ಕನ್ನಡ ಸುದ್ದಿ  /  ಜೀವನಶೈಲಿ  /  Optical Illusion: ಕಾಫಿನಾ ಬೆಕ್ಕಾ ಮೊದಲು ಕಾಣಿಸಿದ್ದೇನು? ನಿಮ್ಮ ವ್ಯಕ್ತಿತ್ವ ಪರಿಚಯಿಸಲಿದೆ ಈ ಚಿತ್ರ, ಟ್ರೈ ಮಾಡಿ

Optical Illusion: ಕಾಫಿನಾ ಬೆಕ್ಕಾ ಮೊದಲು ಕಾಣಿಸಿದ್ದೇನು? ನಿಮ್ಮ ವ್ಯಕ್ತಿತ್ವ ಪರಿಚಯಿಸಲಿದೆ ಈ ಚಿತ್ರ, ಟ್ರೈ ಮಾಡಿ

ಇಲ್ಲಿರುವ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವು ಒಬ್ಬೊಬ್ಬರಿಗೆ ಒಂದೊಂದು ರೀತಿ ಕಾಣಿಸಬಹುದು. ಕೆಲವರಿಗೆ ಇದರಲ್ಲಿ ಬೆಕ್ಕು ಕಾಣಿಸಿದರೆ, ಇನ್ನೂ ಕೆಲವರಿಗೆ ಕಾಫಿ ಕಾಣಿಸಬಹುದು. ಆದರೆ ನಿಮಗೆ ಏನು ಕಂಡಿತ್ತೋ ಅದರಲ್ಲಿ ನಿಮ್ಮ ವ್ಯಕ್ತಿತ್ವ ಅಡಗಿರುತ್ತದೆ. ಜೊತೆಗೆ ಈ ಚಿತ್ರವು ನಿಮ್ಮ ಭಾವನೆ ಎಂಥದ್ಧು ಎಂಬುದನ್ನು ವ್ಯಕ್ತಪಡಿಸಲಿದೆ.

ಕಾಫಿನಾ, ಬೆಕ್ಕಾ ಮೊದಲು ಕಾಣಿಸಿದ್ದೇನು?
ಕಾಫಿನಾ, ಬೆಕ್ಕಾ ಮೊದಲು ಕಾಣಿಸಿದ್ದೇನು?

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ನಮ್ಮ ಮನಸ್ಸಿಗೆ ಖುಷಿ ಕೊಡುವುದು ಮಾತ್ರವಲ್ಲ, ಇದು ನಮ್ಮ ವ್ಯಕ್ತಿತ್ವದ ಪರಿಚಯವನ್ನೂ ಮಾಡುತ್ತದೆ. ನಮ್ಮ ವ್ಯಕ್ತಿತ್ವದ ಬಗ್ಗೆ ತಿಳಿದುಕೊಳ್ಳುವುದು ಎಂದರೆ ನಮಗೆ ಖಂಡಿತ ಒಲವಿರುತ್ತದೆ. ನಾವು ಹೇಗೆ ಎಂಬುದನ್ನು ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ತಿಳಿಸುತ್ತವೆ ಎಂದರೆ ಯಾರಿಗೆ ತಾನೆ ಇಷ್ಟವಾಗುವುದಿಲ್ಲ ಹೇಳಿ. ಆ ಕಾರಣದಿಂದಲೂ ಇತ್ತೀಚಿನ ದಿನಗಳಲ್ಲಿ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳನ್ನು ಜನರು ಹೆಚ್ಚು ಇಷ್ಟಪಡುತ್ತಿದ್ದಾರೆ. ಚಿತ್ರವನ್ನು ನೋಡಿದಾಕ್ಷಣ ನಿಮ್ಮ ಕಣ್ಣಿಗೆ ಏನು ಕಾಣಿಸುತ್ತದೆ ಎಂಬುದು ನಿಮ್ಮ ವ್ಯಕ್ತಿತ್ವವನ್ನು ತಿಳಿಸುತ್ತದೆ.

ಟ್ರೆಂಡಿಂಗ್​ ಸುದ್ದಿ

ನೀವು ಮೊದಲು ಗ್ರಹಿಸಿದ್ದು, ನಿಮ್ಮ ವ್ಯಕ್ತಿತ್ವದ ಸೂಚಕವಾಗಿರುತ್ತದೆ. ಒಬ್ಬ ವ್ಯಕ್ತಿಯಾಗಿ ನೀವು ಹೇಗೆ ಎಂಬುದನ್ನು ಇದು ತೋರಿಸುತ್ತದೆ. ನಿಮ್ಮ ಬಗ್ಗೆ ನೀವು ಆಳವಾಗಿ ಅರಿಯಲು ಈ ಚಿತ್ರಗಳು ಸಹಾಯ ಮಾಡುತ್ತವೆ. ಅಂದ ಹಾಗೆ ನಿಮ್ಮ ಕಣ್ಣಿಗೆ ಕಾಣಿಸಿದ್ದೇ ಇನ್ನೊಬ್ಬರ ಕಣ್ಣಿಗೂ ಕಾಣಿಸಬೇಕು ಎಂದೇನಿಲ್ಲ.

ಸರಿ ಹಾಗಾದ್ರೆ ಇಲ್ಲಿರುವ ಚಿತ್ರವನ್ನು ನೋಡಿ, ನಿಮಗೆ ಏನು ಕಾಣಿಸಿತು ಹೇಳಿ.

ಮಿಯಾ ಯಿಲಿನ್‌ ಎಂಬ ಖ್ಯಾತ ಟಿಕ್‌ ಟಾಕರ್‌ (ಭಾರತದಲ್ಲಿ ಬ್ಯಾನ್‌ ಆಗಿದೆ) ಈ ಚಿತ್ರದಲ್ಲಿ ಮೊದಲು ನಿಮಗೆ ಕಂಡಿದ್ದೇನುʼ ಎಂದು ಬರೆದುಕೊಳ್ಳುವ ಮೂಲಕ ಪೋಸ್ಟ್‌ ಮಾಡಿದ್ದಾರೆ. ಕಾಫಿ ಮೊದಲು ಕಾಣಿಸಿದ್ದಾ ಅಥವಾ ಚಿಕ್ಕ ಎಂಬುದನ್ನು ವೀಕ್ಷಕರು ಹೇಳಬೇಕಾಗಿದೆ.

ನಿಮಗೆ ಕಾಫಿ ಮೊದಲು ಕಂಡರೆ...

ನಿಮಗೆ ಕಾಫಿ ಮೊದಲು ಕಂಡರೆ ನೀವು ಸ್ವಾತಂತ್ರ್ಯ ಮನೋಭಾವದವರು. ನೀವು ಬಲವಾದ ಇಚ್ಛಾಶಕ್ತಿಯುಳ್ಳವರಾಗಿದ್ದು, ಇತರರಿಂದ ಸಹಾಯ ಪಡೆಯಲು ನೀವು ಬಯಸುವುದಿಲ್ಲ. ನೀವು ನೇರ ಟೀಕೆಯನ್ನು ಎದುರಿಸುವ ಮನೋಭಾವದವರಲ್ಲ. ಸಾಕಷ್ಟು ಜನರು ಸೇರಿರುವ ಕಡೆ ನೀವು ಹೋಗಲು ಇಷ್ಟಪಡುವುದಿಲ್ಲ. ಅಂತಹ ಸ್ಥಳದಲ್ಲಿ ನೀವು ಮುಜುಗರಕ್ಕೆ ಒಳಗಾಗುತ್ತೀರಿ. ಸಂಬಂಧಗಳ ವಿಚಾರದಲ್ಲಿ ನೀವು ವಾಸ್ತವವಾಗಿ ಹಾಗೂ ತಾರ್ತಿಕವಾಗಿ ಯೋಚಿಸುತ್ತೀರಿ. ಆ ಕಾರಣಕ್ಕೆ ನಯವಾದ ಮಾತುಗಳಿಂದ ನಿಮ್ಮನ್ನು ಕರಗಿಸಲು ಸಾಧ್ಯವಿಲ್ಲ.

ನಿಮಗೆ ಬೆಕ್ಕು ಮೊದಲ ಕಾಣಿಸಿದರೆ...

ನೀವು ಬೆಕ್ಕನ್ನು ಮೊದಲು ಕಂಡರೆ ನೀವು ಹೊರನೋಟಕ್ಕೆ ಸಂತೋಷವಾಗಿರುತ್ತೀರಿ, ಆದರೆ ಒಳಗಿನಿಂದ ಸಾಕಷ್ಟು ನೋವು ಅನುಭವಿಸುತ್ತಿರುತ್ತಾರೆ. ಈಗಾಗಲೇ ಕಿರಿಕಿರಿಗೊಂಡಿರುವ ಇವರು ಯಾರಾದರೂ ಕೆರಳಿಸಿದರೆ ಇನ್ನಷ್ಟು ಕೋಪಗೊಳ್ಳುತ್ತಾರೆ.

ಇವರು ತುಂಬಾ ರೊಮ್ಯಾಂಟಿಕ್‌, ಇವರು ತಮ್ಮ ಸಂಗಾತಿಗಾಗಿ ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ಆದರೆ ಅವರು ಸಂಗಾತಿ ಮೋಸ ಮಾಡಿದರೆ, ದ್ರೋಹ ಮಾಡಿದರೆ ಇವರು ಅವರನ್ನು ದೂರ ಮಾಡುತ್ತಾರೆ, ಮಾತ್ರವಲ್ಲ ಮತ್ತೆ ಎಂದಿಗೂ ಕ್ಷಮಿಸುವುದಿಲ್ಲ.

ಸರಿ ನಿಮ್ಮ ವ್ಯಕ್ತಿತ್ವ ಹೇಗೆ ತಿಳಿಯಿತು ಅಲ್ವಾ, ಸರಿ ಇನ್ನೇಕೆ ತಡ ಇದನ್ನು ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರಿಗೂ ಕಳುಹಿಸಿ. ಅವರಿಗೆ ಮೊದಲು ಏನು ಕಂಡಿತು ಎಂಬುದನ್ನು ತಿಳಿದುಕೊಂಡು ಅವರ ವ್ಯಕ್ತಿತ್ವ ಹೇಗೆ ಅರಿಯಿರಿ.

ವಿಭಾಗ