Brain Teaser: ಈ ಇಬ್ಬರಲ್ಲಿ ಬಡವ ಯಾರು? ನಿಮ್ಮ ಗಮನಶಕ್ತಿ ಅದ್ಭುತವಾಗಿದೆ ಅಂದ್ರೆ 5 ಸೆಕೆಂಡ್‌ನಲ್ಲಿ ಉತ್ತರ ಹೇಳಿ
ನಿಮ್ಮ ಗಮನಶಕ್ತಿ ಸೂಪರ್ ಆಗಿದೆ ಎಂದು ನಿಮಗೆ ಅನ್ನಿಸುತ್ತಾ, ಹಾಗಾದರೆ ನಿಮಗಾಗಿ ಇಲ್ಲೊಂದು ಚಾಲೆಂಜ್ ಇದೆ. ಇಲ್ಲಿರುವ ಒಬ್ಬರು ವ್ಯಕ್ತಿಗಳಲ್ಲಿ ಯಾರು ಬಡವರು ಎಂದು ನೀವು ಕಂಡುಹಿಡಿಯಬೇಕು. ಇದು ನಿಮಗಿರುವ ಚಾಲೆಂಜ್. ನಿಮ್ಮ ಐಕ್ಯೂ ಲೆವೆಲ್ ಎಷ್ಟಿದೆ ಪರೀಕ್ಷೆ ಮಾಡೋಣ.
ಬ್ರೈನ್ ಟೀಸರ್‌ಗಳು ಎಂದರೆ ನಮ್ಮ ಮೆದುಳಿಗೆ ಕೆಲಸ ಕೊಡುವ ಚಿತ್ರಗಳು. ಇದಕ್ಕೆ ಉತ್ತರ ಕಂಡುಹಿಡಿಯುವ ಸಲುವಾಗಿ ನಾವು ಸಾಕಷ್ಟು ಬುದ್ಧಿ ಉಪಯೋಗಿಸಬೇಕಾಗುತ್ತದೆ. ಅತಿ ಸೂಕ್ಷ್ಮವಾಗಿರುವ ಈ ಚಿತ್ರಗಳಿಲ್ಲಿರುವ ಪ್ರಶ್ನೆಗೆ ಉತ್ತರ ಕಂಡುಹಿಡಿಯುವುದು ಖಂಡಿತ ಸುಲಭದ ಮಾತಾಗಿರುವುದಿಲ್ಲ. ಇದಕ್ಕೆ ಉತ್ತರ ಹೇಳಲು ಲಾಜಿಕಲ್ ಥಿಕಿಂಗ್ ಕೂಡ ಮುಖ್ಯವಾಗುತ್ತದೆ. ನಿರ್ದಿಷ್ಟ ಸಮಯದೊಳಗೆ ಈ ಪ್ರಶ್ನೆಗೆ ಉತ್ತರ ಕಂಡುಹಿಡಿಯುವುದು ನಮಗೆ ಸಮಯದ ಒತ್ತಡದ ಬಗ್ಗೆಯೂ ಕಲಿಸುತ್ತದೆ.
ಇಂದಿನ ಬ್ರೈನ್ ಟೀಸರ್ ಚಿತ್ರಕ್ಕೆ ಉತ್ತರ ಕಂಡುಹಿಡಿಯಲು ನಿಮ್ಮ ಮೆದುಳು ಚುರುಕಾಗಿರುವ ಜೊತೆಗೆ ನಿಮ್ಮ ಗಮನಶಕ್ತಿಯೂ ಅದ್ಭುತವಾಗಿರಬೇಕು, ಅದರೆ ಸೂಕ್ಷ್ಮವಾಗಿ ನೋಡಿದರೂ ಸರಿಯಾದ ಉತ್ತರ ಹೇಳುವಲ್ಲಿ ನೀವು ಸೋಲಬಹುದು. ನಿಮ್ಮ ಗಮನಶಕ್ತಿ ಸೂಪರ್ ಆಗಿದೆ ಅಂದ್ರೆ ಈ ಬ್ರೈನ್ ಟೀಸರ್‌ಗೆ 5 ಸೆಕೆಂಡ್ ಒಳಗೆ ಉತ್ತರ ಹೇಳಬೇಕು.
ಇಂದಿನ ಬ್ರೈನ್ ಟೀಸರ್ ಚಿತ್ರದಲ್ಲಿ ಆಸ್ಪತ್ರೆಯ ದೃಶ್ಯವಿದೆ. ಆಸ್ಪತ್ರೆಯ ಹಾಸಿಗೆ ಮೇಲೆ ಇಬ್ಬರು ವ್ಯಕ್ತಿಗಳು ಕೂತಿದ್ದಾರೆ. ವ್ಯಕ್ತಿ ಎ ಹಣ್ಣುಗಳನ್ನು ಕತ್ತರಿಸಿ ತಿನ್ನುತ್ತಿದ್ದಾನೆ. ಅವನ ಪಕ್ಕದಲ್ಲಿ ಹೂವಿನ ಬುಕ್ಕೆಗಳು, ಇನ್ನೊಂದು ಕಡೆ ಹಣ್ಣು ಹಂಪಲು ಇರುವ ಕವರ್ ನೋಡಬಹುದು. ವ್ಯಕ್ತಿ ಬಿ ಮೊಬೈಲ್ ಹಿಡಿದು ಸ್ಕ್ರೋಲ್ ಮಾಡುತ್ತಿದ್ದಾನೆ. ಅವರ ಪಕ್ಕದಲ್ಲಿ ಒಂದು ಟೇಬಲ್ ಮೇಲೆ ಲ್ಯಾಪ್‌ಟಾಪ್ ಇದ್ದರೆ ಇನ್ನೊಂದು ಟೇಬಲ್ ಮೇಲೆ ಪುಸ್ತಕಗಳಿವೆ.
ಈಗ ಈ ಇಬ್ಬರಲ್ಲಿ ಯಾರು ಬಡವ ಎಂದು ನೀವು ಹೇಳಬೇಕು. ಚಿತ್ರವನ್ನು ಸರಿಯಾಗಿ ಗಮನಿಸಿ, ಕೇವಲ 5 ಸೆಕೆಂಡ್ ಸಮಯದೊಳಗೆ ನೀವು ಬಡವ ಯಾರು ಎಂದು ಕಂಡುಹಿಡಿಯಬೇಕು. ಇದು ನಿಮ್ಮ ಐಕ್ಯೂ ಲೆವೆಲ್ ಹೇಗಿದೆ ಎಂದು ಕೂಡ ಸೂಚಿಸುತ್ತದೆ.
ಸರಿ 5 ಸೆಕೆಂಡ್ ಅಲ್ಲ, 5 ನಿಮಿಷ ಕಳೆದ್ರೂ ಈ ಬ್ರೈನ್ ಟೀಸರ್‌ಗೆ ಉತ್ತರ ಕಂಡುಹಿಡಿಯಲು ನಿಮ್ಮಿಂದ ಸಾಧ್ಯವಾಗಿಲ್ಲ ಅಂದ್ರೆ ನಾವು ನಿಮಗೆ ಉತ್ತರ ಹೇಳುತ್ತೇವೆ. ಈ ಚಿತ್ರದಲ್ಲಿ ಬಡವ ಎಂದರೆ ಎ. ಯಾಕೆಂದರೆ ಬಿ ಇರುವುದು ಏರ್ ಕಂಡಿಷನ್ ಕೊಠಡಿಯಲ್ಲಿ. ಎ ಇರುವುದು ಸಾಮಾನ್ಯ ಕೊಠಡಿಯಲ್ಲಿ. ಈ ಬ್ರೈನ್ ಟೀಸರ್‌ಗೆ ಈಗ ಉತ್ತರ ಗೊತ್ತಾಯಿತು ಅಲ್ವಾ, ಇನ್ನೇಕೆ ತಡ. ಈಗಲೇ ಇದನ್ನು ನಿಮ್ಮ ಸ್ನೇಹಿತರು ಆತ್ಮೀಯರಿಗೆ ಕಳುಹಿಸಿ. ಅವರಿಂದ ಉತ್ತರ ಏನು ಬರುತ್ತೆ ನೋಡಿ.
ಈ ಬ್ರೈನ್ ಟೀಸರ್ ಅನ್ನೂ ಓದಿ
Brain Teaser: 312 = 36, 412= 47 ಆದ್ರೆ 612 = ಎಷ್ಟು? ಗಣಿತ ಸುಲಭ ಅನ್ನೋರು 10 ಸೆಕೆಂಡ್ ಒಳಗೆ ಉತ್ತರ ಹೇಳಿ ನೋಡೋಣ
ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೊಂದು ಗಣಿತದ ಪಜಲ್‌ಗಳು ವೈರಲ್ ಆಗುತ್ತವೆ. ಇಂತಹ ಪಜಲ್‌ಗಳಲ್ಲಿ ಇಲ್ಲೊಂದು ವಿಶೇಷವಾದ, ಮೆದುಳಿಗೆ ಟ್ರಿಕ್ಕಿ ಎನ್ನಿಸುವ ಸವಾಲಿದೆ. ಗಣಿತ ನಿಮಗೆ ಇಷ್ಟದ ಸಬ್ಜೆಕ್ಟ್ ಅಂತಾದ್ರೆ ನೀವು ಈ ಪಜಲ್‌ಗೆ 10 ನಿಮಿಷದಲ್ಲಿ ಉತ್ತರ ಹೇಳಬೇಕು. 312 =36 ಆದ್ರೆ 612= ಎಷ್ಟು ಎಂದು ಹೇಳಬೇಕಾಗಿರುವುದು ನಿಮಗಿರುವ ಸವಾಲು.