Viral Video: ಬಿರಿಯಾನಿ ಚಹಾ ಆಯ್ತು, ಇದೀಗ ಬಂತು ಬಿರಿಯಾನಿ ಮೊಮೊಸ್; ಇನ್ನು ಏನೇನ್ ಬರುತ್ತೋ ಭಗವಂತ ಅಂದ್ರು ನೆಟ್ಟಿಗರು
ಮೊಮೊಸ್ ಹಾಗೂ ಬಿರಿಯಾನಿ ಎರಡನ್ನೂ ಇಷ್ಟಪಡೋರು ನೀವಾದ್ರೆ, ನಿಮಗಾಗಿ ಇಲ್ಲೊಂದು ಸ್ಪೆಷಲ್ ರೆಸಿಪಿ ಇದೆ. ಏನಂತೀರಾ, ಅದುವೆ ಬಿರಿಯಾನಿ ಮೊಮೊಸ್. ಇದರ ವಿಡಿಯೊ ಈಗ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಇದರ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ.
ಇತ್ತೀಚೆಗಷ್ಟೇ ಬಿರಿಯಾನಿ ಚಹಾ ಬಹಳ ವೈರಲ್ ಆಗಿತ್ತು. ಬಿರಿಯಾನಿ ಪ್ರಿಯರಲ್ಲ, ಬಿರಿಯಾನಿ ಚಹಾ ಹೇಗಿರಬಹುದು, ಒಮ್ಮೆ ಟ್ರೈ ಮಾಡ್ಲೇಬೇಕು ಅಂತ ಶಪಥ ಮಾಡಿದ್ರು. ಕೆಲವರೆಲ್ಲಾ ಇದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದೂ ಇದೆ. ಇದೀಗ ಬಿರಿಯಾನಿ ಚಹಾಕ್ಕೆ ಕಾಂಪಿಟೇಷನ್ ಕೊಡೋಕೆ ಇನ್ನೊಂದು ರೆಸಿಪಿ ತಯಾರಾಗಿದೆ. ಅದೇನು ರೆಸಿಪಿ ಅಂತೀರಾ, ಅದುವೆ ಬಿರಿಯಾನಿ ಮೊಮೊಸ್. ಇದೀಗ ಬಿರಿಯಾನಿ ಮೊಮೊಸ್ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹಲ್ಚಲ್ ಎಬ್ಬಿಸುತ್ತಿದೆ. ಈ ಭಿನ್ನ ಮೊಮೊಸ್ ಅನ್ನು ತಯಾರಿಸಿದ್ದು ಕೊಲ್ಕತ್ತಾದ ಸ್ಟ್ರೀಟ್ಫುಡ್ ವ್ಯಾಪಾರಿ. ಈ ಅಪರೂಪದ ಮೊಮೊಸ್ ರೆಸಿಪಿಯನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೊ ವೈರಲ್ ಆದ ಹೊತ್ತಿಗೆ ಹಲವರು ಕಾಮೆಂಟ್ ಮಾಡುವ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
@haomaokhaovlogs ಎಂಬ ಇನ್ಸ್ಟಾಗ್ರಾಂ ಖಾತೆ ಹೊಂದಿರುವ ವ್ಯಕ್ತಿಯೊಬ್ಬರು ಈ ವಿಡಿಯೊವನ್ನು ಹಂಚಿಕೊಂಡಿದ್ದರು. ಇದರಲ್ಲಿ ಆ ವ್ಯಕ್ತಿ ಬಿರಿಯಾನಿ ಮೊಮೊಸ್ ಮಾಡುವ ವ್ಯಕ್ತಿಯ ಜೊತೆ ಮಾತನಾಡುವುದನ್ನು ಕಾಣಬಹುದು. ಅಲ್ಲದೆ ಅವರು ಒಂದು ಪ್ಲೇಟ್ ಬಿರಿಯಾನಿ ಮೊಮೊಸ್ ಆರ್ಡರ್ ಮಾಡುತ್ತಾರೆ. ಮೊಮೊಸ್ ಒಳಗೆ ಚಿಕನ್ ತುಂಡುಗಳು ಹಾಗೂ ರೈಸ್ ಇರುವುದನ್ನು ಕಾಣಬಹುದಾಗಿದೆ.
ʼಕೊಲ್ಕತ್ತಾದ ಮೊದಲ ಮೊಮೊಸ್ ಬಿರಿಯಾನಿ. ಮೊಮೊಸ್ ಚಹಾ ಕೂಡ ಬರಬಹುದುʼ ಎಂದು ಅವರು ಶೀರ್ಷಿಕೆ ಬರೆದುಕೊಂಡಿದ್ದಾರೆ.
ಜನವರಿ 11 ರಂದು ಈ ವಿಡಿಯೊವನ್ನು ಹಂಚಿಕೊಳ್ಳಲಾಗಿತ್ತು. ಈಗಾಗಲೇ 3.5 ಮಿಲಿಯನ್ಗೂ ಅಧಿಕ ಮಂದಿ ಇದನ್ನು ವೀಕ್ಷಿಸಿದ್ದಾರೆ. ಹಲವರು ಹೊಸ ಕಾಂಬಿನೇಷನ್ ಬಗ್ಗೆ ಕಾಮೆಂಟ್ ಮಾಡಿದ್ದಾರೆ.
ಕಾಮೆಂಟ್ಗಳು ಹೀಗಿವೆ
ʼನೀವೆಲ್ಲಾ ಯಾಕ್ರೋ ಮಾರಾಯ ನಾನು ತಿನ್ನುವ ಆಹಾರಕ್ಕೆ ಕಲ್ ಹಾಕ್ತೀರಾʼ ಎಂದು ವ್ಯಕ್ತಿಯೊಬ್ಬರು ಹಾಸ್ಯಮಯವಾಗಿ ಬರೆದುಕೊಂಡಿದ್ದಾರೆ. ʼಇದನ್ನು ಸೃಷ್ಟಿ ಮಾಡಿದವರಿಗೆ ಖಂಡಿತ ಶಿಕ್ಷೆ ನೀಡಲಾಗುವುದುʼ ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. ʼಯಾರಾದ್ರೂ ಈ ಬಗ್ಗೆ ರಿಪೋರ್ಟ್ ಮಾಡಿʼ ಎಂದು ವ್ಯಕ್ತಿಯೊಬ್ಬರು ಕಾಮೆಂಟ್ ಮಾಡಿದ್ದಾರೆ.
ನಿಮಗೂ ಬಿರಿಯಾನಿ ಮೊಮೊಸ್ ತಿನ್ನೋ ಆಸೆ ಆಗ್ತಾ ಇದ್ಯಾ, ಸದ್ಯ ಕರ್ನಾಟಕದಲ್ಲಿ ಯಾರೂ ತಯಾರಿಸಿದ ಹಾಗಿಲ್ಲ, ಹಾಗಂತ ಚಿಂತೆ ಬೇಡ. ಇನ್ನೇನು ಕೆಲ ದಿನಗಳಲ್ಲಿ ಬಿರಿಯಾನಿ ಮೊಮೊಸ್ ಕರ್ನಾಟಕದಲ್ಲೂ ಬರಬಹುದು. ಆಗ ನೀವು ತಿನ್ನುವಿರಂತೆ ಬಿಡಿ. ಈಗ ವಿಡಿಯೊ ನೋಡಿ ಖುಷಿ ಪಡಿ.
ಇದನ್ನೂ ಓದಿ
Viral: ಅಂತಿಂಥ ಸಮೋಸ ಅಲ್ಲ ಇದು ಬ್ಲೂಬೆರಿ ಸಮೋಸ; ಟೇಸ್ಟ್ ನೋಡೋಕೆ ಹೋಗಿ ಪೇಚಾಡಿದ್ರು ಫುಡ್ ಬ್ಲಾಗರ್; ವಿಡಿಯೊ ವೈರಲ್
ನೀವು ಸಮೋಸ ಪ್ರಿಯರಾಗಿದ್ರೆ ನಿಮಗಾಗಿ ಒಂದು ಹೊಸ ಫ್ಲೇವರ್ನ ಸಮೋಸ ರೆಡಿಯಾಗಿದೆ. ಈ ಹೊಸ ರುಚಿಯನ್ನು ಟೇಸ್ಟ್ ಮಾಡಲು ಹೋದ ಫುಡ್ ಬ್ಲಾಗರ್ ಪಜೀತಿಯನ್ನು ನೋಡಿದ್ರೆ ಬಹುಶಃ ನಿಮಗೆ ಸಮೋಸ ಇಷ್ಟ ಅನ್ನೋದು ಕೂಡ ಮರೆತು ಹೋಗಬಹುದು. ಅಂತದ್ದೇನಾಗಿದೆ ಅಂತೀರಾ, ಮುಂದೆ ಓದಿ.