Brain Teaser: 2+2*7-4= ಎಷ್ಟು? ಇಲ್ಲಿರುವ 4 ಉತ್ತರದಲ್ಲಿ ಯಾವುದು ಸರಿ ಉತ್ತರ, ಗಣಿತದಲ್ಲಿ ಪಂಟರಾದ್ರೆ ಥಟ್ಟಂತ ಹೇಳಿ
ಗಣಿತದಲ್ಲಿ ನೀವು ಎಕ್ಸ್‌ಪರ್ಟ್ ಅಂತಾದ್ರೆ ನಿಮಗಾಗಿ ಇಲ್ಲೊಂದು ಪಜಲ್ ಇದೆ. ಇದರಲ್ಲಿ ಇರುವ ಗಣಿತ ಸೂತ್ರಕ್ಕೆ 4 ಉತ್ತರಗಳನ್ನೂ ನೀಡಲಾಗಿದೆ. ಅದರಲ್ಲಿ ಯಾವುದು ಸರಿ ಉತ್ತರ ಎಂದು ಹೇಳಬೇಕಾಗಿರುವುದು ನಿಮಗಿರುವ ಸವಾಲು. ಕೂಡಿಸಿ, ಗುಣಿಸಿ, ಕಳೆಯುವ ಲೆಕ್ಕಾಚಾರ ಸುಲಭ ಅಂತಾದ್ರೆ ಥಟ್ಟಂತ ಹೇಳಿ.
ಗಣಿತದ ಪಜಲ್‌ಗಳು ನಮ್ಮ ಮೆದುಳಿಗೆ ಹುಳ ಬಿಡೋದು ಸುಳ್ಳಲ್ಲ. ಆ ಕಾರಣಕ್ಕೆ ಬಹುತೇಕರಿಗೆ ಗಣಿತ ಕಬ್ಬಿಣದ ಕಡಲೆಯಾಗಿರುವುದು. ಗಣಿತದ ಪಜಲ್‌ಗಳಲ್ಲಿ ಕೂಡಿಸಿ, ಗುಣಿಸುವ ಲೆಕ್ಕಚಾರವಿದ್ದರೂ ಉತ್ತರ ಹುಡುಕುವುದು ಖಂಡಿತ ಸುಲಭವಲ್ಲ. ಆದರೆ ಪಜಲ್‌ಗಳಿಗೆ ಉತ್ತರ ಹುಡುಕುವುದರಿಂದ ನಮ್ಮ ಮೆದುಳು ಚುರುಕುಗಾಗುತ್ತದೆ.
ಇಂದಿನ ಬ್ರೈನ್ ಟೀಸರ್‌ನಲ್ಲಿ ಕೂಡಿಸಿ, ಗುಣಿಸಿ, ಕಳೆಯುವ ಲೆಕ್ಕವಿದೆ. ಈ ಗಣಿತದ ಸೂತ್ರಕ್ಕೆ 4 ಉತ್ತರವನ್ನೂ ನೀಡಲಾಗಿದೆ. ಈ ಉತ್ತರದಲ್ಲಿ ಯಾವುದು ಸರಿಯಾದ ಉತ್ತರ ಎಂದು ನೀವು ಹೇಳಬೇಕು. ಇದು ನಿಮಗಿರುವ ಸವಾಲು. ನೀವು ಗಣಿತದ ಟೀಚರ್, ಸ್ಟೂಡೆಂಟ್ ಏನೇ ಆಗಿರಲಿ ನಿಮಗೆ ಈ ಪಜಲ್ ಚಾಲೆಂಜ್ ಅನ್ನಿಸೋದು ಸುಳ್ಳಲ್ಲ. ಹಾಗಾದರೆ ಇಂದಿನ ಬ್ರೈನ್ ಟೀಸರ್‌ನಲ್ಲಿ ಏನಿದೆ ನೋಡಿ.
@abidartmathhack ಎನ್ನುವವರ ಥ್ರೆಡ್ ಪುಟದಲ್ಲಿ ಪೋಸ್ಟ್ ಮಾಡಲಾಗಿರುವ ಬ್ರೈ್ ಟೀಸರ್ ಇದಾಗಿದೆ. ಇದು ನಿಮ್ಮ ಗಣಿತದ ಕೌಶಲ ಪರೀಕ್ಷೆ ಮಾಡುವುದು ಸುಳ್ಳಲ್ಲ. ಈ ಪ್ರಶ್ನೆ ನೋಡಿದಾಗ ಉತ್ತರ ಹೇಳುವುದು ಸುಲಭ ಎನ್ನಿಸಿದರೂ ಖಂಡಿತ ನೀವು ಅಂದುಕೊಂಡಷ್ಟು ಸುಲಭವಾಗಿ ಈ ಪ್ರಶ್ನೆಗೆ ಉತ್ತರ ಕಂಡುಹಿಡಿಯಲು ಸಾಧ್ಯವಿಲ್ಲ. ಆದರೆ ಇಲ್ಲಿರುವುದು ಸುಲಭದ ಗಣಿತದ ಸೂತ್ರ. 2+2*7-4= ಎಷ್ಟು ಎಂದು ನೀವು ಕಂಡುಹಿಡಿಯಬೇಕು. ಅದಕ್ಕೆ ನೀವು ನಾಲ್ಕು ಉತ್ತರಗಳು ಹೀಗಿವೆ. A: 4, B: 12, C: 24, D: None. ಹಾಗಾದರೆ ಇದರ ಸರಿಯಾದ ಉತ್ತರ ಯಾವುದು ಎಂದು ನೀವು ಕಂಡುಹಿಡಿಯಲು ಸಾಧ್ಯವೇ?
ಈ ಬ್ರೈನ್ ಟೀಸರ್‌ಗೆ ಹಲವು ಗಣಿತಪ್ರೇಮಿಗಳು ಕಾಮೆಂಟ್ ಮಾಡಿದ್ದಾರೆ. ಆ ಮೂಲಕ ತಾವು ಕಂಡುಕೊಂಡ ಉತ್ತರವನ್ನು ತಿಳಿಸಿದ್ದಾರೆ. ಬಹುತೇಕರು ಇದಕ್ಕೆ ಉತ್ತರ ಬಿ ಅಂದರೆ 12 ಎಂದಿದ್ದಾರೆ. ಹಾಗಾದರೆ ಇದಕ್ಕೆ ಸರಿಯಾದ ಉತ್ತರ ಯಾವುದು ನೀವು ಹೇಳಿ.
ಈ ಬ್ರೈನ್ ಟೀಸರ್‌ಗಳನ್ನೂ ಓದಿ
Brain Teaser: ಗಣಿತದಲ್ಲಿ ನೀವು ಪಂಟರಾದ್ರೆ ಇಲ್ನೋಡಿ, ಈ ಪಜಲ್‌ಗೆ ಉತ್ತರವೇನು ಹೇಳಿ; ನಿಮ್ಮ ಜಾಣ್ಮೆಗೊಂದು ಸವಾಲ್
ಸಾಮಾಜಿಕ ಜಾಲತಾಣದಲ್ಲಿ ಕಳೆದು, ಕೂಡಿಸಿ, ಭಾಗಿಸುವ ಲೆಕ್ಕಾಚಾರದ ಪಜಲ್ ಒಂದು ವೈರಲ್ ಆಗಿದೆ. ಇದಕ್ಕೆ ಗಣಿತ ಎಕ್ಸ್‌ಪರ್ಟ್‌ಗಳಿಂದ ಮಾತ್ರ ಉತ್ತರ ಕಂಡುಹಿಡಿಯಲು ಸಾಧ್ಯ. ನೀವು ಗಣಿತದಲ್ಲಿ ಟಾಪರ್ ಆದ್ರೆ ಪ್ರಯತ್ನಿಸಿ. ಆದರೆ ನಿಮಗಿರೋದು 15 ಸೆಕೆಂಡ್ ಸಮಯ ಮಾತ್ರ.
Brain Teaser: ಟ್ಯಾಂಕ್‌ನಲ್ಲಿ ಒಟ್ಟು ಎಷ್ಟು ಮೀನು ಉಳಿಯಿತು? ನೀವು ನಿಜಕ್ಕೂ ಬುದ್ಧಿವಂತರಾದ್ರೆ 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ
ಶನಿವಾರದ ಹೊತ್ತು ಮೆದುಳಿಗೆ ಹುಳ ಬಿಟ್ಕೋಬೇಕಾ, ಹಾಗಿದ್ರೆ ನಿಮಗಾಗಿ ಇಲ್ಲಿದೆ ಒಂದು ಸವಾಲು. ಈ ಬ್ರೈನ್ ಟೀಸರ್‌ನಲ್ಲಿರುವ ಪ್ರಶ್ನೆಗೆ ನೀವು ಉತ್ತರ ಹೇಳಬೇಕು, ಅದು ಕೇವಲ 10 ಸೆಕೆಂಡ್‌ನಲ್ಲಿ. ನೀವು ನಿಜಕ್ಕೂ ಜಾಣರಾಗಿದ್ರೆ ಟ್ಯಾಂಕ್‌ನಲ್ಲಿ ಒಟ್ಟು ಎಷ್ಟು ಮೀನು ಉಳಿದಿವೆ ಹೇಳಿ.