Brain Teaser: 7=14, 5=20 ಆದ್ರೆ 3= ಎಷ್ಟು; ಗಣಿತ ಪ್ರೇಮಿ ನೀವಾದ್ರೆ 15 ಸೆಕೆಂಡ್ ಒಳಗೆ ಉತ್ತರ ಹೇಳಿ, ನಿಮಗಿದು ಚಾಲೆಂಜ್
ಗಣಿತದಲ್ಲಿ ನೀವು ಎಕ್ಸ್‌ಪರ್ಟ್ ಆದ್ರೆ ನಿಮಗಾಗಿ ಇಲ್ಲೊಂದು ಚಾಲೆಂಜ್ ಇದೆ. ಈ ಬ್ರೈನ್ ಟೀಸರ್ ಸವಾಲು ನಿಮ್ಮ ಮೆದುಳಿಗೆ ಹುಳ ಬಿಡುವಂತೆ ಮಾಡುವುದು ಸುಳ್ಳಲ್ಲ. ಇದರಲ್ಲಿ 3=ಎಷ್ಟು ಎಂದು ನೀವು ಥಟ್ಟಂತ ಉತ್ತರ ಹೇಳಬೇಕು. ನಿಮ್ಮ ಸಮಯ ಈಗ ಶುರು.
ಬ್ರೈನ್ ಟೀಸರ್‌ಗಳು ನಮ್ಮ ಮೆದುಳನ್ನು ಎಂಗೇಜ್ ಆಗಿ ಇಡುತ್ತವೆ. ಇದರಿಂದ ನಮ್ಮ ಮೆದುಳಿಗೆ ಮೋಜು ಸಿಗುತ್ತದೆ. ಅಂತಹ ಪಜಲ್‌ಗಳು ನಾವು ಕ್ರಿಯಾತ್ಮಕವಾಗಿ ಯೋಚಿಸುವಂತೆ ಮಾಡುತ್ತವೆ. ಬ್ರೈನ್ ಟೀಸರ್‌ಗಳು ನಮ್ಮಲ್ಲಿ ಸಮಸ್ಯೆ ಪರಿಹರಿಸುವ ಗುಣವನ್ನು ಬೆಳೆಸುತ್ತವೆ.
ಇಂದಿನ ಬ್ರೈನ್ ಟೀಸರ್‌ನಲ್ಲಿ ಇರುವುದು 3 ರ ಮೌಲ್ಯ ಕಂಡುಹಿಡಿಯುವು ಸವಾಲು. @Madelaine Cristillo ಎನ್ನುವ ಫೇಸ್‌ಬುಕ್ ನಿರ್ವಹಣೆ ಮಾಡುವವರು ಈ ಬ್ರೈನ್ ಟೀಸರ್ ಅನ್ನು ಪೋಸ್ಟ್ ಮಾಡಿದ್ದಾರೆ. ಈ ಪಜಲ್ ಚಿತ್ರ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನೆಟ್ಟಿಗರ ಗಮನ ಸೆಳೆದಿದೆ. ನೀವು ಬ್ರೈನ್ ಟೀಸರ್ ಪ್ರೇಮಿಯಾಗಿದ್ದರೆ ಈ ಬ್ರೈನ್ ಟೀಸರ್‌ಗೆ ಉತ್ತರ ಹೇಳಲು ನಿಮ್ಮಿಂದ ಸಾಧ್ಯವೇ ಪ್ರಯತ್ನಿಸಿ.
ಪಜಲ್‌ನಲ್ಲಿ ಏನಿದೆ?
ಇಂದಿನ ಬ್ರೈನ್ ಟೀಸರ್ ಸಂಖ್ಯೆಗಳ ಮೌಲ್ಯವನ್ನು ತಿಳಿಸುವ ಗಣಿತದ ಲೆಕ್ಕಚಾರವಾಗಿದೆ. ಇದರಲ್ಲಿ 7=14, 6=18, 5=20 ಆದರೆ 3= ಎಷ್ಟು? ಎಂಬುದನ್ನು ನೀವು ಕಂಡುಹಿಡಿಯಬೇಕು.
ಅಕ್ಟೋಬರ್ 23 ರಂದು ಈ ಬ್ರೈನ್ ಟೀಸರ್ ಅನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಲಾಗಿದೆ. ಈಗಾಗಲೇ ಈ ಪೋಸ್ಟ್ ಅನ್ನು ಹಲವರು ನೋಡಿದ್ದು ಗಣಿತ ಪ್ರೇಮಿಗಳು ತಾವು ಕಂಡುಕೊಂಡ ಉತ್ತರವನ್ನು ಕಾಮೆಂಟ್ ಮಾಡಿದ್ದಾರೆ. ಅವರ ಉತ್ತರ ಬಿಡಿ, ಈ ಪ್ರಶ್ನೆಗೆ ನಿಮ್ಮ ಉತ್ತರವೇನು ತಿಳಿಸಿ.
ಇಂತಹ ಬ್ರೈನ್ ಟೀಸರ್‌ಗಳಿಗೆ ಉತ್ತರ ಹೇಳುವುದರಿಂದ ನಮ್ಮ ಮೆದುಳು ಚುರುಕಾಗುತ್ತದೆ, ನಮ್ಮಲ್ಲಿ ಬುದ್ಧಿಶಕ್ತಿ ಬೆಳೆಯುತ್ತದೆ. ಸಮಸ್ಯೆ ಪರಿಹರಿಸುವ ಗುಣವೂ ವೃದ್ಧಿಯಾಗುತ್ತದೆ. ಹಾಗಾದರೆ ಇತ್ತೀಚಿನ ದಿನಗಳಲ್ಲಿ ಹಲವರು ಬ್ರೈನ್ ಟೀಸರ್‌ಗಳಿಗೆ ಉತ್ತರ ಕಂಡುಕೊಳ್ಳಲು ಇಷ್ಟಪಡುತ್ತಿದ್ದಾರೆ.
ಈ ಬ್ರೈನ್ ಟೀಸರ್‌ಗಳನ್ನೂ ಓದಿ
Brain Teaser: ಯಾವ ಕಪ್‌ನಲ್ಲಿ ಮೊದಲು ಟೀ ತುಂಬುತ್ತೆ, ನೀವು ಬುದ್ಧಿವಂತರಾದ್ರೆ 7 ಸೆಕೆಂಡ್ ಒಳಗೆ ಉತ್ತರ ಹೇಳಿ
ನಿಮ್ಮ ಮೆದುಳಿಗೆ ಸವಾಲು ಹಾಕುವಂತಹ ಬ್ರೈನ್ ಟೀಸರ್ ಚಿತ್ರವೊಂದು ಇಲ್ಲಿದೆ. ಇದರಲ್ಲಿ ಮಗ್‌ನಿಂದ ಟೀ ಸುರಿಯಲಾಗುತ್ತಿದ್ದು, ಕೆಳಗಡೆ ನಾಲ್ಕು ಕಪ್‌ಗಳನ್ನ ಇರಿಸಲಾಗಿದೆ. ಇದಕ್ಕೆ ವಿವಿಧ ಮಾರ್ಗಗಳನ್ನು ಜೋಡಿಸಲಾಗಿದೆ. ಇದರಲ್ಲಿ ಯಾವ ಕಪ್‌ಗೆ ಮೊದಲು ಟೀ ತುಂಬುತ್ತೆ ಎಂದು ನೀವು ಹೇಳಬೇಕು. 7 ಸೆಕೆಂಡ್‌ನಲ್ಲಿ ಉತ್ತರ ಹೇಳುವುದು ನಿಮಗಿರುವ ಸವಾಲು.
Brain Teaser: ಶೇ 97ರಷ್ಟು ಮಂದಿಗೆ ಉತ್ತರಿಸಲು ಸಾಧ್ಯವಾಗದ ಈ ಬ್ರೈನ್ ಟೀಸರ್‌ಗೆ ಉತ್ತರ ಹೇಳಲು ನಿಮ್ಮಿಂದ ಸಾಧ್ಯವೇ, ಟ್ರೈ ಮಾಡಿ
ಇಲ್ಲೊಂದು ಗಣಿತದ ಸೂತ್ರವಿದ್ದು, ಇದು ನಿಮ್ಮ ಮೆದುಳಿಗೆ ಹುಳ ಬಿಡುವಂತಿರುವುದು ಸುಳ್ಳಲ್ಲ. ಈ ಬ್ರೈನ್ ಟೀಸರ್‌ನಲ್ಲಿರುವ ಪ್ರಶ್ನೆಗೆ ಉತ್ತರ ಹೇಳಲು ಶೇ 97ರಷ್ಟು ಮಂದಿಗೆ ಸಾಧ್ಯವಾಗಿಲ್ಲ. ಯಾಕೆಂದರೆ ಇಲ್ಲಿ 3+6=21 ಆದ್ರೆ 5+8 ಎಷ್ಟು ಎಂದು ನೀವು ಕಂಡುಹಿಡಿಯಬೇಕು.