Viral News: ಐಸ್‌ಕ್ರೀಮ್ ಇಡ್ಲಿ ವಿಡಿಯೊ ವೈರಲ್; ಇಡ್ಲಿಗೆ ನ್ಯಾಯ ಸಿಗ್ಲೇಬೇಕು ಅಂದ್ರು ನೆಟ್ಟಿಗರು; ಏನಿದು ಕಥೆ ನೋಡಿ
ಜಗತ್ತಲ್ಲಿ ಜನ ಏನೇನೆಲ್ಲಾ ಪ್ರಯೋಗ ಮಾಡ್ತಾರೆ ಅಂತ ಊಹಿಸೋಕು ಸಾಧ್ಯ ಇಲ್ಲ. ಕೆಲವೊಮ್ಮೆ ಇದೆಲ್ಲಾ ಸಾಧ್ಯಾನಾ ಅಂತಾನೂ ಅನ್ನಿಸುತ್ತೆ, ಇಲ್ಲೊಬ್ಬ ವ್ಯಾಪಾರಿ ಐಸ್‌ಕ್ರೀಮ್ ಇಡ್ಲಿ ಮಾಡುವ ಮೂಲಕ ನೆಟ್ಟಿಗರ ಕೋಪಕ್ಕೆ ಗುರಿಯಾಗಿದ್ದಾರೆ. ಮಾತ್ರವಲ್ಲ ನೆಟ್ಟಿಗರೆಲ್ಲಾ ಸೇರಿ ಇಡ್ಲಿಗೆ ನ್ಯಾಯ ಕೊಡಿಸುವ ಹೋರಾಟದಲ್ಲಿ ತೊಡಗಿದ್ದಾರೆ.
ಕೆಲ ದಿನಗಳ ಹಿಂದೆ ಆಪಲ್ ಇಡ್ಲಿ ಮಾಡುತ್ತಿದ್ದ ವ್ಯಾಪಾರಿಯೊಬ್ಬರ ವಿಡಿಯೊ ವೈರಲ್ ಆಗಿತ್ತು. ಇದೀಗ ಅದನ್ನೂ ಮೀರಿಸಿದ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ವಿಡಿಯೊ ನೋಡಿದ್ರೆ ನೀವು ಖಂಡಿತ ಶಾಕ್ ಆಗ್ತೀರಾ, ಹೀಗೂ ಮಾಡ್ತಾರಾ ದೇವ್ರೇ ಅಂತ ಪ್ರಶ್ನೆ ಮಾಡೋದು ಪಕ್ಕಾ. ನೀವು ಇಡ್ಲಿ ಪ್ರೇಮಿಯಾಗಿದ್ರಂತೂ ಕೇಳೋದೇ ಬೇಡ, ಖಂಡಿತ ಬೇಸರ ಮಾಡ್ಕೋತೀರಾ. ಐಸ್‌ಕ್ರಿಂ ಪ್ರೇಮಿಗಳಿಗೂ ಈ ವಿಡಿಯೊ ನೋವು ತರಿಸುತ್ತೆ. ಅಂದೆಥ ವಿಡಿಯೊ ಅಂತೀರಾ, ಅದೇ ನೋಡಿ ಐಸ್‌ಕ್ರೀಮ್ ಇಡ್ಲಿ ಮಾಡೋ ವಿಡಿಯೊ. ಇಡ್ಲಿ ಜೊತೆಗೆ ಸಾಂಬಾರ್, ಚಟ್ನಿ ಮಿಕ್ಸ್ ಮಾಡಿ ತಿಂದ್ರೆ ಅದರ ರುಚಿನೇ ಬೇರೆ, ಇದ್ಯಾವುದು ಗುರು ಐಸ್‌ಕ್ರೀಮ್ ಇಡ್ಲಿ, ಅಂತ ನಿಮಗೆ ಅನ್ನಿಸಬಹುದು. ಆದ್ರೆ ಈ ಪ್ರಯೋಗ ನಡೆದಿರೋದಂತು ಸತ್ಯ.
ಫುಡ್ ಬ್ಲಾಗರ್ ಸುಕೃತ್ ಜೈನ್ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಈ ಐಸ್‌ಕ್ರೀಮ್ ಇಡ್ಲಿ ಮಾಡುವ ವಿಡಿಯೊವನ್ನು ಹಂಚಿಕೊಂಡಿದ್ದಾರೆ.
ವಿಡಿಯೊದಲ್ಲಿ ಏನಿದೆ?
ಈ ವಿಡಿಯೊ ಓಪನ್ ಆದಾಗ ವ್ಯಕ್ತಿಯೊಬ್ಬರು ಇಡ್ಲಿಯನ್ನು ಚಿಕ್ಕದಾಗಿ ಹೆಚ್ಚುತ್ತಿರುವುದನ್ನು ಕಾಣಬಹುದಾಗಿದೆ. ವಿಡಿಯೊ ಮುಂದುವರಿದಂತೆ ಅವರು ಇಡ್ಲಿ ಮೇಲೆ ಕೆಂಪು ಚಟ್ನಿ, ತೆಂಗಿನಕಾಯಿ ಚಟ್ನಿ, ಸಾಂಬಾರ್ ಹಾಗೂ ಐಸ್‌ಕ್ರೀಮ್ ಸುರಿಯುತ್ತಾರೆ. ನಂತರ ಎಲ್ಲವನ್ನೂ ಮಿಶ್ರಣ ಮಾಡಿ, ಒಂದು ಹರವುತ್ತಾರೆ. ನಂತರ ಅದನ್ನು ಒಂದು ಪ್ಲೇಟಿಗೆ ಹಾಕಿ, ಅದರ ಮೇಲೆ ಮತ್ತೆ ಐಸ್‌ಕ್ರೀಮ್, ಸಾಂಬಾರ್ ಹಾಕಿ ತಿನ್ನಲು ಕೊಡುತ್ತಾರೆ.
ಜನವರಿ 17 ರಂದು ಇವರು ಈ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೊ ಸಾಕಷ್ಟು ವೈರಲ್ ಆಗಿದ್ದು, 12.7 ಮಿಲಿಯನ್ ಜನ ವೀಕ್ಷಿಸಿದ್ದಾರೆ. ಹಲವರು ಕಾಮೆಂಟ್ ಸೆಕ್ಷನ್‌ನಲ್ಲಿ ಐಸ್‌ಕ್ರೀಮ್ ಇಡ್ಲಿ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ಕಾಮೆಂಟ್‌ಗಳನ್ನು ನೀವು ಓದಿ
ʼಯಾರು ಇದನ್ನು ಕಂಡು ಹಿಡಿದಿದ್ದಾರೆ ಅವರನ್ನು ಅರೆಸ್ಟ್ ಮಾಡಬೇಕುʼ ಎಂದು ವ್ಯಕ್ತಿಯೊಬ್ಬರು ಕಾಮೆಂಟ್ ಮಾಡಿದ್ದಾರೆ. ʼಯಾರ್ ಹೇಳಿದ್ದು ಬ್ರೇಕ್‌ನಿಂದ ನೋವಾಗುತ್ತೆ ಅಂತ, ಇದು ಅದಕ್ಕೂ ಮೇಲೆʼ ಎಂದು ಇನ್ನೊಬ್ಬರು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. ʼಓಹ್ ಮೈ ಗಾಡ್, ನಾನೇನು ನೋಡುತ್ತಿರುವುದುʼ ಎಂದು ಮೂರನೇ ವ್ಯಕ್ತಿ ಕಾಮೆಂಟ್ ಮಾಡುವ ಮೂಲಕ ತಿಳಿಸಿದ್ದಾರೆ. ʼಈ ಇಡ್ಲಿಗೆ ಖಂಡಿತ ನ್ಯಾಯ ಸಲ್ಲಬೇಕುʼ ಎಂದು ಇನ್‌ಸ್ಟಾಗ್ರಾಂ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ಹಲವರು ಇಡ್ಲಿಗೆ ನ್ಯಾಯ ಕೊಡಿ ಅಂತಲೇ ಕಾಮೆಂಟ್ ಮಾಡಿದ್ದಾರೆ.
ಅವರ ಕಥೆ ಬಿಡಿ. ನಿಮಗೆ ಏನನ್ನಿಸುತ್ತೆ ಈ ವಿಡಿಯೊ ಬಗ್ಗೆ?
ಇದನ್ನೂ ಓದಿ
Viral: ಇಡ್ಲಿ ಬೇಕಾ ಇಡ್ಲಿ, ಇದು ಆಪಲ್ ಇಡ್ಲಿ; ಇಡ್ಲಿ ಬಗ್ಗೆ ಅಸಹ್ಯ ಹುಟ್ಟಿಸಬೇಡಿ ಅಂದ್ರು ನೆಟ್ಟಿಗರು; ವೈರಲ್ ವಿಡಿಯೊ
ವ್ಯಾಪಾರಿಯೊಬ್ಬ ಸೇಬು ಹಣ್ಣಿನಿಂದ ತಯಾರಿಸಿದ ಇಡ್ಲಿಗಳನ್ನು ಬೇಯಿಸುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಲವರು ಈ ವ್ಯಕ್ತಿಯ ಹೊಸ ಪ್ರಯೋಗದಿಂದ ಅಸಮಾಧಾನಗೊಂಡಿದ್ದಾರೆ. ಹಾಗಾದ್ರೆ ಆಪಲ್ ಇಡ್ಲಿ ಹೇಗಿರಬಹುದು?
ವಿಭಾಗ