಿ ಈ ಪೋಸ್ಟ್‌ ಅನ್ನು ವೀಕ್ಷಿಸಿದ್ದಾರೆ. ವೀಕ್ಷಕರ ಸಂಖ್ಯೆ ಇನ್ನೂ ಹೆಚ್ಚುತ್ತಲೇ ಇದೆ. ಹಲವರು ಕಾಮೆಂಟ್‌ ವಿಭಾಗದಲ್ಲಿ ತಾವು ಕಂಡುಕೊಂಡು ಉತ್ತರವನ್ನು ಕಾಮೆಂಟ್‌ ಮಾಡುವ ಮೂಲಕ ತಿಳಿಸಿದ್ದಾರೆ.

ಈ ಬ್ರೈನ್‌ ಟೀಸರ್‌ಗೆ ಜನರ ಪ್ರತಿಕ್ರಿಯೆ ಹೀಗಿದೆ

ʼಇದಕ್ಕೆ ಉತ್ತರ 6 ಖಂಡಿತ ಅಲ್ಲʼ ಎಂದು ವ್ಯಕ್ತಿಯೊಬ್ಬರು ಕಾಮೆಂಟ್‌ ಮಾಡುವ ಮೂಲಕ ತಿಳಿಸಿದ್ದಾರೆ. ʼಏನುʼ ಎಂದು ಇನ್ನೊಬ್ಬರು ಪೋಸ್ಟ್‌ ಮಾಡಿದವರಿಗೆ ಪ್ರಶ್ನೆ ಕೇಳಿದ್ದಾರೆ. ಹಲವರಿಗೆ ಈ ಬ್ರೈನ್‌ ಟೀಸರ್‌ಗೆ ಉತ್ತರ ಕಂಡುಹಿಡಿಯಲು ಸಾಧ್ಯವಾಗಿಲ್ಲ. ಹಾಗಾದರೆ ನಿಮ್ಮ ಉತ್ತರವೇನು? ಮಿಸ್‌ ಆದ ನಂಬರ್‌ ಯಾವುದು?

ಇದನ್ನೂ ಓದಿ

Optical Illusion: ಚಿತ್ರದಲ್ಲಿ ಸುಂದರವಾದ ಹುಡುಗಿಯೊಬ್ಬಳಿದ್ದಾಳೆ; ಶೇ 90 ರಷ್ಟು ಮಂದಿಗೆ ಕಾಣದ ಆ ಸುಂದರಿ ನಿಮ್ಮ ಕಣ್ಣಿಗೆ ಕಾಣ್ತಾಳಾ ನೋಡಿ

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ಒಮ್ಮೊಮ್ಮೆ ನಮ್ಮನ್ನೇ ನಾವು ಅನುಮಾನದಿಂದ ನೋಡುವಂತೆ ಮಾಡುವುದು ಸುಳ್ಳಲ್ಲ. ಇಲ್ಲೊಂದು ಅಂಥದ್ದೇ ಚಿತ್ರದಲ್ಲಿ. ಇದರಲ್ಲಿ ಮೇಲ್ನೋಟಕ್ಕೆ ಸುಂದರವಾದ ಕೆಂಬಣ್ಣದ ಮೀನೊಂದು ಕಾಣುತ್ತದೆ. ಆದರೆ ಇದರಲ್ಲಿ ಸುಂದರಿಯೊಬ್ಬಳೂ ಇದ್ದಾಳೆ. ಆ ಸುಂದರಿಯನ್ನು ಹುಡುಕುವುದು ನಿಮಗಿರುವ ಸವಾಲು.

ವಿಭಾಗ