Viral: ಅಂತಿಂಥ ಸಮೋಸ ಅಲ್ಲ ಇದು ಬ್ಲೂಬೆರಿ ಸಮೋಸ; ಟೇಸ್ಟ್‌ ನೋಡೋಕೆ ಹೋಗಿ ಪೇಚಾಡಿದ್ರು ಫುಡ್‌ ಬ್ಲಾಗರ್‌; ವಿಡಿಯೊ ವೈರಲ್‌-viral news viral video food vlogger tries weird blueberry samosa in delhi social media viral news rst ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Viral: ಅಂತಿಂಥ ಸಮೋಸ ಅಲ್ಲ ಇದು ಬ್ಲೂಬೆರಿ ಸಮೋಸ; ಟೇಸ್ಟ್‌ ನೋಡೋಕೆ ಹೋಗಿ ಪೇಚಾಡಿದ್ರು ಫುಡ್‌ ಬ್ಲಾಗರ್‌; ವಿಡಿಯೊ ವೈರಲ್‌

Viral: ಅಂತಿಂಥ ಸಮೋಸ ಅಲ್ಲ ಇದು ಬ್ಲೂಬೆರಿ ಸಮೋಸ; ಟೇಸ್ಟ್‌ ನೋಡೋಕೆ ಹೋಗಿ ಪೇಚಾಡಿದ್ರು ಫುಡ್‌ ಬ್ಲಾಗರ್‌; ವಿಡಿಯೊ ವೈರಲ್‌

ನೀವು ಸಮೋಸ ಪ್ರಿಯರಾಗಿದ್ರೆ ನಿಮಗಾಗಿ ಒಂದು ಹೊಸ ಫ್ಲೇವರ್‌ನ ಸಮೋಸ ರೆಡಿಯಾಗಿದೆ. ಈ ಹೊಸ ರುಚಿಯನ್ನು ಟೇಸ್ಟ್‌ ಮಾಡಲು ಹೋದ ಫುಡ್‌ ಬ್ಲಾಗರ್‌ ಪಜೀತಿಯನ್ನು ನೋಡಿದ್ರೆ ಬಹುಶಃ ನಿಮಗೆ ಸಮೋಸ ಇಷ್ಟ ಅನ್ನೋದು ಕೂಡ ಮರೆತು ಹೋಗಬಹುದು. ಅಂತದ್ದೇನಾಗಿದೆ ಅಂತೀರಾ, ಮುಂದೆ ಓದಿ.

ಬ್ಲೂಬೆರಿ ಸಮೋಸ ತಿಂದು ಪೆಚ್ಚಾದ ಯುವತಿ
ಬ್ಲೂಬೆರಿ ಸಮೋಸ ತಿಂದು ಪೆಚ್ಚಾದ ಯುವತಿ

ಜಗತ್ತಿನಲ್ಲಿ ಬೇರೆ ಬೇರೆ ವಿಚಾರಗಳಿಗೆ ಪ್ರಯೋಗಗಳು ನಡೆಯುತ್ತಲೇ ಇರುತ್ತವೆ. ಇತ್ತೀಚಿನ ದಿನಗಳಲ್ಲಿ ಆಹಾರ ತಿನಿಸುಗಳ ಮೇಲೆ ಪ್ರಯೋಗ ಮಾಡುವುದು ಆರಂಭವಾಗಿದೆ. ಆ ಕಾರಣಕ್ಕಾಗಿಯೇ ದಿನಕ್ಕೊಂದು ಬಗೆಯ ಆಹಾರ ಖಾದ್ಯಗಳು ಮಾರುಕಟ್ಟೆಯಲ್ಲಿ ಕಾಣ ಸಿಗುತ್ತವೆ. ನೀವು ಸಮೋಸ ಪ್ರಿಯರಾಗಿದ್ರೆ ನಿಮಗಾಗಿ ಇಲ್ಲೊಂದು ಹೊಸ ಸಮೋಸ ಸಿದ್ಧವಾಗಿದೆ. ಈ ಸಮೋಸದ ಬಗ್ಗೆ ಹೇಳುವ ಮೊದಲು ವಿಷ್ಯಾ ಏನು ಕೇಳಿ.

ದೆಹಲಿಯ ಫುಡ್‌ ಬ್ಲಾಗರ್‌ ಒಬ್ಬರು ಬ್ಲೂಬೆರ್ರಿ ಸಮೋಸ ತಿನ್ನುತ್ತಿರುವ ವಿಡಿಯೊವೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೊ ಹಂಚಿಕೊಂಡ ಕೆಲ ಕ್ಷಣದಲ್ಲೇ ಅದು ವೈರಲ್‌ ಆಗಿದೆ. ಇಂಟರ್‌ನೆಟ್‌ನಲ್ಲಿ ಜನರು ಬ್ಲೂಬೆರ್ರಿ ಸಮೋಸದ ಬಗ್ಗೆ ಚರ್ಚೆ ಆರಂಭಿಸಿದ್ದಾರೆ. ಅಲ್ಲದೆ ಈ ಫುಡ್‌ ಬ್ಲಾಗರ್‌ ಹಂಚಿಕೊಂಡ ವಿಡಿಯೊಗೆ ಕಾಮೆಂಟ್‌ಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ. ಹಾಗಾದ್ರೆ ಈ ವಿಡಿಯೊದಲ್ಲಿ ಏನಿದೆ? ನೋಡೋಣ ಬನ್ನಿ.

ʼನೀವಿದನ್ನು ತಿನ್ನಲು ಟ್ರೈ ಮಾಡ್ತೀರಾ?ʼ ಎಂಬ ಶೀರ್ಷಿಕೆ ಬರೆದುಕೊಂಡು ಇನ್‌ಸ್ಟಾಗ್ರಾಂ ವಿಡಿಯೊ ಹಂಚಿಕೊಂಡಿದ್ದಾರೆ @youthbitz ಎಂಬ ಖಾತೆದಾರರು. ಈ ವಿಡಿಯೊ ಆರಂಭವಾದ ತಕ್ಷಣ ವ್ಯಕ್ತಿಯೊಬ್ಬರು ಸಮೋಸವನ್ನು ಎರಡು ಭಾಗ ಮಾಡುತ್ತಿರುವುದು ಕಾಣಿಸುತ್ತದೆ. ವಿಡಿಯೊ ಮುಂದುವರಿದಂತೆ ಫುಡ್‌ ಬ್ಲಾಗರ್‌ ಸಮೋಸವನ್ನು ಟೇಸ್ಟ್‌ ಮಾಡುತ್ತಾರೆ. ಈ ಸಮೋಸ ರುಚಿಯ ನೋಡಿದ ತಕ್ಷಣಕ್ಕೆ ಆಕೆಯ ಮುಖದ ನೋಟವೇ ಬದಲಾಗುತ್ತದೆ. ಅಲ್ಲದೆ ಆಕೆ ಆ ವಿಡಿಯೊದಲ್ಲಿ ಹಿಂದಿಯಲ್ಲಿ ನಂಗೆ ಇದು ಸ್ವಲ್ಪವೂ ಇಷ್ಟವಾಗಿಲ್ಲ ಎಂದು ಹೇಳುವುದನ್ನು ಕೇಳಬಹುದಾಗಿದೆ. ಅಂದ ಹಾಗೆ ಒಂದು ಬ್ಲೂಬೆರಿ ಸಮೋಸಕ್ಕೆ 65ರೂ. ಅನ್ನೋದು ಮಾತ್ರ ಸುಳ್ಳಲ್ಲ. ಸಮೋಸ ಪ್ರಿಯರೆಲ್ಲಾ ಕಿವಿ ಅರಳಿಸಿದ್ರು ಈ ಸುದ್ದಿ ಕೇಳಿ ನಿಮ್ಮ ಉತ್ಸಾಹ ತಣ್ಣಗಾಗೋದು ಖಂಡಿತ.

ಜನವರಿ 4 ರಂದು ವಿಡಿಯೊವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿತ್ತು. ಈಗಾಗಲೇ 2.6 ಮಿಲಿಯನ್‌ಗೂ ಅಧಿಕ ಮಂದಿ ಇದನ್ನು ವೀಕ್ಷಿಸಿದ್ದಾರೆ. ಅಲ್ಲದೆ ಹಲವರು ಬ್ಲೂಬೆರಿ ಸಮೋಸದ ವಿಡಿಯೊ ನೋಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ. ಕೆಲವರಂತೂ ಕಾಮೆಂಟ್‌ ಮಾಡುವ ಮೂಲಕ ಬ್ಲೂಬೆರಿ ಸಮೋಸದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಹಾಗಾದ್ರೆ ನೆಟ್ಟಿಗರು ಏನೆಲ್ಲಾ ಕಾಮೆಂಟ್‌ ಮಾಡಿದ್ದಾರೆ ನೋಡೋಣ ಬನ್ನಿ.

ʼಇದು ಸಮೋಸ ಬಿಸಿ ಇದ್ಯಾ, ತಣ್ಣಗಿದ್ಯಾ?ʼ ಎಂದು ವ್ಯಕ್ತಿಯೊಬ್ಬರು ಕಾಮೆಂಟ್‌ ಮಾಡಿದ್ದಾರೆ. ʼಇದನ್ನ ಸಮೋಸ ಎಂದು ಕರೆಯುವ ಧೈರ್ಯ ಮಾಡೋಕೆ ಹೋಗ್ಬೇಡಿʼ ಎಂದು ಇನ್ನೊಬ್ಬರು ಕಾಮೆಂಟ್‌ ಮಾಡಿದ್ದಾರೆ. ʼಇದನ್ನು ಟ್ರಾಶ್‌ಗೆ ತಳ್ಳಿದೆʼ ಎಂದು ಮೂರನೇ ವ್ಯಕ್ತಿ ಕಾಮೆಂಟ್‌ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ʼಓರಿಯೊ ಆಮ್ಲೇಟ್‌ ಟ್ರೈ ಮಾಡಿದ್ರಾ?ʼ ಎಂದು ಇನ್ನೊಬ್ಬ ವ್ಯಕ್ತಿ ಕಾಮೆಂಟ್‌ ಮಾಡಿದ್ದಾರೆ. ʼಮೊಯೆ ಮೊಯೆʼ ಎಂದು ಐದನೇ ವ್ಯಕ್ತಿ ಕಾಮೆಂಟ್‌ ಮಾಡಿದ್ದಾರೆ.

ಸರಿ ಇವರೆಲ್ಲರ ಕಥೆ ಬಿಡಿ. ನೀವು ಸಮೋಸ ಪ್ರಿಯರಾ? ಹಾಗಿದ್ರೆ ಒಮ್ಮೆ ಬ್ಲೂಬ್ರೆರಿ ಸಮೋಸ ಟ್ರೈ ಮಾಡಿ. ನಿಮಗೆ ಇಷ್ಟವಾದ್ರೂ ಆಗಬಹುದು. ಹೇಳೋಕೆ ಆಗೊಲ್ಲ.

ಇದನ್ನೂ ಓದಿ

Viral: ಪಾರ್ಲೆ-ಜಿ ಬಿಸ್ಕತ್‌ನಿಂದ ಆಮ್ಲೇಟ್‌ ತಯಾರಿಸಿದ ವ್ಯಾಪಾರಿ; ಮೊಯೆ ಮೊಯೆ ಎಂದು ಛೇಡಿಸಿದ್ರು ನೆಟ್ಟಿಗರು; ವಿಡಿಯೊ ವೈರಲ್‌

ಇತ್ತೀಚೆಗೆ ಬೀದಿ ಬದಿ ವ್ಯಾಪಾರಿಯೊಬ್ಬ ಹೊಸ ರೆಸಿಪಿಯೊಂದನ್ನು ಟ್ರೈ ಮಾಡಿದ್ದು, ಅದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದೆ. ಈ ರೆಸಿಪಿ ನೋಡಿದವರು, ಭಗವಂತಾ ಇದನ್ನೆಲ್ಲಾ ನೋಡೋಕೆ ನಮಗೆ ಇನ್ನೂ ಕಣ್ಣು ಕೊಟ್ಟಿದ್ದೀಯಾ ಎಂದು ಕೆಲವರು ಕೇಳಿದ್ರೆ, ಇನ್ನೂ ಕೆಲವರು ಮೊಯೇ ಮೊಯೇ ಹಾಡು ಹೇಳಿದ್ದಾರೆ. ಹಾಗಾದ್ರೆ ಈ ರೆಸಿಪಿ ಆದ್ರೂ ಏನು?