Viral News: ಏರ್‌ಪೋರ್ಟ್‌ನಲ್ಲಿ ಊಟ ಇಷ್ಟೊಂದು ದುಬಾರಿನಾ; ಇದಕ್ಕಿಂತ ಫ್ಲೈಟ್‌ ಚಾರ್ಜ್‌ ಬೆಟರ್‌ ಅಂದ್ರು ನೆಟ್ಟಿಗರು
ಕನ್ನಡ ಸುದ್ದಿ  /  ಜೀವನಶೈಲಿ  /  Viral News: ಏರ್‌ಪೋರ್ಟ್‌ನಲ್ಲಿ ಊಟ ಇಷ್ಟೊಂದು ದುಬಾರಿನಾ; ಇದಕ್ಕಿಂತ ಫ್ಲೈಟ್‌ ಚಾರ್ಜ್‌ ಬೆಟರ್‌ ಅಂದ್ರು ನೆಟ್ಟಿಗರು

Viral News: ಏರ್‌ಪೋರ್ಟ್‌ನಲ್ಲಿ ಊಟ ಇಷ್ಟೊಂದು ದುಬಾರಿನಾ; ಇದಕ್ಕಿಂತ ಫ್ಲೈಟ್‌ ಚಾರ್ಜ್‌ ಬೆಟರ್‌ ಅಂದ್ರು ನೆಟ್ಟಿಗರು

ಏರ್‌ಪೋರ್ಟ್‌ನಲ್ಲಿ ಅನ್ನ, ರಾಜ್ಮಾ ಕರಿ ಹಾಗೂ ಒಂದು ಗ್ಲಾಸ್‌ ಕೋಕ್‌ಗೆ ಆ ವ್ಯಕ್ತಿ ನೀಡಿದ್ದು, ಬರೋಬ್ಬರಿ 500ರೂ. ಆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಹಲವು ಪ್ರತಿಕ್ರಿಯೆ ನೀಡಿದ್ದು, ಏರ್‌ಪೋರ್ಟ್‌ ಚಾರ್ಜ್‌ಗಿಂತ ಫ್ಲೈಟ್‌ ಚಾರ್ಜ್‌ ಬೆಟರ್‌ ಅಂದಿದ್ದಾರೆ. ಹಾಗಾದ್ರೆ ಏನಿದು ಸ್ಟೋರಿ ನೋಡಿ.

ವೈರಲ್‌ ಆದ ಪೋಸ್ಟ್‌ನಲ್ಲಿದ್ದ ಫೋಟೊ
ವೈರಲ್‌ ಆದ ಪೋಸ್ಟ್‌ನಲ್ಲಿದ್ದ ಫೋಟೊ (X/@chiefsanjay)

ವಿಮಾನ ಪ್ರಯಾಣಿಕರಿಗೆ ವಿಮಾನದ ವೆಚ್ಚಕ್ಕಿಂತ ಹೆಚ್ಚು ಖರ್ಚಾಗುವುದು ಏರ್‌ಪೋರ್ಟ್‌ನಲ್ಲಿ ಸಿಗುವ ಆಹಾರ ತಿನ್ನುವುದರಿಂದ ಎಂದು ಹಲವರು ಹೇಳುವುದನ್ನು ನಾವು ಕೇಳಿಸಿಕೊಂಡಿರುತ್ತವೆ. ಅದು ನಿಜ ಕೂಡ. ಇತ್ತೀಚೆಗೆ ವ್ಯಕ್ತಿಯೊಬ್ಬರು ಈ ವಿಷಯವಾಗಿ ತಮಗಾದ ಅನುಭವವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.

ಅವರು ಏರ್‌ಪೋರ್ಟ್‌ನಲ್ಲಿ ಆಹಾರಕ್ಕೆ 500 ರೂ ನೀಡಿರುವ ಬಗ್ಗೆ ಬರೆದುಕೊಂಡಿದ್ದಾರೆ. ಒಂದು ಪ್ಲೇಟ್‌ ರಾಜ್ಮಾ ರೈಸ್‌ ಹಾಗೂ ಒಂದು ಗ್ಲಾಸ್‌ ಪಾನೀಯಕ್ಕೆ ನಾನು 500 ರೂ ನೀಡಬೇಕಾಯ್ತು ಎಂದು ಪೋಸ್ಟ್‌ ಮಾಡಿದ್ರು. ಇವರ ಈ ಪೋಸ್ಟ್‌ ಎಕ್ಸ್‌ನಲ್ಲಿ ಭಾರಿ ಸದ್ದು ಮಾಡುತ್ತಿದೆ. ಹಲವರು ಇದಕ್ಕೆ ಪ್ರತಿಕ್ರಿಯಿಸಿದ್ದಾರೆ, ಮಾತ್ರವಲ್ಲ. ಕೆಲವರು ಅವರನ್ನು ಬೆಂಬಲಿಸಿ ಮಾತನಾಡಿದ್ದಾರೆ. ಮಾತ್ರವಲ್ಲ ವಿಮಾನ ನಿಲ್ದಾಣಗಳಲ್ಲಿನ ತಿನಿಸುಗಳು, ವಸ್ತುಗಳ ದುಬಾರಿ ಬೆಲೆಯ ಬಗ್ಗೆ ಚರ್ಚೆ ಆರಂಭಿಸಿದ್ದಾರೆ.

ಡಾ. ಸಂಜಯ್‌ ಅರೋರಾ ಎನ್ನುವವರು ಎಕ್ಸ್‌ನಲ್ಲಿ ಈ ಬಗ್ಗೆ ಪೋಸ್ಟ್‌ ಮಾಡಿದ್ದಾರೆ. ಜೊತೆಗೆ ಅವರು ʼವಿಮಾನ ನಿಲ್ದಾಣಗಳಲ್ಲಿ ತಿನ್ನಲು ನಾವು ಯಾಕೆ ಹಿಂಜರಿಯುತ್ತೇವೆ ಎಂಬುದು ನನಗೆ ಮೊದಲ ಅರ್ಥವಾಗುತ್ತಿರಲಿಲ್ಲ. ನಾನು ಒಂದು ಕೋಕ್‌, ರಾಜ್ಮಾ ಚಾವಲ್‌ ಆರ್ಡರ್‌ ಮಾಡಿದೆ. ಇದಕ್ಕೆ 500 ರೂ ಬಿಲ್‌ ಮಾಡಿದ್ರು. ಇದಕ್ಕೆ ಅರ್ಥ ಇದ್ಯಾ? ಇದನ್ನೇ ಅಲ್ವಾ ಹಗಲು ದರೋಡೆ ಅನ್ನೋದು, ವಿಮಾನದಲ್ಲಿ ಪ್ರಯಾಣ ಮಾಡುತ್ತಾರೆ ಅಂದ ಮಾತ್ರಕ್ಕೆ ಅವರನ್ನು ಲೂಟಿ ಮಾಡುವುದು ಎಷ್ಟು ಸರಿʼ ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್‌ನೊಂದಿಗೆ ತಾವು ಖರೀದಿಸಿ ಖಾದ್ಯದ ಫೋಟೊವನ್ನೂ ಹಂಚಿಕೊಂಡಿದ್ದಾರೆ.

ಐದಾರು ದಿನಗಳ ಹಿಂದೆ ಇವರು ಈ ಪೋಸ್ಟ್‌ ಮಾಡಿದ್ದರು. ಈಗಾಗಲೇ 1.8 ಲಕ್ಷ ಇದನ್ನು ವೀಕ್ಷಿಸಿದ್ದಾರೆ. ಈಗಾಗಲೇ 2 ಸಾವಿರಕ್ಕೂ ಅಧಿಕ ಮಂದಿ ಲೈಕ್‌ ಮಾಡಿದ್ದಾರೆ. ಹಲವರು ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಮಾತ್ರವಲ್ಲ ಏರ್‌ಪೋರ್ಟ್‌ಗಳಲ್ಲಿ ಸಿಗುವ ಆಹಾರದ ಬೆಲೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಏರ್‌ಪೋರ್ಟ್‌ ಆಹಾರದ ಬೆಲೆ ಬಗ್ಗೆ ಬಂದ ಕಾಮೆಂಟ್‌ ಹೇಗಿದೆ ನೋಡಿ

ಕಳೆದ ವಾರ ಕೊಲ್ಕತ್ತಾ ಏರ್‌ಪೋರ್ಟ್‌ನಲ್ಲಿ ಒಂದು ಕಪ್‌ ಚಹಾಗೆ 300 ರೂ ನೀಡಿದೆʼ ಎಂದು ಎಕ್ಸ್‌ ಬಳಕೆದಾರರೊಬ್ಬರಯ ಬರೆದುಕೊಂಡಿದ್ದಾರೆ. ʼವಿಮಾನ ನಿಲ್ದಾಣ ಸ್ಥಾಪಿಸಲು ಸಾಕಷ್ಟು ಹಣ ಖರ್ಚಾಗುತ್ತದೆ. ವಿಮಾನ ನಿಲ್ದಾಣದಲ್ಲಿ ಮಳಿಗೆಗಳನ್ನು ತೆರೆಯಲು ಬಾಡಿಗೆ ಸಾಕಷ್ಟು ನೀಡಬೇಕಾಗಿರುತ್ತದೆ. ಹೀಗೆ ಹಲವು ಕಾರಣಗಳಿಂದ ಏರ್‌ಪೋರ್ಟ್‌ನಲ್ಲಿ ಸಿಗುವ ಆಹಾರ ದುಬಾರಿಯಾಗಿರುತ್ತದೆ ಎಂದು ವ್ಯಕ್ತಿಯೊಬ್ಬರು ಪ್ರತಿಕ್ರಯಿಸಿದ್ದಾರೆ. ʼಇದು ಹತ್ತಿರ ಹತ್ತಿರ ಪ್ಲೇನ್‌ ಟಿಕೆಟ್‌ನಷ್ಟೇ ಆಗಿದೆ. ಏರ್‌ಪೋರ್ಟ್‌ ಚಾರ್ಜ್‌ಗಿಂತ ವಿಮಾನದ ಟಿಕೆಟ್‌ ದರವೇ ಕಡಿಮೆ ಆಗಬಹುದು. ಅನಿವಾರ್ಯವಿಲ್ಲದೇ ಹೋದರೆ ಏರ್‌ಪೋರ್ಟ್‌ನಲ್ಲಿ ತಿನ್ನಬೇಡಿʼ ಎಂದು ಕಾಮೆಂಟ್‌ ಮಾಡಿದ್ದಾರೆ.

ಇದನ್ನೂ ಓದಿ

Viral Video: ಜೋರಾಗಿ ಹಾಡು ಹಾಕಿದ್ದಕ್ಕೆ ಟೇಪ್‌ರೆಕಾರ್ಡರ್‌ ಕಿತ್ತು ಚಕ್ರದಡಿ ಇಟ್ಟ ಪೊಲೀಸ್‌; ನಿಂಗಿದು ಆಗಬೇಕಿತ್ತು ಅಂದ್ರು ನೆಟ್ಟಿಗರು

ಸಾರ್ವಜನಿಕರಿಗೆ ತೊಂದರೆಯಾಗುವಂತೆ ಗಟ್ಟಿಯಾಗಿ ಹಾಡು ಹಾಕಿಕೊಂಡು ಬರುತ್ತಿದ್ದ ಟ್ರ್ಯಾಕ್ಟರ್‌ ಅನ್ನು ನಿಲ್ಲಿಸಿ, ಟೇಪ್‌ ರೆಕಾರ್ಡ್‌ ಕಿತ್ತ ಪೊಲೀಸ್‌ ಈಗ ಜನ ಮೆಚ್ಚುಗೆ ಪಡೆದಿದ್ದಾರೆ. ಅಲ್ಲದೆ, ಟ್ರ್ಯಾಕ್ಟರ್‌ ಅಡ್ಡ ಹಾಕಿ ಟೇಪ್‌ ರೆಕಾರ್ಡರ್‌ ಕಿತ್ತು ಇರಿಸಿಕೊಂಡ ವಿಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದೆ.

Whats_app_banner