Personality Test: ನಿಮ್ಮ ವ್ಯಕ್ತಿತ್ವ ಹೇಗೆ? ತಿಳಿಯಬೇಕು ಅಂದ್ರೆ ಮರ, ಬೇರು, ತುಟಿ ಚಿತ್ರದಲ್ಲಿ ಮೊದಲು ಕಂಡಿದ್ದೇನು ಹೇಳಿ
ನಿಮ್ಮ ಬಗ್ಗೆ ನೀವು ತಿಳಿದುಕೊಳ್ಳಲು ಬಯಸಿದರೆ ವ್ಯಕ್ತಿತ್ವ ಪರೀಕ್ಷೆ ಮಾಡಿಕೊಳ್ಳಬೇಕು. ಚಿತ್ರದಲ್ಲಿ ಕಾಣಿಸುವ ಅಂಶಗಳು ನಿಮ್ಮ ವ್ಯಕ್ತಿತ್ವವನ್ನು ಸೂಚಿಸುತ್ತದೆ. ಇದರಲ್ಲಿ ನಿಮ್ಮ ಕಣ್ಣಿಗೆ ಮೊದಲು ಕಂಡಿದ್ದೇನು ಎಂಬುದರ ಆಧಾರ ಮೇಲೆ ನಿಮ್ಮ ವ್ಯಕ್ತಿತ್ವ ನಿರ್ಧಾರವಾಗುತ್ತದೆ. ಹಾಗಾದರೆ ಈ ಚಿತ್ರದಲ್ಲಿ ನಿಮ್ಮ ಕಣ್ಣು ಮೊದಲು ಗ್ರಹಿಸಿದ್ದೇನು ಹೇಳಿ.
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ವೈರಲ್ ಆಗುತ್ತಿವೆ. ಈ ಚಿತ್ರಗಳು ನಿಮ್ಮ ಕಣ್ಣಿಗೆ ಮೋಸ ಮಾಡುವಂತಿರುವುದು ಸುಳ್ಳಲ್ಲ. ಯಾಕೆಂದರೆ ಒಂದೇ ಚಿತ್ರದಲ್ಲಿ ಹಲವು ಅಂಶಗಳು ಅಡಕವಾಗಿರುತ್ತವೆ. ಆದರೆ ಈ ಚಿತ್ರಗಳು ನಮ್ಮ ವ್ಯಕ್ತಿತ್ವ ಪರೀಕ್ಷೆಯನ್ನೂ ಮಾಡುತ್ತವೆ. ನಾವು ಹೇಗೆ ಎಂಬುದನ್ನು ತಿಳಿದುಕೊಳ್ಳಬೇಕು ಎಂದರೆ ಈ ಪರ್ಸನಾಲಿಟಿ ಟೆಸ್ಟ್‌ಗೆ ಒಳಗಾಗಬೇಕು. ಆಪ್ಟಿಕಲ್ ಇಲ್ಯೂಷನ್ ಚಿತ್ರಗಳಿಂದಲೂ ವ್ಯಕ್ತಿತ್ವ ಪರೀಕ್ಷೆ ಮಾಡಿಕೊಳ್ಳಬಹುದು. ಹಾಗಾಗಿ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಆಪ್ಟಿಕಲ್ ಇಲ್ಯೂಷನ್‌ಗಳು ಜನರನ್ನು ಹೆಚ್ಚು ಸೆಳೆಯುತ್ತಿವೆ.
ಇಂದಿನ ಚಿತ್ರದಲ್ಲಿ ಮೂರು ಅಂಶಗಳಿವೆ. ತುಟಿ, ಮರ ಹಾಗೂ ಬೇರುಗಳು. ಈ ಮೂರರಲ್ಲಿ ನಿಮ್ಮ ಕಣ್ಣಿಗೆ ಮೊದಲು ಕಂಡಿದ್ದೇನು ಎಂಬುದನ್ನು ಗುರುತಿಸಿ, ಆ ಮೂಲಕ ನಿಮ್ಮ ವ್ಯಕ್ತಿತ್ವ ಹೇಗೆ ತಿಳಿಯಿರಿ.
ಮರ
ಚಿತ್ರದಲ್ಲಿ ನಿಮ್ಮ ಕಣ್ಣಿಗೆ ಮೊದಲು ಮರ ಕಂಡರೆ ನೀವು ಬಹಿರ್ಮುಖ ವ್ಯಕ್ತಿತ್ವದವರು, ಎಲ್ಲರೊಂದಿಗೆ ಬೆರೆಯುವುದು ನಿಮಗೆ ಇಷ್ಟ. ನೀವು ನಿಮ್ಮ ನಿಜವಾದ ಭಾವನೆಗಳನ್ನು ಮರೆ ಮಾಚುತ್ತೀರಿ. ನಿಮ್ಮ ಸುತ್ತಲೂ ಸ್ನೇಹಿತರ ಗುಂಪು ಇದ್ದರೂ ಎಲ್ಲವೂ ಪ್ರಮಾಣಿಕರರಾಗಿರುವುದಿಲ್ಲ ಎಂಬ ವಿಚಾರವನ್ನು ನೀವು ಮರೆಯುವಂತಿಲ್ಲ. ಆದರೆ ಸ್ನೇಹಿತರು ನಿಮ್ಮನ್ನು ಪ್ರಮಾಣಿಕ ಎಂದು ನಂಬುತ್ತಾರೆ. ಸಾಮಾಜಿಕ ಎಲ್ಲರೊಂದಿಗೆ ಬೆರೆಯುವ ನಿಮ್ಮ ಮನೋಭಾವ ಯಾರಿಗೂ ಅರ್ಥವಾಗುವುದಿಲ್ಲ, ನೀವು ಏನು ಯೋಚಿಸುತ್ತೀರಿ ಎಂಬುದನ್ನು ಯಾರಿಂದಲೂ ಊಹಿಸಲು ಸಾಧ್ಯವಿಲ್ಲ. ನೀವು ಇತರರ ಅಭಿಪ್ರಾಯಗಳ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತೀರಿ. ಕೆಲವೊಮ್ಮೆ ಬೇರೆಯವರು ನಿಮ್ಮ ಬಗ್ಗೆ ಏನು ಯೋಚಿಸಬಹುದು ಎಂಬ ಬಗ್ಗೆಯೂ ತಲೆ ಕೆಡಿಸಿಕೊಳ್ಳುತ್ತೀರಿ.
ಬೇರುಗಳು
ಗಿಡದ ಬೇರುಗಳನ್ನು ನಿಮ್ಮ ಕಣ್ಣು ಮೊದಲು ಗ್ರಹಿಸಿದರೆ ನೀವು ನಾಚಿಕೆಯ ಸ್ವಭಾವದವರು ಎಂದರ್ಥ. ಅಂತರ್ಮುಖಿ ವ್ಯಕ್ತಿ. ಆದರೆ ನಿಮ್ಮ ಸುತ್ತಲಿನ ಜನರನ್ನು ನೀವು ಪ್ರೇರೇಪಿಸುತ್ತೀರಿ. ನಿಮ್ಮದು ಸೌಮ್ಯ ಸ್ವಭಾವವಾದರೂ ಕೂಡ ನೀವು ಸ್ವಾಭಿಮಾನಿಗಳಲ್ಲ. ಕೆಲವೊಮ್ಮೆ ಮೊಂಡುತನ ತೋರುತ್ತೀರಿ. ನಿಮ್ಮನ್ನು ನೋಡಿದಾಗ ಆರಂಭದಲ್ಲಿ ಅಸಮರ್ಥರು ಎನ್ನಿಸಿದರೂ ನಂತರ ನಿಮ್ಮ ಬಗ್ಗೆ ತಿಳಿದು ಅಚ್ಚರಿಗೊಳ್ಳುತ್ತಾರೆ.
ತುಟಿ
ಚಿತ್ರದಲ್ಲಿ ನೀವು ತುಟಿಯನ್ನು ಮೊದಲು ಕಂಡರೆ ನೀವು ಸರಳ ಮತ್ತು ಶಾಂತ ವ್ಯಕ್ತಿತ್ವದವರು ಎಂದರ್ಥ. ನಾಟಕೀಯ ವ್ಯಕ್ತಿಗಳನ್ನು ನೀವು ಸಹಿಸುವುದಿಲ್ಲ. ಗೋ ವಿತ್ ಫ್ಲೋ ಎಂಬ ಮನೋಭಾವ ನಿಮ್ಮದು. ನೀವು ಎಲ್ಲರೊಂದಿಗೂ ಹೊಂದಿಕೊಳ್ಳುವ, ಬುದ್ಧಿವಂತ ಮತ್ತು ಪ್ರಾಮಾಣಿಕ ವ್ಯಕ್ತಿತ್ವದವರು. ಆದರೆ ಕೆಲವು ನಿಮ್ಮ ಈ ಗುಣವನ್ನು ದುರ್ಬಲ ಎಂದುಕೊಳ್ಳುತ್ತಾರೆ. ನಿಮಗೆ ಜನರ ಸಹಾಯದ ಅಗತ್ಯವಿದೆ ಎಂದುಕೊಳ್ಳುತ್ತಾರೆ. ಆದರೆ ವೈಯಕ್ತಿಕ ನೀವು ಯಾವುದೇ ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸುತ್ತೀರಿ.