ಗಗನಸಖಿಯ ಅಚ್ಚ ಕನ್ನಡಕ್ಕೆ ಅಜ್ಜಿಯಷ್ಟೇ ಅಲ್ಲ ಕನ್ನಡಿಗರೂ ಮನಸೋತ್ರು, ಈ ವೈರಲ್‌ ವಿಡಿಯೊಗೆ ನೀವೂ ಫಿದಾ ಆಗೋದು ಪಕ್ಕಾ
ಕನ್ನಡ ಸುದ್ದಿ  /  ಜೀವನಶೈಲಿ  /  ಗಗನಸಖಿಯ ಅಚ್ಚ ಕನ್ನಡಕ್ಕೆ ಅಜ್ಜಿಯಷ್ಟೇ ಅಲ್ಲ ಕನ್ನಡಿಗರೂ ಮನಸೋತ್ರು, ಈ ವೈರಲ್‌ ವಿಡಿಯೊಗೆ ನೀವೂ ಫಿದಾ ಆಗೋದು ಪಕ್ಕಾ

ಗಗನಸಖಿಯ ಅಚ್ಚ ಕನ್ನಡಕ್ಕೆ ಅಜ್ಜಿಯಷ್ಟೇ ಅಲ್ಲ ಕನ್ನಡಿಗರೂ ಮನಸೋತ್ರು, ಈ ವೈರಲ್‌ ವಿಡಿಯೊಗೆ ನೀವೂ ಫಿದಾ ಆಗೋದು ಪಕ್ಕಾ

ಗಗನಸಖಿಯರು ಎಂದರೆ ಇಂಗ್ಲಿಷ್‌ನಲ್ಲೇ ಪಟ್‌ ಪಟ್‌ ಅಂತ ಮಾತಾಡ್ತಾರೆ ಅಂದುಕೊಳ್ಳುವವರೇ ಹೆಚ್ಚು. ಆದರೆ ಇಲ್ಲೊಬ್ಬರು ಗಗನಸಖಿ ಅಚ್ಚ ಕನ್ನಡದಲ್ಲಿ ಅಜ್ಜಿಯೊಬ್ಬರೊಂದಿಗೆ ಮಾತನಾಡಿದ್ದಾರೆ. ಅಲ್ಲದೇ ತಮ್ಮ ಮಾತು, ಅಕ್ಕರೆ ಮೂಲಕ ಅಜ್ಜಿ ಮಾತ್ರವಲ್ಲ, ಕರ್ನಾಟಕದ ಮಂದಿಯ ಮನ ಗೆದ್ದಿದ್ದಾರೆ. ಆ ವಿಡಿಯೊವನ್ನು ನೀವು ನೋಡಿ.

ಅಜ್ಜಿಯೊಂದಿಗೆ ಕನ್ನಡದಲ್ಲಿ ಮಾತನಾಡುತ್ತಿರುವ ಗಗನಸಖಿ
ಅಜ್ಜಿಯೊಂದಿಗೆ ಕನ್ನಡದಲ್ಲಿ ಮಾತನಾಡುತ್ತಿರುವ ಗಗನಸಖಿ

ಕೆಲವೊಮ್ಮೆ ನಾವು ನೋಡುವ ವಿಡಿಯೊಗಳು ನಮಗೆ ಅಚ್ಚರಿಯ ಜೊತೆಗೆ ಮನಸ್ಸಿಗೂ ಖುಷಿ ನೀಡುತ್ತವೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಇಂಥದ್ದೊಂದು ವಿಡಿಯೊ ವೈರಲ್‌ ಆಗುತ್ತಿದೆ. ಗಗನ ಸಖಿಯೊಬ್ಬರು ವಿಮಾನದಲ್ಲಿ ಪ್ರಯಾಣಿಸಿದ ಅಜ್ಜಿಯೊಬ್ಬರ ಜೊತೆ ಅಚ್ಚ ಕನ್ನಡದಲ್ಲಿ ಮಾತನಾಡಿದ ವಿಡಿಯೊ ಇದಾಗಿದೆ.

ಗಗನಸಖಿಯರು ಎಂದರೆ ಇಂಗ್ಲಿಷ್‌ನಲ್ಲಿ ಪಟ್‌ ಪಟ್‌ ಮಾತನಾಡ್ತಾರೆ ಅಂದುಕೊಳ್ಳುವವರ ಮಧ್ಯೆ ಇವರು ಭಿನ್ನವಾಗಿ ಕಾಣುತ್ತಾರೆ. ಅಜ್ಜಿಯೊಬ್ಬರು ತನ್ನ ಕುಟುಂಬದವರೊಂದಿಗೆ ವಿಮಾನದಲ್ಲಿ ಪ್ರಯಾಣ ಮಾಡುತ್ತಾರೆ. ವಿಮಾನ ಲ್ಯಾಂಡ್‌ ಆದ ಮೇಲೆ ಗಗನಸಖಿಯ ಅಜ್ಜಿಯ ಜೊತೆ ಆತ್ಮೀಯತೆಯಿಂದ ಮಾತನಾಡುತ್ತಾರೆ. ಅಲ್ಲದೆ ಅಚ್ಚ ಕನ್ನಡದಲ್ಲಿ ಪ್ರಯಾಣದ ಅನುಭವ ಹೀಗಿತ್ತು ಎಂದು ಕೇಳುತ್ತಾರೆ. ಗಗನಸಖಿಯ ಅಕ್ಕರೆ, ಆರೈಕೆಗೆ ಮನಸೋತ ಅಜ್ಜಿ ಹಾಗೂ ಅವರ ಮನೆಯವರು ಅವರನ್ನು ತಮ್ಮ ಮನೆಗೂ ಬರುವಂತೆ ಆಹ್ವಾನಿಸುತ್ತಾರೆ. ಈ ವಿಡಿಯೊವನ್ನು ನೋಡಿದಾಗ ನಿಮಗೂ ಖುಷಿ ಎನ್ನಿಸುವುದರಿಂದ ಎರಡು ಮಾತಿಲ್ಲ.

ಕೋಸ್ಟಲ್‌ ಹಂಟ್‌ ಎಂಬ ಫೇಸ್‌ಬುಕ್‌ ಖಾತೆಯಲ್ಲಿ ಈ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ. ಇಂದು ಹಂಚಿಕೆಯಾದ ಈ ವಿಡಿಯೊವನ್ನು ಈಗಾಗಲೇ 100ಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. 11 ಮಂದಿ ವಿಡಿಯೊ ಹಂಚಿಕೊಳ್ಳುವ ಮೂಲಕ ಖುಷಿ ವ್ಯಕ್ತಪಡಿಸಿದ್ದಾರೆ.

ವಿಡಿಯೊದಲ್ಲಿ ಏನಿದೆ?

ವಿಮಾನನಿಲ್ದಾಣದಲ್ಲಿ ವಿಮಾನ ಲ್ಯಾಂಡ್‌ ಆಗಿ ಪ್ರಯಾಣಿಕರು ಇಳಿಯುವ ಸಂದರ್ಭದಲ್ಲಿ ಗಗನಸಖಿಯೊಬ್ಬರು ವಿಮಾನದಲ್ಲಿ ಪ್ರಯಾಣಿಸಿದ ಅಜ್ಜಿಯ ಜೊತೆ ಸಂಭಾಷಣೆಯಲ್ಲಿ ತೊಡಗುತ್ತಾರೆ. ಅವರ ಬಳಿ ʼಅಜ್ಜಿ ಫ್ಲೈಟ್‌ ಹೇಗಿತ್ತುʼ ಎಂದು ಕೇಳುತ್ತಾರೆ. ಅದಕ್ಕೆ ಅಜ್ಜಿ ʼಸೂಪರ್‌ʼ ಎಂದು ಉತ್ತರ ನೀಡುತ್ತಾರೆ. ನಂತರ ʼನಿಮಗೆ ಏನು ಇಷ್ಟ ಆಯ್ತುʼ ಎಂದು ಇನ್ನೊಂದು ಪ್ರಶ್ನೆ ಕೇಳುತ್ತಾರೆ. ಅದಕ್ಕೆ ಅಜ್ಜಿ ʼನಿಮ್‌ ಸರ್ವೀಸ್‌ ಇಷ್ಟ ಆಯ್ತು, ನಿಮ್‌ ಮಾತು ಇಷ್ಟ ಆಯ್ತುʼ ಅಂತಾರೆ. ಆಗ ಗಗನಸಖಿ ಅಜ್ಜಿಯ ಬಳಿ ʼನಾನು ಇಷ್ಟ ಆದ್ನಾ? ಅಂತಾರೆ. ಅದಕ್ಕೆ ಅಜ್ಜಿ ʼನೀನು ಇಷ್ಟ ತುಂಬಾ ಆದೆʼ ಅಂತಾರೆ. ಆಗ ಗಗನಸಖಿ ʼಹೌದಾ, ಹಾಗಾದ್ರೆ ಕರ್ಕೊಂಡ್‌ ಹೋಗಿ ಮನೆಗೆ ಅಂತಾರೆʼ. ಅದಕ್ಕೆ ಅಜ್ಜಿ ಬಾ ನಮ್‌ ಮನೆಗೆ ಅಂತಾರೆ. ಹೀಗೆ ಮನೆಯವರ ಜೊತೆಗೂ ಗಗನಸಖಿ ಚೆನ್ನಾಗಿ ಮಾತನಾಡಿ ಅವರನ್ನು ಬೀಳ್ಕೊಡುತ್ತಾರೆ.

ಇಂತಹ ವಿಡಿಯೊಗಳು ಆಗಾಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತವೆಯಾದರೂ ಕೂಡ ಗಮನ ಸೆಳೆಯುವುದು ಕಡಿಮೆ. ಆದರೆ ಈ ವಿಡಿಯೊವನ್ನು ನೋಡಿದ್ರೆ ನಿಮಗೂ ಬಹಳ ಇಷ್ಟವಾಗೋದು ಖಂಡಿತ.

ಕೋಸ್ಟಲ್‌ ಹಂಟ್‌ ಮಾತ್ರವಲ್ಲದೆ, ಇನ್ನೂ ಹಲವು ಸಾಮಾಜಿಕ ಜಾಲತಾಣಗಳಲ್ಲೂ ಈ ಪೋಸ್ಟ್‌ ವೈರಲ್‌ ಆಗುತ್ತಿದೆ. ಹಲವರು ಕಾಮೆಂಟ್‌ ಮಾಡುವ ಮೂಲಕ ಇಂಡಿಗೊ ವಿಮಾನದ ಸರ್ವಿಸ್‌ ಹಾಗೂ ಗಗನಸಖಿ ಕನ್ನಡದಲ್ಲಿ ಮಾತನಾಡಿರುವುದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ

Viral Video: ಬಿರಿಯಾನಿ ಚಹಾ ಆಯ್ತು, ಇದೀಗ ಬಂತು ಬಿರಿಯಾನಿ ಮೊಮೊಸ್‌; ಇನ್ನು ಏನೇನ್‌ ಬರುತ್ತೋ ಭಗವಂತ ಅಂದ್ರು ನೆಟ್ಟಿಗರು

ಮೊಮೊಸ್‌ ಹಾಗೂ ಬಿರಿಯಾನಿ ಎರಡನ್ನೂ ಇಷ್ಟಪಡೋರು ನೀವಾದ್ರೆ, ನಿಮಗಾಗಿ ಇಲ್ಲೊಂದು ಸ್ಪೆಷಲ್‌ ರೆಸಿಪಿ ಇದೆ. ಏನಂತೀರಾ, ಅದುವೆ ಬಿರಿಯಾನಿ ಮೊಮೊಸ್‌. ಇದರ ವಿಡಿಯೊ ಈಗ ವೈರಲ್‌ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಇದರ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ.

(This copy first appeared in Hindustan Times Kannada website. To read more like this please logon to kannada.hindustantimes.com )

Whats_app_banner