ಕನ್ನಡ ಸುದ್ದಿ  /  Lifestyle  /  Viral News Viral Video Men Open 5 Star Restaurant Inside Mumbai Local Train Watch Instagram Video Rst

Viral: ಮುಂಬೈ ಲೋಕಲ್‌ ಟ್ರೈನ್‌ನಲ್ಲಿ ಪ್ರತ್ಯಕ್ಷವಾಯ್ತು 5 ಸ್ಟಾರ್‌ ರೆಸ್ಟೋರೆಂಟ್‌, ಅಚ್ಚರಿಯಾದ್ರೂ ಇದು ಸತ್ಯ; ವಿಡಿಯೊ ವೈರಲ್‌

ಮುಂಬೈ ಲೋಕಲ್‌ ಟ್ರೈನ್‌ನಲ್ಲಿ 5 ಸ್ಟಾರ್‌ ಹೋಟೆಲ್‌ ನಿರೀಕ್ಷೆ ಮಾಡಲು ಸಾಧ್ಯವೇ, ಖಂಡಿತ ಇಲ್ಲ ಅಲ್ವಾ? ಆದ್ರೆ ಇಲ್ಲಿಬ್ಬರು ವ್ಯಕ್ತಿಗಳು ಲೋಕಲ್‌ ಟ್ರೈನ್‌ನಲ್ಲಿ 5 ಸ್ಟಾರ್‌ ಹೋಟೆಲ್‌ ತೆರೆದಿದ್ದಾರೆ. ಇದು ಹೇಗೆ ಸಾಧ್ಯ ಎಂಬುದನ್ನು ತಿಳಿಯಲು ಈ ಸ್ಟೋರಿ ಓದಿ.

ಲೋಕಲ್‌ ಟ್ರೈನ್‌ನಲ್ಲಿ 5 ಸ್ಟಾರ್‌ ಹೋಟೆಲ್‌
ಲೋಕಲ್‌ ಟ್ರೈನ್‌ನಲ್ಲಿ 5 ಸ್ಟಾರ್‌ ಹೋಟೆಲ್‌

ಜಗತ್ತಿನಲ್ಲಿ ಜನರು ಏನೇನು ಮಾಡುತ್ತಾರೆ ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ, ಭಾರತದಲ್ಲಿ ಅದ್ಭುತ, ಅಸಮಾನ್ಯ ಪ್ರತಿಭೆಗಳಿಗೇನು ಕೊರತೆ ಇಲ್ಲ. ಇದೀಗ ಅಂತಹದ್ದೇ ಇಬ್ಬರು ಅದ್ಭುತ ಪ್ರತಿಭೆ ಬೆಳಕಿಗೆ ಬಂದಿದೆ. ಆರ್ಯನ್‌ ಕಟಾರಿಯಾ ಮತ್ತು ಸಾರ್ಥಕ್‌ ಸಚ್‌ದೇವ ಇಬ್ಬರು ಇನ್‌ಸ್ಟಾಗ್ರಾಂ ಇನ್ಫ್ಲೂಯೆನ್ಸರ್‌ಗಳು. ಇವರು ಮುಂಬೈನ ಲೋಕಲ್‌ ರೈಲಿನ ಕೋಚ್‌ನಲ್ಲಿ ʼ5 ಸ್ಟಾರ್‌ ರೆಸ್ಟೋರೆಂಟ್‌ʼ ಅನ್ನು ತೆರೆಯುತ್ತಾರೆ. ಇದು ನಿಜಕ್ಕೂ ಆಶ್ವರ್ಯ ಎನ್ನಿಸುವುದು ಮಾತ್ರವಲ್ಲ, ಅಲ್ಲಿ ಇವರು ಬಡಿಸುವ ಖಾದ್ಯಗಳನ್ನು ನೋಡಿದ್ರೆ ನೀವು ಬಿದ್ದೂ ಬಿದ್ದೂ ನಗ್ತೀರಾ.

ಟ್ರೆಂಡಿಂಗ್​ ಸುದ್ದಿ

ಈ ಅಪರೂಪದ, ಅಸಾಮಾನ್ಯ ವಿಡಿಯೊವನ್ನು ಹಂಚಿಕೊಂಡಿರುವ ಕಟಾರಿಯಾ ಹಾಗೂ ಸಚ್‌ದೇವ್‌ ʼನಮ್ಮ ಮುಂದಿನ ರೆಸ್ಟೋರೆಂಟ್‌ ಎಲ್ಲಿ ತೆರೆಯೋಣ?ʼ ಎಂದು ಶೀರ್ಷಿಕೆ ಬರೆದುಕೊಂಡಿದ್ದಾರೆ. ಈ ಇಬ್ಬರೂ ರೈಲು ಕೋಚ್‌ನೊಳಗೆ ರೆಸ್ಟೋರೆಂಟ್‌ ತೆರೆಯಲಿರುವ ವಿಷಯವನ್ನು ಜನರಿಗೆ ತಿಳಿಸಲು ಫ್ಲೈಯರ್‌ಗಳನ್ನು ವಿತರಿಸುವುದನ್ನು ತೋರಿಸುವ ಮೂಲಕ ವಿಡಿಯೊ ಕ್ಲಿಪ್‌ ಆರಂಭವಾಗುತ್ತದೆ.

ಒಂದು ದಿನ ಈ ಇಬ್ಬರೂ ಶೆಪ್‌ಗಳಂತೆ ಬಟ್ಟೆ ಧರಿಸಿ ಆಹಾರಗಳನ್ನು ಹಿಡಿದು ರೈಲಿನೊಳಗೆ ಪ್ರವೇಶಿಸುತ್ತಾರೆ. ಅವರು ರೈಲಿನೊಳಗೆ ತಾತ್ಕಾಲಿಕ ಟೇಬಲ್‌ ಅನ್ನು ಇರಿಸಿ, ಇಲ್ಲಿ ಗ್ರಾಹಕರಿಗೆ ಬಡಿಸುತ್ತಾರೆ. ಈ ಇಬ್ಬರೂ ಪ್ರಯಾಣಿಕರೊಂದಿಗೆ ಆರೋಗ್ಯಕರ ಸಂಭಾಷಣೆ ನಡೆಸುವುದರೊಂದಿಗೆ ಈ ವಿಡಿಯೊ ಕೊನೆಗೊಳುತ್ತದೆ.

ಕಳೆದ 5 ದಿನಗಳ ಹಿಂದೆ ಈ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿತ್ತು. ಈಗಾಗಲೇ ಒಂದು ಮಿಲಿಯನ್‌ಗೂ ಅಧಿಕ ಮಂದಿ ಈ ವಿಡಿಯೊವನ್ನು ವೀಕ್ಷಿಸಿದ್ದಾರೆ. ಹಲವರು ಲೈಕ್‌, ಕಾಮೆಂಟ್‌ ಮಾಡುವ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಕಾಮೆಂಟ್‌ಗಳು ಹೀಗಿವೆ

ʼಛೇ, ಆ ದಿನವೇ ನನಗೆ ರೈಲು ಮಿಸ್‌ ಆಯ್ತುʼ ಎಂದು ಇನ್‌ಸ್ಟಾಗ್ರಾಂ ಬಳಕೆದಾರರೊಬ್ಬರು ತಮಾಷೆಯಾಗಿ ಬರೆದುಕೊಂಡಿದ್ದಾರೆ. ʼಡೆಲ್ಲಿ ಮೆಟ್ರೋದಲ್ಲಿ ಹೀಗೆ ಮಾಡಲು ಸಾಧ್ಯವೇʼ ಎಂದು ಇನ್ನೊಬ್ಬರು ಕಾಮೆಂಟ್‌ ಮೂಲಕ ಪ್ರಶ್ನೆ ಕೇಳಿದ್ದಾರೆ. ʼದಾದರ್‌ ನಿಲ್ದಾಣದಲ್ಲಿ ಸೋಮವಾರ 8 ಗಂಟೆಗೆ ನಿಮ್ಮ ಸೇವೆ ನೀಡಿʼ ಎಂದು ವ್ಯಕ್ತಿಯೊಬ್ಬರು ಕಾಮೆಂಟ್‌ ಮಾಡಿದ್ದಾರೆ.

ವಿಭಾಗ