Viral Optical Illusion: ನೀವು ನಿಜವಾದ ಬೆಕ್ಕು ಪ್ರೇಮಿಯಾಗಿದ್ರೆ 5 ಸೆಕೆಂಡ್​​ನಲ್ಲಿ ಈ ಚಿತ್ರದಲ್ಲಿರುವ 4ನೇ ಕ್ಯಾಟ್​ ಕಂಡುಹಿಡಿಯಿರಿ
ಕನ್ನಡ ಸುದ್ದಿ  /  ಜೀವನಶೈಲಿ  /  Viral Optical Illusion: ನೀವು ನಿಜವಾದ ಬೆಕ್ಕು ಪ್ರೇಮಿಯಾಗಿದ್ರೆ 5 ಸೆಕೆಂಡ್​​ನಲ್ಲಿ ಈ ಚಿತ್ರದಲ್ಲಿರುವ 4ನೇ ಕ್ಯಾಟ್​ ಕಂಡುಹಿಡಿಯಿರಿ

Viral Optical Illusion: ನೀವು ನಿಜವಾದ ಬೆಕ್ಕು ಪ್ರೇಮಿಯಾಗಿದ್ರೆ 5 ಸೆಕೆಂಡ್​​ನಲ್ಲಿ ಈ ಚಿತ್ರದಲ್ಲಿರುವ 4ನೇ ಕ್ಯಾಟ್​ ಕಂಡುಹಿಡಿಯಿರಿ

Optical Illusion: ಇಲ್ಲಿರುವ ಬೆಕ್ಕುಗಳ ಚಿತ್ರದಲ್ಲಿ ನೀವು ನಾಲ್ಕನೇ ಬೆಕ್ಕು ಎಲ್ಲಿದೆ ಎಂಬುದನ್ನು ಕಂಡುಹಿಡಿಯಬೇಕು. ಅರೇ, ಇಲ್ಲಿರುವುದೇ ಮೂರೇ ಬೆಕ್ಕು, ನಾಲ್ಕನೇದು ಎಲ್ಲಿದೆ ಎಂದು ಯೋಚಿಸುತ್ತಿದ್ದೀರಾ? ನಿಮ್ಮ ಮೆದುಳಿಗೆ ಸ್ವಲ್ಪ ಕೆಲಸ ಕೊಡಿ.

 5 ಸೆಕೆಂಡ್​​ನಲ್ಲಿ ಈ ಚಿತ್ರದಲ್ಲಿರುವ 4ನೇ ಕ್ಯಾಟ್​ ಕಂಡುಹಿಡಿಯಿರಿ
5 ಸೆಕೆಂಡ್​​ನಲ್ಲಿ ಈ ಚಿತ್ರದಲ್ಲಿರುವ 4ನೇ ಕ್ಯಾಟ್​ ಕಂಡುಹಿಡಿಯಿರಿ

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ನಾವು ತಲೆ ಕೆರೆದುಕೊಳ್ಳುವಂತೆ ಮಾಡುತ್ತವೆ. ಜನರನ್ನು ಸಂಪೂರ್ಣವಾಗಿ ದಿಗ್ಭ್ರಮೆಗೊಳಿಸುತ್ತವೆ. ವಾಸ್ತವಿಕತೆ ಮತ್ತು ಗ್ರಹಿಕೆ ಪರಸ್ಪರ ಹೆಣೆದುಕೊಂಡಂತೆ, ನಿಜವಾಗಿಯೂ ಅಲ್ಲಿ ಏನೂ ಇಲ್ಲದಂತೆ ಅಥವಾ ಏನೋ ಇದ್ದಂತೆ ತೋರಿಸುತ್ತದೆ. ಕೆಲವೊಮ್ಮೆ ಎಷ್ಟೇ ಬ್ರೇನ್​ ಉಪಯೋಗಿಸಿದರೂ ಉತ್ತರ ಕಂಡು ಹಿಡಿಯಲು ಆಗಲ್ಲ. ಸ್ವಲ್ಪ ನಿಮಗೆ ತಾಳ್ಮೆ ಇರಬೇಕು. ಆದರೆ ಉತ್ತರವನ್ನ ಪತ್ತೆ ಹಚ್ಚುವುದೇ ಒಂದು ರೀತಿಯಲ್ಲಿ ಮಜಾ ಎನ್ನಿಸುತ್ತದೆ. ಈಗ ಅಂತಹದ್ದೇ ಒಂದು ಇಮೇಜ್​ ನಿಮ್ಮ ಮುಂದಿದೆ.

ಇಲ್ಲಿರುವ ಬೆಕ್ಕುಗಳ ಚಿತ್ರದಲ್ಲಿ ನೀವು ನಾಲ್ಕನೇ ಬೆಕ್ಕು ಎಲ್ಲಿದೆ ಎಂಬುದನ್ನು ಕಂಡುಹಿಡಿಯಬೇಕು. ಅರೇ, ಇಲ್ಲಿರುವುದೇ ಮೂರೇ ಬೆಕ್ಕು, ನಾಲ್ಕನೇದು ಎಲ್ಲಿದೆ ಎಂದು ಯೋಚಿಸುತ್ತಿದ್ದೀರಾ? ನಿಮ್ಮ ಮೆದುಳಿಗೆ ಸ್ವಲ್ಪ ಕೆಲಸ ಕೊಡಿ. ರೆಡ್ಡಿಟ್ ಜಾಲತಾಣವು ಈ ಚಿತ್ರವನ್ನು ಹಂಚಿಕೊಂಡಿದ್ದು, ‘ಇಲ್ಲಿ ನಾಲ್ಕು ಬೆಕ್ಕುಗಳಿವೆ’ ಎಂದು ಕ್ಯಾಪ್ಶನ್​ ನೀಡಿದ್ದಾರೆ.

ಥಟ್​ ಎಂದು ನೋಡಿದಾರ ಈ ಚಿತ್ರದಲ್ಲಿ ಮೂರು ಕಪ್ಪು ಬೆಕ್ಕುಗಳು ಇರುವುದು ಕಂಡುಬರುತ್ತದೆ. ನೀವು ನಿಜವಾದ ಬೆಕ್ಕು ಪ್ರೇಮಿಯಾಗಿದ್ರೆ ಕೇವಲ ಐದು ಸೆಕೆಂಡ್​ಗಳಲ್ಲಿ ಈ ಚಿತ್ರದಲ್ಲಿ ನಾಲ್ಕನೇ ಬೆಕ್ಕನ್ನು ಕಂಡುಹಿಡಿಯಿರಿ.

ನಾಲ್ಕನೇ ಬೆಕ್ಕು ಸಿಕ್ತಾ?
ನಾಲ್ಕನೇ ಬೆಕ್ಕು ಸಿಕ್ತಾ?

ನಾಲ್ಕನೇ ಬೆಕ್ಕನ್ನು ಹುಡುಕುವಲ್ಲಿ ನೀವು ಯಶಸ್ವಿಯಾಗಿದ್ದೀರಾ? ನೀವು ಇನ್ನೂ ಉತ್ತರವನ್ನು ಹುಡುಕಲು ಹೆಣಗಾಡುತ್ತೀರಾ? ಉತ್ತರವನ್ನು ಕಂಡುಹಿಡಿಯಲು ನಿಮಗೆ ಸಹಾಯ ಮಾಡುವ ರೆಡ್ಡಿಟ್ ಬಳಕೆದಾರರ ಕೆಲವು ಕಾಮೆಂಟ್‌ಗಳನ್ನು ನೋಡೋಣ.

"ನಾನು ಇನ್ನೊಂದು ಕಪ್ಪು ಬೆಕ್ಕನ್ನು ಹುಡುಕಲು ಪ್ರಯತ್ನಿಸುತ್ತಿದ್ದೆ, ಅದು ಕಪ್ಪು ಬೆಕ್ಕುಗಳ ಪೈಕಿ ಒಂದರ ಕೆಳಗೆ ಅಥವಾ ಪಕ್ಕದಲ್ಲಿರಬಹುದು" ಎಂದು ಓರ್ವ ರೆಡ್ಡಿಟ್ ಬಳಕೆದಾರರು ಕಾಮೆಂಟ್​ ಮಾಡಿದ್ದಾರೆ. "ಅಲ್ಲಿ ... ನಾಲ್ಕು ... ಬೆಕ್ಕುಗಳು!" ಎಂದು ಮತ್ತೊಬ್ಬರು ಉತ್ತರ ಸಿಕ್ಕಂತೆ ಕಾಮೆಂಟ್​ ಮಾಡಿದ್ದಾರೆ. ಕೆಲವರು ಮೊದಲ ಬೆಕ್ಕಿನ ಅಡಿಯಲ್ಲಿದೆ ಎಂದರೆ, ಮತ್ತೆ ಕೆಲವರು ಮೂರನೇ ಬೆಕ್ಕಿನ ಮುಂದೆ ಕುಳಿತಿದೆ ಎಂದಿದ್ದಾರೆ.

ಉತ್ತರ ಸಿಕ್ಕರೆ ನೀವೂ ಕೂಡ ಬೆಕ್ಕು ಪ್ರಿಯರಿಗೆ ಅಥವಾ ನಿಮ್ಮ ಸ್ನೇಹಿತರೊಂದಿಗೆ ಇದನ್ನು ಹಂಚಿಕೊಂಡು, ಅವರ ಮೆದುಳಿಗೆ ಕೆಲಸ ಕೊಡಿ...

Whats_app_banner